ಶ್ರೀ ವನ ಭದ್ರಕಾಳಿ ದೇವಾಲಯ, ಹಾತೂರು-ಕೊಳತ್ತೋಡು-ಬೈಗೋಡು: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿ, ಕೊಡಗು. Haturu

ಶ್ರೀ ವನ ಭದ್ರಕಾಳಿ ದೇವಾಲಯ, ಹಾತೂರು-ಕೊಳತ್ತೋಡು-ಬೈಗೋಡು

ಶ್ರೀ ವನ ಭದ್ರಕಾಳಿ ದೇವಾಲಯ,  ಹಾತೂರು-ಕೊಳತ್ತೋಡು-ಬೈಗೋಡು: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿ, ಕೊಡಗು. Haturu

ದೇವಾಲಯದ ಬಗ್ಗೆ

ಸುಮಾರು ಐನೂರು ವರ್ಷಗಳ ಇತಿಹಾಸವಿರುವ ಶ್ರೀ ವನಭದ್ರಕಾಳಿ ದೇವಾಲಯವು ಕೊಡಗಿನ ಗೋಣಿಕೊಪ್ಪಲು ಸಮೀಪವಿರುವ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಈ ದೇವಾಲಯವು ಹಾತೂರು – ಕೊಳತ್ತೋಡು – ಬೈಗೋಡು ಗ್ರಾಮಸ್ಥರು ಒಟ್ಟಾಗಿ ಸೇರಿ ಇಲ್ಲಿನ ದೇವಾಲಯದಲ್ಲಿ ಉತ್ಸವಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ದೇವಾಲಯವು ಅಂದಾಜು ಸುಮಾರು 16 ಏಕರೆಯಷ್ಟು ವಿಶಾಲವಿರುವ ದೇವರಕಾಡುವಿನಲ್ಲಿ ನೆಲೆನಿಂತಿದೆ. ವಿರಾಜಪೇಟೆ – ಮೈಸೂರು ಹೆದ್ದಾರಿಯ ಗೋಣಿಕೊಪ್ಪ ಮತ್ತು ವಿರಾಜಪೇಟೆ ನಡುವಿನ ಹಾತೂರು – ಕೊಳತ್ತೋಡು – ಬೈಗೋಡು ಗ್ರಾಮದ ಸಮೀಪದ ಹೆದ್ದಾರಿಗೆ ಹೊಂದಿಕೊಂಡಿದೆ. ದಿನನಿತ್ಯ ಈ ಮಾರ್ಗವಾಗಿ ಚಲಿಸುವ ವಾಹನಗಳಾಗಲಿ, ಭಕ್ತಾದಿಗಳಾಗಲಿ ಒಂದು ನಿಮಿಷ ತಮ್ಮ ವಾಹನಗಳನ್ನು ಈ ದೇವಾಲಯದ ಮುಂಭಾಗದಲ್ಲಿ ನಿಲ್ಲಿಸಿ ಕಾಣಿಕೆ ಸಲ್ಲಿಸಿ, ದೇವರ ಆಶೀರ್ವಾದವನ್ನು ಪಡೆದು ತಮ್ಮ ಕಾರ್ಯಕಲಾಪಗಳೆಡೆಗೆ ಸಾಗುವುದು ಒಂದು ವಾಡಿಕೆಯಾಗಿದೆ. ಇಲ್ಲಿ ಪ್ರಾರ್ಥಿಸಿ ತೆರಳುವ ಪ್ರತಿಯೊಬ್ಬರೂ ತಮ್ಮ ಕಾರ್ಯಕಲಾಪಗಳು ಸುಗಮವಾದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಶ್ರೀ ವನಭದ್ರಕಾಳಿ ದೇವಾಲಯದ ಮಹೋತ್ಸವವು 2 ವರ್ಷಗಳಿಗೊಮ್ಮೆ ಜುಲೈ ತಿಂಗಳು ಗದ್ದೆಗೆ ಬಿತ್ತು ಹಾಕುವ ಸಂದರ್ಭದಲ್ಲೆ ನಡೆಯಲ್ಪಡುತ್ತವೆ. ಈ ಮಹೋತ್ಸವದಲ್ಲಿ ಅಕ್ಕ-ಪಕ್ಕದ ಗ್ರಾಮಸ್ಥರೊಡಗೂಡಿ ಕೊಡಗಿನ ಹಲವಾರು ಭಾಗಗಳಿಂದ ಹಾಗೂ ಹೊರಜಿಲ್ಲೆ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಪ್ರತೀ ತಿಂಗಳು ಅಮವಾಸ್ಯೆಯಂದು ಹಾಗೂ ಕೊಡಗಿನ ಹಬ್ಬ ಹರಿದಿನಗಳಂದು ಇಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲ್ಪಡುತ್ತದೆ.
ಭತ್ತದ ಕುಯ್ಲಿನ ಸಮಯದಲ್ಲಿ ಗದ್ದೆಯ ಏರಿಯ ಬಳಿಯಲ್ಲಿ ಚಿನ್ನದ ಬಣ್ಣವಿರುವ ಪೋಳೆ (ಕೊಕ್ಕರೆ ಜಾತಿಗೆ ಸೇರಿದ ಪಕ್ಷಿ) ಯೊಂದು ಬಂದು ಕುಳಿತಿರುತ್ತದೆ. ಅಲ್ಲಿ ಕೆಲಸ ಕಾರ್ಯದಲ್ಲಿ ಮಗ್ನಳಾಗಿದ್ದ ಒಬ್ಬ ಹೆಂಗಸು ಅದನ್ನು ಕಂಡು ಅಲ್ಲಿರುವ ಜನರಿಗೆ ತಿಳಿಸುತ್ತಾಳೆ. ಆಗ ಅಲ್ಲಿನ ಜನಗಳು ಅದನ್ನು ಹಿಡಿಯಲು ಪ್ರಯತ್ನಿಸಿ ಬುಟ್ಟಿಯಲ್ಲಿ  ಮುಚ್ಚಿಡುತ್ತಾರೆ. ನಂತರ ಅಲ್ಲಿಂದ ಅದು ಹೇಗೋ ತಪ್ಪಿಸಿಕೊಂಡು ಹಾರಿಬಂದು ಈಗ ನೆಲೆನಿಂತಿರುವ ಶ್ರೀ ವನಭದ್ರಕಾಳಿ ದೇವಾಲಯವಿರುವ ಸ್ಥಳದಲ್ಲಿ ಲೀನವಾಗುತ್ತದೆ. ಅಲ್ಲಿಂದ ಆ ಊರಿನ ಜನಗಳು ಅದನ್ನು ಕಾಳೀ ಮಾತೆಯ ಸ್ವರೂಪವೆಂದು ತಿಳಿದು ನಮ್ಮ ಕಷ್ಟ-ಕಾರ್ಯಪಣ್ಯಗಳನ್ನು ದೂರಮಾಡಿ ಊರಿನ ಉದ್ಧಾರಕ್ಕೆಂದು ಬಂದವಳೆಂದು ತಿಳಿದು ಅಲ್ಲೊಂದು ದೇವಾಲಯವನ್ನು ನಿರ್ಮಿಸುತ್ತಾರೆ. ಅದು ಇಂದಿನ ಸುಮಾರು 16 ಏಕರೆಯಷ್ಟಿರುವ ದೇವರಕಾಡು ಬನದ ಶ್ರೀ ವನಭದ್ರಕಾಳಿ ದೇವಾಲಯ.

ಸೇವೆಗಳು


ಶ್ರೀ ವನ ಭದ್ರಕಾಳಿ ದೇವಾಲಯ,  ಹಾತೂರು-ಕೊಳತ್ತೋಡು-ಬೈಗೋಡು: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿ, ಕೊಡಗು.

ಉತ್ಸವಗಳು

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಶ್ರೀ ವನ ಭದ್ರಕಾಳಿ ದೇವಾಲಯ,  ಹಾತೂರು-ಕೊಳತ್ತೋಡು-ಬೈಗೋಡು: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿ, ಕೊಡಗು.

ಪೂಜಾ ಸಮಯ


ಪ್ರತಿ ನಿತ್ಯ ಬೆಳಿಗ್ಗೆ:  ಗಂಟೆಯಿಂದ  ಗಂಟೆಯವರಗೆ

ಪ್ರತಿ ನಿತ್ಯ ಸಾಯಂಕಾಲ:  ಗಂಟೆಯಿಂದ  ಗಂಟೆಯವರಗೆ

ವ್ಯವಸ್ಥಾಪನ ಸಮಿತಿ

ಈ ದೇವಾಲಯದ ಉಸ್ತುವಾರಿಯನ್ನು
ಕೇಳಪಂಡ ಕುಟುಂಬದ ಎನ್.ವಿಶ್ವನಾಥ್ (ವಿನು) ಅಧ್ಯಕ್ಷರಾಗಿ,
ಕಾಳೇಂಗಡ ಮಾದಪ್ಪ (ಸಾಬು) ಕಾರ್ಯದರ್ಶಿಗಳಾಗಿ,
ಕೊಂಗೇಪಂಡ ಸುಬ್ಬಯ್ಯ (ಸಾಬು) ತಕ್ಕಮುಖ್ಯಸ್ಥರಾಗಿ ಹಾಗೂ 
ಕೊಕ್ಕಂಡ ಅರ್ಜುನ ತಕ್ಕಮುಖ್ಯಸ್ಥರಾಗಿ ಸೇವೆಸಲ್ಲಿಸುತ್ತಿದ್ದಾರೆ.

ದೇಣಿಗೆ

ಅಕೌಂಟ್‌ ಡಿಟೈಲ್ಸ್:‌
Name: 
A/C. No: 
Bank Name: 
IFSC Code: 

ಸಂಪರ್ಕ


ಶ್ರೀ ವನ ಭದ್ರಕಾಳಿ ದೇವಾಲಯ, 
 
ಹಾತೂರು-ಕೊಳತ್ತೋಡು-ಬೈಗೋಡು
ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿ, ಕೊಡಗು.
ಪೊನ್ನಂಪೇಟೆ ತಾಲ್ಲೂಕು
ಕೊಡಗು.
ಮೊ:

Search Coorg Media

Coorg’s Largest Online Media Network

“ಸರ್ಚ್‌ ಕೂರ್ಗ್‌ ಮೀಡಿಯಾ”

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ, ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.

0 0 votes
Article Rating
Subscribe
Notify of
guest
0 Comments
Newest
Oldest Most Voted
error: Content is protected !!
0
Would love your thoughts, please comment.x
()
x