ಪುತ್ತರಿ ಸಿರಿ ಸಮೃದ್ಧಿ 2025

ಪುತ್ತರಿ ಸಿರಿ ಸಮೃದ್ಧಿ

ಪುತ್ತರಿ ಹಬ್ಬವು ಕೊಡಗಿನ ಕೃಷಿ ಕುಟುಂಬಗಳಿಗೆ ಸಂಭ್ರಮವನ್ನು, ಸಂತಸವನ್ನು ನೀಡುವ ಹಬ್ಬವಾಗಿದೆ. ಕೊಡಗಿನಲ್ಲಿ ನೆಲೆಸಿರುವ ವಿವಿಧ ಸಮುದಾಯಗಳು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಕೃಷಿಯನ್ನೇ ಪ್ರಧಾನವಾಗಿರಿಸಿಕೊಂಡಿರುವ ಕುಟುಂಬಗಳು ಪುತ್ತರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿವೆ. ಈ ನಿಟ್ಟಿನಲ್ಲಿ “ಸರ್ಚ್ ಕೂರ್ಗ್ ಮೀಡೀಯಾ” ಪ್ರಕಟಿಸಿರುವ
“ಪುತ್ತರಿ ಸಿರಿ ಸಮೃದ್ಧಿ” ವಿಶೇಷ ಸಂಚಿಕೆ – 2025

ಕೊಡಗಿನಲ್ಲಿ ಪುತ್ತರಿ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಈಗಾಗಲೇ ಕೊಡಗಿನ ಮಳೆ ದೇವ ಎಂದೇ ಕರೆಯುವ ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ಸನ್ನಿಧಿಯಲ್ಲಿ ಅಮ್ಮಂಗೇರಿಯ ಜ್ಯೋತಿಷ್ಯರು ದೇವತಕ್ಕರು, ನಾಡಿನ 13 ತಕ್ಕ ಮುಖ್ಯಸ್ಥರು, ಭಕ್ತ ಜನಸಂಘದ ಪದಾಧಿಕಾರಿಗಳು, ಸೇರಿ, ಪುತ್ತರಿ ಮುಹೂರ್ತವನ್ನು ನಿಶ್ಚಯಿಸಿರುತ್ತಾರೆ.

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಡಿಸೆಂಬರ್ 4ರಂದು ಗುರುವಾರ ಹುಣ್ಣಿಮೆಯ ದಿನ ಹಬ್ಬ ಆಚರಣೆ ನಡೆಯಲಿದೆ. ರಾತ್ರಿ 8.10 ಗಂಟೆಗೆ ನೆರೆ ಕಟ್ಟುವುದು, ರಾತ್ರಿ 9.10 ಗಂಟೆಗೆ ಕದಿರು ತೆಗೆಯುವುದು. ಅನ್ನಪ್ರಸಾದಕ್ಕೆ ರಾತ್ರಿ 10.10 ಗಂಟೆಗೆ ಮುಹೂರ್ತ ನಿಗದಿಪಡಿಸಲಾಗಿದೆ.

ಸಾರ್ವಜನಿಕರಿಗೆ ಡಿಸೆಂಬರ್ 4ರಂದು ಗುರುವಾರ ರಾತ್ರಿ 8.40 ಗಂಟೆಗೆ ನೆರೆ ಕಟ್ಟುವುದು, ರಾತ್ರಿ 9.40 ಗಂಟೆಗೆ ಕದಿರು ತೆಗೆಯುವುದು, ಮತ್ತು ಭೋಜನಕ್ಕೆ ರಾತ್ರಿ 10.40 ಗಂಟೆಗೆ ಮುಹೂರ್ತವನ್ನು ನಿಗದಿ ಮಾಡಿಕೊಳ್ಳಲಾಗಿದೆ. ಇದಕ್ಕೂ ಮುನ್ನಾದಿನ ಬುಧವಾರ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಕಲ್ಲಾಡ್ಚ ಹಬ್ಬ ನಡೆಯಲಿದೆ. ಅದರಂತೆ ಪುತ್ತರಿ ಹಬ್ಬದ ಆಚರಣೆಗೆ ಕೊಡಗಿನ ಜನತೆ ಮುಂದಾಗಿದ್ದಾರೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಸರ್ವರಿಗೂ ಪುತ್ತರಿ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ನಮ್ಮೆಲ್ಲರ ಬದುಕಿಗೆ ಭತ್ತದ ಕದಿರು ಸಮೃದ್ದಿ-ನೆಮ್ಮದ್ದಿಯನ್ನು ನೀಡಲಿ ಎಂಬುದೇ ನಮ್ಮ ಹಾರೈಕೆ.

– (ಈ ವರ್ಷದ ಮಾಹಿತಿಯೊಂದಿಗೆ ನವೀಕರಿಸಲಾಗಿದೆ)

ಪುತ್ತರಿ ಸಿರಿ ಸಮೃದ್ಧಿ 2025

ಪುತ್ತರಿ ಹಬ್ಬವು ಕೊಡಗಿನ ಕೃಷಿ ಕುಟುಂಬಗಳಿಗೆ ಸಂಭ್ರಮವನ್ನು, ಸಂತಸವನ್ನು ನೀಡುವ ಹಬ್ಬವಾಗಿದೆ. ಕೊಡಗಿನಲ್ಲಿ ನೆಲೆಸಿರುವ ವಿವಿಧ ಸಮುದಾಯಗಳು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಕೃಷಿಯನ್ನೇ ಪ್ರಧಾನವಾಗಿರಿಸಿಕೊಂಡಿರುವ ಕುಟುಂಬಗಳು ಪುತ್ತರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿವೆ. 

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಪ್ರತೀ ವರ್ಷದ ನವೆಂಬರ್ ಅಥವಾ ಡಿಸೆಂಬರ್ ತಿಂಗಳ ರೋಹಿಣಿ ನಕ್ಷತ್ರದಲ್ಲಿ ವೃಶ್ಚಿಕ ಮಾಸದ 11ನೇ ದಿನ ಹುಣ್ಣಿಮೆಯ ರಾತ್ರಿಯಂದು ಕೊಡಗಿನಲ್ಲಿ ಪುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು “ಸುಗ್ಗಿ ಹಬ್ಬ” ಎಂದು ಇತರೆಡೆ ಆಚರಿಸಿದರೆ, ಕೊಡಗಿನಲ್ಲಿ ‘ಪುತ್ತರಿ ಹಬ್ಬ’ ಎಂದು ಆಚರಿಸುತ್ತಾರೆ. ಪುತ್ತರಿ ಎಂದರೆ ಪುದಿಯ(ಹೊಸ), ಅರಿ(ಅಕ್ಕಿ), ಪುತ್ತರಿ(ಹೊಸ ಅಕ್ಕಿ), ಹೊಸ ಭತ್ತದ ಬೆಳೆಯನ್ನು ನೀಡಿದ ಭೂಮಿ ತಾಯಿಗೆ ಹಾಗೂ ಧಾನ್ಯಲಕ್ಷ್ಮೀಗೆ ಭಕ್ತಿ ಭಾವದಿಂದ ಕೃತಜ್ಞತೆಯನ್ನು ಸಲ್ಲಿಸುವ ಹಬ್ಬವೇ ಪುತ್ತರಿ ಹಬ್ಬ. ರಾತ್ರಿ ಕುಟುಂಬದ ಮುಖ್ಯಸ್ಥ ಕದಿರು ಕೊಯ್ದು ಪೊಲಿ.. ಪೊಲಿ.. ದೇವಾ ಎನ್ನುತ್ತಾ ಕೊಂಡೊಯ್ಯುವ ಮೂಲಕ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವುದರೊಂದಿಗೆ ಸದಾ ಕಾಲ ಮನೆಯಲ್ಲಿ ಧವಸ ಧಾನ್ಯ ತುಂಬಿರುವಂತೆ ತಾಯಿ ಕಾವೇರಮ್ಮ ಹಾಗೂ ಪಾಡಿ ಇಗ್ಗುತ್ತಪ್ಪನಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ.

 ಹುತ್ತರಿ ಹಬ್ಬದ ಆಚರಣಾ ರೀತಿ–ರಿವಾಜುಗಳು:

ಪುತ್ತರಿ ಹಬ್ಬದ ದಿನ ಐನ್ ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿರುವ ‘ತೂಕ್ಬೊಳಕ್’ (ತೂಗುವ ದೀಪ) ಕೆಳಗೆ ಹೊಸ ಚಾಪೆ ಹಾಸಿ ಪುತ್ತರಿ ಕುಕ್ಕೆಯಲ್ಲಿ ಮಾವಿನ ಎಲೆ, ಅರಳಿ ಎಲೆ, ಕುಂಬಳಿ ಎಲೆ, ಕಾಡುಗೇರು ಎಲೆ, ಹಲಸಿನ ಎಲೆ ಈ ಐದು ಎಲೆಗಳನ್ನು ಹಾಗೂ ಅಚ್ಚನಾರನ್ನು ಇರಿಸಿರುತ್ತಾರೆ. ಈ ಐದು ಎಲೆಗಳನ್ನು ಒಂದರ ಮೇಲೆ ಒಂದು ಇಟ್ಟು ನಾರಿನಿಂದ ಕಟ್ಟಲಾಗಿರುತ್ತದೆ. ಇದನ್ನು ‘ನೆರೆಕಟ್ಟುವುದು’ ಎನ್ನುತ್ತಾರೆ. ಹೊಸ ಕುಕ್ಕೆಯಲ್ಲಿ ಭತ್ತ ತುಂಬಿ ಅದರ ಮೇಲೆ ಅರ್ಧ ಸೇರು ಅಕ್ಕಿಯನ್ನು ಸೇರಿಸಿ ತುಂಬುತ್ತಾರೆ. ಪುತ್ತರಿ ಕುಡಿಕೆಯಲ್ಲಿ ತಂಬಿಟ್ಟು ಹಾಕಿ ಅದರ ಜೊತೆ ಹಾಲು, ತುಪ್ಪ, ಜೇನು, ಎಳ್ಳು, ಶುಂಠಿ, ತೆಂಗಿನಕಾಯಿ, ಹಾಗಲಕಾಯಿ, ಮುಳ್ಳು ಇಡುತ್ತಾರೆ. ಜೊತೆಗೆ ಕುಡುಗೋಲು ‘ತಳಿಯಕ್ಕಿ ಬೊಳ್ಚ’ ಮೂರು ವೀಳ್ಯದೆಲೆ ಮೂರು ಅಡಿಕೆಯನ್ನು ಇಡಲಾಗುತ್ತದೆ. ಆ ಎಲ್ಲಾ ವಸ್ತುಗಳನ್ನು ತೂಕ್ ಬೊಳಕ್‌ನ್ನು ಕೆಳಗಡೆ ದೇವರ ಮುಂದೆ ಇಟ್ಟಿರುತ್ತಾರೆ. ಅದರ ಮುಂದೆ ರಂಗೋಲಿಯನ್ನು ಹಾಕಿರುತ್ತಾರೆ. ನಂತರ ಬೇಯಿಸಿದ ಪುತ್ತರಿ ಗೆಣಸನ್ನು ಜೇನುತುಪ್ಪ, ಬೆಲ್ಲ ಹಾಗೂ ತುಪ್ಪದೊಂದಿಗೆ ಫಲಾಹಾರ ಸೇವಿಸಿ ಕದಿರು (“ಕದಿರು” ಎಂದರೆ ಭತ್ತದ ಕಟ್ಟು) ತೆಗೆಯಲು ಗದ್ದೆಗೆ ಹೋಗುತ್ತಾರೆ. ಮೊದಲೇ ಸಿದ್ಧಪಡಿಸಿದ “ಕುತ್ತಿ”ಯನ್ನು ಕುಟುಂಬದ ಹಿರಿಯರು ತಲೆ ಮೇಲೆ ಹೊತ್ತಿರುತ್ತಾರೆ ಮತ್ತು ಮನೆಯ ಹಿರಿಯ ವ್ಯಕ್ತಿ ಕದಿರು ತೆಗೆಯುವ ಕುಡುಗೋಲನ್ನು ಕದಿರು ತೆಗೆಯುವ ವ್ಯಕ್ತಿಯ ಕೈಗೆ ನೀಡುತ್ತಾರೆ. ನಂತರ ಮನೆಯ ಹಿರಿಯರು, ಹೆಂಗಸರು, ಗಂಡಸರು ಮತ್ತು ಮಕ್ಕಳು ಎಲ್ಲರೂ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ದುಡಿ ಬಾರಿಸುತ್ತಾ, ಹಾಡುತ್ತಾ ಗದ್ದೆಗೆ ತೆರಳುತ್ತಾರೆ. ಕದಿರು ತೆಗೆಯುವ ಗದ್ದೆಯನ್ನು ಮೊದಲೇ ಸಿಂಗರಿಸಿರುತ್ತಾರೆ. ಅಲ್ಲಿ ತಲುಪಿದ ನಂತರ ಹಾಲು, ಜೇನು ಮೊದಲಾದವುಗಳನ್ನು ಕದಿರಿನ ಬುಡಕ್ಕೆ ಸುರಿಯುತ್ತಾರೆ. ಐದು ಎಲೆಗಳ ಕಟ್ಟನ್ನು ಕದಿರಿನ ಬುಡಕ್ಕೆ ಕಟ್ಟುತ್ತಾರೆ. ನಂತರ ಸಾಂಪ್ರದಾಯಿಕವಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸುತ್ತಾರೆ. ದೇವರನ್ನು ಪ್ರಾರ್ಥಿಸಿ ಬೆಸ ಸಂಖ್ಯೆಯಲ್ಲಿ ಕದಿರನ್ನು ಕುಯ್ದು ಕುಕ್ಕೆಯಲ್ಲಿ ಇಡಲಾಗುತ್ತದೆ. ಕದಿರನ ಒಂದೊಂದು ಕಟ್ಟನ್ನು ಆಲುಮರದ ಎಲೆಯಿಂದ ಸುತ್ತಿ ಕದಿರನ್ನು ಕಟ್ಟಿ ಕುಕ್ಕೆಯಲ್ಲಿಡುತ್ತಾರೆ. ಈ ಸಮಯದಲ್ಲಿ ಪಟಾಕಿಯನ್ನು ಸಿಡಿಸಿ ಪೊಲಿ…. ಪೊಲಿ…. ದೈವ ಎಂದು ಎಲ್ಲರೂ ಕೂಗುತ್ತಾರೆ. ನಂತರ ಕುಕ್ಕೆಯನ್ನು ತಲೆ ಮೇಲೆ ಹೊತ್ತು ಪೊಲಿ…. ಪೊಲಿ…. ದೈವ ಎಂದು ಕೂಗುತ್ತಾ ಮನೆಗೆ ಬರುತ್ತಾರೆ. ಮನೆಗೆ ಬಂದ ನಂತರ ಕದಿರು ಕುಯ್ದವರ ಕಾಲು ತೊಳೆದು ಹಾಲು ನೀಡಿ, ಧಾನ್ಯಲಕ್ಷ್ಮೀಯನ್ನು ಮನೆ ತುಂಬಿಸಿಕೊಳ್ಳುತ್ತಾರೆ, ಬರುವಾಗ ಕೈಮಡಕ್ಕೆ ಕಟ್ಟುತ್ತಾ ಬರುತ್ತಾರೆ. ನೆಲ್ಲಕ್ಕಿ ನಡುಬಾಡೆಗೆ ಬಂದು ಚಾಪೆ ಮೇಲೆ ಇಟ್ಟು ಮನೆಯ ಎಲ್ಲಾ ಬಾಗಿಲು, ಮುಖ್ಯ ವಸ್ತುಗಳಿಗೆ, ಕೊಟ್ಟಿಗೆಗೆ, ದೇವರ ಕೋಣೆಗೆ ಕದಿರನ್ನು ಕಟ್ಟುತ್ತಾರೆ. ನಂತರ ಅದನ್ನು ಕುಟುಂಬದ ಪ್ರತಿಯೊಬ್ಬ ಸದಸ್ಯರು ತೆಗೆದುಕೊಳ್ಳುತ್ತಾರೆ. ಇದು ಮುಖ್ಯವಾಗಿ ಪ್ರಕೃತಿ ಪೂಜೆಯ ಸಂಕೇತ. ನಂತರ ಹೊಸ ಅಕ್ಕಿ ಪಾಯಸ ಮಾಡಿ ಮನೆಯ ಸದಸ್ಯರೆಲ್ಲ ಊಟ ಮಾಡುತ್ತಾರೆ. ಮರುದಿನ ಊರಿನ ನಾಡ್ಮಂದ್ (ಮೈದಾನ) ನಲ್ಲಿ ಊರಿನವರೆಲ್ಲಾ ಸೇರಿ ಸಾಂಪ್ರದಾಯಿಕ ಕೋಲಾಟ, ‘ಪರೆಯಕಳಿ’ಗಳನ್ನು ಆಡಿ ಸಂಭ್ರಮಿಸುತ್ತಾರೆ.

ಪುತ್ತರಿ ಹಬ್ಬದಲ್ಲಿ ವಿಶೇಷ ತಿನಿಸುಗಳು: 

ಕೊಡಗಿನ ಹಬ್ಬಗಳಲ್ಲಿ ಜಾನಪದ ಮತ್ತು ಸಾಂಪ್ರದಾಯಿಕ ತಿಂಡಿಗಳನ್ನು ಮಾಡುವುದು ವಿಶೇಷ. ಪುತ್ತರಿ ಹಬ್ಬದಲ್ಲಿ ವಿಶೇಷ ತಿನಿಸುಗಳಾದ ವಿಶೇಷವಾಗಿ ಹೊಸ ಅಕ್ಕಿ ಪಾಯಸ, ತಂಬಿಟ್ಟು (ತಂಬಿಟ್ಟನ್ನು ಹುರಿದ ಅಕ್ಕಿಯನ್ನು ಹುಡಿಮಾಡಿ ಬಾಳೆ, ಎಳ್ಳು, ತುಪ್ಪ, ತೆಂಗಿನಕಾಯಿ ಹಾಕಿ ಮಾಡಿರುತ್ತಾರೆ) ಬೆರಂಬಿಟ್ಟು, ಅಡಿಕೆ ಹಿಟ್ಟು,ಪುತ್ತರಿ ಕಳಂಜ, ಕಜ್ಜಾಯ, ವಿವಿಧ ಬಗೆಯ ತರಕಾರಿ ಸಾರು, ಪಲ್ಯಗಳು, ಅನ್ನ, ರೊಟ್ಟಿ, ಹುತ್ತರಿ ಗೆಣಸನ್ನು ಈ ಸಂದರ್ಭದಲ್ಲಿ ಭೂಮಿಯಿಂದ ತೆಗೆದು ಬೇಯಿಸಿ ಜೇನುತುಪ್ಪ, ಹಸುವಿನ ತುಪ್ಪ ಹಾಗೂ ಬೆಲ್ಲದ ಪಾಕದೊಂದಿಗೆ ಸೇವಿಸುವುದು. ಹೀಗೆ ವಿವಿಧ ತಿಂಡಿ ತಿನಿಸುಗಳಿರುತ್ತದೆ.

 ಪುತ್ತರಿ ಮಂದ್: 

ಪುತ್ತರಿ ಹಬ್ಬವು ಹತ್ತಿರ ಬರುತ್ತಿದ್ದಂತೆ ನಾಲ್ಕು ದಿವಸ ಮೊದಲು ಪ್ರತಿ ಊರಿನಲ್ಲಿ ‘ಮಂದ್‌’ಗೆ ಸೇರುವುದು ವಾಡಿಕೆ. ‘ಮಂದ್‌’ ಎಂದರೆ ಊರಿನ ನಾಗರಿಕರೆಲ್ಲ ಸೇರಿ ಸಾಂಪ್ರದಾಯಿಕ ಕೋಲಾಟ ನಡೆಸುವ ಸ್ಥಳ. ಹಾಗೆಯೇ ಪುತ್ತರಿ ಕಳೆದು ಎರಡು ದಿವಸ ಊರು ‘ಮಂದ್‌’ನಲ್ಲಿ ಕೋಲಾಟ ನಡೆಸಿ ಮೂರನೇ ದಿನ ‘ನಾಡ್‌ ಮಂದ್‌’ಗೆ ಕೋಲಾಟಕ್ಕೆ ತೆರಳಿ ಎರಡು ದಿನದ ಕೋಲಾಟದ ಬಳಿಕ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ನಾಪೋಕ್ಲು ಸಮೀಪದ ಬಿದ್ದಾಟಂಡ ವಾಡೆಯ ನೂರಂಬಡ ನಾಡ್ ಮಂದ್‍: ಬಿದ್ದಾಟಂಡ ಕುಟುಂಬಸ್ಥರ ಗುರುಪೊನ್ನಪ್ಪ ಅವರ ಕೈಮಡ

 ಪುತ್ತರಿ ಕೋಲಾಟ:  ”ರಾಜ್ಯದ ವಿವಿಧೆಡೆ ಸುಗ್ಗಿ ಆಚರಿಸುವಂತೆ ಕೊಡಗಿನಲ್ಲಿ ಧಾನ್ಯಲಕ್ಷ್ಮಿಯನ್ನು ಮನೆಗೆ ತರುವ ಹಬ್ಬವಾಗಿ ಪುತ್ತರಿಯನ್ನು ಆಚರಿಸಲಾಗುತ್ತದೆ. ಪುತ್ತರಿ ಆಚರಣೆ ನಂತರದಲ್ಲಿಊರಿನ ಹಲವು ಕಡೆ ಮರುದಿನ ಕೋಲಾಟ್‌, ಉಮ್ಮತ್ತಾಟ್‌ ಸೇರಿದಂತೆ ಇತರ ಸಾಂಪ್ರದಾಯಿಕ ನೃತ್ಯದ ಮೂಲಕ ನಮ್ಮ ಪರಂಪರೆಯನ್ನು ನೆನಪಿಸಿಕೊಳ್ಳಲಾಗುತ್ತದೆ,’

ಪುತ್ತರಿ ಹಬ್ಬದ ಮಾರನೆಯ ದಿನ ಪುತ್ತರಿ ಹಾಡನ್ನು ಮನೆಮನೆಗಳಲ್ಲಿ ಹಾಡುವ ಪದ್ಧತಿಯೂ ಇದೆ. ಅಲ್ಲದೆ, ನಾಡ್‌ಮಂದ್‌ನಲ್ಲಿ (ಊರಿನ ದೊಡ್ಡ ಮೈದಾನದಲ್ಲಿ) ಊರಿನವರೆಲ್ಲಾ ಸೇರಿ ಪುತ್ತರಿ ಕೋಲಾಟ ನಡೆಸುತ್ತಾರೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಕೊಡಗಿನ ಪುತ್ತರಿ ಹಬ್ಬ ಒಂದು ರೀತಿಯಲ್ಲಿ ಜಾನಪದ ಕಲೆಗಳ ಕಣಜ. ಈ ಹಬ್ಬಕ್ಕೆ ಒಂದು ವಾರ ಮೊದಲು ಜನ ಸೇರಿ ಕೋಲಾಟ, ನೃತ್ಯ ತರಬೇತಿ ಆರಂಭಿಸುತ್ತಾರೆ. ಇದನ್ನು ಈಡ್ ಎಂದು ಕರೆಯುತ್ತಾರೆ. ಇದರಲ್ಲಿ ಪ್ರತಿ ಮನೆಯ ಒಬ್ಬನಾದರೂ ಭಾಗವಹಿಸಬೇಕು. ಹುತ್ತರಿ ಹಬ್ಬದ ನಂತರ ಪ್ರತಿ ಮನೆಯಲ್ಲಿ ಕೋಲಾಟ ನಡೆಯುತ್ತದೆ. ಒಂದೇ ಊರಿನವರು ಸೇರಿ ಆಡುವ ಕೋಲಾಟಕ್ಕೆ ಊರ್ ಮಂದ್ ಕೋಲ್ ಎಂದು ಕರೆಯುತ್ತಾರೆ. ಹಲವು ಊರು ಸೇರಿ ನಡೆಸುವ ಕೋಲಾಟಕ್ಕೆ ನಾಡ್ ಮಂದ್ ಕೋಲ್ ಎನ್ನುತ್ತಾರೆ. ಹಲವು ನಾಡು ಸೇರಿ ಮಾಡುವ ಕೋಲಾಟಕ್ಕೆ ದೇಶ ಮಂದ್ ಕೋಲ್ ಎನ್ನುತ್ತಾರೆ. ಈ ಕೋಲಾಟದಲ್ಲಿ 32 ವಿಧ. ಆ ಸಮಯದಲ್ಲಿ ಪ್ರತಿಯೊಬ್ಬರೂ ಸಾಂಪ್ರದಾಯಿಕ ಉಡುಪು ಧರಿಸುತ್ತಾರೆ. ಕೋಲಾಟದ ನಂತರ ಆ ಕೋಲನ್ನು ಭಕ್ತಿ ಭಾವದಿಂದ ಮನೆಯಲ್ಲಿ ಕಾಯ್ದಿರಿಸುತ್ತಾರೆ.

ಪುತ್ತರಿ ಅರಮನೆ ಕೋಲು:  ಹೆಬ್ಬೆಟ್ಟಗೇರಿ  ಗ್ರಾಮದ ಪಾಂಡಿರ ಕುಟುಂಬಸ್ಥರು ಕೊಡಗು ರಾಜರ ಆಳ್ವಿಕೆಯ ಕಾಲದಲ್ಲಿ ಪುತ್ತರಿ ಕೋಲಾಟವನ್ನು ಅಂದಿನ ಅರಮನೆಯಾಗಿದ್ದ ಕೋಟೆ ಆವರಣದಲ್ಲಿ ನಡೆಸುತ್ತಿದ್ದರು. ಗದ್ದೆಯಲ್ಲಿ ಬೆಳೆದು ನಿಂತ ಭತ್ತದ ಪೈರನ್ನು ಧಾನ್ಯಲಕ್ಷಿತ್ರ್ಮಯಾಗಿ ಮನೆಗೆ ಬರಮಾಡಿಕೊಳ್ಳುವ ಹಬ್ಬದ ವೇಳೆ ಅರಮನೆಯಲ್ಲಿ ಸಂಭ್ರಮವನ್ನು ಆಚರಿಸುವ ಸಂದರ್ಭ ಪುತ್ತರಿ ಅರಮನೆ ಕೋಲು ಅತ್ಯಂತ ಮಹತ್ವ ಪಡೆದಿತ್ತು. ಹೆಬ್ಬೆಟ್ಟಗೇರಿ ಗ್ರಾಮದ ಪಾಂಡಿರ ಕುಟುಂಬಸ್ಥರು ರಾಜರ ಕಾಲದಿಂದ ಕೋಟೆ ಆವರಣದಲ್ಲಿ ಕೋಲಾಟ ಸೇರಿದಂತೆ ಇತರೆ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದರು. ಆದರೆ ಕೊಡಗಿಗೆ ಬ್ರಿಟಿಷರ ಆಗಮನದ ನಂತರ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ನಿಲ್ಲಿಸಲಾಯಿತು. ಇದರಿಂದ ಆವರಣದಲ್ಲಿ ನಡೆಸಿಕೊಂಡು ಬರುತ್ತಿದ್ದ ಪುತ್ತರಿ ಅರಮನೆ ಕೋಲು ಆಚರಣೆ ಸ್ಥಗಿತಗೊಂಡಿತ್ತು. ನಂತರ ಕೆಲ ಸಮಯ ಗದ್ದಿಗೆಯಲ್ಲಿ ಕೋಲಾಟ ನಡೆಸಲಾಯಿತು. ಕಳೆದ ಕೆಲವು ವರ್ಷಗಳಿಂದ ಪಾಂಡಿರ ಕುಟುಂಬಸ್ಥರು ಮತ್ತೆ ಪುತ್ತರಿ ಅರಮನೆ ಕೋಲನ್ನು ಪುತ್ತರಿ ಕೋಲಾಟ ಎಂದು ಓಂಕಾರೇಶ್ವರ ದೇವಾಲಯದ ಸಹಕಾರದೊಂದಿಗೆ ಕೋಟೆ ಆವರಣದಲ್ಲಿ ಆಚರಿಸುತ್ತಿದ್ದಾರೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಊರೋರ್ಮೆ :  ಹಬ್ಬದ ಕಡೆಯ ದಿನವಾಗಿ “ಊರೋರ್ಮೆ” ನಡೆಯುತ್ತದೆ. ಊರವರೆಲ್ಲಾ ಗ್ರಾಮದ ಅಂಬಲ(ಮೈದಾನ)ದಲ್ಲಿ ನೆರೆಯುತ್ತಾರೆ. ವಿವಿಧ ತಿಂಡಿ ತಿನಿಸು, ಅನ್ನ, ರೊಟ್ಟಿ ಹೀಗೆ ವಿವಿಧ ಪದಾರ್ಥಗಳನ್ನು ಮನೆಯಿಂದ ತಂದು ಅಲ್ಲಿ ಸೇವಿಸುತ್ತಾರೆ. ಅಲ್ಲಿಗೆ ಪುತ್ತರಿ ಹಬ್ಬದ ಸಂಭ್ರಮ ಮುಗಿಯುತ್ತದೆ.

ಕೊಡಗಿನ ಪುತ್ತರಿ ಹಬ್ಬದ ವಿಶೇಷತೆಯೇ ಧಾನ್ಯ ಲಕ್ಷ್ಮಿ ಆಗಿದೆ. ಇದರ ಅರ್ಥ ಭತ್ತವನ್ನು ಮನೆಗೆ ತುಂಬಿಸಿಕೊಳ್ಳುವುದಾಗಿದೆ. ಈ ಮೊದಲು ಕೊಡಗು ಈಗಿನಂತೆ ಇರಲಿಲ್ಲ, ಬದಲಾಗಿ ಅಲ್ಲಿ ಭತ್ತವೇ ಪ್ರಧಾನ ಕೃಷಿಯಾಗಿತ್ತು. ಕೊಡಗಿನಲ್ಲಿ ನೀರಾವರಿ ಪ್ರದೇಶ ಹೆಚ್ಚಾಗಿದ್ದು, ಬಯಲುಗಳೆಲ್ಲ ಭತ್ತದ ಗದ್ದೆಗಳಾಗಿದ್ದವು. ಆದ್ದರಿಂದ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಹೀಗಾಗಿ ಭತ್ತವನ್ನು ಮನೆಗೆ ತುಂಬಿಸಿಕೊಳ್ಳುವ ಸುಗ್ಗಿ ಹಬ್ಬವಾಗಿ ಪುತ್ತರಿ ಬಿಂಬಿತವಾಗುತ್ತಿತ್ತು. ಪುತ್ತರಿ ಹಬ್ಬ ಕಳೆಯುತ್ತಿದ್ದಂತೆಯೇ ಭತ್ತದ ಕುಯ್ಲು ಕೆಲಸ ಆರಂಭವಾದರೆ ಅದು ಮುಗಿಯುವ ವೇಳೆಗೆ ಜನವರಿ ಕಳೆದು ಹೋಗುತ್ತಿತ್ತು.

ಈ ಸುಗ್ಗಿಹಬ್ಬದಲ್ಲಿ ಕೊಡಗಿನ ತುಂಬ ಸಂಸ್ಕೃತಿಯ ಕಲಿಕೆ ಮತ್ತು ಪ್ರದರ್ಶನದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ಈ ಹಬ್ಬವು ಧಾರ್ವಿುಕ ದೃಷ್ಟಿಕೋನಕ್ಕಿಂತ ಹೆಚ್ಚಾಗಿ ಪ್ರಕೃತಿ ಮಾತೆಯ ಸಂಕೇತದ ಹಬ್ಬವಾಗಿದೆ. 

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಕೊಡಗಿನ ಪ್ರಮುಖ ಹಬ್ಬವಾದ ಪುತ್ತರಿಗೆ ಕೊಡಗಿನವರು ಜಿಲ್ಲೆಯ ಹೊರಗೆ ತಾವು ಎಲ್ಲಿಯೇ ಇರಲಿ ಸಾಮಾನ್ಯವಾಗಿ ಬಂದೇ ಬರುತ್ತಾರೆ. ಹಬ್ಬದ ದಿನದಂದು ಕುಟುಂಬದವರೊಡನೆ ಕಲೆತು ಸಂಭ್ರಮಿಸುತ್ತಾರೆ. ಕೊಡಗಿನಲ್ಲಿ ಮಾತ್ರವೇ ಕಾಣಬಹುದಾದ ಪುತ್ತರಿ ಹಬ್ಬವು ಇಲ್ಲಿನ ಸಂಪ್ರದಾಯ, ಕೃಷಿ ಮೇಲಿನ ಭಕ್ತಿಯ ಪ್ರತಿರೂಪವಾಗಿದೆಯಲ್ಲದೆ, ಹಿಗ್ಗಿನ ಸುಗ್ಗಿಯ ಹಬ್ಬವಾಗಿಯೂ ಗಮನ ಸೆಳೆಯುತ್ತಿದೆ. ಪುತ್ತರಿ ಎಂದರೆ ಕೊಡಗಿನ ಸುಗ್ಗಿಯ ಹಬ್ಬ ಎಂದೇ ಪ್ರಖ್ಯಾತಿಯನ್ನು ಪಡೆದಿದೆ.

 ಪಾಡಿ ಶ್ರೀ ಇಗ್ಗುತ್ತಪ್ಪ ಚರಿತ್ರೆ 

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಪಾಡಿ ಶ್ರೀ ಈಶ್ವರ ಇಗ್ಗುತ್ತಪ್ಪ ದೇವಾಲಯದಲ್ಲಿ ಈಶ್ವರ ದೇವರು ಉದ್ಭವ ಲಿಂಗದ ರೂಪದಲ್ಲಿದ್ದು, ಪುರಾತನ ಕಾಲದಿಂದ ಪೂಜಿಸಲ್ಪಡುತ್ತಿದೆ. ನಂತರ ಶ್ರೀ ಸುಬ್ರಮಣ್ಯ ದೇವರ ಅವತಾರವಾದ ಇಗ್ಗುತಪ್ಪ ದೇವರು ಕೇರಳದಿಂದ ಬಂದು ಇಲ್ಲಿ ನೆಲೆ ನಿಂತರು. “ಇಗ್ಗು” ಎಂದರೆ ಕೊಡವ ಭಾಷೆಯಲ್ಲಿ ಆಹಾರ, “ತಪ್ಪ” ಎಂದರೆ ಕೊಡುವುದು. ಹೀಗಾಗಿ ಆಹಾರ ಕೊಡುವ ದೇವರಾಗಿ ಇಗ್ಗುತಪ್ಪ ದೇವರು ಇಲ್ಲಿ ನೆಲೆಸಿದ್ದಾರೆ.

ಅಂದಾಜು ಸರಿ ಸುಮಾರು1300 ವರ್ಷಗಳ ಹಿಂದೆ 6 ಜನ ಅಣ್ಣ-ತಮ್ಮಂದಿರು ಹಾಗೂ ಒಬ್ಬಳು ತಂಗಿ ಒಟ್ಟು 7 ಜನ ದೇವರುಗಳು ಕೇರಳದ ಸಮುದ್ರ ತೀರದಲ್ಲಿ ಶಂಖದಿಂದ ಹುಟ್ಟಿದರೆಂಬುದು ಪ್ರತೀತಿ.ಅವರುಗಳೆಂದರೆ 1. ಕಾಂಞರತಪ್ಪ, 2. ತಿರುಚೆಂಬರಪ್ಪ 3. ಬೇಂದ್ರುಕೋಲಪ್ಪ 4. ಇಗ್ಗುತಪ್ಪ 5. ಪಾಲೂರಪ್ಪ 6. ತಿರುನೆಲ್ಲಿ ಪೆಮ್ಮಯ್ಯ 7. ಪನ್ನಂಗಾಲತಮ್ಮೆ. ಇವರಲ್ಲಿ 3 ಅಣ್ಣಂದಿರು ಕೇರಳ ರಾಜ್ಯದಲ್ಲಿ ನೆಲೆನಿಂತರು. ಉಳಿದ 4 ದೇವರುಗಳು ಕೊಡಗಿನಲ್ಲಿ ನೆಲೆಸಿದ್ದಾರೆ.

ಅಂದು ಕೇರಳದಿಂದ 4 ದೇವತೆಗಳು ಕೊಡಗಿಗೆ ಬಂದಾಗ ಇಲ್ಲಿನ ಪರದಂಡ ಕುಟುಂಬದ ಮನೆಯ ಬಳಿ ವಿಶ್ರಾಂತಿ ಪಡೆಯುತ್ತಾರೆ. ಅಲ್ಲಿಂದ ಆಹಾರಕ್ಕಾಗಿ ಪರದಂಡ ಕುಟುಂಬದ ಮನೆಯ ಹಸುವಿನಿಂದ ಹಾಲನ್ನು ಕರೆದು. ಅನ್ನವನ್ನು ಮಾಡಲು ಅಕ್ಕಿಯನ್ನು ಕೂಡಾ ಕೇಳಿಕೊಳ್ಳುತ್ತಾರೆ. ಹಾಗೆ ವಾಪಾಸ್ಸು ಹೋಗುವಾಗ, ಅಡಿಗೆ ಮಾಡಲು ಬೇಕಾದ ಬೆಂಕಿ ಹಾಗೂ ಉಪ್ಪನ್ನು ಮರೆತು ಬಿಡುತ್ತಾರೆ. ನಂತರ ಅಡಿಗೆ ಮಾಡಲು ಬೆಂಕಿ ಹಾಗೂ ಉಪ್ಪು ಇಲ್ಲದ ಕಾರಣ ಪನ್ನಂಗಾಲತಮ್ಮೆ ಅವರ ಅಣ್ಣಂದಿರ ಬಳಿ ನಾನು ಬೆಂಕಿ ಇಲ್ಲದೆ ಅನ್ನವನ್ನು ಮಾಡುತ್ತೇನೆ, ಹಾಗೇ ನೀವು ಕೂಡಾ ಉಪ್ಪು ಇಲ್ಲದ ಅನ್ನವನ್ನು ತಿನ್ನುವಿರಾ ಎಂದು ಕೇಳಿಕೊಳ್ಳುತ್ತಾರೆ. ಇದನ್ನು ಅಣ್ಣಂದಿರು ಒಪ್ಪಿಕೊಳ್ಳುತ್ತಾರೆ. 

ಅದೇ ಹೊತ್ತಿಗೆ ಅನ್ನವನ್ನು ಬಡಿಸಲು ಬಾಳೆ ಎಲೆಯನ್ನು ತರಲು ಇಗ್ಗುತಪ್ಪ ದೇವರು ಪರಂದಂಡ ಮನೆಯ ಬಳಿ ತೆರಳುತ್ತಾರೆ. ಅಲ್ಲಿ ಮನೆಯಲ್ಲಿ ಕುಟುಂಬದವರು ಯಾರು ಇರಲಿಲ್ಲ, ಅದರಿಂದ ಯಾರನ್ನು ಕೇಳದೆ ಬಾಳೆ ಎಲೆಯನ್ನು ಕುಯ್ಯತ್ತಾರೆ. ಇದನ್ನು ನೋಡಿದ ಒಬ್ಬ ಅಜ್ಜಿ ಇಗ್ಗುತಪ್ಪ ದೇವರಿಗೆ ಬೈಯ್ಯುತ್ತಾರೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಬಾಳೆ ಎಲೆಯನ್ನು ಯಾಕೆ ತೆಗೆಯುತ್ತೀರಾ ಎಂದು. ಇದರಿಂದ ಸಿಟ್ಟಾದ ಇಗ್ಗುತ್ತಪ್ಪ ದೇವರು, ಇನ್ನು ಮುಂದೆ ಈ ಸ್ಥಳದಲ್ಲಿ ಬಾಳೆಮರ ಬೆಳೆಯುವುದಿಲ್ಲ ಎಂದು ಶಾಪವನ್ನು ಹಾಕುತ್ತಾರೆ. ಇದರಿಂದ ಭಯಗೊಂಡ ಅಜ್ಜಿ ಯಜಮಾನನ ಬಳಿ ತಿಳಿಸುತ್ತಾರೆ. ಯಜಮಾನನಿಗೆ ಬಾಳೆ ಎಲೆಯನ್ನು ತೆಗೆಯಲು ಬಂದವರು ದೇವರ ಅವತಾರವೆಂದು ತಿಳಿದಿದ್ದರಿಂದ ಇಗ್ಗುತಪ್ಪ ದೇವರ ಬಳಿ ಬಂದು ಕ್ಷಮೆಯನ್ನು ಕೋರಿ ಪ್ರಾಯಶ್ಚಿತ ಕೇಳುತ್ತಾರೆ. ಅದಕ್ಕೆ ಒಪ್ಪಿದ ಇಗ್ಗುತಪ್ಪ ದೇವರು ಕ್ಷಮೆಯನ್ನು ನೀಡುತ್ತಾರೆ. ಅಲ್ಲದೆ ಇನ್ನು ಮುಂದೆ ನಾನು ಇಲ್ಲಿಯೇ ನೆಲೆ ನಿಲ್ಲುವುದರಿಂದ ಪ್ರಾಯಶ್ಚಿತಕ್ಕಾಗಿ ನಿಮ್ಮ ಕುಟುಂಬ ಇನ್ನು ಮುಂದೆ ನನ್ನ ತಕ್ಕರಾಗಿರಬೇಕು. ಹಾಗೂ ವರ್ಷದ ಎಲ್ಲಾ ಹಬ್ಬಗಳಿಗೂ ನಿಮ್ಮ ಕುಟುಂಬದಿಂದ ಎತ್ತುಪೋರಾಟ ಹಾಗೂ ಪ್ರತೀ ನೈವೇದ್ಯಕ್ಕೆ ಸಣ್ಣ ಅನ್ನ ನೀಡಬೇಕೆಂದು ಹೇಳಿದರು. ಅಂದಿನಿಂದ ಪರದಂಡ ಕುಟುಂಬದವರು ಇಗ್ಗುತಪ್ಪ ದೇವರ ತಕ್ಕರಾಗಿದ್ದಾರೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಅಷ್ಟೋತ್ತಿಗೆ ತಂಗಿಯಾದ ಪನ್ನಂಗಾಲತಮ್ಮೆ ಅನ್ನವನ್ನು ಮಾಡಲು ಅಕ್ಕಿಯನ್ನು ಹಾಲಿನೊಂದಿಗೆ ಬೆರೆಸಿ ಬಿದಿರಿನ ಕೊಟ್ಟೆಯಲ್ಲಿ ಹಾಕಿ ಅಂಬಲ ಹೊಳೆಯ ದಡದಲ್ಲಿರುವ ಬಿಸಿ ಮರಳಿನ ಅಡಿಯಲ್ಲಿ ಹೂಳುತ್ತಾರೆ. ಅದು ಮರಳಿನ ಬಿಸಿಗೆ ಕುದ್ದು ಅನ್ನವಾಗುತ್ತದೆ. ತಯಾರಾದ ಅನ್ನವನ್ನು ಪನ್ನಂಗಾಲತಮ್ಮೆ ಅಣ್ಣಂದಿರಿಗೆ ಇಗ್ಗುತಪ್ಪ ತಂದ ಬಾಳೆ ಎಲೆಯಲ್ಲಿ ಬಡಿಸುತ್ತಾರೆ. ಉಪ್ಪಿಲ್ಲದ ಊಟವನ್ನು ತಿಂದ ಅಣ್ಣಂದಿರಿಗೆ ರುಚಿ ಇಲ್ಲದ ಕಾರಣ ಅನ್ನವನ್ನು ತಿನ್ನದೆ ಮೇಲಕ್ಕೆ ಎಸೆಯುತ್ತಾರೆ. ಇದರಿಂದ ಸಿಟ್ಟಾದ ತಂಗಿ ಪನ್ನಂಗಾಲತಮ್ಮೆ 3 ಜನ ಅಣ್ಣಂದಿರಿಗೂ ಸಟ್ಟಗದಿಂದ ಹೊಡೆಯುತ್ತಾರೆ. 

ಇದಕ್ಕೆ ಪ್ರತಿಯಾಗಿ ತಂಗಿಯನ್ನು ಹೇಗಾದರೂ ಮಾಡಿ ಸೋಲಿಸಬೇಕೆಂದು ಅಣ್ಣಂದಿರು ಪಣತೊಡುತ್ತಾರೆ. ಅದರ ಯೋಜನೆಯ ಪ್ರಕಾರ ಅಣ್ಣಂದಿರು ಅಡಿಕೆ ಮತ್ತು ವಿಲ್ಯದೆಲೆಯನ್ನು ತಿನ್ನಲು ಪ್ರಾರಂಭಿಸುತ್ತಾರೆ. ತಿನ್ನುವ ಸಂದರ್ಭದಲ್ಲಿ ಯಾರ ಬಾಯಿ ಕೆಂಪಾಗಿದೆ ಎಂದು ನೋಡಲು ಅದನ್ನು ಕೈಗೆ ಉಗಿದು ನೋಡಿ, ಉಗುಳಿದ ಎಂಜಲನ್ನು ಎತ್ತಿ ತಲೆಯ ಮೇಲಿನಿಂದ ಹಿಂದಕ್ಕೆ ಎಸೆಯುತ್ತಾರೆ. ಇದನ್ನು ಸರಿಯಾಗಿ ಗಮನಿಸದ ತಂಗಿ ಉಗುಳಿದ ಎಂಜಲನ್ನು ವಾಪಾಸ್ಸು ತನ್ನ ಬಾಯಿಗೆ ಹಾಕುತ್ತಾರೆ. ಅಗ ಅಣ್ಣಂದಿರು ನೀನು ಉಗುಳಿದ ಎಂಜಲನ್ನು ಪುನ: ತಿಂದದ್ದು ದೇವರ ಕುಲಕ್ಕೆ ಇದು ಒಳ್ಳೆಯದಲ್ಲ ಎಂದು ಹೇಳಿ ಕುಲ ಬದಲು ಮಾಡುತ್ತಾರೆ. ಹಾಗೇ ಅಣ್ಣಂದಿರಿಂದ ಬೇರ್ಪಟ್ಟ ತಂಗಿ ಪನ್ನಂಗಾಲತಮ್ಮೆ ಎಂಬಲ್ಲಿ ನೆಲೆ ನಿಲ್ಲುತ್ತಾರೆ. ಅಲ್ಲಿಂದ ಹೊರಟ ಉಳಿದ 3 ಜನ ಅಣ್ಣಂದಿರು ಮುಂದೆ ಹೋಗಿ ಇಗ್ಗುತಪ್ಪ ದೇವರು ತಾವು ಮೊದಲೇ ಬಾಣ ಹೊಡೆದು ಬಾಣ ಬಿದ್ದ ಸ್ಥಳವಾದ ಅಮ್ಮಂಗೇರಿಯಲ್ಲಿ (ಈಗಿನ ದೇವಾಲಯ ಇರುವ ಸ್ಥಳ) ದಲ್ಲಿ ನೆಲೆಸುತ್ತಾರೆ. ಹಾಗೂ ಪಾಲೂರಿನಲ್ಲಿ ಪಾಲೂರಪ್ಪ ಹಾಗೂ ತಿರುನೆಲ್ಲಿಯಲ್ಲಿ ಪೆಮ್ಮಯ್ಯ ನೆಲೆ ನಿಲ್ಲುತ್ತಾರೆ. ಹೀಗೆ ದೇವರ ಅವತಾರದಲ್ಲಿ ಜನಿಸಿ ಬಂದ ಸಹೋದರ ಸಹೋದರಿಯರು ತಮ್ಮ ತಮ್ಮ ಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ನೆಲೆ ನಿಲ್ಲುತ್ತಾರೆ.

 ಇಗ್ಗುತಪ್ಪ ದೇವರು ಹಾಗೂ ಪುತ್ತರಿ ಹಬ್ಬ: 

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಇಗ್ಗುತಪ್ಪ ದೇವರಿಗೆ ಪುತ್ತರಿ ಹಬ್ಬವನ್ನು ಪ್ರಾರಂಭಿಸಿದ  ಪ್ರತೀತಿ ಇದೆ. ಈ ಹಿಂದೆ ಕೊಡಗಿನ ಜನರು ತಾವು ಬೆಳೆಸಿದಂತಹ ಬೆಳೆಗೆ ಯಾವುದೇ ಸುಗ್ಗಿಯನ್ನು ಆಚರಣೆ ಮಾಡದಂತಹ ಸಮಯದಲ್ಲಿ ಶ್ರೀ ಇಗ್ಗುತ್ತಪ್ಪ ದೇವರು ಕೇರಳದ ‘ಓಣತಮ್ಮೆ’ ಎಂಬ ಓಣಂ ಹಬ್ಬದ ದೇವತೆಯನ್ನು ಕರೆದು ದೇವತೆಯ ಕೈಯಿಂದ ಒಂದು ಚೆಂಬೆನೆ ಓಲೆಯನ್ನೊಳಗೊಂಡ ಗಂಟನ್ನು ತರುತ್ತಾರೆ. ಆ ಓಲೆಯಲ್ಲಿ “ಓಣಂ” ಹಬ್ಬ ಆದ 90 ದಿನಗಳ ನಂತರ ಪುತ್ತರಿ ಹಬ್ಬವನ್ನು ಮಾಡಬೇಕು, ಕೃತಿಕಾ ನಕ್ಷತ್ರದಲ್ಲಿ ಹಬ್ಬ ಆಗಬೇಕು. ರೋಹಿಣೀ ನಕ್ಷತ್ರದಲ್ಲಿ ಕದಿರು ತೆಗೆದರೆ ಶುಭವಾಗುವುದು ಎಂದು ಬರೆದಿರುತ್ತಾರೆ. ಆ ದಿನ ಹುಣ್ಣಿಮೆಯ ಒಂದು ದಿನ ಹಿಂದೆ ಅಥವಾ ಮುಂದೆ ಇರಬಹುದು. ಹಾಗೆ ಪುತ್ತರಿ ಹಬ್ಬವು ಈ ದೇವಾಲಯಕ್ಕೆ ಪ್ರಮುಖವಾದ ಹಾಗೂ ದೊಡ್ಡದಾದ ಹಬ್ಬವಾಗಿದೆ. ಹಬ್ಬದ ದಿನಾಂಕವನ್ನು 15 ದಿನಗಳ ಮುಂಚೆ ನಿಗಡಿ ಮಾಡುತ್ತಾರೆ.

 

ಮಾಹಿತಿ: ಪರದಂಡ ಪ್ರಿನ್ಸ್‌ ತಮ್ಮಪ್ಪ(ದೇವ ತಕ್ಕರು), ನಾಲಡಿ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಓಂ ಶ್ರೀ ಈಶ್ವರ ಇಗ್ಗುತ್ತಪ್ಪ ದೇವಾಲಯದಲ್ಲಿನ ಸೇವೆಗಳ ವಿವರ ಹಾಗೂ ಸೇವಾ ದರ

  1. ದೀಪಧಾರಣೆ – Deeparadhane – 300/-
  2. ಸತ್ಯನಾರಾಯಣ ಪೂಜೆ – Sathyanarayana Pooja – 200/-
  3. ಮಹಾ ಪೂಜೆ – Maha Pooja – 100/-
  4. ಅಲಕಾಂಕಾರ ಪೂಜೆ – Alankara Pooja – 100/-
  5. ಶಾಂತಿ ಪೂಜೆ – Shanthi Pooja – 75/-
  6. ಅಪ್ಪಕಜ್ಜಾಯ/ಪಂಚಕಜ್ಜಾಯ – Appakajjaya / Panchakajjaya – 50/-
  7. ನವಗ್ರಹ ಜಪ – Navagraha japas – 50/-
  8.  ಅಭಿಶೇಕಗಳು – Abhishekas – 50/-
  9. ಗಣಪತಿ ಪೂಜೆ – Ganapathi Pooja – 50/-
  10. ಮಂಗಳಾರತಿ – Mangalarathi – 20/-
  11. ನಾಮಕರಣ ಸಮಾರಂಭ – Naming Ceremony – 500/-

ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಜರುಗುವ ವಿಶೇಷ ಸೇವೆಗಳು (ಉತ್ಸವಗಳು)

* ಕುಂಭ ಮಾಸ ಕಲಾಡ್ಡ ಹಬ್ಬ (ಮಾರ್ಚ್).

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

* ಭೈನಾಡ ಭೂತದ ಕೋಲ (ಏಪ್ರಿಲ್)

* ಸಿಂಹ ಮಾಸ ಆರಾಧನೆ (ಆಗಸ್ಟ್)

* ಪರದಂಡ ಆರಾಧನೆ (ಅಕ್ಟೋಬರ್)

* ಪುತ್ತರಿ ಕಲಾಡ್ಡ ಹಬ್ಬ (ಡಿಸೆಂಬರ್)

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

* ಷಷ್ಠಿ ಹಬ್ಬ (ಡಿಸೆಂಬರ್)

* ಹೊಸ ಅಕ್ಕಿ ನೈವೇದ್ಯ (ಜನವರಿ)

* ಭಕ್ತ ಜನ ಸಂಘದ ವಾರ್ಷಿಕೋತ್ಸವ (ಮೇ)

 ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತಜನ ಸಂಘ 

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಕುಂಜಿಲ-ಕಕ್ಕಬ್ಬೆ,

ಮಡಿಕೇರಿ – ಕೊಡಗು

ಆಡಳಿತ ಮಂಡಳಿ ಸದಸ್ಯರು (2024 ರಿಂದ 2029 ರವರೆಗೆ)

ಅಧ್ಯಕ್ಷರು: ಶ್ರೀ ಪರದಂಡ ಸುಬ್ರಮಣಿ ಕಾವೇರಪ್ಪ

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಉಪಾಧ್ಯಕ್ಷರು: ಶ್ರೀ ಕಲ್ಯಾಟಂಡ, ಟಿ. ಅಪ್ಪಣ್ಣ

ಕಾರ್ಯದರ್ಶಿ: ಶ್ರೀಮತಿ ಬಟ್ಟೀರ, ಜೋಂದಮ್ಮ ಮೇದಪ್ಪ

ಖಜಾಂಚಿ: ಶ್ರೀ ಅಂಜಪರವಂಡ .ಎ. ಕುಶಾಲಪ್ಪ

ನಿರ್ದೇಶಕರುಗಳು:

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಶ್ರೀ ಪರದಂಡ.ಕೆ. ಸದಾ ನಾಣಯ್ಯ

ಶ್ರೀ ಅನ್ನಡಿಯಂಡ. ಪಿ. ದಿಲೀಪ್‌

ಶ್ರೀ ಅಲ್ಲಾರಂಡ, ಯಸ್. ಅಯ್ಯಪ್ಪ (ಸನ್ನು)

ಶ್ರೀ ಕುಲ್ಲೇಟಿರ, ಅರುಣ್ ಬೇಬ

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಶ್ರೀ ಕುಟ್ಟಂಜೆಕ್ಟರ, ಎನ್. ಬೋಪಣ್ಣ

ಶ್ರೀ ಕಾಂಡಂಡ, ಯಂ, ಪೂವಯ್ಯ

ಶ್ರೀ ಕಲಿಯಂಡ, ಯಸ್. ಗಣೇಶ್

ಶ್ರೀ ಕೇಲೇಟರ. ಎ. ರಂಜನ್

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಶ್ರೀ ಅಪ್ಪಾರಂಡ. ಪಿ. ಮಂದಣ್ಣ

ಅರ್ಚಕರು: ಶ್ರೀ ಕುಶಭಟ್

ಪಾರು ಪತ್ಯೆಗಾರರು: ಶ್ರೀ ಪರದಂಡ. ಪ್ರಿನ್ಸ್ ತಮ್ಮಪ್ಪ

ಕಾರ್ಯನಿರ್ವಾಹಕರು: ಶ್ರೀ ಕಂಬೆಯಂಡ, ಯಂ, ಬೊಳ್ಳಪ್ಪ

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಸಿಬ್ಬಂದಿ: ಶ್ರೀ ಕಂಬೆಯಂಡ. ಯಂ. ಗಣೇಶ್

ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘದ ಹಿನ್ನಲೆ ಹಾಗೂ ಬೆಳೆದು ಬಂದ ಹಾದಿ

“ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘವು 1918ರಲ್ಲಿ ದಿವಂಗತ ಮೇರಿಯಂಡ ಗಣಪತಿಯವರ ಸ್ಥಾಪಕ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತ್ತು. ಶ್ರೀ ಇಗ್ಗುತ್ತಪ್ಪ ದೇವರ ಭಕ್ತಾಧಿಗಳಿಂದ ಭಕ್ತರಿಗೋಸ್ಕರವಾಗಿ ಈ ಸಂಘವನ್ನು ಸ್ಥಾಪಿಸಲಾಯಿತು. ಹಾಗೆ ದೇವಾಲಯದ ಸಮಗ್ರ ಅಭಿವೃದ್ಧಿ ಹಾಗೂ ವ್ಯವಸ್ಥಾಪನ ದೃಷ್ಠಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಭಕ್ತರು ಹಾಗೂ ದೇವಾಲಯದ ಅಭಿವೃದ್ಧಿಯ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘದಲ್ಲಿ ಪ್ರಸ್ತುತ 10, 000/- ಕ್ಕೂ ಮಿಗಿಲಾಗಿ ಜಗತ್ತಿನಾಧ್ಯಾಂತ ಸದಸ್ಯರಿದ್ದಾರೆ. ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲ ಜನಾಂಗದವರಿಗೆ ತಲಾ 100/- ರೂಪಾಯಿಯ ಸದಸ್ಯತ್ವ ಶುಲ್ಕವನ್ನು ಪಾವತಿ ಮಾಡಿ ಈ ಭಕ್ತ ಜನ ಸಂಘದಲ್ಲಿ ಸದಸ್ಯತ್ವವನ್ನು ಪಡೆಯಬಹುದಾಗಿದೆ.

ಪಾಡಿ ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘ ಆರಂಭಗೊಂಡು 100 ವರ್ಷ ತುಂಬಿದ ನೆನಪಿಗಾಗಿ ದಾನಿಗಳ ಸಹಕಾರದಿಂದ ವಿವಿಧ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸಂಘದಿಂದ ₹ 38 ಲಕ್ಷ ವೆಚ್ಚದಲ್ಲಿ ಭೋಜನಗೃಹವನ್ನು ನಿರ್ಮಿಸಲಾಗಿದೆ. ಶತಮಾನದ ನೆನಪಿಗಾಗಿ ಭೋಜನಗೃಹ, ಸಂಘದ ಕಚೇರಿ, ಸಮಿತಿ ಕಚೇರಿ ಹಾಗೂ ಕೈ ತೊಳೆಯುವ ಹಜಾರದ ನಿರ್ಮಾಣ ಮಾಡಲಾಗಿದೆ. ಹೆಸರು ಹೇಳಲಿಚ್ಚಿಸದ ಭಕ್ತರ ನೇರವಿನಿಂದ ಸರಿ ಸುಮಾರು 2 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅಡುಗೆ ಮನೆ ಉಗ್ರಾಣವನ್ನು ಕೂಡ ನಿರ್ಮಿಸಲಾಗಿದೆ. ಮುಕ್ತ ಟೆಂಡರ್‌ಗಳನ್ನು ಕರೆದು ಪಾರದರ್ಶಕವಾಗಿ ಗುಣಮಟ್ಟದ ಕಾಮಗಾರಿಗಳನ್ನು ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘ ನಿರ್ವಹಿಸಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹಾಗೆ ದೇವಾಲಯದ ಸಂಪೂರ್ಣ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ತುಲಾಭಾರ ಸೇವೆ ವಿಶಿಷ್ಟವಾದದ್ದು. ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘದಿಂದ ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲ ಜನಾಂಗದವರಿಗೆ ತುಲಾಭಾರ ಸೇವೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ತುಲಾಭಾರ ಸೇವೆ ಮಾಡಿಸಿಕೊಳ್ಳುವ ಭಕ್ತರಿಗೆ ವಿಶೇಷವಾದ ಪವಳ ಮಾಲೆ(ಹವಳ ಮಾಲೆ)ಯನ್ನು ಧರಿಸಲು ನೀಡಲಾಗುತ್ತದೆ. ಹಾಗೆ ಆ ಪವಳ ಮಾಲೆಯನ್ನು ದೇವಾಲಯದ ಅರ್ಚಕರು ಸಹ ಧರಿಸುವ ಮೂಲಕ ಸಾಮರಸ್ಯವನ್ನು ಮೂಡಿಸಲಾಗಿದೆ. ನಂತರ ಉತ್ಸವ ಮೂರ್ತಿಯ ಬಿಂಬಕ್ಕೆ ಈ ಪವಳ ಮಾಲೆಯನ್ನು ತೊಡಿಸಲಾಗುತ್ತದೆ. ಪ್ರಾಚಿನ ಕಾಲದ ದೇವರ ಚಿನ್ನಾಭರಣಗಳಿಂದ ಮಾಡಲ್ಪಟ್ಟ ಈ ಪವಳ ಮಾಲೆಯು ಸರಿ ಸುಮಾರು 290ಗ್ರಾಂ. ತೂಕವನ್ನು ಹೊಂದಿದೆ. ಕೊಡಗಿನ ಯಾವುದೇ ದೇವಾಲಯದ ಉತ್ಸವದಲ್ಲಿ ಜೋಡಿ ಎತ್ತು ಪೋರಾಟವಿಲ್ಲ ಆದರೆ ಇಗ್ಗುತಪ್ಪ ದೇವಾಲಯದ ಉತ್ಸವದಲ್ಲಿ ಮಾತ್ರ ಜೋಡಿ ಎತ್ತು ಪೋರಾಟ ನಡೆಯುವುದು ವಿಶೇಷವಾಗಿದೆ. ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಮದುವೆ ಅಥವಾ ಅರತಕ್ಷತೆ ಕಾರ್ಯವನ್ನು ಮಾಡುವುದು ತಲೆತಲಾಂತರಗಳಿಂದ ನಿಷಿಧವಾಗಿದೆ.

ಭಕ್ತರ ಹಣದಲ್ಲಿ ಭಕ್ತ ಜನ ಸಂಘವು ದೇವಾಲಯದ ಅಭಿವೃದ್ಧಿ ಕಾರ್ಯ ಮಾಡುತ್ತಲಿದ್ದು, ದೇವಾಲಯದ ಅಭಿವೃದ್ಧಿ ಮುಖ್ಯವಾಗಿದೆ. ಎಲ್ಲರೂ ಭಕ್ತ ಜನ ಸಂಘಕ್ಕೆ ಸಹಕಾರ ನೀಡುತ್ತಾ ಬರುತ್ತಿದ್ದಾರೆ. ಅದರಲ್ಲಿ ಹೆಸರನ್ನು ಹೇಳಲಿಚ್ಚಿಸಿದ ಅಸಂಖ್ಯಾತ ಭಕ್ತರು ದೇವಾಲಯದ ಅಭಿವೃದ್ಧಿಗೆ ಕೈಜೋಡಿಸುತ್ತಾ ಬರುತ್ತಿದ್ದಾರೆ. ಈವರಗೆ ಸರಿ ಸುಮಾರು 8 ಕೋಟಿಗಳಷ್ಟು ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ದೇವಾಲಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ದೇವರ ಅಭಿಷೇಕಕ್ಕಾಗಿ ದಾನಿಗಳ ನೆರವಿನಿಂದ ಎರಡು ಬೆಳ್ಳಿಯ ಬಿಂದಿಗೆಗಳನ್ನು ತಯಾರಿಸಿದ್ದು ದೇವಾಲಯಕ್ಕೆ ಅರ್ಪಿಸಲಾಗಿದೆ.  ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಅಭಿವೃದ್ಧಿಗೆ ಕೊಡಗಿನ ಹಾಗೂ ಜಗತ್ತಿನಾಧ್ಯಾಂತವಿರುವ ಭಕ್ತ ಜನರು ಮಮತೆ ಮತ್ತು ಭಕ್ತಿಯಿಂದ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಮುಜರಾಯಿ ಇಲಾಖೆ ದೇವಾಲಯದ ವ್ಯವಸ್ಥಾಪನೆಗೆ ಇದ್ದರೂ ಕೂಡ ಇಲ್ಲಿಯವರಗೆ ಎಲ್ಲಾ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘವು ದೇವಾಲಯದ ವ್ಯವಸ್ಥಾಪನಾ ಹಾಗೂ ಅಭಿವೃದ್ಧಿಯನ್ನು ಪಾರದರ್ಶಕವಾಗಿ ಮಾಡುತ್ತಾ ಬರುತ್ತಿದೆ.

2019-20ನೇ ಸಾಲಿನ ಸಂಸತ್‌ ಸದಸ್ಯರಾದ ಶ್ರೀ ಕುಪೇಂದ್ರ ರೆಡ್ಡಿಯವರ ಸಂಸತ್‌ ಸದಸ್ಯರ ಸ್ಥಳೀಯ ಪ್ರದೇಶಾಭೀವೃದ್ಧಿ ಕಾರ್ಯಕ್ರಮಗಳಡಿಯಲ್ಲಿ ಕೇಂದ್ರ ಸರಕಾರದದಿಂದ ಬಿಡುಗಡೆಯಾದ ಅನುದಾನದಿಂದ ದೇವಾಲಯದ ಆವರಣದಲ್ಲಿ 20 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ನಿರ್ವಹಿಸಲಾಗಿದೆ. ಸರಕಾರದಿಂದ ದೇವಾಲಯಕ್ಕೆ ಇಲ್ಲಿಯವರಗೆ ಗಣನೀಯಾವಾಗಿ ಕನಿಷ್ಠ ಮಟ್ಟದಲ್ಲಿ ಅನುಧಾನ ದೊರಕಿರುವುದು ಬೇಸರದ ಸಂಗತಿಯಾಗಿದೆ. ಶೇಕಡ 90% ರಷ್ಟು ಪಾಲು ಭಕ್ತರು ನೀಡಿದ ತನು-ಮನ-ಧನಗಳಿಂದ ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘವು ಅಭಿವೃದ್ಧಿಯನ್ನು ಮಾಡುತ್ತಾ ಬಂದಿದೆ. ದೇವಾಲಯದ ಅಭಿವೃದ್ಧಿಗೆ ಶ್ರಮಿಸುವ ಯುವಜನರು ಮುಂದಕ್ಕೆ ಬರಬೇಕಾಗಿದೆ. ಸ್ವಜನ ಪಕ್ಷಪಾತ, ಸ್ವಹಿತಾಸಕ್ತಿ ಬದಿಗೊತ್ತಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸುವ ಆಡಳಿತ ಮಂಡಳಿ ಎಂದೆಂದೂ ಇರಬೇಕಾಗಿದೆ.”

ಮಾಹಿತಿ: ಪರದಂಡ ಸುಬ್ರಮಣಿ ಕಾವೇರಿಯಪ್ಪ, ಅಧ್ಯಕ್ಷರು: ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಭಕ್ತ ಜನ ಸಂಘ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ॐ

ಪಾಡಿ ಶ್ರೀ ಇಗ್ಗುತಪ್ಪ ದೇವರ ತಕ್ಕರು

1) ಪರದಂಡ ಕುಟುಂಬಸ್ಥರು (ದೇವ ತಕ್ಕರು)

2) ನಂಬಡಮಂಡ ಕುಟುಂಬಸ್ಥರು

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

3) ಮೇಚಂಡ ಕುಟುಂಬಸ್ಥರು

4) ಕಲ್ಯಾಟಂಡ ಕುಟುಂಬಸ್ಥರು

5) ಕಲಿಯಂಡ ಕುಟುಂಬಸ್ಥರು

6) ಮೇರಿಯಂಡ ಕುಟುಂಬಸ್ಥರು

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

7) ಮಾರ್ಚಂಡ ಕುಟುಂಬಸ್ಥರು

8) ಕೇಟೋಳಿರ ಕುಟುಂಬಸ್ಥರು

9) ಕಾಂಡಂಡ ಕುಂಟುಂಬಸ್ಥರು

10) ಕುಂಡೋಳಂಡ ಕುಟುಂಬಸ್ಥರು

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

11) ಕುಲ್ಲೇಟೀರ ಕುಟುಂಬಸ್ಥರು

12) ಕೇಲೇಟಿರ ಕುಟುಂಬಸ್ಥರು

13) ಕುಟ್ಟಂಜಟ್ಟೀರ ಕುಟುಂಬಸ್ಥರು

ಪಾಡಿ ಶ್ರೀ ಇಗ್ಗುತ್ತಪ್ಪ ಕ್ಷೇತ್ರದಲ್ಲಿ ಭಕ್ತಾದಿಗಳು ಪಾಲಿಸಬೇಕಾದ ಕಟ್ಟು ಕಟ್ಟಳೆಗಳು

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

1. ದೇವಾಲಯಕ್ಕೆ ಮನೆಯಿಂದ ಬರುವಾಗ ಸ್ನಾನ ಮಾಡಿ ಶುಭ್ರ ಉಡುಪು ಧರಿಸಿ ಸಸ್ಯಹಾರ ಸೇವಿಸಿ ಶುದ್ಧ ಮುದ್ರಿಕೆಯಿಂದ ದಮಡಿವಂತರಾಗಿ ಬರಬೇಕು.

2. ಭಕ್ತಾದಿಗಳು ಅವರವರ ಸಾಂಪ್ರದಾಯಿಕ ಉಡುಪಿನಲ್ಲಿ ಬರತಕ್ಕದ್ದು, ಶ್ರದ್ಧಾ ಭಕ್ತಿಯಿಂದ ದೇವಸ್ಥಾನ ಎಂಬ ಮನಸ್ಸಿನಿಂದ ಗೌರವದಿಂದ ನಡೆದುಕೊಳ್ಳಬೇಕು.

3. ಅಶೌಚ ಇರುವ ಮನೆತನದವರು(ಜನನ,ಮರಣ ಸಂಬಂಧ ಸೂತಕ) ದೇವಾಲಯಕ್ಕೆ ಬರಬಾರದು. ಜನನವಾದ ಮನೆತನದಲ್ಲಿ 12 ದಿವಸ, ಮರಣವಾದ ಮನೆತನದಲ್ಲಿ 11 ದಿವಸ ಸೂತಕವಿರುವುದರಿಂದ, ಸೂತಕ ಮುಗಿದ ನಂತರ ಬರುವುದು.

4. ಮುಟ್ಟಾದ ಸ್ತ್ರೀಯರು ಬರುವಂತಿಲ್ಲ. ಗರ್ಭಿಣಿ ಸ್ತ್ರೀಯರು 4 ತಿಂಗಳವರೆಗೆ ದೇವಸ್ಥಾನಕ್ಕೆ ಬರಬಹುದು. ತದನಂತರ 7 ತಿಂಗಳವರೆಗೆ ದೇವಸ್ಥಾನದ ಅಂಗಳಕ್ಕೆ ಇಳಿಯದೇ ಪತ್ತೆಪರೆಯಲ್ಲಿ ನಿಂತು ದೇವರ ದರ್ಶನ ಪಡೆಯಬಹುದು.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

5. ದೇವಾಲಯದ ಮಹಾದ್ವಾರದ ಹೊರಭಾಗದಲ್ಲಿ ಪಾದರಕ್ಷೆಗಳನ್ನು ಕಳಚಿ ಆಶ್ವತಕಟ್ಟೆಯ ಎದುರಿನಲ್ಲಿರುವ ಕೊಳದಲ್ಲಿ ಕೈ ಕಾಲು ಮುಖ ತೊಳೆದು ಅಶ್ವತ ವೃಕ್ಷಕ್ಕೆ ಪ್ರದಕ್ಷಿಣೆ ಬಂದು ನಮಸ್ಕರಿಸಿ ಮುಂದುವರಿಯತಕ್ಕದ್ದು.

6. ದೇವಾಲಯದ ಹೊರಾಂಗಣಕ್ಕೆ ಪ್ರವೇಶಿಸಿದ ನಂತರ ಎಡಕ್ಕೆ ತಿರುಗಿ ಶಾಸ್ತಾವು ಕಟ್ಟೆಯ ಪ್ರದಕ್ಷಿಣೆ ಬಂದು ಸನ್ನಿಧಿಗೆ ನಮಸ್ಕರಿಸಿ ಮುಂದೆ ಸಾಗಿ ವಾಯುವ್ಯ ದಿಕ್ಕಿನಲ್ಲಿ ನಿಂತು ಆದಿ ಸ್ಥಾನ ಮಲಕ್ಕೆ ನಮಸ್ಕರಿಸಿ ಮುಂದೆ ಬಂದು ಈಶಾನ್ಯ ದಿಕ್ಕಿನಲ್ಲಿರುವ ಕ್ಷೇತ್ರಪ್ಪನ ಸನ್ನಿಧಿಗೆ ನಮಸ್ಕರಿಸಿ ಮುಂದಿನ ಮಂಟಪದಲ್ಲಿ ನಮಸ್ಕರಿಸಿ, ಬಲ ಭಾಗಕ್ಕೆ ಬಂದು ನಡೆಯ ಬದಿಯಲ್ಲಿ ನಿಂತು ದೇವರ ದರ್ಶನ ಪಡೆದು ಪ್ರಾರ್ಥಿಸಿ ಎಡ ಭಾಗದಲ್ಲಿರುವ ನೈವೇದ್ಯ ಭಸ್ಮ ಹಣೆಗೆ ಇಟ್ಟು ದೇವರಿಗೆ ಹುಂಡಿಯಲ್ಲಿ ಕಾಣಿಕೆ ಇಟ್ಟು ಬರುವುದು.

7. ದೇವರಿಗೆ ಅರ್ಪಿಸಬೇಕಾದ ಸೇವೆಗಳ ಪಟ್ಟಿಯನ್ನು ವೀಕ್ಷಿಸಿ ತಮಗೆ ಇಷ್ಟವಾದ ಸೇವೆಗೆ ಕಚೇರಿಯಲ್ಲಿ ಮೊಬಲಗನ್ನು ಪಾವತಿಸಿ ರಸೀತಿ ಪಡೆದು ಅರ್ಚಕರಿಗೆ ನೀಡಿ ಸೇವಾದಿಗಳನ್ನು ಮಾಡತಕ್ಕದ್ದು.

8. ಭಕ್ತರು ವಿಶೇಷವಾಗಿ ಪ್ರಾರ್ಥನಾ ಸೇವೆಯನ್ನು ಸಲ್ಲಿಸಬೇಕಾದಾಗ ದೇವತಕ್ಕರಾದ ಪರದಂಡ ಹಿರಿಯರಲ್ಲಿ ಅಥವಾ ಮನೆತನಕ್ಕೆ ಸೇರಿದ ಪಾರುಪತ್ತೆಗಾರರಲ್ಲಿ ಹೇಳಿಕೊಂಡಲ್ಲಿ, ತೀರ್ಥ ಪ್ರಸಾದ ವಿತರಣೆಯ ಮೊದಲು ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಲಾಗುವುದು.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

9. ವಿಶೇಷತೆ ಇಲ್ಲದಿದ್ದರೆ ಭಕ್ತರು ಸನ್ನಿಧಿಯಲ್ಲಿ ತಮ್ಮ ಮನದಲ್ಲಿ ಬೇಡಿಕೆಯನ್ನು ಹೇಳಿಕೊಂಡು ಭಕ್ತಿಭಾವದಿಂದ ಪ್ರಾರ್ಥಿಸಲಾಗುವುದು.

10. ಮಗುವಿಗೆ ನಾಮಕರಣ ಮಾಡುವವರು ಮಗುವಿಗೆ 60 ದಿವಸವಾದ ನಂತರವೇ ದೇವರಲ್ಲಿ ನಾಮಕರಣ ಮಾಡತಕ್ಕದ್ದು.

11. ದೇವಸ್ಥಾನ ಅಭಿವೃದ್ಧಿಗೆ ಧನ ಸಹಾಯ ಮಾಡುವವರು ಭಕ್ತ ಜನ ಸಂಘದ ಕಚೇರಿಯಲ್ಲಿ ಮೊಬಲಗು ಪಾವತಿಸಿ ರಸೀತಿ ಪಡೆಯತಕ್ಕದ್ದು

ಮಾನವನ ವಿದ್ಯೆ ಐಶ್ವರ್ಯ, ಅಧಿಕಾರ, ಅಂತಸ್ತು ಎಲ್ಲವೂ ಸರ್ವ ಶಕ್ತನೂ ಸರ್ವ ಲೋಕದ ಒಡೆಯನೂ ಸರ್ವಜ್ಞನೂ ಆದ ಭಗವಂತನ ಕೃಪೆಯಿಂದ ಲಭಿಸುವುದು ಎಂಬ ಭಾವನೆ ಭಕ್ತರಲ್ಲಿ ಇರಬೇಕು. ಅದರಂತೆ ದೇವಸ್ಥಾನದಲ್ಲಿ ತನ್ನ ಸಾಮಾಜಿಕ ಸ್ಥಾನ ಮಾನಗಳ ಕುರಿತು ಸದಭಿಮಾನ, ದೇವರಲ್ಲಿ ಭಕ್ತಿ ಭಾವನೆ ಇರಬೇಕು. ದುರಭಿಮಾನ, ಇತರರ ಮುಂದೆ ತನ್ನ ಅಧಿಕಾರ ಅಂತಸ್ತುಗಳ ಪ್ರದರ್ಶನ ಇವುಗಳು ಎಲ್ಲೂ ಕೂಡ ಇರಬಾರದು. ಈ ಪವಿತ್ರ ಕ್ಷೇತ್ರವನ್ನು ರಕ್ಷಿಸಿ ಪೋಷಿಸುವುದು ನಮ್ಮೆಲ್ಲರ ಕರ್ತವ್ಯ

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಮನವಿ: ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತ ಜನಸಂಘ, ತಕ್ಕ ಮುಖ್ಯಸ್ಥರು.

ಮನವಿ

  • ಇದು ಪವಿತ್ರ ದೇವಸ್ಥಾನ…..ಪ್ರವಾಸಿ ತಾಣವಲ್ಲ…… This is a Sacred Temple Not a Tourist Spot
  • ಮೊಬೈಲ್ ಬಳಸುವುದನ್ನು ಮತ್ತು ಪೋಟೋ ತೆಗೆಯುವುದನ್ನು ನಿಷೇದಿಸಲಾಗಿದೆ – Use of Mobile Phones and Photography are Prohibited
  • ಶಾಂತತೆಯನ್ನು ಕಾಪಾಡಿ -Maintain Silence
  • ಶುಚಿತ್ವವನ್ನು ಕಾಪಾಡಿ – Keep Temple Premises Clean
  • ಪೂಜೆಗಿಂತ ಮೊದಲು ಸೇವಾ ರಶೀದಿಯನ್ನು ಪಡೆದುಕೊಳ್ಳಿ – Obtain Seva Tickets Before Pooja
  • ಹೊರಗಿನಿಂದ ತಂದ ತಿಂಡಿ ತಿನಿಸುಗಳನ್ನು ದೇವಸ್ಥಾನದ ಒಳಗೆ ತಿನ್ನಬಾರದು – Outside Food & snacks are not Allowed inside The Temple Premises
  • ಹರಕೆ ಕಾಣಿಕೆಗಳನ್ನು ಹುಂಡಿಯಲ್ಲೇ ಹಾಕತಕ್ಕದ್ದು – Put Your Offerings in The Temple Hundi Only
  • ಸಾಂಪ್ರದಾಯಿಕ ಉಡುಪಿನಲ್ಲಿ ಬರಬೇಕು, ತುಂಡುಡುಗೆ ನಿಷೇಧಿಸಿದೆ – Please Follow Traditional dress code, Indecent dress are not allowed
  • ದೇವಸ್ಥಾನಕ್ಕೆ ಹರಕೆ ಕಾಣಿಕೆಗಳನ್ನು ಅರ್ಪಿಸುವವರು ಪಾರುಪತ್ಯಗಾರರಿಂದ ರಶೀದಿಯನ್ನು ಪಡೆದುಕೊಳ್ಳತಕ್ಕದ್ದು –  Those Who want to Give Offerings must take Proper Receipts From the Counter
  • ದೇವಸ್ಥಾನದ ಅಭಿವೃದ್ಧಿಗೆ ಧನಸಹಾಯ ಮಾಡುವವರು ಭಕ್ತಜನ ಸಂಘದ ಕಛೇರಿಯಲ್ಲಿ ರಶೀದಿಯನ್ನು ಪಡೆದುಕೊಳ್ಳತಕ್ಕದ್ದು –  Those Who want to donate for the Progress of the temple must take receipt from Bhaktha jana sangha Office
  • ಭಕ್ತಾಧಿಗಳು ದರ್ಶನಕ್ಕಾಗಿ ಸಾಲಿನಲ್ಲಿ ಬರಬೇಕು – Devotees are Requested to Come In Queue for Darshan
  • ಪೂಜೆ ಮತ್ತು ಸೇವಾ ರಶೀದಿಗಳು ಅರ್ಚಕರಲ್ಲಿ ದೊರೆಯುವುದಿಲ್ಲ – Pooja & Seva Receipts are Not Available with The Archaks
  • ಅನ್ಯ ವಿಚಾರಗಳನ್ನು ಮಾತನಾಡಬೇಡಿ – Avoid Chatting in the Temple
  • ದೇವಸ್ಥಾನದ ಆವರಣದೊಳಗೆ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ – Using Plastic in The Temple Premises is Strictly Prohibitedದೇವಸ್ಥಾ
  • ದೇವಾಲಯದ ಆವರಣದೊಳಗೆ ಉಗುಳಬಾರದು – Spitting Inside The Temple Premises is Strictly Prohibited

ಮನವಿ: ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತ ಜನಸಂಘ, ತಕ್ಕ ಮುಖ್ಯಸ್ಥರು.

ಭಕ್ತಾಧಿಗಳ ಗಮನಕ್ಕೆ

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

1. ‘ತುಲಾಭಾರ ಸೇವೆ’ ಹರಕೆ ತೀರಿಸಲು ಬರುವ ಭಕ್ತಾಧಿಗಳು ತಮ್ಮ ಸೇವೆಗೆ ನಿಗಧಿಯಾದ ಒಂದು ದಿನ ಮುಂಚಿತವಾಗಿ ತಮ್ಮ ತೂಕದ ಅಕ್ಕಿಯನ್ನು (ತುಲಾಭಾರ ಸೇವಾಪಟ್ಟಿಯಲ್ಲಿರುವಂತೆ ಇವರ ಸಾಮಗ್ರಿಗಳೊಂದಿಗೆ) ದೇವಸ್ಥಾನದ ವಾಯುವ ಭಾಗದ ದ್ವಾರದ ಬಳಿ ತಂದು ದೇವಸ್ಥಾನದಲ್ಲಿ ಇರಿಸಬೇಕು.

2. ವಾಹನದಿಂದ ಇಳಿಸಿ ದೇವಸ್ಥಾನದ ಒಳಗೆ ತರಲು ಕೈಗಾಡಿ (Trolly) ಗಳ ವ್ಯವಸ್ಥೆ ಇದೆ. ಈ ಕಾರ್ಯಕ್ಕೆ ಸಹಾಯಕರು ಬೇಕಾದಲ್ಲಿ ಪಾರುಪತ್ಯೆಗಾರರನ್ನು ಸಂಪರ್ಕಿಸಬಹುದು.

3. ಭಕ್ತಾಧಿಗಳು ತುಲಾಭಾರ ಸೇವೆಗೈದು ಇಟ್ಟಂತಹ ಅಕ್ಕಿಯಲ್ಲಿ ಪುನಃ ಇನ್ನೊಬ್ಬರ ತುಲಾಭಾರ ತೂಗುವಂತಿಲ್ಲ ಇದು ದೇವಸ್ಥಾನದ ಸಂಪ್ರದಾಯಕ್ಕೆ ವಿರುದ್ಧ ಹಾಗೂ ಪೂಜಾಫಲ ಸಂಪೂರ್ಣ ಲಭ್ಯವಾಗುವುದಿಲ್ಲ ಎಂಬುದು ಪದ್ಧತಿ.

4. ತುಲಾಭಾದ ಮಾಗುವ ದಿನ ಭಕ್ತಾಧಿಗಳು ಶುಭ್ರ ಶ್ವೇತ ವಸ್ತ್ರ ಧರಿಸತಕ್ಕದ್ದು ಹಾಗೂ ಕನಿಷ್ಠ ಪಕ್ಷ 7 ದಿವಸಗಳಿಂದ ಸಸ್ಯಹಾರಿಗಳಾಗಿರಬೇಕು.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

5. ತುಲಾಭಾರದ ಸಮಯದಲ್ಲಿ ಹೆಂಗಸರು ತಲೆಕೂದಲನ್ನು ಒಪ್ಪ ಓರಣದಿಂದ ಕಟ್ಟರ ತಕ್ಕದ್ದು.

6. ಸೂತಕ ಪೊಲೆಂದಲೆ ಇರುವ ಕುಟುಂಬದ ಸದಸ್ಯರು ತುಲಾಭಾರ ತೂಗುವಂತಿಲ್ಲ.

7. ಯಾವುದೇ ಜಾತಿ ಮತ ಭೇಧವಿಲ್ಲದೆ ಮೇಲೆ ತಿಳಿಸಿದ ನಿಭಂಧನೆಗಳಿಗೆ ಅನುಗುಣವಾಗಿ ಭಕ್ತಾಧಿಗಳು ಬಂದು ತುಲಾಭಾರ ಸೇವೆಗೈದು ದೇವರ ಕೃಪಾಶೀರ್ವಾದ ಹೊಂದಲು ಕೋರಲಾಗಿದೆ.

8. ತುಲಾಭಾರ ಸೇವೆಗೈಯ್ಯುವ ಸಂಧರ್ಭ ಭಕ್ತಾಧಿಗಳು ಮೊಬೈಲ್ ಬಳಸುವಂತಿಲ್ಲ, ವೀಡಿಯೋಗ್ರಾಫಿ ಮಾಡುವಂತಿಲ್ಲ. ವಿಶೇಷ ಸಂಧರ್ಭಗಳಲ್ಲಿ ದೇವಸ್ಥಾನದ ಪಾರುಪತ್ಯೆಗಾರರ ಅನುಮತಿ ಪಡೆಯತಕ್ಕದು.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

9. ದೇವಸ್ಥಾನದ ಆಡಳಿತ ಮಂಡಳಿಯ ಅಥವಾ ಪಾರುಪತ್ಯಗಾರದ ಅನುಮತಿಯಿಲ್ಲದೆ ದೇವರ “ನಡೆ” ಯಲ್ಲಿ (ನಮಸ್ಥಾದ ಮಂಟಪದಲ್ಲಿ) ಹಾಡು, ನೃತ್ಯ, ಸಿನಿಮಾ ಶೂಟಿಂಗ್ ನಡೆಸುವಂತಿಲ್ಲ.

10. ದೇವಸ್ಥಾನದ ದೇವನಡೆಯಲ್ಲಿ ದೇವತಕರು ನಿತ್ಯ ಪೂಜೆಯ ನಂತರ ದಿನಂಪ್ರತಿ ಭಕ್ತಾಧಿಗಳ ಆಶೋತ್ತರ ಕಷ್ಟ ಕಾರ್ಪಣ್ಯಗಳ ಬಗ್ಗೆ ಭಕ್ತರ ಮನವಿಯಂತೆ ಪ್ರಾರ್ಥಿಸುವರು ಈ ಸಮಯದಲ್ಲಿ ನಿಶ್ಚಬ್ರತೆ ಕಾಪಾಡಿ ಮೊಬೈಲ್ ರಿಂಗಣವಾಗದಂತೆ ನೋಡಿಕೊಳ್ಳುವುದು.

11. “ವಸ್ತ್ರ ಸಂಹಿತೆ”ಯ ನಿಯಮವನ್ನು ಐಡ್ಡಾಯವಾಗಿ ಪಾಲಿಸುವುದು.

12. “ತುಲಾಭಾರ ಸೇವೆ” ಮಾಡಿಸುವ ಭಕ್ತಾಧಿಗಳು 15 ದಿವಸ ಮುಂಚಿತವಾಗಿ ಕಛೇರಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದು.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

13. ಮಲಾಭಾರ ಸೇವೆಯ ನೋಂದಾವಣಾ ವಿಷಯದಲ್ಲಿ ಪಾರುಪತ್ಯೆಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

14. ನಗ ನಾಣ್ಯ / ಆಭರಣ ರೂಪದಲ್ಲಿ ಹರಕೆ ಒಪ್ಪಿಸುವ ಭಕ್ತರು ಸದರಿ ಹರಕೆ ಕಾಣಿಕೆಯನ್ನು ದೇವನಡೆಯಲ್ಲಿ ದೇವತಕ್ಕರ ಸಮ್ಮುಖದಲ್ಲಿ ಪ್ರಾರ್ಥನೆ ಮಾಡಿಸಿ ಒಪ್ಪಿಸಿದ ನಂತರ ಸದರಿ ಭಕ್ತರೇ ಭಕ್ತಜನ ಸಂಘದ ಕಛೇರಿ ಅಥವಾ ವ್ಯವಸ್ಥಾಪನಾ ಸಮಿತಿ ಕಛೇರಿಯಲ್ಲಿ ಒಪ್ಪಿಸಿ ರವೀನಿ ಪಡೆಯತಕ್ಕದ್ದು.

ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತಜನ ಸಂಘ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ

ಅಧ್ಯಕ್ಷರು: 9008496136

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಪಾರು ಪತ್ಯಗಾರರು: 9611112162

  ಬರಿದಾಗುತ್ತಿರುವ ಅನ್ನದ ಬಟ್ಟಲು……… 

                           ಕೊಡಗಿಗೆ ಭತ್ತದ ಕೃಷಿಯ ಅನಿವಾರ್ಯತೆ

✍️…. ಡಾ.ವೀರೇಂದ್ರ ಕುಮಾರ್ ಕೆ.ವಿ. 

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಐ.ಸಿ.ಎ.ಅರ್ – ಕೊಡಗು ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ

ಭತ್ತವು ಕೊಡಗು ಜಿಲ್ಲೆಯ ಬಹು ಮುಖ್ಯ ಬೆಳೆ ಮತ್ತು ಅನ್ನವು ಇಲ್ಲಿನ ಜನರ ಬಹುಮುಖ್ಯ ಆಹಾರವಾಗಿದೆ. ಅಧಿಕ ಮಳೆ ಬೀಳುವ ಈ ಪ್ರದೇಶದಲ್ಲಿ ಭತ್ತದ ಬೆಳೆಯನ್ನು ಪರಂಪರಗತವಾಗಿ ಸಾಂಪ್ರದಾಯಿಕವಾಗಿ ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕುಗಳಲ್ಲಿ ಹೆಚ್ಚು ಪ್ರದೇಶದಲ್ಲಿ ಬೆಳೆಸಿಕೊಂಡು ಬರಲಾಗುತ್ತಿತ್ತು. ದಶಕಗಳ ಹಿಂದೆ ಅನ್ನದ ಬಟ್ಟಲು ಎಂದು ಕರೆಯುತ್ತಿದ್ದ ಜಿಲ್ಲೆಯು ದಿನ ಕಳೆದಂತೆ ಹಲಾವರು ಕಾರಣಗಳಿಂದ ಭತ್ತದ ಬೆಳೆಯು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು ಭತ್ತ ಬೆಳೆಯುವ ಪ್ರದೇಶವು ಗಣನೀಯವಾಗಿ ಕ್ಷೀಣಿಸುತ್ತಿದೆ. ಕೊಡಗಿನಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲು ಬೇಕಾಗಿರುವ ಕದರನ್ನು ಸಹ ಭತ್ತವನ್ನು ಬೆಳೆದಿರುವ ಬೇರೆ ರೈತರಿಂದ ತಂದು ಆಚರಿಸುವ ಪರಿಸ್ಥಿತಿ ಇಂದಿನ ದಿನದಲ್ಲಿ ನಾವು ಸಹಜವಾಗಿ ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ರೈತರು ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲು ಆಸಕ್ತಿ ಹೊಂದುತ್ತಿದ್ದು ಭತ್ತವನ್ನು ಬೆಳೆಯುವ ಪ್ರದೇಶವು ಕಡಿಮೆಯಾಗುತ್ತಿದ್ದು, ಇಳುವರಿಯಲ್ಲಿ ಕೂಡ ಇಳಿಮುಖವಾಗಿರುವುದು ಕಂಡು ಬಂದಿದೆ.

ಈ ರೀತಿಯಲ್ಲಿ ಪ್ರಮುಖ ಆಹಾರ ಬೆಳೆಯ ಕೃಷಿಯು ಕ್ಷೀಣಿಸುತ್ತಿದ್ದರೂ ಸಹ ಆಹಾರ ಸುರಕ್ಷತೆಯು ನಿರ್ವಿಘ್ನವಾಗಿ ಮುಂದುವರೆದರೆ ದೀರ್ಘಕಾಲದಲ್ಲಿ ಕೃಷಿ ವ್ಯವಸ್ಥೆಯ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಚಿಂತನೆ ನಡೆಸುವುದು ಸೂಕ್ತ. ತೀವ್ರವಾದ ಕೂಲಿ ಹಾಳುಗಳ ಸಮಸ್ಯೆ, ಉತ್ತಮವಾದ ಬೆಲೆ ಸಿಗದಿರುವುದು, ವಾತಾವರಣದ ವೈಪರೀತ್ಯ ಮತ್ತು ಕಡಿಮೆ ಪರಿಶ್ರಮದಿಂದ ಬೇರೆ ಬೆಳೆಗಳಲ್ಲಿ ಹೆಚ್ಚಿನ ಇಳುವರಿ, ಆದಾಯ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆ ಇರಿವುದರಿಂದ ಇಂದು ನಾವು ಭತ್ತವನ್ನು ಬೆಳೆಯಲು ಆಸಕ್ತಿಯನ್ನು ತೋರುತ್ತಿಲ್ಲ. ಇಂದು ಭತ್ತ ಬೆಳೆಯುವ ಗದ್ದೆಗಳನ್ನು ಸೈಟುಗಳಾಗಿ ಪರಿವರ್ತನೆ ಮಾಡಿ ಅದರಿಂದ ಬಂದ ಹಣದಿಂದ ಬೇರೆ ಬೇರೆ ವ್ಯಾಪಾರಗಳಲ್ಲಿ ತೋಡಗಿಸಿಕೊಳ್ಳುವುದರಿಂದ ಸ್ಥಳೀಯ ಭತ್ತದ ಉತ್ಪಾದನೆಗೆ ಉತ್ತೇಜನ ದೊರೆಯದೇ, ಬೆಳೆಯ ಪ್ರದೇಶವು ಕುಂಠಿತಗೊಳ್ಳುವುದರಿಂದ ಕೃಷಿಯಿಂದ ಪ್ರಭಾವಿತವಾಗಿರುವ ಇತರೆ ಅನೇಕ ಕ್ಷೇತ್ರಗಳಲ್ಲಿ ಅಸಮತೋಲನವಾಗುತ್ತೀರುವುದು ಸಹಜವಾಗಿದೆ.

ನೆಲ-ಜಲ ಸಂಬಂಧಗಳ ಮೇಲೆ ಆಗುವ ಪರಿಣಾಮಗಳು : ಭತ್ತದ ಬೆಳೆಯ ಪ್ರದೇಶವು ಹೇರಳವಾಗಿ ಇದ್ದಾಗ, ಕೇವಲ ನಾಲ್ಕು ತಿಂಗಳುಗಳಲ್ಲಿ ನಾಲ್ಕು ಸಾವಿರ ಮಿ.ಮೀ ನಂತೆ ಹಾಗೂ ಕೆಲವು ಬಾರಿ ಒಂದು ವಾರದಲ್ಲಿಯೇ ಅಧಿಕ ಮಳೆ ಬಿದ್ದಾಗ, ಬಿದ್ದ ನೀರಿನ ಹೆಚ್ಚಿನ ಭಾಗವು ಲಕ್ಷಾಂತರ ಎಕರೆ ಗದ್ದೆಗಳಲ್ಲಿ ಸಂಗ್ರಹಗೊಂಡು, ಅಲ್ಲಿ ಕೆಲಕಾಲ ನಿಂತು, ನಿಧಾನವಾಗಿ ಬಸಿಯ ರೂಪದಲ್ಲಿ ತೋಡುಗಳ ಮೂಲಕ ಮಳೆಗಾಲ ಮುಗಿದ ಮೂರು ನಾಲ್ಕು ತಿಂಗಳುಗಳ ಕಾಲ, ಅಂದರೆ ಮಾರ್ಚ್-ಏಪ್ರಿಲ್ ವರೆಗೂ ಹರಿದು ಕೆಳಗಿನ ಪ್ರದೇಶದಲ್ಲಿನ ಕೃಷಿಗೂ, ಅಂತರ್ಜಲ ವೃದ್ಧಿಗೂ ಸಹಕಾರಿಯಾಗುತ್ತದೆ. ಗದ್ದೆಗಳಲ್ಲಿ ನಿಂತ ನೀರು, ಮಳೆಯ ಹನಿಗಳು ನೆಲಕ್ಕೆ ಬೀಳುವ ರಭಸವನ್ನು ತಡೆದುಕೊಂಡು ಮಣ್ಣಿಗೆ ಹಾನಿಯಾಗದಂತೆ, ಮಣ್ಣು ಕೊಚ್ಚದಂತೆ ಅಥವಾ ಬಿರುಸಾಗದಂತೆ ತಡೆಯುತ್ತದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಭತ್ತದ ಬೆಳೆಯುವ ಪ್ರದೇಶ ಕಡಿಮೆಯಾಗಿ ಅದರ ಸ್ಥಾನದಲ್ಲಿ ತೋಟಗಾರಿಕೆ ಬೆಳೆಗಳು ಬಂದಾಗ, ಬಿದ್ದ ಮಳೆಯ ನೀರನ್ನು ಎಲ್ಲಿಯೂ ನಿಲ್ಲಲು ಅವಕಾಶ ನೀಡದೇ, ಬಸಿಗಾಲುವೆಗಳ ಮೂಲಕ ಹೊರತೆಗೆದು ನೇರವಾಗಿ ಹರಿದ ಎಲ್ಲಾ ನೀರೂ ಸಹ ಒಮ್ಮೆಲೇ ಕೆಳಗಿನ ಪ್ರದೇಶಗಳಲ್ಲಿ ಸಂಗ್ರಹಗೊಂಡು ಜಲೈ-ಆಗಸ್ಟ್ ತಿಂಗಳುಗಳಲ್ಲಿ ತೀವ್ರವಾದ ನೆರೆಯ ತೊಂದರೆಯುಂಟಾಗುತ್ತದೆ. ಭತ್ತದ ಬೆಳೆಯ ಪ್ರದೇಶÀವನ್ನು ಉಳಿಸಿಕೊಳ್ಳುವುದರಿಂದ ಮಳೆ ನೀರಿನ ಸದ್ಬಳಕೆಯಾಗಿ, ಮಳೆಗಾಲದಲ್ಲಿ ನೆರೆಯ ಹಾವಳಿಯನ್ನು ಕಡಿಮೆ ಮಾಡಬಹುದಲ್ಲದೇ, ಬೇಸಿಗೆಯಲ್ಲಿ ತೊರೆ, ತೋಡುಗಳಲ್ಲಿ ನೀರಿನ ಲಭ್ಯತೆಯು ಹೆಚ್ಚು ಕಾಲ ಇರುವಂತೆ ಮಾಡಬಹುದು, ಇದಲ್ಲದೇ ಅಂತರ್ಜಲ ವೃದ್ಧಿಗೂ ಸಹಾಯವಾಗುತ್ತದೆ.

ಉಪ ಉತ್ಪನ್ನಗಳಿಂದಾಗುವ ಲಾಭಗಳು: ಭತ್ತದ ಬೆಳೆಯಿಂದ ಕೇವಲ ಆಹಾರ ಸುರಕ್ಷತೆ ದೊರೆಯುವುದೊಂದೇ ಅಲ್ಲದೇ, ಜೊತೆಯಲ್ಲಿ ದೊರೆಯುವ ಅನೇಕ ಉಪ ಉತ್ಪನ್ನಗಳಿಂದಲೂ ಕೃಷಿಕರು ಲಾಭ ಪಡೆಯಬಹುದುದಾಗಿದೆ. ಭತ್ತದ ಹುಲ್ಲ್ಲಿಗೆ ವಿಪರೀತ ಬೇಡಿಕೆಯಿದ್ದು, ಜಾನುವಾರುಗಳಿಗೆ ಮೇವಾಗಿ ಮತ್ತು ಪ್ಯಾಕಿಂಗ್ ವಸ್ತುವಾಗಿ ಹೆಚ್ಚಾಗಿ ಬಳಸಲಾಗುತ್ತಿದೆ. ಪ್ರಸ್ತುತ ಹುಲ್ಲಿಗೆ ಇರುವ ಬೇಡಿಕೆಯನ್ನು ಬೇರೆ ಪ್ರದೇಶ ಗಳಿಂದ ಅಧಿಕ ಹಣಕ್ಕೆ ತಂದು ಪೂರೈಸಲಾಗುತ್ತಿದೆ. ಇಂದಿನ ಬೆಲೆಗಳಲ್ಲಿ ಪ್ರತಿ ಎಕರೆಯಲ್ಲಿ ದೊರೆಯುವ ಹುಲ್ಲಿನಿಂದ ಸುಮಾರು ಎರಡರಿಂದ ಎರಡುವರೆ ಸಾವಿರ ರೂ ಆದಾಯ ಪಡೆಯಬಹುದು ಅಥವಾ ತಮ್ಮ ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ರಾಸಾಯನಿಕ ರಹಿತ ಹುಲ್ಲನ್ನು ಸಹ ನೀಡಬಹುದಾಗಿದೆ.

ಸಾಮಾಜಿಕ ಲಾಭಗಳು: ಭತ್ತದ ಕೃಷಿಯು ಹೇರಳವಾಗಿ ಇದ್ದರೆ ಅದಕ್ಕೆ ಬೇಕಾಗುವ ಬೀಜ, ಗೊಬ್ಬರ, ರಾಸಾಯನಿಕಗಳು, ಕೃಷಿಯಂತ್ರಗಳು, ಉಪಕರಣಗಳು ಮೊದಲಾದವುಗಳನ್ನು ಪೂರೈಕೆ ಮಾಡುವ ಸಾಮಾಗ್ರಿಗಳ ಸರಬರಾಜುದಾರರಿಗೆ ಒಂದು ಉತ್ತಮ ಜೀವನ ಮಾರ್ಗವಾಗುತ್ತದೆ. ಹೆಚ್ಚು ಕಾರ್ಮಿಕರ ಅವಶ್ಯಕತೆ ಇದ್ದು ಸಾಮಾನ್ಯವಾಗಿ ಯಾವಾಗಲೂ ಕಾರ್ಮಿಕರ ಕೊರತೆಯೇ ಮುಖ್ಯವಾಗಿ ಕಾಣುತ್ತದೆಯಾದರೂ, ಭತ್ತದ ಕೃಷಿಯನ್ನು ಅವಲಂಬಿಸಿರುವ ಕೃಷಿಕಾರ್ಮಿಕರ ಒಂದು ವರ್ಗವೇ ಇದೆಯೆನ್ನುವುದನ್ನು ಮರೆಯಬಾರದು.ಜೊತೆಯಲ್ಲಿ ಇತ್ತೀಚೆಗೆ ಕೃಷಿ ರಂಗದಲ್ಲಿ ಆಗಿರುವ ಆವಿಷ್ಕಾರಗಳಿಂದ, ಅನೇಕ ಹೊಸ ಯಂತ್ರಗಳು ಬಳಕೆಯಲ್ಲಿ ಬಂದಿದ್ದು, ಅವುಗಳ ಬಳಕೆಗೆ, ನುರಿತ ಕೌಶಲ್ಯವುಳ್ಳ ಯುವ ಕಾರ್ಮಿಕರು ಅಥವಾ ಸೇವೆಯನ್ನು ನೀಡುವಂತಹವರು ಬೇಕಾಗಿರುವುದನ್ನು ಮನಗಾಣಬೇಕು.

ಕೃಷಿಯಾಧಾರಿತ ಆಹಾರ ಸುರಕ್ಷತೆಯೇ ಉತ್ತಮ: ಆಹಾರದ ವಿಷಯದಲ್ಲಿ ಸ್ಥಳೀಯ ಉತ್ಪಾದನೆಯ ಸುರಕ್ಷತೆಯಿರುವುದೇ ಉತ್ತಮ. ಇತರೆ ಪ್ರದೇಶÀಗಳಲ್ಲಿನ ವ್ಯವಸ್ಥೆಯ ಮೇಲೆ ಅವಲಂಬಿಸಿರುವುದು ಯಾವಾಗಲೂ ಅಪಾಯಕರ. ಅದೇ ರೀತಿ ಇತರೆ ಪ್ರದೇಶಗಳಿಗೆ ಆಹಾರ ಸಂಗ್ರಹಣೆ ದಾಸ್ತಾನು ಮತ್ತು ಸಾಗಾಣಿಕಾ ವ್ಯವಸ್ಥೆಗಳ ಮೇಲೂ ಇಂತಹ ಸೂಕ್ಷ್ಮ ವಿಷಯಗಳಲ್ಲಿ ಅವಲಂಬನೆ ಸಲ್ಲದು.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಭತ್ತದ ಕೃಷಿ ಅನಿವಾರ್ಯವಷ್ಟೇ ಅಲ್ಲ ಲಾಬಧಾಯಕವೂ ಸಹ:  ಅಧಿಕ ಇಳುವರಿ ಪಡೆಯಲು ಸಹಕಾರಿಯಾಗಿರುವ ವಾತಾವರಣ ಮತ್ತು ಮಣ್ಣುಗಳನೊಳಗೊಂಡ ಕೃಷಿ ಸನ್ನಿವೇಶವನ್ನು ಹೊಂದಿರುವ ಈ ಪ್ರದೇಶದಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ಪದ್ಧತಿಗಳೆರಡರಲ್ಲಿಯೂ ಪರಿಣಿತಿ ಹೊಂದಿರುವ ಮಾನವ ಸಂಪನ್ಮೂಲವು ಲಭ್ಯವಿದೆ. ಎಕರೆಗೆ ಇಪ್ಪತೈದು ಕ್ವಿಂಟಾಲ್ ಇಳುವರಿ ನೀಡುವ ಅನೇಕ ತಳಿಗಳು ಮತ್ತು ಅವುಗಳಿಗೆ ಸೂಕ್ತ ಉತ್ಪಾದನಾ ತಂತ್ರಜ್ಞಾನವೂ ಸಹ ಲಭ್ಯವಿದೆ. ಜಿಲ್ಲೆಯಾದ್ಯಂತಹ ಹೇರಳವಾಗಿ ಲಭ್ಯವಿರುವ ಹಸಿರೆಲೆ ಗೊಬ್ಬರವನ್ನು ಬಳಸಿಕೊಂಡು, ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರಗಳನ್ನು ಕೊಟ್ಟು, ಯಂತ್ರೋಪಕರಣಗಳನ್ನು ಬಳಸಿಕೊಂಡು ಭತ್ತದ ಕೃಷಿಯನ್ನು  ಮಾಡಿದರೆ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಮತ್ತು ವಿವಿಧ ಸಂಶೋಧನ ಕೇಂದ್ರಗಳು ಭತ್ತದ ಲಾಭದಾಯಕ ಕೃಷಿ ಪದ್ಧತಿಗಳನ್ನೂ ಕೃಷಿಕರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ.

ಇಂತಹ ಸಂದರ್ಭದಲ್ಲಿ ಕೃಷಿಕರು ಧೃತಿಗೆಡದೇ, ಭತ್ತದ ಕೃಷಿಯನ್ನು ವಾಣಿಜ್ಯ ದೃಷ್ಠಿಯಿಂದ ನೊಡದೆ ತಮ್ಮಲ್ಲಿರುವ ಭತ್ತ ಬೆಳೆಯುವ ಪ್ರದೇಶದಲ್ಲಿ ತಮ್ಮ ಮನೆಯ ಆಹಾರ ಸುಭದ್ರತೆಗಾದರು ಭತ್ತವನ್ನು ಬೆಳೆಸಿಕೊಂಡು, ಸೂಕ್ಷ್ಮ ಪರಿಸರವಾದ ಕೊಡಗಿನ ಪ್ರಾಕೃತಿಕ ಹಾಗೂ ಸಾಮಾಜಿಕ ಆರ್ಥಿಕ ಸಮತೋಲನವನ್ನು ಕಾಪಾಡಿಕೊಂಡು ಹೋಗಬೇಕೆಂದು ಕೃಷಿಕರಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇವೆೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

✍️…. ಡಾ.ವೀರೇಂದ್ರ ಕುಮಾರ್ ಕೆ.ವಿ. 

ಐ.ಸಿ.ಎ.ಅರ್ – ಕೊಡಗು ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ

Search Coorg Media
Search Coorg Media
Articles: 938
0 0 votes
Article Rating
Subscribe
Notify of
guest
0 Comments
Newest
Oldest Most Voted
0
Would love your thoughts, please comment.x
()
x