ಕಾಫಿ ಕೃಷಿಯಲ್ಲಿ ದೈನಂದಿನ ಜೀವನ: ನಡಿಕೇರಿಯಂಡ ಬೋಸ್ ಮಂದಣ್ಣ ಅವರೊಂದಿಗೆ ಸಂದರ್ಶನ
ಸರ್ಚ್ ಕೂರ್ಗ್ ಮೀಡಿಯಾ ಪ್ರೆಸೆಂಟ್ಸ್
ನಡಿಕೇರಿಯಂಡ ಬೋಸ್ ಮಂದಣ್ಣ - ಕೊಡಗಿನ ಪ್ರಗತಿಪರ ಕಾಫಿ ಬೆಳೆಗಾರರು
ಪರಿಚಯ ಮತ್ತು ಆರಂಭಿಕ ಜೀವನ
ಶಿಕ್ಷಣದ ಹಾದಿ:
- 1952-56: ಮಡಿಕೇರಿಯ ಬ್ಯಾಸಲ್ ಮಿಷನ್ ಶಾಲೆ (4ನೇ ತರಗತಿವರೆಗೆ).
- 1956-57: ಸೇಂಟ್ ಜೋಸೆಫ್ ಕಾನ್ವೆಂಟ್ (5ನೇ ತರಗತಿ).
- ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ 2ನೇ ಪಿ.ಯು.ಸಿ ವರೆಗೆ.
- ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ.ಎ. ಅರ್ಥಶಾಸ್ತ್ರ ಪದವಿ.
ತಂದೆಯವರ ಕಣ್ಣಿನ ಗ್ಲಾಕೋಮಾ ಸಮಸ್ಯೆಯಿಂದಾಗಿ ವಿದ್ಯಾಭ್ಯಾಸ ಮೊಟಕುಗೊಳಿಸಿ 1967ರಲ್ಲಿ ಮರಳಿ ಕೊಡಗಿಗೆ ಬಂದು ತೋಟದ ಜವಾಬ್ದಾರಿ ವಹಿಸಿಕೊಂಡರು.
ತೋಟದ ದಿನಚರಿ ಮತ್ತು ಕಾರ್ಮಿಕರ ಕ್ಷೇಮ
ಹಾಜರಾತಿ / ಕೆಲಸ ಹಂಚಿಕೆ
ಟೀ ಬ್ರೇಕ್
ಊಟದ ವಿರಾಮ
ಕೆಲಸ ಮುಕ್ತಾಯ
ಕಾರ್ಮಿಕರಿಗೆ ಸೌಲಭ್ಯಗಳು: ವಸತಿ ಗೃಹ, ಬೋನಸ್, ಪಿಎಫ್, ಆರೋಗ್ಯ ವೆಚ್ಚ, ನೀರು, ಇಂಧನ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಸಹಕಾರ. ಇದರ ಪರಿಣಾಮವಾಗಿ ಇಂದು ಎಲ್ಲಾ ಕಾರ್ಮಿಕರ ಮಕ್ಕಳೂ ಉನ್ನತ ಹುದ್ದೆಗಳಲ್ಲಿದ್ದಾರೆ.
ಕಾಫಿ ತಳಿಗಳು ಮತ್ತು ಸಾಗುವಳಿ
ಅರೇಬಿಕಾ (30 ಎಕರೆ - 36,000 ಗಿಡಗಳು)
ತಳಿಗಳು: S795, SLN 6, SLN 9, ಚಂದ್ರಗಿರಿ, ಡಾವರ್ಪ್ ಅರೇಬಿಕಾ. ಅಂತರ: 6x6.
ರೋಬಸ್ಟಾ (20 ಎಕರೆ - 9,600 ಗಿಡಗಳು)
ತಳಿಗಳು: S274 (60 ವರ್ಷ), CXR, ಪೆರಿಡೇನೀಯಾ (80-100 ವರ್ಷ), ಡಾವರ್ಪ್ ರೋಬಸ್ಟಾ. ಅಂತರ: 10x10.
ಎತ್ತರ ಮತ್ತು ಆಯ್ಕೆ: 2500 ಅಡಿ ಕೆಳಗೆ ರೋಬಸ್ಟಾ, 3000 ಅಡಿ ಮೇಲೆ ಅರೇಬಿಕಾ ಬೆಳೆಯುವುದು ಸೂಕ್ತ.
ಮಳೆನೀರು ಕೊಯ್ಲು ಮತ್ತು ಸಾವಯವ ಕೃಷಿ
ಜಲ ಸಂರಕ್ಷಣೆ: ತೋಟದ ಎಲ್ಲಾ ಕಟ್ಟದಗಳ ನೀರನ್ನು 2 ದೊಡ್ಡ ಕೆರೆಗಳಿಗೆ (100x100x20 ಅಡಿ ಮತ್ತು 50x50x12 ಅಡಿ) ಸಂಗ್ರಹಿಸಲಾಗುತ್ತದೆ. ಇದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.
ಮಲ್ನಾಡ್ ಮೆಥಡ್ ಆಫ್ ಕಾಂಪೋಸ್ಟಿಂಗ್: ಕಾಫಿ ಪಲ್ಪ್, ಕೊಟ್ಟಿಗೆ ಗೊಬ್ಬರ, ಎಲೆಗಳು, ಕಾಡು ಮಣ್ಣು ಮತ್ತು ಬೆಲ್ಲದ ಜೋನಿ ಬಳಸಿ ಸ್ವಂತ ಗೊಬ್ಬರ ತಯಾರಿಕೆ. ಭಾರತದ ಕಾಫಿ 100% ನೆರಳಿನಲ್ಲಿ ಬೆಳೆದ (Shade-grown) ಕಾಫಿಯಾಗಿದೆ.
ಜಾಗತಿಕ ಮನ್ನಣೆ ಮತ್ತು ಜಿಐ ಟ್ಯಾಗ್
ಸಂಸ್ಕರಣೆ ಮತ್ತು ತಂತ್ರಜ್ಞಾನ
ಮಾರುಕಟ್ಟೆ: ಶೇ. 20ರಷ್ಟು ಕಾಫಿಯನ್ನು 'ಕೂರ್ಗ್ ಬಯೋಟಾ' (FPC) ಮೂಲಕ ಮತ್ತು ಶೇ. 80ರಷ್ಟು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ನಮ್ಮ ತೋಟ UTZ Certification ಹೊಂದಿದೆ.
ಬಹುಬೆಳೆ ಮತ್ತು ಪೂರಕ ಕೃಷಿ
- ಕರಿಮೆಣಸು: ಪ್ರತಿ ಬಳ್ಳಿಯಲ್ಲಿ ಸುಮಾರು 2 ಕೆ.ಜಿ ಇಳುವರಿ.
- ಹಣ್ಣುಗಳು: ಕೊಡಗು ಕಿತ್ತಳೆ, ಸಪೋಟ, ಲಿಚ್ಚಿ, ಹಲಸಿನ ಸಿದ್ದು ಮತ್ತು ಶಂಕರ ತಳಿಗಳು.
- ಗದ್ದೆ ಮತ್ತು ಹೈನುಗಾರಿಕೆ: 6 ಎಕರೆ ಭತ್ತದ ಗದ್ದೆ, 10-12 ಹಸುಗಳು. ಹಾಲನ್ನು ಮಾರಾಟ ಮಾಡಲಾಗುತ್ತಿದೆ.
- ಮೀನುಗಾರಿಕೆ: ಕೆರೆಯಲ್ಲಿ ಮೀನು ಸಾಕಾಣಿಕೆ.
ಸಾರ್ವಜನಿಕ ಸೇವೆಗಳು
- ಕಾಫಿ ಬೋರ್ಡ್: ಸದಸ್ಯ ಮತ್ತು ಉಪಾಧ್ಯಕ್ಷರಾಗಿ ಸೇವೆ (2001-2010).
- CPA ಅಧ್ಯಕ್ಷರು: ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ (1988).
- ಸಂಧಾನ ಸಮಿತಿ: 25 ವರ್ಷಕ್ಕೂ ಅಧಿಕ ಕಾಲ ಸಂಚಾಲಕರಾಗಿ ಸೇವೆ.
- ಕನಿಷ್ಠ ವೇತನ ಮಂಡಳಿ: ಕರ್ನಾಟಕ ರಾಜ್ಯದ ಸಲಹಾ ಮಂಡಳಿ ಸದಸ್ಯ (20 ವರ್ಷ).
ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಬೋಸ್ ಮಂದಣ್ಣ - ಕಾಫಿ ಉದ್ಯಮದ ಪರವಾಗಿ ವಾದ ಮಂಡಿಸಿದ ಕ್ಷಣ
ಕುಟುಂಬದ ಪರಿಚಯ
ಪತ್ನಿ ಸ್ವಾತಿ ಮಂದಣ್ಣ, ಮಗಳು ಅದಿತಿ ಮಂದಣ್ಣ (TCS ಬೆಂಗಳೂರು), ಅಳಿಯ ಅಶೋಕ್ ಶಿವರಾಂ (ಸಾಫ್ಟ್‌ವೇರ್ ಇಂಜಿನೀಯರ್), ಮೊಮ್ಮಗ ಅನಂತ್.

