ಫೆಬ್ರವರಿ 10ರಂದು ವಿರಾಜಪೇಟೆ “ಚೋಟು ಚಾಮ್ಸ್” ಗುರುಕುಲಂ ಶಾಲೆಯ ವಾರ್ಷಿಕೋತ್ಸವ

ಫೆಬ್ರವರಿ 10ರಂದು ವಿರಾಜಪೇಟೆ “ಚೋಟು ಚಾಮ್ಸ್” ಗುರುಕುಲಂ ಶಾಲೆಯ ವಾರ್ಷಿಕೋತ್ಸವ

ವಿರಾಜಪೇಟೆಯ “ಚೋಟ ಚಾಮ್ಸ್” ಗುರುಕುಲಂ ಮಾದರಿ ಶಾಲೆಯ ವಾರ್ಷಿಕೋತ್ಸವ ಇದೇ ಫೆಬ್ರವರಿ 10ರಂದು ಶನಿವಾರ (ಇಂದು) ಇಲ್ಲಿನ ರಾಜೇಶ್ವರಿ ಮಿನಿ ಕನ್ವರ್ಷನ್ ಹಾಲ್’ನಲ್ಲಿ ನಡೆಯಲ್ಲಿದ್ದು ಮುಖ್ಯ ಅತಿಥಿಗಳಾಗಿ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಭಾಗವಹಿಸಲಿದ್ದಾರೆ ಎಂದು ಚೋಟ ಚಾಮ್ಸ್ ಶಾಲೆಯ ಪ್ರಾಂಶುಪಾಲರಾದ ಚಂಗೇಟೀರ ಅಕ್ಕಮ್ಮ ಧನುಕುಮಾರ್ ತಿಳಿಸಿದ್ದಾರೆ.

Search Kodagu Updates
Official

ಸರ್ಚ್ ಕೊಡಗು ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಈ ಕುರಿತು ಮಾಹಿತಿ ನೀಡಿರುವ ಅವರು ಮಾತೃ ಎಜುಕೇಷನ್ ಟ್ರಸ್ಟ್ ಅಡಿಯಲ್ಲಿರುವ ವಿರಾಜಪೇಟೆಯ ವಿಜಯನಗರದಲ್ಲಿರುವ “ಚೋಟ ಚಾಮ್ಸ್” ಗುರುಕುಲಂ ಶಾಲೆಗೆ ತನ್ನದೇಯಾದ ಕಲಿಕಾ ಕೌಶಲ್ಯವಿದ್ದು ಗುರುಕುಲ ಮಾದರಿಯಲ್ಲಿ ಪುಟ್ಟ ಮಕ್ಕಳಿಗೆ ಕಲಿಕೆಯನ್ನು ನೀಡಲಾಗುತ್ತಿದೆ. ಮಾತೃ ಎಜುಕೇಷನ್ ಟ್ರಸ್ಟ್’ನ ನೀತಿ ನಿಬಂಧನೆಗಳಿಗೆ ಒಳಪಟ್ಟು ಶಾಲೆಯನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಉತ್ತಮ ನಡೆನುಡಿ ಹಾಗೂ ಸಂಸ್ಕಾರವನ್ನು ಕಲಿಸುವ ಉದ್ದೇಶದಿಂದ ಕಳೆದ ಏಳು ಹಿಂದೆ ಶಾಲೆಯನ್ನು ಆರಂಭಿಲಾಗಿದೆ ಎಂದರು.

ಇದರ ಶಾಲಾ ವಾರ್ಷಿಕೋತ್ಸವ “ಸಂಭ್ರಮ-2023-24” ಹೆಸರಿನಲ್ಲಿ ಫೆಬ್ರವರಿ 10ರಂದು ಮಧ್ಯಾಹ್ನ 2-00ಗಂಟೆಗೆ ವಿರಾಜಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿರುವ ರಾಜೇಶ್ವರಿ ಮಿನಿ ಕನ್ವರ್ಷನ್ ಹಾಲ್’ನಲ್ಲಿ ಸಭಾಂಗಣದಲ್ಲಿ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

0 0 votes
Article Rating
Subscribe
Notify of
guest
0 Comments
Oldest
Newest Most Voted
error: Content is protected !!
0
Would love your thoughts, please comment.x
()
x