ಜನರ ಸೇವೆಯೇ ಪರಮಧರ್ಮ: ಸಲೀಂ ಹರದೂರು ಅವರ ಅಭಿವೃದ್ಧಿ ಪಥ
ಹರದೂರು ಗ್ರಾಮ ಪಂಚಾಯಿತಿಯಲ್ಲಿ ಹೊಸ ಇತಿಹಾಸ ಬರೆದ ಅಬ್ದುಲ್ ಸಲಾಂ
– ಅಬ್ದುಲ್ ಸಲಾಂ (ಸಲೀಂ), ಉಪಾಧ್ಯಕ್ಷರು, ಹರದೂರು ಗ್ರಾಮ ಪಂಚಾಯಿತಿ.
ಗ್ರಾಮೀಣ ಕ್ರೀಡಾಪಟುಗಳಿಗೆ ಸಿಂಥೆಟಿಕ್ ಟರ್ಫ್ ಭಾಗ್ಯ
ಗ್ರಾಮೀಣ ಭಾಗದ ಪ್ರತಿಭೆಗಳು ಅಂತರಾಷ್ಟ್ರೀಯ ಮಟ್ಟದ ಕದ ತಟ್ಟಬೇಕೆಂಬ ಉದ್ದೇಶದಿಂದ, 2024-25ನೇ ಸಾಲಿನ ಎಂ.ಎನ್.ಆರ್.ಇ.ಜಿ.ಎ (MNREGA) ಯೋಜನೆಯಡಿ ತಾಲೂಕಿಗೆ ಮಂಜೂರಾದ 11 ಸಿಂಥೆಟಿಕ್ ಅಂಕಣಗಳಲ್ಲಿ ಎರಡನ್ನು ಹರದೂರು ಪಂಚಾಯಿತಿಗೆ ತರುವಲ್ಲಿ ಸಲೀಂ ಯಶಸ್ವಿಯಾಗಿದ್ದಾರೆ.
ಹೊಸತೋಟ ಶಾಲಾ ಮೈದಾನ
₹5.10 ಲಕ್ಷ ವೆಚ್ಚದಲ್ಲಿ ಆಕ್ರಿಯಾಲಿಕ್ ಟರ್ಫ್ ವಾಲಿಬಾಲ್ ಅಂಕಣ ನಿರ್ಮಾಣಗೊಂಡಿದ್ದು, ಪಂದ್ಯ ವೀಕ್ಷಿಸಲು ಸುಸಜ್ಜಿತ ಸಿಮೆಂಟ್ ಗ್ಯಾಲರಿಯನ್ನು ನಿರ್ಮಿಸಲಾಗಿದೆ.
ಪರಿಶಿಷ್ಟ ಪಂಗದ ಕಾಲೋನಿ
ST ಕಾಲೋನಿಯ ಮೈದಾನದಲ್ಲಿ ಮತ್ತೊಂದು ₹5.10 ಲಕ್ಷ ವೆಚ್ಚದ ಟರ್ಫ್ ಅಂಕಣ ಸಿದ್ಧವಾಗಿದ್ದು, ಕಾಲೋನಿಯ ಯುವ ಪ್ರತಿಭೆಗಳಿಗೆ ವರದಾನವಾಗಲಿದೆ.
ತಾಂತ್ರಿಕ ವಿಶೇಷತೆ: ಈ ಅಂಕಣಗಳಲ್ಲಿ 24 ಮೀಟರ್ ಉದ್ದ ಮತ್ತು 13 ಮೀಟರ್ ಅಗಲದ ಸಿಂಥೆಟಿಕ್ ಟರ್ಫಿಂಗ್ ಹಾಸಲಾಗಿದ್ದು, ಮಳೆನೀರು ನಿಲ್ಲದಂತೆ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ ಹೊಸತೋಟದಲ್ಲಿ ಸುಸಜ್ಜಿತ ಕ್ರೀಡಾಂಗಣ ಮತ್ತು ಸಾರ್ವಜನಿಕ ಮೈದಾನಕ್ಕೆ ಜಾಗ ಗುರುತಿಸುವ ಕಾರ್ಯವು ಪ್ರಗತಿಯಲ್ಲಿದೆ.
ಐದು ವರ್ಷಗಳ ಪ್ರಮುಖ ಅಭಿವೃದ್ಧಿ ಯೋಜನೆಗಳು
ಆರೋಗ್ಯ ಸೇವೆ
ಗರಗಂದೂರು ಗ್ರಾಮದಲ್ಲಿ 12 ಸೆಂಟ್ಸ್ ಜಾಗವನ್ನು ಆಯುಷ್ಮಾನ್ ಆರೋಗ್ಯ ಮಂದಿರಕ್ಕಾಗಿ ಕಾಯ್ದಿರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಸ್ತೆ ಸಂಪರ್ಕ
ಅಲ್ಪಸಂಖ್ಯಾತರ ಇಲಾಖೆಯಿಂದ ಬಟಕನಳ್ಳಿ ಮಸೀದಿ ವರೆಗಿನ ರಸ್ತೆಗಾಗಿ ₹49.99 ಲಕ್ಷ ಅನುದಾನ ತಂದು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ.
ವಸತಿ ಮತ್ತು ಮೂಲಸೌಕರ್ಯ
SC/ST ಕಾಲೋನಿಗಳ ಅಭಿವೃದ್ಧಿಗೆ ₹45 ಲಕ್ಷ ವೆಚ್ಚದಲ್ಲಿ ನೀರು, ಶೌಚಾಲಯ ಮತ್ತು ತಡೆಗೋಡೆಗಳ ನಿರ್ಮಾಣ ಮಾಡಲಾಗಿದೆ.
ಶಿಕ್ಷಣಕ್ಕೆ ಒತ್ತು
ಹೊಸತೋಟದ ಸರ್ಕಾರಿ ಶಾಲೆಗೆ ₹5.50 ಲಕ್ಷ ಅನುದಾನ ಒದಗಿಸಿ ಶಾಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶ್ರಮಿಸಿದ್ದಾರೆ.
ಜನಪರ ಸೇವೆ ಮತ್ತು ಮಾನವೀಯ ಕಾಳಜಿ
- ವಸತಿ ರಹಿತ ದಂಪತಿಗಳಾದ ಮಾಯಿಲ ಮತ್ತು ಗಿರಿಜಾ ಅವರಿಗೆ ಶಾಸಕರ ಅನುದಾನದಲ್ಲಿ ನೂತನ ಮನೆ ಒದಗಿಸಿದ್ದು.
- ಉದ್ಯೋಗ ಖಾತ್ರಿ ಯೋಜನೆಯಡಿ ಪೌಷ್ಟಿಕ ತೋಟ, ದನದ ಕೊಟ್ಟಿಗೆ ಮತ್ತು ಇಂಗು ಗುಂಡಿಗಳ ನಿರ್ಮಾಣ.
- ಬಡವರಿಗೆ ಆಧಾರ್, ರೇಷನ್ ಕಾರ್ಡ್ ಮತ್ತು ಪಿಂಚಣಿ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ.
- ಹೊಸತೋಟದಲ್ಲಿ ಸಾರ್ವಜನಿಕ ಮೈದಾನ ನಿರ್ಮಾಣಕ್ಕೆ ಸಮಗ್ರ ಯೋಜನೆಯ ಸಿದ್ಧತೆ.
ಈ ಮಹತ್ಕಾರ್ಯಗಳಲ್ಲಿ ಶಾಸಕ ಡಾ. ಮಂತರ್ ಗೌಡ, ತಾಲೂಕು CEO ಪರಮೇಶ್ ಕುಮಾರ್, MNREGA ಅಧಿಕಾರಿಗಳಾದ ರಾಕೇಶ್, ಅಭಿಯಂತರ ರಾಜೇಶ್ ಹಾಗೂ ರಂಜಿತ್ ಅವರ ಸಹಕಾರವನ್ನು ಸಲೀಂ ಸ್ಮರಿಸುತ್ತಾರೆ.

