ಕರಾಟೆ ಪರೀಕ್ಷೆಯಲ್ಲಿ ಪದಕ ಮತ್ತು ವಿವಿಧ ಬೆಲ್ಟ್‌ಗಳನ್ನು ಪಡೆದ ಸಾಂದೀಪಿನಿ ವಿದ್ಯಾಪೀಠದ ವಿದ್ಯಾರ್ಥಿಗಳು

ಕರಾಟೆ ಪರೀಕ್ಷೆಯಲ್ಲಿ ಪದಕ ಮತ್ತು ವಿವಿಧ ಬೆಲ್ಟ್‌ಗಳನ್ನು ಪಡೆದ ಸಾಂದೀಪಿನಿ ವಿದ್ಯಾಪೀಠದ ವಿದ್ಯಾರ್ಥಿಗಳು

ಮೂರ್ನಾಡು: ಇಲ್ಲಿಗೆ ಸಮೀಪದ ಸಾಂದೀಪಿನಿ ವಿದ್ಯಾಪೀಠದದಲ್ಲಿ ಇತ್ತೀಚೆಗೆ ಆಯೋಜಿಸಲಾದ ಕರಾಟೆ ಪರೀಕ್ಷೆಯಲ್ಲಿ ವಿದ್ಯಾಪೀಠದ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಪದಕ ಮತ್ತು ವಿವಿಧ ಬೆಲ್ಟ್‌ಗಳನ್ನು ಪಡೆದುಕೊಂಡಿದ್ದಾರೆ.

Search Kodagu WhatsApp Community
Search Kodagu Updates
Official

ಸರ್ಚ್ ಕೊಡಗು ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

Search Kodagu

ಅಂತರಾಷ್ಟ್ರೀಯ ಶಾವೊಲಿನ್ ಕುಂಗ್-ಫು ಕರಾಟೆ ಶಾಲೆಯ ವತಿಯಿಂದ ನಡೆಸಲಾದ ಕರಾಟೆ ಪರೀಕ್ಷೆಯಲ್ಲಿ 19 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ವಿದ್ಯಾಪೀಠದ ಶಾಲಾ ಮುಖ್ಯ ಶಿಕ್ಷಕಿ ಸೀತಮ್ಮ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪದಕ ಮತ್ತು ವಿವಿಧ ರೀತಿಯ ಕರಾಟೆಬೆಲ್ಟ್‌ಗಳನ್ನು ವಿತರಿಸಿದರು.

ಅಂತರಾಷ್ಟ್ರೀಯ ಶಾವೊಲಿನ್ ಕುಂಗ್-ಫು ಕರಾಟೆ ಶಾಲೆಯ ಭಾರತದ ಮುಖ್ಯ ತರಬೇತುದಾರ ದೇವರಾಜ್, ಸಾಂದೀಪಿನಿ ವಿದ್ಯಾಪೀಠದ ಕಾರ್ಯದರ್ಶಿ ಕೆ.ಆರ್ ಯೋಗೇಶ್, ಸೌಜನ್ಯ ಯೋಗೇಶ್, ಕರ್ನಾಟಕ ತರಬೇತುದಾರ ಹಾಗೂ ವಿದ್ಯಾಪೀಠದ ಕರಾಟೆ ಶಿಕ್ಷಕ ನಾಟೋಳಂಡ ನಂಜುಂಡ, ಕೊಡಗು ಜಿಲ್ಲಾ ತರಬೇತುದಾರರಾದ ವೇಣು ಮತ್ತು ಸತೀಶ್ ಈ ಸಂದರ್ಭದಲ್ಲಿ ಹಾಜರಿದ್ದರು.

ಚಿತ್ರ ಮತ್ತು ವರದಿ: ಟಿ. ಸಿ. ನಾಗರಾಜ್, ಮೂರ್ನಾಡು

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x