ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್: ಫಿಯೋನೆಕ್ಸ್ ಎಫ್ ಸಿ ಸೋಮವಾರಪೇಟೆ ಚಾಂಪಿಯನ್, ಮೊಗೇರ ಎಫ್ ಸಿ ಪಾಲಿಬೆಟ್ಟ ರನ್ನರ್ಸ್

ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್: ಫಿಯೋನೆಕ್ಸ್ ಎಫ್ ಸಿ ಸೋಮವಾರಪೇಟೆ ಚಾಂಪಿಯನ್, ಮೊಗೇರ ಎಫ್ ಸಿ ಪಾಲಿಬೆಟ್ಟ ರನ್ನರ್ಸ್

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್: ಫಿಯೋನೆಕ್ಸ್ ಎಫ್ ಸಿ ಸೋಮವಾರಪೇಟೆ ಚಾಂಪಿಯನ್, ಮೊಗೇರ ಎಫ್ ಸಿ ಪಾಲಿಬೆಟ್ಟ ರನ್ನರ್ಸ್

ಮಡಿಕೇರಿ: ಕೊಡಗು ಮೊಗೇರ ಫುಟ್ಬಾಲ್ ಕ್ಲಬ್ ವತಿಯಿಂದ ಪ್ರಪ್ರಥಮ ಬಾರಿಗೆ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಸೀಸನ್-1 ರ ಪಂದ್ಯಾವಳಿ ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ 6+3 ಆಟಗಾರರನ್ನೊಳಗೊಂಡಂತೆ 8 ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಿತು. ಫೈನಲ್ ಪಂದ್ಯದಲ್ಲಿ ಫಿಯೋನೆಕ್ಸ್ ಎಫ್‌ಸಿ ಸೋಮವಾರಪೇಟೆ ಮತ್ತು ಮೊಗೇರ ಎಫ್‌ಸಿ ಪಾಲಿಬೆಟ್ಟ ತಂಡಗಳು ಪೂರ್ಣಾವಧಿಯಲ್ಲಿ ಯಾವುದೇ ಗೋಲು ದಾಖಲಿಸದೇ ಸಮಬಲ ಸಾಧಿಸಿತು. ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ 2-0 ಗೋಲುಗಳ ಅಂತರದಲ್ಲಿ ಫಿಯೋನೆಕ್ಸ್ ಎಫ್‌ಸಿ ತಂಡ ಗೆಲುವು ಸಾಧಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದರೆ, ಮೊಗೇರ ಎಫ್‌ಸಿ ಪಾಲಿಬೆಟ್ಟ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದಕ್ಕೂ ಮೊದಲು ನಡೆದ ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಫಿಯೋನೆಕ್ಸ್ ಎಫ್ ಸಿ ಸೋಮವಾರಪೇಟೆ ಹಾಗೂ ಮಾನ್ವಿಕ್ ಎಫ್ ಸಿ ತಂಡದ ನಡುವೆ ನಡೆಯಿತು.ಫಿಯೋನೆಕ್ಸ್ ಎಫ್ ಸಿ ಸೋಮವಾರಪೇಟೆ ತಂಡವು ಪ್ರಶಾಂತ್ ರವರ ಹ್ಯಾಟ್ರಿಕ್ ಗೋಲ್ ನಿಂದ ಮಾನ್ವಿಕ್ ಎಫ್ ಸಿ ವಿರುದ್ಧ ಜಯ ಗಳಿಸಿ ಫೈನಲ್ ಗೆ ಅರ್ಹತೆ ಪಡೆಯಿತು.
ದ್ವಿತೀಯ ಸೆಮಿ ಫೈನಲ್ ಪಂದ್ಯದಲ್ಲಿ ಮೊಗೇರ ಎಫ್ ಸಿ ಪಾಲಿಬೆಟ್ಟ ಹಾಗೂ ಇಶಾನಿ ಎಫ್ ಸಿ ಗೋಣಿಕೊಪ್ಪ ಪೂರ್ಣಾವಧಿಯಲ್ಲಿ ಯಾವುದೇ ಗೋಲು ದಾಖಲಿಸದೇ ಸಮಬಲ ಸಾಧಿಸಿತು. ನಂತರ ಪೆನಲ್ಟಿ ಶೂಟೌಟ್‌ನಲ್ಲಿ 3-2 ಗೊಲುಗಳ ಮೂಲಕ ಮೊಗೇರ ಎಫ್ ಸಿ ತಂಡವು ಜಯ ಗಳಿಸಿ ಫೈನಲ್ ಗೆ ಅರ್ಹತೆ ಪಡೆದುಕೊಂಡಿತು.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಇಶಾನಿ ಎಫ್‌ಸಿ ಗೋಣಿಕೊಪ್ಪ ತಂಡ ತಂಡ ಮಾನ್ವಿಕ್ ‌ ಎಫ್‌ಸಿ ತಂಡವನ್ನು 6-5 ಗೋಲುಗಳಿಂದ ಮಣಿಸಿತು. ಪೂರ್ಣಾವಧಿಯಲ್ಲಿ ಇತ್ತಂಡಗಳು ಯಾವುದೇ ಗೋಲು ದಾಖಲಿಸದೇ ಸಮಬಲ ಸಾಧಿಸಿತು. ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಇತ್ತಂಡಗಳು 5-5 ಗೋಲುಗಳ ಸಮಬಲ ಸಾಧಿಸಿ, ಸಡನ್ ಡೆತ್‌ನಲ್ಲಿ 1-0 ಗೋಲುಗಳಿಂದ ಮಣಿಸಿ ಇಶಾನಿ ಎಫ್ ಸಿ ಗೋಣಿಕೊಪ್ಪ ತೃತೀಯ ಸ್ಥಾನ ಪಡೆದುಕೊಂಡಿತು.

ಗಮನ ಸೆಳೆದ ಸಮಾಜದ ಬಾಲಕಿಯರ ಪಂದ್ಯ; ಬಾಲಕಿಯರ ಟೀಮ್ ಸುಂಟಿಕೊಪ್ಪ ತಂಡ ಚಾಂಪಿಯನ್
ಮಹಿಳೆಯರ 2 ತಂಡಗಳ ನಡುವಿನ ನಡೆದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಟೀಮ್ ಸುಂಟಿಕೊಪ್ಪ ತಂಡ ಟೀಮ್ ಮಡಿಕೇರಿ ತಂಡವನ್ನು ಸೋಲಿಸಿತು. ಪೂರ್ಣಾವಧಿಯಲ್ಲಿ ಈ ತಂಡಗಳು 1- 1 ಗೋಲು ದಾಖಲಿಸಿ ಸಮಬಲ ಸಾಧಿಸಿತು. ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ 1-1 ಮತ್ತೊಮ್ಮೆ ಸಮಬಲ ಸಾಧಿಸಿತು. ಸಡನ್ ಡೆತ್‌ನಲ್ಲಿ 1-0 ಗೋಲುಗಳ ಅಂತರದಲ್ಲಿ ಟೀಮ್ ಸುಂಟಿಕೊಪ್ಪ ತಂಡ ಟೀಮ್ ಮಡಿಕೇರಿ ತಂಡವನ್ನು ಮಣಿಸಿ ಚಾಂಪಿಯನ್ ಪ್ರಶಸ್ತಿಯನ್ನು ಗಳಿಸಿತು. ಮಡಿಕೇರಿ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಮುಖ್ಯವಾಗಿ ಕ್ರೀಡಾ ಕೂಟದ ತೀರ್ಪುಗಾರರಾಗಿ ಲೋಹಿತ್ (ಪಿಕ) ದಿವಾಕರ, ಬಿಬ್ಲ ಕಾರ್ಯ ನಿರ್ವಹಿಸಿದ್ದರು.
ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ವೈಯುಕ್ತಿಕ ಬಹುಮಾನ ನೀಡಿ ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಫಿಯೋನೆಕ್ಸ್ ತಂಡದ ಪ್ರಶಾಂತ್ ಪಡೆದು ಕೊಂಡರೆ,ಬೆಸ್ಟ್ ಗೋಲ್ ಕೀಪರ್ ಆಗಿ ಟೀಮ್ ಹಂಟರ್ಸ್ ತಂಡದ ರಮೇಶ್ ಪಡೆದುಕೊಂಡರು.
ಬೆಸ್ಟ್ ಡಿಫೆಂಡರ್ ಆಗಿ ಇಶಾನಿ ಎಫ್ ಸಿ ತಂಡದ ದಿನೇಶ್
ಉದಾಯೋನ್ಮೋಖ ಆಟಗಾರ ಹಂಟರ್ಸ್ ತಂಡದ ಚಂಪಕ್
ಅತ್ಯಾಧಿಕ ಸ್ಕೋರ್ ಮೊಗೇರ ಎಫ್ ಸಿ ತಂಡದ ಪಿಟ್ಟಿ ಪ್ರವೀಣ್, ಪಡೆದು ಕೊಂಡರೆ ಶಿಸ್ತು ಬದ್ದ ತಂಡವಾಗಿ ಮಾನ್ವಿಕ್ ಎಫ್ ಸಿ ಅಮ್ಮತಿ ಪಡೆದು ಕೊಂಡಿತು.
ಸಮಾರೋಪ ಸಮಾರಂಭ :: ಕೊಡಗು ಮೊಗೇರ ಫುಟ್ಬಾಲ್ ಕ್ಲಬ್‌ನ ಕ್ರೀಡಾ ಕಾರ್ಯದರ್ಶಿ ವಿವೇಕ್ ಮೊಗೇರ ಅಧ್ಯಕ್ಷತೆಯಲ್ಲಿ ನಡೆದ . ಸಮಾರೋಪ ಸಮಾರಂಭದಲ್ಲಿ ಕೆ.ನಿಡುಗಣೆ ಗ್ರಾ.ಪಂ ಸದಸ್ಯ ಜಾನ್ಸನ್ ಪಿಂಟೋ, ಬಹುಮಾನ ದಾನಿ ಗಣೇಶ್ ಹೊಸುರು, ಕೊಡಗು ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಜನಾರ್ದನ ಮರಗೋಡು, ಸಮಾಜದ ಗೌರವ ಸಲಹೆಗಾರ ಪಿ.ಎಂ.ರವಿ, ಶಕ್ತಿ ದಿನ ಪತ್ರಿಕೆಯ ಉಪ ಸಂಪಾದಕ ಕುಡೆಕಲ್ ಸಂತೋಷ್, ಕೊಡಗು ಮೊಗೇರ ಫುಟ್ಬಾಲ್ ಕ್ಲಬ್‌ ಅಧ್ಯಕ್ಷ ಎಂ.ಎಂ.ಅಶೋಕ್ ಹಾಗೂ ಕ್ಲಬ್‌ನ ಪದಾಧಿಕಾರಿಗಳು ರಮೇಶ್ ಪಿ. ಸಿ., ದರ್ಶಿತ್ ಹೆಬ್ಬಟ್ಟಗೇರಿ,ದಿನೇಶ್ ಮಡಿಕೇರಿ, ವಿವೇಕ್ ಕಡಗದಾಳು, ಸುರೇಶ್ ಎಂ. ಕೆ , ದಿನೇಶ್ ಪಿ. ಎನ್ ಹಾಗೂ ರಕ್ಷಿತಾ ಪಾಲ್ಗೊಂಡಿದ್ದರು.

ವರದಿ: ಅಶೋಕ್ ಮಡಿಕೇರಿ

Search Coorg Media
Search Coorg Media
Articles: 938
0 0 votes
Article Rating
Subscribe
Notify of
guest
0 Comments
Newest
Oldest Most Voted
0
Would love your thoughts, please comment.x
()
x