ನಾಪೋಕ್ಲು: ಸ್ಥಳೀಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಬ್ಯಾಂಕಿನ ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಪೈ ಅವರ 118ನೇ ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಾಪೋಕ್ಲು ಶಾಖೆಯಲ್ಲಿ ನಡೆದ ಕಾರ್ಯಕ್ರಮವನ್ನು ಸ್ಥಳೀಯ ಬೆಳೆಗಾರರಾದ ಎಂ.ಡಿ. ತಮ್ಮಯ್ಯ ಅವರು ದೀಪಬೆಳಗಿಸಿ ಉದ್ಘಾಟಿಸಿ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು.
Official
ಸರ್ಚ್ ಕೊಡಗು ಸುದ್ದಿ ಅಪ್‌ಡೇಟ್ಸ್
ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ
ಈ ಸಂದರ್ಭ ಗ್ರಾಹಕರಿಗೆ ಹಾಗೂ ಸ್ಥಳೀಯ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದರ ಮೂಲಕ ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭ ಬ್ಯಾಂಕಿನ ವ್ಯವಸ್ತಾಪಕರಾದ ಪ್ರಶಾಂತ್ ಕುಮಾರ್ ಬೋಹಿದಾರ್, ಸಿಬ್ಬಂದಿಗಳಾದ ಫೌಝಿಯ, ಅಜಿತ್, ಕನ್ನ ಬಾಬು, ಬಿ.ಆರ್. ದೇವಪ್ಪ, ಟಿ.ಬಿ.ಸುಧಾ ಮತ್ತಿತರರು ಹಾಜರಿದ್ದರು.
