ಮಡಿಕೇರಿಯಲ್ಲಿ ಸೋಮವಾರ ಸಂಜೆ ವಿಜೖಂಭಿಸಲಿದೆ ಶಿವದೂತ ಗುಳಿಗ

ನಾಟಕ ರಂಗದಲ್ಲಿ ಅಭೂತಪೂವ೯ ಯಶಸ್ಸು ಕಂಡ ಶಿವದೂತ ಗುಳಿಗ ನಾಟಕವು ಇದೇ ಏಪ್ರಿಲ್ 24 ರಂದು ಸೋಮವಾರ ಸಂಜೆ 7 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಪ್ರದಶ೯ನಗೊಳ್ಳುತ್ತಿದೆ.

2020 ರ ಜನವರಿ 2 ರಂದು ಮೊದಲ ಪ್ರದಶ೯ನ ಕಂಡಿದ್ದ ಈ ನಾಟಕವು ಇದೀಗ 500 ನೇ ಪ್ರದಶ೯ನದತ್ತ ದಾಪುಗಾಲಿಟ್ಟಿದ್ದು ನಾಟಕ ರಂಗದಲ್ಲಿಯೇ ಹೊಸ ದಾಖಲೆಗೆ ಸೖಷ್ಟಿಸಿದೆ. ಈ ಮೂಲಕ ಚರಿತ್ರೆಯನ್ನೇ ಸೖಷ್ಟಿಸಿದೆ.

ಕಾಂತಾರ ಸಿನಿಮಾದಲ್ಲಿ ಗುರುವ ಪಾತ್ರ ಮಾಡಿ ಪ್ರೇಕ್ಷಕರ ಅಪಾರ ಮನ್ನಣೆ ಗಳಿಸಿದ್ದ ಸ್ವರಾಜ್ ಶೆಟ್ಟಿ ಈ ನಾಟಕದಲ್ಲಿ ಗುಳಿಗ ಪಾತ್ರವನ್ನು ನಿವ೯ಹಿಸುತ್ತಿದ್ದಾರೆ.

Search Kodagu WhatsApp Community
Search Kodagu Updates
Official

ಸರ್ಚ್ ಕೊಡಗು ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

Search Kodagu

ಅನೇಕ ಜನಪ್ರಿಯ ತುಳು ಚಿತ್ರಗಳ ನಿದೇ೯ಶಕ ವಿಜಯ ಕುಮಾರ್ ಕೊಡಿಯಾಲಬೈಲ್ ನಿದೇ೯ಶನದಲ್ಲಿ ಸೖಷ್ಟಿಯಾದ ಶಿವದೂತ ಗುಳಿಗ ತುಳುನಾಡಿನ ಕಾರಣಿಕ ಶಕ್ತಿಯಾದ ಗುಳಿಗನ ಹುಟ್ಟು, ಜೀವನ, ಶಕ್ತಿಯ ನೆಲೆಯನ್ನು ರಂಗಭೂಮಿಯ ಪರಿಧಿಯಲ್ಲಿ ಪ್ರಸ್ತುತ ಪಡಿಸುತ್ತದೆ.

ಭಾರೀ ವೆಚ್ಚದಲ್ಲಿ ಸೖಷ್ಟಿಯಾದ ರಂಗವೇದಿಕೆ, ಗ್ರಾಫಿಕ್ ತಂತ್ರಜ್ಞಾನ,ಕೈಲಾಸ, ವೈಕುಂಠಗಳ ಸೆಟ್ಟಿಂಗ್, ಮಿಂಚು ಹರಿಸುಂಥ ಬೆಳಕಿನ ಚಿತ್ತಾರ, ಇವುಗಳೆಲ್ಲಾ ಶಿವದೂತ ಗುಳಿಗ ನಾಟಕದ ಹೈಲೈಟ್ಸ್.

ಒಂದು ಅದ್ಬುತ ನಾಟಕದ ಪ್ರದಶ೯ಕ್ಕೆ ಮಡಿಕೇರಿ ಸಜ್ಜಾಗುತ್ತಿದೆ. ಟಿಕೇಟ್ ಮೂಲಕ ಪ್ರವೇಶ ಕಲ್ಪಿಸಲಾಗಿದೆ. ಮಾಹಿತಿಗಾಗಿ ಸಂಪಕ೯ – ವಿಕ್ರಂಜಾದೂಗಾರ್. 9448108222

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x