ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿ“ನಮ್ಮ ಕೊಡಗು – ನಮ್ಮ ಗ್ರಾಮ”

ನಮ್ಮ ಗ್ರಾಮದ ಅಭಿವೃದ್ಧಿಗಾಗಿ ನಾವು ಯಾವ ಯಾವ ಯೋಜನೆಗಳನ್ನು ಹಾಕಿಕೊಳ್ಳಬೇಕು,ವಿವಿಧ ಸಮಸ್ಯೆಗಳ ನಿವಾರಣೆ, ಗ್ರಾಮ ವಿಕಾಸ ಮುಂತಾದ ಗ್ರಾಮಕ್ಕೆ ಅವಶ್ಯವಿರುವ ಕಾರ್ಯಕ್ರಮಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಗ್ರಾಮಾಭ್ಯುದಯ ಕಾರ್ಯಕ್ರಮಗಳಿಗೆ ಗ್ರಾಮಸ್ಥರ ಸಮುದಾಯ ಸಹಭಾಗಿತ್ವದ ಪ್ರತಿಧ್ವನಿಯಾಗಿ “ಸರ್ಚ್ ಕೂರ್ಗ್ ಮೀಡಿಯಾ” ಅರ್ಪಿಸುವ “ನಮ್ಮ ಕೊಡಗು-ನಮ್ಮ ಗ್ರಾಮ” ಪರಿಕಲ್ಪನೆಯ ಉದ್ದೇಶವಾಗಿದೆ.
“ಸರ್ಚ್ ಕೂರ್ಗ್ ಮೀಡಿಯಾ”ವು ವಿಶ್ಲೇಷಣಾತ್ಮಕ ಹಾಗೂ ಗ್ರಾಮೀಣ ಪತ್ರಿಕೋದ್ಯಮದಲ್ಲಿ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿ 19 ವರ್ಷಗಳನ್ನು ಪೂರೈಸಿ 20ನೇ ವರ್ಷದತ್ತ ತನ್ನ ಪಯಣವನ್ನು ಮುಂದುವರೆಸಿದೆ.
ಕೊಡಗು ಜಿಲ್ಲೆಯು ಸಹಕಾರಿ ಆಂದೋಲನವನ್ನು ಬೆಳೆಸುವಲ್ಲಿ ಶತಮಾನದಷ್ಟು ಹಳೆಯ ಇತಿಹಾಸವನ್ನು ಹೊಂದಿದೆ ಹಾಗಾಗಿ ಕೊಡಗಿನ ಸಹಕಾರ ಚಳುವಳಿಯ ದಾಖಲೆಗೊಂದು ವೇದಿಕೆಯಾಗಿ ಕೊಡಗಿನ ಎಲ್ಲಾ ಸಹಕಾರಿ ಸಂಸ್ಥೆಗಳಿಗೆ ಸಾಮಾನ್ಯ ವೇದಿಕೆಯನ್ನು ಒದಗಿಸಲು ಮತ್ತು ಅಂತರ್ಜಾಲದಲ್ಲಿ ತಮ್ಮ ಮಾಹಿತಿಯನ್ನು ದಾಖಲಿಸಲು “ಸರ್ಚ್ ಕೂರ್ಗ್ ಮೀಡಿಯಾ”ವು ಆನ್‌ಲೈನ್ ಡೈರೆಕ್ಟರಿಯನ್ನು ರಚಿಸಲಾಗಿದ್ದು, ಇದು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಆ ನಿಟ್ಟಿನಲ್ಲಿ “ನಮ್ಮ ಕೊಡಗು – ನಮ್ಮ ಗ್ರಾಮ” ಎಂಬ ಪರಿಕಲ್ಪನೆಯಲ್ಲಿ ನಮ್ಮ ಕೊಡಗಿನ ಸರ್ವ ಗ್ರಾಮಗಳ ಅಭಿವೃದ್ಧಿಗಾಗಿ ನಾವು ಯಾವ ಯಾವ ಯೋಜನೆಗಳನ್ನು ಹಾಕಿಕೊಳ್ಳಬೇಕು, ವಿವಿಧ ಸಮಸ್ಯೆಗಳ ನಿವಾರಣೆ, ಗ್ರಾಮ ವಿಕಾಸ ಮುಂತಾದ ಗ್ರಾಮಕ್ಕೆ ಅವಶ್ಯವಿರುವ ಕಾರ್ಯಕ್ರಮಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಗ್ರಾಮಾಭ್ಯುದಯ ಕಾರ್ಯಕ್ರಮಗಳಿಗೆ ಗ್ರಾಮಸ್ಥರ ಸಮುದಾಯ ಸಹಭಾಗಿತ್ವದ ಪ್ರತಿಧ್ವನಿಯಾಗಿ “ಸರ್ಚ್ ಕೂರ್ಗ್ ಮೀಡಿಯಾ” ವು “ನಮ್ಮ ಕೊಡಗು-ನಮ್ಮ ಗ್ರಾಮ” ಪರಿಕಲ್ಪನೆಯ ಆನ್‌ಲೈನ್ ವೇದಿಕೆಯನ್ನು ಸಿದ್ದಪಡಿಸಿದೆ.