Deprecated: Creation of dynamic property Featured_Image_By_URL::$admin is deprecated in /home/u472122668/domains/searchcoorg.com/public_html/wp-content/plugins/featured-image-by-url/featured-image-by-url.php on line 56

Deprecated: Creation of dynamic property Featured_Image_By_URL::$common is deprecated in /home/u472122668/domains/searchcoorg.com/public_html/wp-content/plugins/featured-image-by-url/featured-image-by-url.php on line 57

Notice: Function _load_textdomain_just_in_time was called incorrectly. Translation loading for the push-notification domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/u472122668/domains/searchcoorg.com/public_html/wp-includes/functions.php on line 6131
ಕೊಡಗಿನಲ್ಲಿ ಶುಂಠಿ ಬೆಳೆಯನ್ನು ಬಾಧಿಸುವ ಹೊಸ ಶಿಲೀಂಧ್ರ ರೋಗ ಪತ್ತೆ - Search Coorg Media
Subscribe now OK No thanks
ಕೊಡಗಿನಲ್ಲಿ ಶುಂಠಿ ಬೆಳೆಯನ್ನು ಬಾಧಿಸುವ ಹೊಸ ಶಿಲೀಂಧ್ರ ರೋಗ ಪತ್ತೆ
Reading Time: 4 minutes

ಕೊಡಗಿನಲ್ಲಿ ಶುಂಠಿ ಬೆಳೆಯನ್ನು ಬಾಧಿಸುವ ಹೊಸ ಶಿಲೀಂಧ್ರ ರೋಗ ಪತ್ತೆ

ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ಶುಂಠಿ ಬೆಳೆಯನ್ನು ತೀವ್ರವಾಗಿ ಭಾದಿಸಿದ  ಹೊಸ ಶಿಲೀಂಧ್ರ ರೋಗವನ್ನುಐ.ಸಿ.ಎ.ಆರ್. – ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ (ICAR-IISR),ಕೋಜಿಕೋಡ್ ನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. 

ಶುಂಠಿಯಲ್ಲಿ ಕಂಡುಬಂದಿರುವ ಈ ರೋಗವು ಪೈರಿಕ್ಯುಲೇರಿಯಾsp.ಎಂಬ ಶಿಲೀಂಧ್ರದಿಂದ ಹರಡುತ್ತದೆ. ಪೈರಿಕ್ಯುಲೇರಿಯಾವು ಭತ್ತ, ಗೋಧಿ ಮತ್ತು ಬಾರ್ಲಿಯಂತಹ ಏಕದಳ ಸಸ್ಯಗಳಲ್ಲಿ ಬ್ಲಾಸ್ಟ್ ರೋಗವನ್ನು ಉಂಟುಮಾಡುತ್ತದೆ, ಶುಂಠಿಯಲ್ಲಿ ಇದು ಮೊದಲ ಬಾರಿಗೆ ವರದಿಯಾಗಿದೆ.ಈ ರೋಗಬಂದ ಶುಂಠಿ ಗಿಡದ ಎಲೆಗಳು ಹಳದಿಯಾಗಿ ಕಾಣಿಸಿಕೊಳ್ಳುತ್ತವೆಮತ್ತು ಆರಂಭಿಕ ಹಂತದಲ್ಲಿ ಕಪ್ಪುಅಥವಾ ಆಲಿವ್-ಹಸಿರು ಬಣ್ಣದ ಚುಕ್ಕೆಗಳು ಜೊತೆಗೂಡಿರುತ್ತದೆ (ಚಿತ್ರ 1 ಮತ್ತು 2).ಒಮ್ಮೆ ಸೋಂಕು ತಗುಲಿದರೆ, ಅದು ವೇಗವಾಗಿ ಹರಡುತ್ತದೆ ಮತ್ತು ಕೆಲವೇ ಗಂಟೆಗಳಲ್ಲಿ ಇಡೀ ಹೊಲವನ್ನು ಆವರಿಸುತ್ತದೆ, ಇದು ತೀವ್ರವಾದ ಬೆಳೆ ನಷ್ಟ ಮತ್ತು ಶುಂಠಿಯಎಲೆ ಮತ್ತು ಕಾಂಡದ ಒಣಗುವಿಕೆಗೆಕಾರಣವಾಗುತ್ತದೆ (ಚಿತ್ರ 3).ರೋಗಪೀಡಿತ ಸಸ್ಯಗಳ ಗೆಡ್ಡೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಖಚಿತಪಡಿಸಿರುತ್ತಾರೆ.ಸಮಸ್ಯೆಯು ಎಲೆಗಳ ಅಕಾಲಿಕ ಹಳದಿ ಮತ್ತು ಒಣಗಿಸುವಿಕೆಯಲ್ಲಿದೆ, ಇದು ಶುಂಠಿ ಗೆಡ್ಡೆಗಳಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.ಈ ರೋಗದಿಂದಾಗಿ, ಕೊಡಗಿನ ರೈತರು ಗೆಡ್ಡೆಗಳ ತೂಕದಲ್ಲಿ ಶೇ 30 ರಷ್ಟು ನಷ್ಟವನ್ನು ಅನುಭವಿಸಿದ್ದಾರೆ.

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ರೋಗ ಹರಡುವಿಕೆಗೆ ಕಾರಣೀಭೂತವಾದ ಹವಾಮಾನದ ಅಂಶಗಳು:

ಸಂಶೋಧಕರ ಪ್ರಕಾರ, ಕೊಡಗಿನಲ್ಲಿರುವ ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳಿಂದ ರೋಗ ಹರಡುವಿಕೆ ಹೆಚ್ಚಾಗಿ ಉಂಟಾಗುತ್ತದೆ.ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ, ಈ ಪ್ರದೇಶದಲ್ಲಿ ಬೆಳಿಗ್ಗೆ ಇಬ್ಬನಿ ಬೀಳುತ್ತದೆ, ಇದು ಶಿಲೀಂಧ್ರದ  ಅಭಿವೃದ್ಧಿ ಹೊಂದಲು ಮತ್ತು ಹರಡಲು ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ.ಇದು ಕೊಡಗಿನಮತ್ತು ಸುತ್ತಮತ್ತಲಿನ  ಕೆಲವು ಪ್ರದೇಶದ ಶುಂಠಿ ಹೊಲಗಳಲ್ಲಿ ರೋಗವು ವೇಗವಾಗಿ ಹರಡಲು ಕಾರಣವಾಗಿದೆ, ಆದರೆ ಕರ್ನಾಟಕ ಮತ್ತು ಕೇರಳದ ಇತರ ಭಾಗಗಳಲ್ಲಿನ ವಿಭಿನ್ನ ಹವಾಮಾನದಿಂದಬೆಳೆಯು ಹಾನಿಗೊಳಗಾಗಿಲ್ಲ.ಐ.ಸಿ.ಎ.ಆರ್. – ಐ. ಐ. ಎಸ್. ಆರ್., ಕೋಜಿಕೋಡ್ಮತ್ತು ಅದರ ಪ್ರಾದೇಶಿಕ ಕೇಂದ್ರವಾದ ಅಪ್ಪಂಗಳ ತಂಡವು ನಡೆಸಿದ ಸಂಶೋಧನೆಯು ಕೊಡಗಿನ ಹವಾಮಾನ ಪರಿಸ್ಥಿತಿಗಳು-ವಿಶೇಷವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಇಬ್ಬನಿ ಬೀಳುವಿಕೆ-ರೋಗ ಹರಡಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ ಎಂದು ಸೂಚಿಸಿದೆ.

ಐ.ಸಿ.ಎ.ಆರ್. – ಐ. ಐ. ಎಸ್. ಆರ್. ನಲ್ಲಿನ ಸಂಶೋಧನಾ ತಂಡವು ರೋಗವನ್ನು ಅಧ್ಯಯನ ಮಾಡುವಾಗ ಗಮನಾರ್ಹ ಸವಾಲುಗಳನ್ನು ಎದುರಿಸಿತು, ಏಕೆಂದರೆ ರೋಗದ ಮಾದರಿಗಳು ಕೋಜಿಕೋಡ್ನ ಪ್ರಯೋಗಾಲಯವನ್ನು ತಲುಪುವ ವೇಳೆಗೆ ಹೆಚ್ಚಾಗಿ ಒಣಗಿರುತ್ತಿದ್ದವು.ಆದಾಗ್ಯೂ, ತಿಂಗಳುಗಳ ಸತತಸಂಶೋಧನೆಯಿಂದರೋಗದ ಹಿಂದಿನ ಕಾರಣವಾದ ಪೈರಿಕ್ಯುಲೇರಿಯಾsp. ಅನ್ನು  ವಿಜ್ಞಾನಿಗಳು ದೃಢೀಕರಿಸಲು ಸಾಧ್ಯವಾಯಿತು. 

ನಿಯಂತ್ರಣ ಕ್ರಮಗಳು:

ರೋಗವನ್ನು ನಿರ್ವಹಿಸಲು, ವಿಜ್ಞಾನಿಗಳು ಶಿಲೀಂಧ್ರನಾಶಕಗಳಾದ ಪ್ರೊಪಿಕೊನಜೋಲ್ ಅನ್ನು1 ml/Lಅಥವಾ ಕಾರ್ಬೆಂಡಜಿಮ್ ಮತ್ತು ಮ್ಯಾಂಕೋಜೆಬ್ ಸಂಯೋಜನೆಯನ್ನು 2 ಗ್ರಾಂ/ಲೀ ಅನುಪಾತದಲ್ಲಿ ಶಿಫಾರಸು ಮಾಡುತ್ತಾರೆ.ಬೀಜದ ಗೆಡ್ಡೆಗಳನ್ನು ಶೇಖರಿಸುವ ಮೊದಲು ಈ ಶಿಲೀಂಧ್ರನಾಶಕದಲ್ಲಿ 30 ನಿಮಿಷಗಳ ಕಾಲಅದ್ದಿ ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಶೇಖರಿಸುವುದು.ರೋಗನಿರೋಧಕ ಕ್ರಮವಾಗಿ ಪ್ರೊಪಿಕೊನಜೋಲ್ ಅಥವಾ ಟೆಬುಕೊನಜೋಲ್ @ 1ml/L ಅನ್ನು ನಾಟಿ ಮಾಡಿದ ನಾಲ್ಕು ತಿಂಗಳ ನಂತರ ಸಿಂಪಡಿಸುವುದು.ರೋಗಲಕ್ಷಣವಾದ ಎಲೆಗಳ ಮೇಲೆಕಪ್ಪುಅಥವಾ ಆಲಿವ್-ಹಸಿರು ಬಣ್ಣದ ಚುಕ್ಕೆಗಳು ಹಳದಿಭಾಗದಿಂದ ಸುತ್ತುವರಿಯುವುದನ್ನು ಗಮನಿಸಿದರೆ, ರೋಗದ ತ್ವರಿತ ಹರಡುವಿಕೆಯನ್ನು ತಡೆಯಲು ತಕ್ಷಣ ಶಿಲೀಂಧ್ರನಾಶಕವನ್ನು ಸಿಂಪಡಿಸುವುದು. ಪೈರಿಕ್ಯುಲೇರಿಯ ಶಿಲೀಂಧ್ರವು ಅತಿ ವೇಗವಾಗಿ ಹರಡುವುದರಿಂದ ರೈತರು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುವುದು ಅಗತ್ಯನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಈ ರೋಗವು ಕೇವಲ 10 ಗಂಟೆಗಳಅವಧಿಯಲ್ಲಿ ದೊಡ್ಡ ಪ್ರದೇಶಗಳಲ್ಲಿ ಹರಡಬಹುದು, ಕೆಲವು ರೋಗ ಪೀಡಿತ ತೋಟಗಳು20 ಕಿಲೋಮೀಟರ್ ಅಂತರದಲ್ಲಿದ್ದರು ಸಹರೋಗ ಹರಡುತ್ತದೆ. 

ಬೆಳೆ ಹಾನಿಗೊಳಗಾದ ರೈತರಿಗೆ ಶಿಫಾರಸು:

ಈ ರೋಗದಿಂದ ಬೆಳೆ ಹಾನಿಗೊಳಗಾದ ರೈತರು ರೋಗಪೀಡಿತ ಪ್ರದೇಶಗಳಲ್ಲಿ ಶುಂಠಿ ಕೃಷಿ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲುಸಲಹೆ ನೀಡಲಾಗಿದೆ.

ರೋಗಕಾರಕಶಿಲೀಂಧ್ರದ ವರ್ತನೆಮತ್ತು ಪರಿಸರ ಪ್ರಚೋದಕಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಂಶೋಧನಾ ತಂಡವು ಹೆಚ್ಚಿನ ಅಧ್ಯಯನಗಳನ್ನು ನಡೆಸುತ್ತಿದೆ.

ಮಾಹಿತಿ: ಮುಖ್ಯಸ್ಥರು, ಐ.ಸಿ.ಎ.ಆರ್. – ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಕೇಂದ್ರ, ಅಪ್ಪಂಗಳ, ಮಡಿಕೇರಿ. 

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x