5 ನೇ ವಿಶ್ವ ಕಾಫಿ ಸಮ್ಮೇಳನ ಹಾಗೂ ಪ್ರದರ್ಶನ: ಭಾಗವಹಿಸುವವರ ನೋಂದಣಿ ಪ್ರಕ್ರಿಯೆ ಆರಂಭ

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಅಂತರಾಷ್ಟ್ರೀಯ ಕಾಫಿ ಸಂಸ್ಥೆಯು ಕಾಫಿ ಉದ್ಯಮಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷಗಳಿಗೆ ಒಮ್ಮೆ ವಿಶ್ವ ಕಾಫಿ ಸಮ್ಮೇಳನ ಹಾಗೂ ಪ್ರದರ್ಶನವನ್ನು ಕಾಫಿ ಬೆಳೆಯುವ ವಿವಿಧ ದೇಶಗಳಲ್ಲಿ ನಡೆಸುತ್ತದೆ. ಅದೇ ರೀತಿ ಈ ವರ್ಷದಲ್ಲಿ ಅಂತರಾಷ್ಟ್ರೀಯ ಕಾಫಿ ಸಂಸ್ಥೆಯು ‘5 ನೇ ವಿಶ್ವ ಕಾಫಿ ಸಮ್ಮೇಳನ ಹಾಗೂ ಪ್ರದರ್ಶನ’ವನ್ನು ಭಾರತದಲ್ಲಿ ನಡೆಸಲು ನಿರ್ಧರಿಸಿದ್ದು, ಸದರಿ ವಿಶ್ವ ಕಾಫಿ ಸಮ್ಮೇಳನ ಹಾಗೂ ಪ್ರದರ್ಶನವನ್ನು ಅಂತರಾಷ್ಟ್ರೀಯ ಕಾಫಿ ಸಂಸ್ಥೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಭಾರತ ಸರಕಾರ, ಕರ್ನಾಟಕ ಸರಕಾರ ಮತ್ತು ಭಾರತೀಯ ಕಾಫಿ ಮಂಡಳಿ ಸಹಯೋಗದೊಂದಿಗೆ, ಬೆಂಗಳೂರು ಅರಮನೆ ಮೈದಾನದಲ್ಲಿ (ಪ್ಯಾಲೇಸ್ ಗ್ರೌಂಡ್) 2023 ನೇ  ಸೆಪ್ಟಂಬರ್ ತಿಂಗಳ ದಿನಾಂಕ 25 ರಿಂದ 28 ರವರೆಗೆ  ನಡೆಸಲಾಗುತ್ತಿದೆ.

“ಸರ್ವತೋಮುಖ ಆರ್ಥಿಕತೆ ಹಾಗೂ ಪುನಃಶ್ಚೇತನ ಕೃಷಿ ಮೂಲಕ ಸುಸ್ಥಿರತೆ” ಎಂಬ ಧ್ಯೇಯ ವಾಕ್ಯದೊಂದಿಗೆ ಅಂತರ ರಾಷ್ಟ್ರೀಯ ಕಾಫಿ ಸಂಸ್ಥೆಯ 75 ಸದಸ್ಯ ರಾಷ್ಟ್ರಗಳು, ಕಾಫಿ ಬೆಳೆಗಾರರು, ಸರಕಾರಿ ಪ್ರತಿನಿಧಿಗಳು ಸೇರಿದಂತೆ, ದೇಶ ವಿದೇಶಗಳ ಉನ್ನತ ಮಟ್ಟದ ತಜ್ಮರು, ಖಾಸಗಿ ವಲಯದ ಅಭಿವೃದ್ಧಿ ಪಾಲುದಾರರು, ಹೂಡಿಕೆದಾರರು, ನಾಗರಿಕ ಸಮಾಜ ಮತ್ತು ಶಿಕ್ಷಣ ಸಂಸ್ಥೆಗಳು, ಪ್ರಮುಖ ಕಾಫಿ ಉದ್ಯಮಿಗಳು ಹಾಗೂ ನೀತಿ ನಿರೂಪಕರು ಕಾಫಿ ಮಾರುಕಟ್ಟೆ, ತಂತ್ರಜ್ಞಾನ ಮತ್ತು ಪುನರುತ್ಪಾದಕ ಕೃಷಿ, ಕಾಫಿ ಸುಸ್ಥಿರತೆ ಮುಂತಾದ ವಿಚಾರಗಳನ್ನು ಚರ್ಚಿಸಲು ಸೇರುತ್ತಿದ್ದಾರೆ. ಈ ಸಮ್ಮೇಳನದಲ್ಲಿ B2B, ಗ್ಲೋಬಲ್ ಸಿಇಒ ಕಾಂಕ್ಲೇವ್, ಗ್ರೋಯರ್ಸ್ ಕಾಂಕ್ಲೇವ್, ಕಾಫಿ ಕೃಷಿ ಹಾಗೂ ಉದ್ದಿಮೆಯ ಕಾರ್ಯಾಗಾರಗಳು, ಪ್ರದರ್ಶನ ಮಳಿಗೆಗಳು, ದೇಶದ ಕಾಫಿ ಪ್ರದೇಶಗಳ ಸಾಂಪ್ರದಾಯಿಕ ಸಾಂಸ್ಕೃತಿಕ ಕಲಾ ಪ್ರದರ್ಶನ ಮುಂತಾದ ಕಾರ್ಯಕ್ರಮಗಳು ಇದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಕಾಫಿ ಪ್ರಿಯರು ಭಾಗವಹಿಸುವ ನಿರೀಕ್ಷೆ ಇದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಈ ‘5 ನೇ ವಿಶ್ವ ಕಾಫಿ ಸಮ್ಮೇಳನ ಹಾಗೂ ಪ್ರದರ್ಶನ” ದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳಲು ತಿಳಿಸಲಾಗಿದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ಕಾಫಿ ಮಂಡಳಿಯ ಮೂಲಕ ಅಥವಾ https://www.wccindia2023 ವೆಬ್ ಸೈಟ್ ಮೂಲಕ ನಿಗಧಿತ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ರಿಯಾಯಿತಿ ದರದ ನೋಂದಣಿಗಾಗಿ ಕಾಫಿ ಬೆಳೆಗಾರರು ಹತ್ತಿರದ ಕಾಫಿ ಮಂಡಳಿ ಕಛೇರಿಯನ್ನು ಸಂಪರ್ಕಿಸುವುದು.

ಮುಖಾರಿಬ್ ಡಿ.ಎಸ್. 

ಸಂಪರ್ಕ ಅಧಿಕಾರಿ 

ಕಾಫಿ ಮಂಡಳಿ , ಗೋಣಿಕೊಪ್ಪಲು 

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಮೊ: 9449063057

Search Coorg Media
Search Coorg Media
Articles: 938
0 0 votes
Article Rating
Subscribe
Notify of
guest
0 Comments
Newest
Oldest Most Voted
0
Would love your thoughts, please comment.x
()
x