Deprecated: Creation of dynamic property Featured_Image_By_URL::$admin is deprecated in /home/u472122668/domains/searchcoorg.com/public_html/wp-content/plugins/featured-image-by-url/featured-image-by-url.php on line 56

Deprecated: Creation of dynamic property Featured_Image_By_URL::$common is deprecated in /home/u472122668/domains/searchcoorg.com/public_html/wp-content/plugins/featured-image-by-url/featured-image-by-url.php on line 57

Notice: Function _load_textdomain_just_in_time was called incorrectly. Translation loading for the push-notification domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/u472122668/domains/searchcoorg.com/public_html/wp-includes/functions.php on line 6131
ನಾಪೋಕ್ಲು ಬಳಿಯ ಬೇತು ದವಸ ಭಂಡಾರದ ವಾರ್ಷಿಕ ಮಹಾಸಭೆ - Search Coorg Media
Subscribe now OK No thanks
ನಾಪೋಕ್ಲು ಬಳಿಯ ಬೇತು ದವಸ ಭಂಡಾರದ ವಾರ್ಷಿಕ ಮಹಾಸಭೆ
Reading Time: 3 minutes

ಸದಸ್ಯರ ಸಹಕಾರ ಇದ್ದರೆ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ; ಗಣೇಶ್ ನಾಣಯ್ಯ

ನಾಪೋಕ್ಲು : ದವಸ ಭಂಡಾರಗಳು ಅಭಿವೃದ್ಧಿ ಹೊಂದಿದರೆ ಮಾತ್ರ ಗ್ರಾಮ ಅಭಿವೃದ್ಧಿಹೊಂದಲು ಸಾಧ್ಯ ಇದಕ್ಕೆ ಸರ್ವ ಸದಸ್ಯರ ಸಹಕಾರ ಮುಖ್ಯ ಎಂದು ಬೇತು ಗ್ರಾಮದ ದವಸ ಭಂಡಾರದ ಅಧ್ಯಕ್ಷ ಕೊಂಡೀರ ಗಣೇಶ್ ನಾಣಯ್ಯ ಹೇಳಿದರು.

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಬೇತು ಗ್ರಾಮದ ದವಸ ಭಂಡಾರದ ಕಟ್ಟಡದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಜರು ಪ್ರಾರಂಭಿಸಿದ ಈ ದವಸ ಭಂಡಾರಕ್ಕೆ ಇಂದು 70 ವರ್ಷ ಸಂದಿವೆ, ಈಗ ಇದು 200 ಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಇದನ್ನು ಉಳಿಸಬೇಕಾದ ಕರ್ತವ್ಯ ನಮ್ಮದಾಗಿದೆ, ಅಲ್ಲದೆ ನಮ್ಮ ಯುವಪೀಳಿಗೆಗೆ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು. ನಮ್ಮ ದವಸ ಭಂಡಾರದಲ್ಲಿರುವ ಸದಸ್ಯರ ಮಕ್ಕಳಿಗೆ 18 ವರ್ಷ ತುಂಬಿದ್ದರೆ ಅವರನ್ನು ಇದರ ಸದಸ್ಯರನ್ನಾಗಿಸಬೇಕು, ಇದರಿಂದ ಮುಂದೆ ದವಸ ಭಂಡಾರ ಬೆಳೆಯಲು ಸಹಕಾರಿಯಾಗಲಿದೆ ಎಂದರು.ಮುಂದೆ ಸಂಘದಿಂದ ಸಮುದಾಯ ಭವನ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದ್ದು ನಿಮ್ಮೆಲ್ಲರ ಸಹಕಾರ ಇದ್ದರೆ ಸ್ಥಳ ನಿಗದಿಪಡಿಸಿ ಶಾಸಕರ ಗಮನಕ್ಕೆ ತಂದು ಕ್ರಮಕೈಗೊಳ್ಳಲಾಗುವುದು ಎಂದ ಅವರು
ಸಂಘದ ಮರಣನಿಧಿಯ ಹಣವನ್ನು ಎಲ್ಲಾ ಸದಸ್ಯರು ಡಿಸಂಬರ್ ತಿಂಗಳ ಅಂತ್ಯದೊಳಗೆ ಪಾವತಿಸಿ ಸಹಕರಿಸಬೇಕೆಂದರು.

ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆ ಮಾದಕ ವಸ್ತುಗಳ ಬಳಕೆಗೆ ದಾಸರಾಗುತ್ತಿದ್ದಾರೆ.ನಮ್ಮ ಗ್ರಾಮ ಹಾಗೂ ಇನ್ನಿತರ ಕಡೆಗಳಲ್ಲಿ ಇದನ್ನು ಬಳಸುವವರನ್ನು ಕಂಡು ಬಂದಲ್ಲಿ ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಿ ಸಮಾಜದಿಂದ ಪಿಡುಗನ್ನು ನಿರ್ಮೂಲನೆ ಮಾಡಲು ಕೈಜೋಡಿಸಬೇಕು.ನಮ್ಮ ಮಕ್ಕಳನ್ನು ಇದರಿಂದ ರಕ್ಷಿಸುವುದು ಎಲ್ಲಾ ಪೋಷಕರ ಕರ್ತವ್ಯ ಎಂದರು. ಸಂಘದ ಹಾಗೂ ಗ್ರಾಮದ ಅಭಿವೃದ್ಧಿಗಾಗಿ ಎಲ್ಲಾ ರೀತಿಯಲ್ಲಿ ಸರ್ವ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ದವಸ ಭಂಡಾರದ ಉಪಾಧ್ಯಕ್ಷ ಕಲ್ಯಾಟಂಡ ರಮೇಶ್ ಚಂಗಪ್ಪ, ಕಾರ್ಯದರ್ಶಿ ಬೊಳ್ಳೆಪಂಡ ಪೆಮ್ಮಯ್ಯ, ನಿರ್ದೇಶಕರಾದ ಕುಟ್ಟಂಜೆಟ್ಟೀರ ಶಾಮ್ ಬೋಪಣ್ಣ, ಬೊಳ್ಳೆಪಂಡ ಪೂಣಚ್ಚ, ಕೊಂಡೀರ ಸುರೇಶ್, ಚೋಕಿರ ಪ್ರಭು, ಕಾಳೆಯಂಡ ಸಾಬಾ ತಿಮ್ಮಯ್ಯ, ಪಾತಂಡ ಜಯ, ಅಪ್ಪೇರಿಯಂಡ ಗೌರಮ್ಮ, ಮುಕ್ಕಾಟಿರ ರೋಹಿಣಿ, ಸೇರಿದಂತೆ ದವಸ ಭಂಡಾರದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ಬೊಳ್ಳೆಪಂಡ ಹರೀಶ್ ಸ್ವಾಗತಿಸಿ ವಂದಿಸಿದರು.

ವರದಿ: ಝಕರಿಯ ನಾಪೋಕ್ಲು

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x