ಮೂರ್ನಾಡು: ತ್ರಿನೇತ್ರ ವಾಹನ ಮಾಲೀಕರ ಮತ್ತು ಚಾಲಕರ ಸಂಘದಿಂದ ವಿಜೃಂಭಣೆಯ ಆಯುಧ ಪೂಜಾ ಮಹೋತ್ಸವ 🌺🚗

ಮೂರ್ನಾಡು: ವಿಜೃಂಭಣೆಯ ಆಯುಧ ಪೂಜಾ ಮಹೋತ್ಸವ
ಸ್ಥಳೀಯ ಸುದ್ದಿ

ಮೂರ್ನಾಡು: ತ್ರಿನೇತ್ರ ವಾಹನ ಮಾಲೀಕರ ಮತ್ತು ಚಾಲಕರ ಸಂಘದಿಂದ ವಿಜೃಂಭಣೆಯ ಆಯುಧ ಪೂಜಾ ಮಹೋತ್ಸವ 🌺🚗

✍️ ವರದಿ: ಟಿ.ಸಿ. ನಾಗರಾಜ್, ಮೂರ್ನಾಡು 📅 ಅಕ್ಟೋಬರ್ 2026
Murnad Ayudha Pooja Celebration

ಮೂರ್ನಾಡು: ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಅದ್ಧೂರಿ ಆಯುಧ ಪೂಜಾ ಮಹೋತ್ಸವವು ಅತಿ ವಿಜೃಂಭಣೆಯಿಂದ ನಡೆಯಿತು. ಇಲ್ಲಿನ ಪಿಎಂಶ್ರೀ ಕೆಪಿಎಸ್ ಸರ್ಕಾರಿ ಪ್ರೌಢಶಾಲೆಯ ಮೈದಾನ ಹಾಗೂ ನಾಡ್‌ಮಂಡ್‌ನಲ್ಲಿ ಭವ್ಯ ಅಲಂಕೃತ ವೇದಿಕೆಯಲ್ಲಿ 33ನೇ ವರ್ಷದ ಆಯುಧ ಪೂಜೆಯ ಸಂಭ್ರಮಾಚರಣೆಯಲ್ಲಿ ಅಲಂಕೃತ ವಾಹನಗಳಿಗೆ ಸಾಮೂಹಿಕ ಪೂಜೆಯು ನೆರವೇರಿತು. ✨

🐘 ಅದ್ಧೂರಿ ಮೆರವಣಿಗೆ ಹಾಗೂ ಆಕರ್ಷಕ ಸ್ತಬ್ಧಚಿತ್ರಗಳು

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಪೂಜೆಯ ನಂತರ ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆಯಲ್ಲಿ ವಿಶೇಷವಾಗಿ ಅಲಂಕೃತಗೊಂಡ ವಾಹನಗಳಲ್ಲಿ ಗಜಾನನನಿಂದ ಮೂಕಾಸುರನ ವಧೆ, ಕೊಡಗಿನ ಕಾವೇರಿ ಮಾತೆ, ದೇವಿಯಿಂದ ತಾರಕಾಸುರನ ಸಂಹಾರ, ಅರ್ಧನಾರೀಶ್ವರ ದರ್ಶನ, ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ, ಆನೆ ದಾಳಿಗೆ ರೈತನ ಬಲಿ, ಶ್ರೀಕೃಷ್ಣನ ಸಮುದ್ರ ಮಂಥನ, ಬಡವರಿಗಾಗಿ ನಿವೇಶನ ಹೋರಾಟ, ಕಾಳಿಂಗ ಮರ್ದನ, ಕರಾವಳಿ ಕಲೆ ಯಕ್ಷಗಾನ, ಕೊಳಲು ಕೃಷ್ಣ, ಮಹಾದೇವಿಯಿಂದ ಗರುಡಾಸುರನ ಸಂಹಾರ, ಮಾದಕ ವಸ್ತು ಮುಕ್ತ ಕೊಡಗು ಹೀಗೆ ಹಲವಾರು ಸ್ತಬ್ಧಚಿತ್ರಗಳು ಹಾಗೂ ಕಲಾಕೃತಿಗಳು ಗಮನ ಸೆಳೆದವು.

ಈ ಬಾರಿ ವಿಶೇಷವಾಗಿ ಬೆಳ್ತಂಗಡಿಯ ಶೆಟ್ಟಿ ಬೊಂಬೆ ಬಳಗದಿಂದ ಬೊಂಬೆ ಕುಣಿತ ಮತ್ತು ವಾದ್ಯಗೋಷ್ಟಿ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. ಮಳೆಯ ನಡುವೆಯೂ ರಸ್ತೆಗಳ ಇಕ್ಕೆಲಗಳಲ್ಲಿ ನೆರೆದಿದ್ದ ಸಾರ್ವಜನಿಕರು ಇದನ್ನು ಕಣ್ತುಂಬಿಕೊಂಡರು. 🥁🌧️

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

🎤 ಗಣ್ಯರ ನುಡಿಮುತ್ತುಗಳು

  • ಶರಣ್ ಪೂಣಚ್ಚ (ಮಾಲೀಕರು, ಸಿಗ್ಮಾ ನೆಟ್ವರ್ಕ್ಸ್ ಹಾಗೂ ಸಮಾಜ ಸೇವಕರು):
    "ದೇಶದಲ್ಲಿ ಯುವಶಕ್ತಿಯನ್ನು ಬೆಳೆಸುವ ಕಾರ್ಯವಾಗಬೇಕು, ಸದೃಢ ಭಾರತದ ನಿರ್ಮಾಣಕ್ಕೆ ಯುವಕರ ಶಕ್ತಿಯ ಅವಶ್ಯಕತೆ ತುಂಬಾ ಅಗತ್ಯವಿದೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದವರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ." 🤝
  • ಎಸ್. ಸುರೇಶ್ ನಂಜಪ್ಪ (ಅಧ್ಯಕ್ಷರು, ಬೆಂಗಳೂರು ಕೊಡವ ಸಮಾಜ):
    "ಆಯುಧಪೂಜೆ, ವಿಜಯದಶಮಿಗಳಂತಹ ನಾಡಹಬ್ಬಗಳಲ್ಲಿ ಒಗ್ಗಟ್ಟನ್ನು ಕಾಣುವುದಲ್ಲದೆ, ಇದು ದೇಶದ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ತುಂಬಾ ಸಹಾಯಕಾರಿಯಾಗಿದೆ. ಮೂರ್ನಾಡಿನ ಆಯುಧಪೂಜಾ ಕಾರ್ಯಕ್ರಮವು ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮವಾಗಿದೆ." 🇮🇳
  • ಸ್ವರ್ಣಲತಾ (ಮುಖ್ಯೋಪಾಧ್ಯಾಯಿನಿ, ಪಿಎಂಶ್ರೀ ಕೆಪಿಎಸ್):
    "ನವರಾತ್ರಿ ಹಬ್ಬವು ಮೊದಲು ದೊರೆಗಳ ಹಬ್ಬವಾಗಿತ್ತು, ಆದರೆ ಈಗ ನಾಡಹಬ್ಬವಾಗಿದೆ. ನವರಾತ್ರಿಯು ಶಕ್ತಿಯ ಪ್ರತೀಕವಾಗಿದೆ. ಈ ಶಕ್ತಿ ಸ್ತ್ರೀಯಾಗಿದ್ದು, ಭಾರತದಲ್ಲಿ ಮಾತ್ರ ಸ್ತ್ರೀಯರಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಪ್ರಸ್ತುತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು." 📚👩‍🎓

ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಎಚ್.ವಿ. ಚಂದ್ರಶೇಖರ್ ಸಭೆಯನ್ನುದ್ದೇಶಿಸಿ ಮಾತನಾಡಿ, ಸುಮಧುರ ಹಾಡನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. 🎶

🏆 ಸನ್ಮಾನ ಮತ್ತು ಬಹುಮಾನ ವಿತರಣೆ

ಸಭಾ ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಜಾನಿಶ ಭೋಜಮ್ಮ, ಬೃಂದ ಮತ್ತು ಪುಣ್ಯ, ನಿವೃತ್ತ ಶಿಕ್ಷಕ ಎಚ್.ಬಿ. ಕೃಷ್ಣಪ್ಪ ಮತ್ತು ಮಾಜಿ ಸೈನಿಕ ಚೆಟ್ಟಿಮಾಡ ಬಾಲಕೃಷ್ಣ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. 🏅

ಅಲಂಕೃತಗೊಂಡ ಮೋಟಾರು ರಹಿತ ದ್ವಿಚಕ್ರ(ಸೈಕಲ್), ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ, ಆರು ಚಕ್ರ ವಾಹನಗಳು ಮತ್ತು ಅಂಗಡಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ಹಾಗೂ ಪಾರಿತೋಷಕಗಳನ್ನು ಮುಖ್ಯ ಅತಿಥಿಗಳು ವಿತರಿಸಿದರು. 🎁

🎉 ಸಾಂಸ್ಕೃತಿಕ ವೈಭವ ಹಾಗೂ ಅನ್ನಸಂತರ್ಪಣೆ

ಸಂಘದ ವತಿಯಿಂದ ನೆರೆದಿದ್ದ ಎಲ್ಲಾ ಸಾರ್ವಜನಿಕರಿಗೂ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಭಾ ಕಾರ್ಯಕ್ರಮದ ಬಳಿಕ ಮಂಗಳೂರಿನ 'ಪುರವ್ ಮೆಲೋಡಿಸ್' ಮತ್ತು 'ಡ್ರೀಮ್ ಡ್ಯಾನ್ಸ್ ಟೀಮ್' ನಿಂದ ರಸಮಂಜರಿ ಮತ್ತು ಶರಣ್ ರವರಿಂದ ಮಿಮಿಕ್ರಿ ಕಾರ್ಯಕ್ರಮ ಜರುಗಿತು. 💃🕺🍲

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಸಭೆಯ ಅಧ್ಯಕ್ಷತೆ: ಬಿ.ಬಿ. ಅಶ್ವಥ್ ರೈ (ಅಧ್ಯಕ್ಷರು, ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ)

ಉಪಸ್ಥಿತರಿದ್ದ ಗಣ್ಯರು: ಸತೀಶ್ ಬಿ. ಗುಡ್ಡೆರ, ಬಿ.ಎಸ್. ಪುಷ್ಪಾವತಿ, ಬಿ.ಎಂ. ಕಲ್ಪನಾ ಸಾಮ್ರಾಟ್, ವಿಠಲ್ ಪೂವಯ್ಯ, ರವಿ ನಾಣಯ್ಯ, ಸುಬ್ಬಯ್ಯ, ಟಿ. ಹರೀಶ್, ಎನ್.ಕೆ. ಕುಂಞಿರಾಮ, ರವಿ ಚೀಯಣ್ಣ, ಕೆ.ಎ. ಅಬ್ದುಲ್ ಮಜೀದ್, ಕೆ.ಜೆ. ಮ್ಯಾಥ್ಯೂ ಜೋಸೆಫ್, ಎಚ್.ಬಿ. ಲಿಂಗಪ್ಪ, ಎಚ್.ಎಚ್. ಜಯಂತ್ ಕುಮಾರ್, ಟಿ.ವಿ. ಹರೇಂದ್ರ.

ಕಾರ್ಯಕ್ರಮ ನಿರ್ವಹಣೆ: ಕಿಶೋರ್ ರೈ ಕತ್ತಲೆಕಾಡು (ಸ್ವಾಗತ ಮತ್ತು ನಿರೂಪಣೆ), ಎನ್.ಎನ್. ಶರಣು (ವರದಿ ವಾಚನ).

Search Coorg Media
Search Coorg Media
Articles: 939
5 1 vote
Article Rating
Subscribe
Notify of
guest
0 Comments
Newest
Oldest Most Voted
0
Would love your thoughts, please comment.x
()
x