ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದ ನಾಗಬನದಲ್ಲಿ ವಿಜೃಂಭಣೆಯಿಂದ ನಡೆದ ಷಷ್ಠಿ ಪೂಜೆ

ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ಸೋಮವಾರ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ವಿಶೇಷ ಷಷ್ಠಿ ಪೂಜೆಯನ್ನು ಹಮ್ಮಿಕೊಳ್ಳಲಾಯಿತು. ಇಲ್ಲಿನ ನಾಗ ಬನದಲ್ಲಿ ಪ್ರತಿಷ್ಟಾಪಿಸಲಾಗಿರುವ ನಾಗ ದೇವರಿಗೆ ವಿಶೇಷ ಪೂಜೆ ಹಾಗೂ ವಿವಿಧ ಅಭಿಷೇಕ ಮಾಡುವ ಮೂಲಕ ಭಕ್ತರು ತಮ್ಮ ಹರಕೆಯನ್ನು ಸಲ್ಲಿಸಿದ್ದರು. ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಪೂಜೆ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಲಾಯಿತು. ನಂತರ ಭದ್ರಕಾಳಿ ದೇವಸ್ಥಾನದಲ್ಲಿ ಮಹಾಮಂಗಳಾರತಿಯ ಬಳಿಕ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಊರಿನವರು ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಭಕ್ತರು ಷಷ್ಠಿ ಪೂಜೆಯಲ್ಲಿ ಪಾಲ್ಗೊಂಡರು. ಊರು ತಕ್ಕರಾದ ಚಮ್ಮಟೀರ ಕುಟುಂಬಸ್ಥರ ತಕ್ಕಾಮೆಯಲ್ಲಿ ನಡೆದ ಷಷ್ಠಿ ಪೂಜೆಯಲ್ಲಿ ಮೂಕಳೇರ, ಮಚ್ಚಿಯಂಡ, ಚೇಂದಿಮಾಡ, ಕೂಕಂಡ, ಮನೆಯಪಂಡ, ಸಣ್ಣುವಂಡ, ಕೊಳೇರ ಸೇರಿದಂತೆ ಊರಿನ ವಿವಿಧ ಕುಟುಂಬಸ್ಥರು ಮತ್ತು ಗ್ರಾಮ‌ಸ್ಥರು ಹಾಗೂ ಭಕ್ತರು ಭಾಗವಹಿಸಿದ್ದರು. ಇಲ್ಲಿನ ಮುಖ್ಯ ಅರ್ಚಕರಾದ ಸುಬ್ರಮಣ್ಯ ಕೇಕುನ್ನಾಯ ನೇತೃತ್ವದಲ್ಲಿ ಪೂಜಾವಿಧಿ ವಿಧಾನಗಳು ನಡೆಯಿತು.

0 0 votes
Article Rating
Subscribe
Notify of
guest
0 Comments
Newest
Oldest Most Voted
error: Content is protected !!
0
Would love your thoughts, please comment.x
()
x