ಪರಂಪರೆಯ ಸುವಾಸನೆ, ಆಧುನಿಕತೆಯ ಶಕ್ತಿ ☕
ಶರ್ಮಾ ಕಾಫಿಯ ಜಾಗತಿಕ ಯಶೋಗಾಥೆ
Fragrance of Heritage, Power of Modernity ☕
The Global Success Story of Sharma Coffee
ಕೊಡಗಿನ ಕಾಫಿ ಪರಂಪರೆಗೆ ಆಧುನಿಕ ರೆಕ್ಕೆಗಳು - ವರುಣ್ ಶರ್ಮಾ ಅವರ ಯಶಸ್ಸಿನ ಪಯಣ 🚀
ಸರ್ಚ್ ಕೂರ್ಗ್ ಮೀಡಿಯಾ ಪ್ರಸ್ತುತಪಡಿಸುವ "ಸರ್ಚ್ ಕಾಫಿ" ಡಿಜಿಟಲ್ ಮ್ಯಾಗಜಿನ್ನ ಈ ವಿಶೇಷ ಸಂಚಿಕೆಯಲ್ಲಿ, ನಾವು ಇಂದು ಪರಿಚಯಿಸುತ್ತಿರುವುದು ಮಡಿಕೇರಿಯ ಪ್ರತಿಷ್ಠಿತ 'ಶರ್ಮಾ ಕಾಫಿ ವರ್ಕ್ಸ್' (Sharma Coffee Works) ಸಂಸ್ಥೆಯ ಮೂರನೇ ತಲೆಮಾರಿನ ಯುವ ಉದ್ಯಮಿ ವರುಣ್ ಶರ್ಮಾ ಅವರನ್ನು. ಕಾರ್ಪೊರೇಟ್ ಜಗತ್ತಿನ ಉನ್ನತ ಹುದ್ದೆಯನ್ನು ತೊರೆದು, "ಫಾರ್ಮ್ ಟು ಕಪ್" (Farm to Cup) ಪರಿಕಲ್ಪನೆಯೊಂದಿಗೆ ಕೌಟುಂಬಿಕ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಅವರ ಪಯಣ ಅದ್ಭುತವಾದುದು.
ವರುಣ್ ಶರ್ಮಾ: ನಮ್ಮ ಕಾಫಿ ಪಯಣಕ್ಕೆ ಈಗ ಸುಮಾರು 40 ವರ್ಷಗಳ ಇತಿಹಾಸವಿದೆ. ಈ ಉದ್ದಿಮೆಯ ಬೇರುಗಳು ಮೂರು ತಲೆಮಾರುಗಳಷ್ಟು ಆಳವಾಗಿವೆ.
- ಮೊದಲ ತಲೆಮಾರು: ನನ್ನ ಅಜ್ಜ ಶ್ರೀ ವಸಂತ್ ರಾವ್ ಅವರು ಕೂರ್ಗ್ ಕಾಫಿ ಬೆಳೆಗಾರರ ಸಂಘದ ಗೌರವಾನ್ವಿತ ಸದಸ್ಯರಾಗಿ ಮತ್ತು ಉದ್ಯೋಗಿಯಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದವರು.
- ಎರಡನೇ ತಲೆಮಾರು: 1987ರಲ್ಲಿ ಮಡಿಕೇರಿಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು 'ಶರ್ಮಾ ಕಾಫಿ ವರ್ಕ್ಸ್' ಸಂಸ್ಥೆಯನ್ನು ಪ್ರಾರಂಬಿಸಿದವರು ನನ್ನ ತಂದೆ ಶ್ರೀ ಶ್ರೀಧರ್.
ಅಂದು ತಂದೆಯವರು ಕೇವಲ ವ್ಯಾಪಾರವನ್ನಷ್ಟೇ ಮಾಡಲಿಲ್ಲ, ಅಪಾರವಾದ 'ಜನ ಸಂಪಾದನೆ' ಮಾಡಿದರು. ಅಂದು ಕೆ.ಜಿ.ಗೆ ಕೇವಲ 28 ರಿಂದ 30 ರೂಪಾಯಿಗೆ ಕಾಫಿ ಪುಡಿಯನ್ನು ಮಾರಿ ಅವರು ಈ ಉದ್ದಿಮೆಯನ್ನು ಕಟ್ಟಿದರು. ಆಗಿನ ಕಾಲದಲ್ಲಿ ತಂದೆಯವರು ಬಸ್ಸುಗಳ ಮೂಲಕ ಮತ್ತು ಪೋಸ್ಟ್ ಮಾಡುವ ಮೂಲಕ ದೂರದ ಊರುಗಳಿಗೆ ಕಾಫಿ ಪುಡಿಯನ್ನು ರವಾನಿಸುತ್ತಿದ್ದರು. ಆ ಸಣ್ಣ ಆರಂಭ ಇಂದು 22 ದೇಶಗಳಿಗೆ ತಲುಪಿದೆ. 🌍
ಸರ್ಚ್ ಕೊಡಗು ಸುದ್ದಿ ಅಪ್ಡೇಟ್ಸ್
ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ
ವರುಣ್ ಶರ್ಮಾ: ಖಂಡಿತ, 2004ನೇ ಇಸವಿ ನಮ್ಮ ಸಂಸ್ಥೆಯ ಪಾಲಿಗೆ ಅತ್ಯಂತ ಹೆಮ್ಮೆಯ ವರ್ಷ. ಆಗ ಪಶ್ಚಿಮ ಬಂಗಾಳ (West Bengal) ಸರ್ಕಾರವು ಕೊಡಗಿನ ಕಾಫಿ ಬಗ್ಗೆ ತರಬೇತಿ ಪಡೆಯಲು ಎಂಟು ಜನ ಐಎಎಸ್ (IAS) ಅಧಿಕಾರಿಗಳನ್ನು ಮಡಿಕೇರಿಗೆ ಕಳುಹಿಸಿಕೊಟ್ಟಿತ್ತು. ನನ್ನ ತಂದೆಯವರು ಅವರಿಗೆ ಒಂದು ವಾರದ ಕಾಲ ಕಾಫಿ ಬೀಜದ ಆಯ್ಕೆಯಿಂದ ಹಿಡಿದು, ಕಾಫಿ ತೋಟದ ನಿರ್ವಹಣೆ, ರೋಸ್ಟಿಂಗ್ ಪ್ರಕ್ರಿಯೆ ಮತ್ತು 'ಕಪ್ಪಿಂಗ್' (Cupping) ವರೆಗೆ ಕಾಫಿ ಉದ್ದಿಮೆಯ ಪ್ರತಿಯೊಂದು ಹಂತದ ಬಗ್ಗೆ ಸಮಗ್ರ ತರಬೇತಿ ನೀಡಿದ್ದರು. ಅವರ ಈ ಕಾರ್ಯವನ್ನು ಪರಿಗಣಿಸಿ, ಪಶ್ಚಿಮ ಬಂಗಾಳ ಸರ್ಕಾರವು ಕಲ್ಕತ್ತಾದಲ್ಲಿ ಅವರಿಗೆ ಗೌರವಪತ್ರ (Letter of gratitude) ನೀಡಿ ಗೌರವಿಸಿತು. 📜
ವರುಣ್ ಶರ್ಮಾ: ನಾನು ಬಿ.ಇ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಎಂಬಿಎ ಮುಗಿಸಿ ಬಾಷ್ (BOSCH), ರಿಲಯನ್ಸ್ ಮತ್ತು ವ್ಯಾಲ್ವೊಲಿನ್ ಆಯಿಲ್ನಂತಹ ಜಾಗತಿಕ ಕಂಪನಿಗಳಲ್ಲಿ ಕೆಲಸ ಮಾಡಿದ್ದೆ. ಆದರೆ ಕೋವಿಡ್ ಸಮಯದಲ್ಲಿ ಮಡಿಕೇರಿಗೆ ಬಂದಾಗ ಸ್ವಂತ ಉದ್ದಿಮೆಯನ್ನು ಬೆಳೆಸುವ ಹಂಬಲವಾಯಿತು. ಪೋಷಕರು ಆರಂಭದಲ್ಲಿ ವಿರೋಧಿಸಿದಾಗ, "ನನಗೆ ಇನ್ನೊಬ್ಬರ ಅಡಿಯಲ್ಲಿ ಕೆಲಸ ಮಾಡಲು ಆಸಕ್ತಿ ಇಲ್ಲ, 6 ತಿಂಗಳ ಸಮಯ ಕೊಡಿ, ಸಾಧಿಸದಿದ್ದರೆ ಪುನಃ ಕೆಲಸಕ್ಕೆ ಸೇರುತ್ತೇನೆ" ಎಂದು ಸವಾಲು ಸ್ವೀಕರಿಸಿದೆ. ಅಚ್ಚರಿಯೆಂದರೆ ಕೇವಲ 4 ತಿಂಗಳಲ್ಲಿ ಸಿಂಗಾಪುರಕ್ಕೆ ಮೊದಲ 10 ಕೆ.ಜಿ. ಕಾಫಿ ರಫ್ತು ಮಾಡುವ ಮೂಲಕ ಅಂತರರಾಷ್ಟಯ ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಂಡೆವು. ✈️
ವರುಣ್ ಶರ್ಮಾ: ನಾನು ಈ ಉದ್ಯಮಕ್ಕೆ ಬಂದಾಗ ತಂದೆ ನನಗೆ ನೇರವಾಗಿ ದೊಡ್ಡ ಹುದ್ದೆ ನೀಡಲಿಲ್ಲ. ಆರಂಭದ ಮೂರು ತಿಂಗಳು ನಾನು ದಿನಕ್ಕೆ 250 ರೂಪಾಯಿ ಸಂಬಳಕ್ಕೆ ಅವರ ಬಳಿ ಕಾರ್ಮಿಕನಾಗಿ ಕೆಲಸ ಮಾಡಿದೆ. ಕಾಫಿ ಬೀಜಗಳನ್ನು ಹೆಕ್ಕುವುದು (Bean sorting) ಮತ್ತು ರೋಸ್ಟಿಂಗ್ ಕೆಲಸಗಳನ್ನು ಕೆಳಮಟ್ಟದಿಂದ ಕಲಿತೆ. ಈಗಲೂ ನಾವು ನಮ್ಮ ತಂದೆಯವರ ಕಾಲದ ಸಾಂಪ್ರದಾಯಿಕ ರೋಸ್ಟಿಂಗ್ ಸೂತ್ರವನ್ನೇ ಬಳಸುತ್ತಿದ್ದೇವೆ, ಆದರೆ ಅದಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿದ್ದೇವೆ. 👷♂️
ತಂದೆ ಶ್ರೀಧರ್ ಮತ್ತು ಪುತ್ರ ವರುಣ್ ಶರ್ಮಾ ಅವರ ಯಶಸ್ವಿ ಸಹಭಾಗಿತ್ವ.
ವರುಣ್ ಶರ್ಮಾ: ನಮ್ಮದು ಮುಖ್ಯವಾಗಿ ಕೊಡಗಿನ ಉತ್ತಮ ಬೆಳೆಗಾರರಿಂದ ಸಂಗ್ರಹಿಸಿದ ಅತ್ಯುತ್ತಮ ದರ್ಜೆಯ 'ಪಿ ಬಿ' (Peaberry) ಬೀಜಗಳನ್ನು ಬಳಸುವ ಉದ್ದಿಮೆ.
- ಜರ್ಮನ್ ತಂತ್ರಜ್ಞಾನ: ಹಿಂದೆ ಕಲ್ಲಿನ ಗ್ರೈಂಡರ್ ಬಳಸುತ್ತಿದ್ದೆವು, ಅದರಲ್ಲಿ ಆರೋಮ (ಘಮ) ಕೇವಲ 30 ದಿನಗಳು ಇರುತ್ತಿತ್ತು. ಈಗ ನಾವು ಜರ್ಮನ್ ತಂತ್ರಜ್ಞಾನದ ಆಧುನಿಕ ಗ್ರೈಂಡರ್ ಬಳಸುತ್ತಿದ್ದೇವೆ, ಇದರಿಂದ 90 ದಿನಗಳವರೆಗೆ ಕಾಫಿಯ ತಾಜಾತನ ಉಳಿಯುತ್ತದೆ. 🇩🇪
- ನಮ್ಮ ಬ್ಲೆಂಡ್ಗಳು:
- ಗೋಲ್ಡ್ ಬ್ಲೆಂಡ್: ರೊಬಸ್ಟಾ ಮಿಶ್ರಣ.
- ಪ್ರೀಮಿಯಂ ಬ್ಲೆಂಡ್: ಅರಾಬಿಕಾ ಮತ್ತು ರೊಬಸ್ಟಾ ಮಿಶ್ರಣ.
- ಸ್ಪೆಷಾಲಿಟಿ ಬ್ಲೆಂಡ್: 1೦೦% ಅರಾಬಿಕಾ.
- ಸೌತ್ ಇಂಡಿಯಾ ಫಿಲ್ಟರ್ ಕಾಫಿ: ದಕ್ಷಿಣ ಭಾರತದ ಸಾಂಪ್ರದಾಯಿಕ ಸ್ವಾದ. ☕
ಶರ್ಮಾ ಕಾಫಿಯ ನೂತನ ಮತ್ತು ಆಕರ್ಷಕ ಉತ್ಪನ್ನಗಳು.
ವರುಣ್ ಶರ್ಮಾ: ಈಗ ನಮ್ಮ ಕಾಫಿ ಅಮೆರಿಕ, ಕೆನಡಾ, ಮತ್ತು ಲಂಡನ್ ಸೇರಿದಂತೆ 22 ದೇಶಗಳಿಗೆ ತಲುಪುತ್ತಿದೆ. ವಿದೇಶಗಳಲ್ಲಿ ನಮ್ಮದೇ ಆದ 4 ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.
- ಆನ್ಲೈನ್: 2020ರಲ್ಲಿ ದಿನಕ್ಕೆ 2 ಕೆ.ಜಿ ಮಾರಾಟದಿಂದ ಆರಂಭವಾಗಿ ಇಂದು ದಿನಕ್ಕೆ 100 ಕೆ.ಜಿ.ಗೂ ಹೆಚ್ಚು ಆನ್ಲೈನ್ ವಹಿವಾಟು ನಡೆಯುತ್ತಿದೆ. ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು ಬ್ಲಿಂಕ್ಇಟ್ ಮುಂತಾದ ಕಡೆ ನಾವು ಲಭ್ಯವಿದ್ದೇವೆ.
- ಸ್ಥಳೀಯವಾಗಿ: ಮಡಿಕೇರಿ ಮತ್ತು ಮೈಸೂರಿನಲ್ಲಿ ರೋಸ್ಟಿಂಗ್ ಘಟಕಗಳಿವೆ. ಶೀಘ್ರದಲ್ಲೇ ಬೆಂಗಳೂರಿನಲ್ಲಿ ಹೊಸ ಮಳಿಗೆಯನ್ನು ತೆರೆಯಲಿದ್ದೇವೆ. 🏙️
ವರುಣ್ ಶರ್ಮಾ: ನಾವು ಕಾಫಿ ಪುಡಿಯ ಜೊತೆಗೆ ಕಾಫಿಯ ಉಪಉತ್ಪನ್ನಗಳ (By-products) ಸಂಶೋಧನೆಯಲ್ಲಿ ತೊಡಗಿದ್ದೇವೆ. ಕಾಫಿ ಚಾಕೊಲೇಟ್, ಕಾಫಿ ಸೋಪು, ಕಾಫಿ ಜಾಮ್ ಮತ್ತು ಎಳನೀರು-ಗಂಜೆಯಿಂದ ತಯಾರಿಸಿದ ವಿಶೇಷ ಕಾಫಿ ಓಯಸಿಸ್ (Coffee Oasis) ಪಾನೀಯಗಳನ್ನು ಪರಿಚಯಿಸುತ್ತಿದ್ದೇವೆ. ಇದರೊಂದಿಗೆ ಕೊಡಗಿನ ಶುದ್ಧ ಜೇನುತುಪ್ಪ ಮತ್ತು ಅರಿಶಿನವನ್ನು ನಮ್ಮ ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತಿದ್ದೇವೆ. 🍯🍫
ವರುಣ್ ಶರ್ಮಾ: ನನ್ನ ಬೆನ್ನೆಲುಬಾಗಿ ತಾಯಿ ವಿದ್ಯಾ ಶ್ರೀಧರ್ ಇದ್ದಾರೆ. ನನ್ನ ಪತ್ನಿ ಮಂದಾರ ಅವರು ಖಾಸಗಿ ಸಂಸ್ಥೆಯ ವಿಜ್ಞಾನಿಯಾಗಿದ್ದು, ನಮ್ಮ ಉದ್ದಿಮೆಗೆ ಹೊಸ ತಂತ್ರಜ್ಞಾನದ ಬೆಂಬಲ ನೀಡುತ್ತಿದ್ದಾರೆ. ತಂಗಿ ಭಾವನಾ ಮತ್ತು ಭಾವ ಅಜಯ್ (ಹೈಕೋರ್ಟ್ ವಕೀಲರು) ಕೂಡ ಎಲ್ಲಾ ಹಂತಗಳಲ್ಲಿ ಸಹಕರಿಸುತ್ತಿದ್ದಾರೆ.
ಹಾಗೆ ಸಚಿನ್ ಮತ್ತು ಯೋಗೇಶ್ರವರು ಗ್ರಾಹಕರು ಹಾಗೂ ಪ್ರವಾಸಿಗಳು ನಮ್ಮ ಸ್ಟೋರ್ಗೆ ಬಂದಾಗ ಎಲ್ಲಾ ರೀತಿಯಲ್ಲಿ ಕಾಫಿ ರುಚಿ ಮತ್ತು ಮಿಶ್ರಣದ ಬಗ್ಗೆ ತಿಳಿಸಿ ಕೊಡುತ್ತಿದ್ದಾರೆ. ಇಲ್ಲಿಯವರಗೆ ಇವರು ಶರ್ಮಾ ಕಾಫಿಯ ರುಚಿ ಮತ್ತು ಮಿಶ್ರಣವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.
ಯುವಕರಿಗೆ ನನ್ನ ಸಲಹೆ: ನಿಮ್ಮ ಕುಟುಂಬದ ಉದ್ಯಮವಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಆಧುನಿಕ ತಂತ್ರಜ್ಞಾನ ಬಳಸಿ ಅದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರಿ. ಇನ್ನೊಬ್ಬರ ಅಡಿಯಲ್ಲಿ ಕೆಲಸ ಮಾಡುವುದಕ್ಕಿಂತ ಸ್ವಂತ ಉದ್ಯಮ ಕಟ್ಟುವುದರಲ್ಲಿ ಸಿಗುವ ತೃಪ್ತಿ ಅಪಾರ. ☕ ಧ್ಯೇಯ: ಎಲ್ಲಾ ವರ್ಗದ ಜನರಿಗೂ ಅತ್ಯುತ್ತಮ ಗುಣಮಟ್ಟದ ಕಾಫಿಯನ್ನು ಉಣಬಡಿಸುವುದು.
ಶರ್ಮಾ ಕಾಫಿಯಲ್ಲಿ, ಶ್ರೇಷ್ಠ ಮಟ್ಟದ ಕಾಫಿ ಎಂಬುದು ಕೇವಲ ಶ್ರೀಮಂತರ ಸ್ವತ್ತಲ್ಲ ಎಂದು ನಾವು ನಂಬುತ್ತೇವೆ. ಕಾಫಿ ಲೋಕದಲ್ಲಿರುವ 'ವರ್ಗ' ಎಂಬ ಅಂತರವನ್ನು ಅಳಿಸುವುದು ನಮ್ಮ ಉದ್ದೇಶ. ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಕಾಫಿಯ ಅನುಭವ ಸಿಗಬೇಕು ಎಂಬುದು ನಮ್ಮ ಹಂಬಲ. ಉತ್ತಮ ಗುಣಮಟ್ಟ, ನ್ಯಾಯಯುತ ಬೆಲೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಮನೋಭಾವವೇ ನಮ್ಮ ಯಶಸ್ಸಿನ ಮೂಲಮಂತ್ರ.. 🌟
ಕೊಡಗಿನ ಮಣ್ಣಿನ ಕಾಫಿಯ ಘಮವನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸಿದ ವರುಣ್ ಶರ್ಮಾ ಅವರ ಪಯಣ ನಿಜಕ್ಕೂ ಯುವ ಉದ್ಯಮಿಗಳಿಗೆ ಪ್ರೇರಣಾದಾಯಕ.
Modern Wings to Coorg's Coffee Heritage - Varun Sharma's Success Journey 🚀
In this special edition of "Search Coffee" digital magazine presented by Search Coorg Media, we introduce Varun Sharma, the third-generation young entrepreneur of the prestigious 'Sharma Coffee Works', Madikeri. Leaving a high-ranking corporate position to take his family legacy global with a "Farm to Cup" concept, his journey is truly remarkable.
Varun Sharma: Our coffee journey now has a history of about 40 years. The roots of this business go three generations deep.
- First Generation: My grandfather, Sri Vasant Rao, served for decades as an honored member and employee of the Coorg Coffee Growers Association.
- Second Generation: In 1987, my father, Sri Sridhar, started 'Sharma Coffee Works' opposite the Madikeri KSRTC Bus Stand.
Back then, my father didn't just do business; he earned immense goodwill. He built this business by selling coffee powder for just ₹28 to ₹30 per kg, sending it to distant towns via buses and post. That small beginning has now reached 22 countries! 🌍
Varun Sharma: Certainly, 2004 was a year of great pride. The West Bengal government sent eight IAS officers to Madikeri to receive training about Coorg coffee. My father gave them a week of comprehensive training, covering everything from bean selection and plantation management to roasting and 'cupping'. Recognizing his work, the West Bengal government honored him with a 'Letter of gratitude' in Kolkata. 📜
Varun Sharma: After completing my B.E. in Mechanical Engineering and MBA, I worked for global giants like BOSCH, Reliance, and Valvoline Oil. But returning to Madikeri during COVID sparked a desire to grow our own business. When my parents initially opposed, I challenged myself: "I'm not interested in working under someone else; give me 6 months, if I don't achieve it, I'll return to my job." Surprisingly, within just 4 months, we established our presence in the international market by exporting the first 10 kg of coffee to Singapore. ✈️
Varun Sharma: My father didn't give me a high position immediately. For the first three months, I worked under him as a laborer for a daily wage of ₹250. I learned bean sorting and roasting from the ground up. Even today, we use my father's traditional roasting formula but have added a touch of modern technology. 👷♂️
Father Sridhar and son Varun Sharma – a partnership of tradition and vision.
Varun Sharma: We primarily use top-grade 'PB' (Peaberry) beans collected from Coorg's best growers.
- German Technology: Previously, stone grinders were used, where the aroma lasted only 30 days. Now, we use modern German technology grinders, maintaining freshness for up to 90 days. 🇩🇪
- Our Blends:
- Gold blend - Robusta blend.
- Premium blend - Arabica robusta blend.
- Speciality blend - 100%Arabica.
- South India Filter Coffee: Traditional South Indian flavor. ☕
New and attractive product ranges from Sharma Coffee.
Varun Sharma: Our coffee now reaches 22 countries, including the USA, Canada, and London. We have 4 of our own companies operating abroad.
- Online: Starting from 2 kg/day in 2020, we now handle over 100 kg/day in online transactions. We are available on Amazon, Flipkart, and Blinkit.
- Locally: We have roasting units in Madikeri and Mysore. Soon, we will open a new store in Bangalore. 🏙️
Varun Sharma: We are researching coffee by-products. We are introducing coffee chocolate, coffee soap, coffee jam, and a special 'Coffee Oasis' beverage made from coconut water and kanji. Along with this, we are selling pure Coorg honey and turmeric under our brand. 🍯🍫
Varun Sharma: My mother, Vidya Sridhar, is my backbone. My wife, Mandara, is a scientist at Private organization and provides technical support. My sister Bhavana and brother-in-law Ajay (High Court Advocate) also support us at all stages.
"Sachin and Yogesh educate customers and tourists on the various coffee blends and flavor profiles when they visit our store. To date, they have successfully maintained the signature taste and quality of Sharma Coffee."
Advice to Youth: If you have a family business, don't ignore it. Take it global using modern technology. The satisfaction of building your own business is immense. ☕: Aim: To serve the best quality coffee to people of all classes.
At Sharma Coffee, we believe that a premium cup of coffee should not be a luxury reserved only for the wealthy. Our mission is to break the barrier of "class" in the world of coffee. We are dedicated to ensuring that even a common man can afford and enjoy the finest, most authentic coffee experience. High quality, fair pricing, and inclusivity are the beans that brew our success. 🌟
The journey of Varun Sharma, who brought the aroma of Coorg coffee to the global market, is truly an inspiration for young entrepreneurs.
🛒 ಅಧಿಕೃತ ಕೊಡಗಿನ ಕಾಫಿಯನ್ನು ಈಗಲೇ ಆರ್ಡರ್ ಮಾಡಿ!
ಶರ್ಮಾ ಕಾಫಿಯ ಅತ್ಯುತ್ತಮ ಬ್ಲೆಂಡ್ಗಳನ್ನು ನಿಮ್ಮ ಮನೆ ಬಾಗಿಲಿಗೇ ತರಿಸಿಕೊಳ್ಳಿ.
🛒 Order Authentic Coorg Coffee Today!
Get the finest blends of Sharma Coffee delivered straight to your doorstep.
Visit Website 🌐