ನರಿಯಂದಡ ಗ್ರಾಮ ಪಂಚಾಯಿತಿಗೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಚೆಯ್ಯ0ಡಾಣೆ, ಸೆ 19. ಸ್ಥಳೀಯ ನರಿಯಂದಡ ಗ್ರಾಮಪಂಚಾಯಿತಿ ಕಾರ್ಯಾಲಯಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು,ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಕುಂದು ಕೊರೆತೆಗಳನ್ನು ಆಲಿಸಿದರು.
ಈ ಸಂದರ್ಭ ಜೆಜೆಎಂ ನಾ ತೌಸೀಫ್ ಶಾಸಕರ ಬಳಿ ಕೂಡಲೇ ವಿದ್ಯುತ್ ಪವರ್ ಸಪ್ಲೈ ನೀಡಿದರೆ ನೀರಿನ ಸಮಸ್ಯೆ ಬಗ್ಗೆ ಹರಿಯಲಿದೆ ಎಂದು ಗಮನಕ್ಕೆ ತಂದರು ಇದೆ ಸಂದರ್ಭ ಶಾಸಕರು ಮಡಿಕೇರಿ ವಿದ್ಯುತ್ ಪರಿವಿಕ್ಷಕರಿಗೆ ಕರೆ ಮಾಡಿ ಕೂಡಲೇ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಜೆಜೆಎಂ ನಾ ನೀರಿನ ಸೌಲಭ್ಯಕ್ಕೆ ವಿದ್ಯುತ್ ನಾ ಸಮಸ್ಯೆಗೆ ಪರಿಹರಿಸಬೇಕೆಂದರು ಇದಕ್ಕೆ ಪ್ರತಿಕ್ರಿಹಿಸಿದ ಇಲಾಖೆಯ ಅಧಿಕಾರಿ ಒಂದು ವಾರದಲ್ಲಿ ವಿದ್ಯುತ್ ನೀಡಲಾಗುವುದು ಎಂದರು.
ಕಡಂಗ ಅರಪಟ್ಟುವಿನಲ್ಲಿ 20 ಲಕ್ಷದಲ್ಲಿ ಖರ್ಚು ಮಾಡಿ ಒಂದು ದಿನ ಮಾತ್ರ ನೀರು ಸರಬರಾಜು ಆಗಿದೆ ಮತ್ತೆ ನೀರು ಬಂದಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಶಾಸಕರ ಗಮನಕ್ಕೆ ತಂದರು ಇದಕ್ಕೆ ಸ್ಥಳದಲ್ಲಿದ್ದ ಜೆಜೆಎಂ ತೌಸೀಫ್ ಗೆ ಮಾಹಿತಿ ಕೇಳಿದ ಶಾಸಕರು ಕೂಡಲೇ 2 ದಿನದಲ್ಲಿ ನೀರಿನ ಸಮಸ್ಯೆಗೆ ಮುಕ್ತಿ ದೊರೆಯ ಬೇಕೆಂದ್ದು ತೌಸೀಫ್ ಗೆ ತಿಳಿಸಿದರು. ಗ್ರಾಮ ಪಂಚಾಯಿತಿ ವತಿಯಿಂದ ಶಾಸಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೆ ಸಂದರ್ಭ ಗ್ರಾಮಸ್ಥರು ಶಾಸಕರಿಗೆ ವಿವಿಧ ಕಾಮಗಾರಿಗೆ ಹಾಗೂ ಯೋಜನೆ ಗಳಿಗೆ ಮನವಿ ಪತ್ರ ನೀಡಿದರು.
ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಉಪಾಧ್ಯಕ್ಷರು ಕೋಡಿರ ವಿನೋದ್ ನಾಣಯ್ಯ, ಮಾಜಿ ಗ್ರಾ.ಪಂ.ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿಗಳು ಮತ್ತಿತರರು ಇದರು.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
ಅಶ್ರಫ್, ಚೆಯ್ಯಂಡಾಣೆ
ಅಶ್ರಫ್, ಚೆಯ್ಯಂಡಾಣೆ
Articles: 103
0 0 votes
Article Rating
Subscribe
Notify of
guest
0 Comments
Newest
Oldest Most Voted
0
Would love your thoughts, please comment.x
()
x