ರಥಸಪ್ತಮಿ: ಆರೋಗ್ಯದಾತ ಸೂರ್ಯದೇವನ ಆರಾಧನೆಯ ಪರ್ವಕಾಲ

ರಥಸಪ್ತಮಿ: ಆರೋಗ್ಯದಾತ ಸೂರ್ಯದೇವನ ಆರಾಧನೆಯ ಪರ್ವಕಾಲ

ಸೂರ್ಯನಿಲ್ಲದೆ ಸೃಷ್ಟಿಯಿಲ್ಲ; ಸೂರ್ಯನಿಲ್ಲದೆ ಬದುಕಿಲ್ಲ. ವಿಶ್ವದ ಸಮಸ್ತ ಜೀವರಾಶಿಗಳ ಅಳಿವು-ಉಳಿವು ಆ ಸೂರ್ಯದೇವನನ್ನೇ ಆಶ್ರಯಿಸಿದೆ. ಜಗತ್ತಿನ ಚೈತನ್ಯದ ಮೂಲವಾದ ಸೂರ್ಯನನ್ನು ನಾವು ಪ್ರತ್ಯಕ್ಷ ದೈವವೆಂದು ಪೂಜಿಸುವುದು ಕೇವಲ ಧಾರ್ಮಿಕ ನಂಬಿಕೆಯಲ್ಲ, ಅದು ವೈಜ್ಞಾನಿಕ ಸತ್ಯವೂ ಹೌದು.

ರಥಸಪ್ತಮಿ: ಆರೋಗ್ಯದಾತ ಸೂರ್ಯದೇವನ ಆರಾಧನೆಯ ಪರ್ವಕಾಲ

ಸೂರ್ಯಾರಾಧನೆಗೆ ಭಾರತೀಯ ಪರಂಪರೆಯಲ್ಲಿ ಶ್ರೇಷ್ಠ ಸ್ಥಾನವಿದ್ದು, ಅದರಲ್ಲಿ 'ರಥಸಪ್ತಮಿ' ಅತ್ಯಂತ ವಿಶೇಷವಾದ ದಿನವಾಗಿದೆ.

ರಥಸಪ್ತಮಿಯ ವಿಶೇಷತೆ

ಚಾಂದ್ರಮಾನ ಸಂವತ್ಸರದ ಹನ್ನೊಂದನೇ ಮಾಸವಾದ ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯನ್ನು 'ರಥಸಪ್ತಮಿ' ಅಥವಾ 'ಮಾಘ ಸಪ್ತಮಿ' ಎಂದು ಕರೆಯಲಾಗುತ್ತದೆ. ಸೂರ್ಯದೇವನು ತನ್ನ ಸಪ್ತಾಶ್ವಗಳನ್ನೊಳಗೊಂಡ ರಥವನ್ನೇರಿ, ಉತ್ತರಾಯಣದ ಪಥದಲ್ಲಿ ಪ್ರಖರವಾಗಿ ಸಾಗುವ ಸಂಕೇತವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಸೂರ್ಯನ ರಥಕ್ಕೆ ಏಳು ಕುದುರೆಗಳಿದ್ದು, ಅವು ಗಾಯತ್ರಿ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಮತ್ತು ಪಂಕ್ತಿ ಎಂಬ ವೇದಗಳ ಛಂದಸ್ಸುಗಳ ಹೆಸರನ್ನು ಹೊಂದಿವೆ. ಈ ರಥದ ಸಾರಥಿ ಅರುಣದೇವ.

ಪೌರಾಣಿಕ ಹಿನ್ನೆಲೆ ಮತ್ತು ಪಾಪ ವಿಮೋಚನೆ

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

"ಸಪ್ತ ಜನ್ಮನಿ ಕೃತೇ ಪಾಪಂ ಮುಕ್ತಿರ್ಭವತಿ ತತ್‌ ಕ್ಷಣಾತ್‌" ಎಂಬ ಮಾತಿನಂತೆ, ಸಪ್ತಮಿ ತಿಥಿಯಂದು ಸೂರ್ಯನನ್ನು ಭಕ್ತಿಯಿಂದ ಪೂಜಿಸಿದರೆ ಏಳು ಜನ್ಮಗಳ ಪಾಪಗಳು ನಾಶವಾಗಿ ಆಯುಷ್ಯ, ಆರೋಗ್ಯ ಮತ್ತು ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ದ್ವಾಪರ ಯುಗದಲ್ಲಿ ಶ್ರೀಕೃಷ್ಣನು ಧರ್ಮರಾಜನಿಗೆ ರಥಸಪ್ತಮಿಯ ಮಹತ್ವವನ್ನು ವಿವರಿಸಿದ ಕಥೆಯಿದೆ. ಜನ್ಮತಃ ರೋಗಿಯಾಗಿದ್ದ ಯಶೋವರ್ಮ ರಾಜನ ಪುತ್ರನು ಈ ವ್ರತದ ಪ್ರಭಾವದಿಂದ ಆರೋಗ್ಯವಂತನಾದನೆಂದು ಪುರಾಣಗಳು ಹೇಳುತ್ತವೆ.

ಆರೋಗ್ಯದ ದೃಷ್ಟಿಯಿಂದ ಸೂರ್ಯಾರಾಧನೆ

ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯ ಭಾಗ್ಯವನ್ನು ನೀಡುವವನೇ ಸೂರ್ಯದೇವ. "ಆರೋಗ್ಯಂ ಭಾಸ್ಕರಾದಿಚ್ಛೇತ್" ಎಂಬ ನಾಣ್ಣುಡಿಯೇ ಇದೆ. ಸೂರ್ಯನ ಕಿರಣಗಳು ರೋಗನಿರೋಧಕ ಶಕ್ತಿಯನ್ನು ಹೊಂದಿವೆ. ಮುಂಜಾನೆಯ ಎಳೆ ಬಿಸಿಲಿನಲ್ಲಿ ಸ್ನಾನ ಮಾಡುವುದು ಮತ್ತು ಸೂರ್ಯ ನಮಸ್ಕಾರ ಮಾಡುವುದರಿಂದ ಚರ್ಮವ್ಯಾಧಿಗಳು ದೂರವಾಗಿ ದೇಹವು ಚೈತನ್ಯದಾಯಕವಾಗುತ್ತದೆ.

ಪ್ರಕೃತಿ ಮತ್ತು ಕಾಲದ ಪರಿವರ್ತನೆ

ರಥಸಪ್ತಮಿಯು ಪ್ರಕೃತಿಯ ಪರಿವರ್ತನೆಯ ಸಂಧಿಕಾಲವೂ ಹೌದು. ಚಳಿಗಾಲದ ಕೊನೆ ಮತ್ತು ವಸಂತ ಕಾಲದ ಮುನ್ಸೂಚನೆಯಾಗಿ ಈ ಹಬ್ಬವು ಬರುತ್ತದೆ. ಮರಗಿಡಗಳು ಹಳೆಯ ಎಲೆಗಳನ್ನು ಉದುರಿಸಿ ಹೊಸ ಚಿಗುರುಗಳನ್ನು ಧರಿಸುವ ಕಾಲವಿದು. ಸೂರ್ಯನು ದಕ್ಷಿಣ ಧ್ರುವದ ಪಯಣ ಮುಗಿಸಿ ಉತ್ತರ ಧ್ರುವದ ಕಡೆಗೆ ಸರಿಯುವ ಪ್ರಕ್ರಿಯೆ ಇಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಭವಕ್ಕೆ ಬರುತ್ತದೆ.

ಲೇಖಕರು: ಕಾನತ್ತಿಲ್‌ ರಾಣಿ ಅರುಣ್
5 1 vote
Article Rating
Subscribe
Notify of
guest
1 Comment
Oldest
Newest Most Voted
Inline Feedbacks
View all comments
Sathisha B
Sathisha B
17 days ago

ಸೂರ್ಯನ ಆರಾಧನೆ ಮಾಡುವುದು ಈ ಜನ್ಮದಲ್ಲಿ ಇರುವಂಥ ನಮ್ಮೆಲ್ಲರ ಪುಣ್ಯ ಸಕಲ ಜೀವಿಗಳು ಬೆಳಕಿಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲ. ಆ ನಮ್ಮ ಪ್ರಿಯಾ ಭಗವಂತರಿಗೆ ಕೋಟಿ ಕೋಟಿ ಶಿರ ಶಾಸ್ತಾಂಗ ನಮಸ್ಕಾರಗಳು 🙏

error: Content is protected !!
1
0
Would love your thoughts, please comment.x
()
x