ಕರಿಕೆ: ಕರಿಕೆ ಗ್ರಾಮದ ಆನೆಪಾರೆ ಎಂಬಲ್ಲಿ ಕಾಡಾನೆ ಹಾವಳಿ ದಿನೇ ದಿನೇ ಹೆಚ್ಚಾಗಿದ್ದು, ರೈತರ ತೋಟಕ್ಕೆ ನುಗ್ಗಿ ಫಸಲು ಪಡೆವ ಅಡಿಕೆ-ತೆಂಗುಗಳನ್ನು ತುಂಡುಮಾಡಿ ತುಂಬಾ ನಷ್ಟವುಂಟುಮಾಡಿದೆ.
ರಧೀಶ್ ಎಂಬುವವರ 10 ಅಡಿಕೆ ಹಾಗೂ 2ತೆಂಗು ಮರ, ಜೋಸೆಫ್ ಎಂಬುವವರ 60 ಅಡಿಕೆಮರ, ಮನೋಜ್ ಎಂಬುವವರ 30 ಅಡಿಕೆ ಮರ, ಮೋಹನ ಎಂಬುವವರ 25 ಅಡಿಕೆಮರಗಳನ್ನು ನಾಶ ಮಾಡಿದೆ.
Official
ಸರ್ಚ್ ಕೂರ್ಗ್ ಸುದ್ದಿ ಅಪ್‌ಡೇಟ್ಸ್
ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ
ಪ್ರತಿ ವರ್ಷ ಈ ಭಾಗದಲ್ಲಿ ಆನೆ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಆದಷ್ಟು ಬೇಗ ಆನೆ ಕಂದಕವನ್ನು ನಿರ್ಮಿಸಿ ಕೊಟ್ಟು ಇಲ್ಲಿಯ ಜನರ ಸಂಕಷ್ಟವನ್ನು ನಿವಾರಿಸಿ ಕೊಡ ಬೇಕಾಗಿ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವರದಿ: ಶಿವಗಿರಿ ರಾಜೇಶ್, ಕರಿಕೆ
