“ಕರ್ನಾಟಕ ಸಾಧಕ ರತ್ನ”; ರಾಜ್ಯೋತ್ಸವ ಪ್ರಶಸ್ತಿಗೆ ಕೊಡಗಿನ ಆರ್.ಕೆ. ಬಾಲಚಂದ್ರ ಆಯ್ಕೆ

ಸ್ಮಿಯಾಕ ಟ್ರಸ್ಟ್ (ರಿ), ಬಳ್ಳಾರಿ 68 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡಲಿರುವ ರಾಜ್ಯ ಮಟ್ಟದ “ಕರ್ನಾಟಕ ಸಾಧಕ ರತ್ನ”- ರಾಜ್ಯೋತ್ಸವ ಪ್ರಶಸ್ತಿಗೆ ಕೊಡಗಿನ ಆರ್ ಕೆ ಬಾಲಚಂದ್ರ ಆಯ್ಕೆ.

ಸ್ಮಿಯಾಕ ಚಾರಿಟಬಲ್ ಟ್ರಸ್ಟ್ ನಿಂದ ದಿನಾಂಕ 26/11/2023 ರ ಭಾನುವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಇದೇ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಕುಶಾಲನಗರದ ಆರ್.ಕೆ. ಬಾಲಚಂದ್ರ ರವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ , ಬಹು ಮುಖ್ಯವಾಗಿ ಅನ್ಯ ರಾಜ್ಯದ ಕನ್ನಡೇತರರಿಗೆ ಕನ್ಮಡ ಕಲಿಸುವಿಕೆ ಹಾಗೂ ರಾಜ್ಯಾದಂತ ಉಚಿತವಾಗಿ ಬ್ಯಾಂಕಿಂಗ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ನೀಡಿದ ತರಬೇತಿಯ ಸೇವೆಯನ್ನು ಗುರುತಿಸಿ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ “ಕರ್ನಾಟಕ ಸಾಧಕ ರತ್ನ” ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ವರದಿ: ಅಶ್ವತ್‌ ಕುಮಾರ್‌, ಕುಶಾಲನಗರ

0 0 votes
Article Rating
Subscribe
Notify of
guest
0 Comments
Newest
Oldest Most Voted
error: Content is protected !!
0
Would love your thoughts, please comment.x
()
x