ಕೊಡಗಿನ ಶೈಕ್ಷಣಿಕ ಕ್ಷೇತ್ರದ ಹೊಸ ಆಶಾಕಿರಣ: ಶ್ರೀಮತಿ ಪೂಜಾ ಸಜೇಶ್
Pooja Sajesh Bio

ಕೊಡಗಿನ ಶೈಕ್ಷಣಿಕ ಕ್ಷೇತ್ರದ ಹೊಸ ಆಶಾಕಿರಣ: ಶ್ರೀಮತಿ ಪೂಜಾ ಸಜೇಶ್

New Ray of Hope in Kodagu's Educational Field: Mrs. Pooja Sajesh

"ಒಂದು ಹೆಣ್ಣು ಮಗಳು ವಿದ್ಯಾವಂತರಾದರೆ ಒಂದು ವಿಶ್ವವಿದ್ಯಾನಿಲಯವೇ ತೆರೆದಂತೆ" ಎಂಬ ಮಾತು ಶ್ರೀಮತಿ ಪೂಜಾ ಸಜೇಶ್ ಅವರ ಜೀವನಕ್ಕೆ ಅನ್ವರ್ಥವಾಗಿದೆ. ಸಮಾಜ ಸೇವೆಯನ್ನು ಕೇವಲ ಕರ್ತವ್ಯವೆಂದು ಭಾವಿಸದೆ, ಅದನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಿರುವ ಪೂಜಾ ಅವರು ಕೊಡಗಿನ ಹೆಮ್ಮೆಯ ಸಾಧಕಿಯಾಗಿ ಹೊರಹೊಮ್ಮಿದ್ದಾರೆ.
"When a girl child is educated, it's like a university is opened"—this saying is perfectly suited to the life of Mrs. Pooja Sajesh. Considering social service not just a duty but an integral part of life, she has emerged as a proud achiever of Kodagu.
ಕೊಡಗಿನ ಶೈಕ್ಷಣಿಕ ಕ್ಷೇತ್ರದ ಹೊಸ ಆಶಾಕಿರಣ: ಶ್ರೀಮತಿ ಪೂಜಾ ಸಜೇಶ್

ಬಾಲ್ಯ ಮತ್ತು ಶೈಕ್ಷಣಿಕ ಹಿನ್ನೆಲೆ Childhood and Educational Background

ಮೈಸೂರಿನಲ್ಲಿ ಹುಟ್ಟು ಬೆಳೆದ ಪೂಜಾ ಅವರು ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಸಾಂಸ್ಕೃತಿಕ ನಗರಿಯಲ್ಲೇ ಪೂರೈಸಿದರು. ಬಳಿಕ ಬೆಂಗಳೂರಿನಲ್ಲಿ ಎಂ.ಬಿ.ಎ (MBA) ಪದವಿ ಪಡೆದರು. ವಿವಾಹದ ನಂತರ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಬೂದಿಮಾಳದಲ್ಲಿ ನೆಲೆಸಿರುವ ಇವರು, ಕೇವಲ ಗೃಹಿಣಿಯಾಗಿ ಸೀಮಿತವಾಗದೆ ಸಮಾಜದ ಜವಾಬ್ದಾರಿಯುತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

Born and raised in Mysore, Pooja completed her primary, high school, and college education in the cultural city itself. Later, she obtained an MBA degree in Bangalore. After marriage, she settled in Budimala, Virajpet Taluk, Kodagu, identifying herself as a responsible member of society.

ವೃತ್ತಿಜೀವನ ಮತ್ತು ಮಾಧ್ಯಮ ಕ್ಷೇತ್ರ Career and Media Field

ಶಿಕ್ಷಣದ ಬಳಿಕ ಪೂಜಾ ಅವರು ಮಾಧ್ಯಮ ಮತ್ತು ಕಾರ್ಪೊರೇಟ್ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ:

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

Following her education, Pooja made significant achievements in the media and corporate sectors:

  • ಮಾಧ್ಯಮ ಲೋಕ: ಜೀ ಕನ್ನಡ, ಸುವರ್ಣ ಕನ್ನಡ ಮತ್ತು ಉದಯ ಚಾನೆಲ್‌ಗಳಲ್ಲಿ "ನಿವೆಲ್ಲೋ ನಾವೆಲ್ಲೋ" ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
  • Media World: Successfully hosted the "Nivello Navello" program on Zee Kannada, Suvarna Kannada, and Udaya channels.
  • ಅಭಿನಯ: ಕಿರುತೆರೆಯ ನಟಿಯಾಗಿ ವಿವಿಧ ಧಾರಾವಾಹಿಗಳಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
  • Acting: Gained audience appreciation as a television actress in various serials.
  • ಪತ್ರಿಕೋದ್ಯಮ: ಹೆಸರಾಂತ ಸುದ್ದಿ ವಾಹಿನಿ ಟಿ.ವಿ. 9 (TV9) ನಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ.
  • Journalism: Experience working with the famous news channel TV9.
  • ಕಾರ್ಪೊರೇಟ್: HSBC ಬ್ಯಾಂಕ್‌ನಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ (HR) ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
  • Corporate: Experience working as an HR Officer at HSBC Bank.
ವೃತ್ತಿ ಜೀವನ

ಸಂಕಷ್ಟದ ಸಮಯದಲ್ಲಿ ಆಸರೆಯಾದ ಜೀವಾಳ Support During Times of Distress

2018ರ ಭೂಕುಸಿತ ಮತ್ತು 2019ರ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಇವರು ತೋರಿದ ಮಾನವೀಯತೆ ಅನನ್ಯ:

The humanity shown during the 2018 landslides and the 2019 COVID-19 pandemic is unique:

  • ಭೂಕುಸಿತ: ಸ್ವಂತ ಖರ್ಚಿನಲ್ಲಿ ಜೆಸಿಬಿ ವ್ಯವಸ್ಥೆ ಮಾಡಿ ಮಣ್ಣು ತೆರವುಗೊಳಿಸುವ ಕಾರ್ಯದಲ್ಲಿ ಭಾಗಿಯಾದರು. ಕಾಳಜಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿದರು.
  • Landslides: Arranged JCB at personal expense to clear soil and provided basic amenities to relief centers.
  • ಆರೋಗ್ಯ ಸೇವೆ: ಬೂದಿಮಾಳ, ಆರ್ಜಿ, ತೋರ ವ್ಯಾಪ್ತಿಯಲ್ಲಿ ಕ್ಲಿನಿಕ್ ತೆರೆದು ನರ್ಸಿಂಗ್ ಅಧಿಕಾರಿ ನೇಮಿಸುವ ಮೂಲಕ ಹಳ್ಳಿಯ ಜನರಿಗೆ ಆರೋಗ್ಯದ ಭರವಸೆ ನೀಡಿದರು.
  • Health Services: Opened clinics in Budimala, Arji, and Thora regions, appointing nursing officers to provide health security.

ಸರ್ಕಾರಿ ಶಾಲೆಯ ಪುನಶ್ಚೇತನ Government School Renovation

ರಾಮನಗರ ಸರ್ಕಾರಿ ಹೈಸ್ಕೂಲ್ ಶಾಲೆಯನ್ನು ಶೇಕಡಾ 60% ರಷ್ಟು ರಿಪೇರಿ ಮಾಡಿಸಿ, ಸಿ.ಎಸ್.ಆರ್ (CSR) ಫಂಡ್ ಮೂಲಕ ಶಾಲೆಯ ಚಿತ್ರಣವನ್ನೇ ಬದಲಿಸಿದರು. ಕನ್ನಡದ ಜೊತೆಗೆ ಇಂಗ್ಲಿಷ್ ಮಾಧ್ಯಮ ಆರಂಭಿಸಿ, 90 ಮಕ್ಕಳಿಗೆ ಅನುಕೂಲವಾಗುವಂತೆ ಆಂಗ್ಲ ಶಿಕ್ಷಕರನ್ನು ನೇಮಿಸಿ ಅವರಿಗೆ ಸ್ವಂತ ಹಣದಿಂದ ವೇತನ ಪಾವತಿಸುತ್ತಿದ್ದಾರೆ.

She repaired Ramanagara Govt High School by 60% and changed its landscape using CSR funds. She started English medium along with Kannada and personally pays salaries for English teachers for 90 students.

ಲಿಟಲ್ ಸ್ಕಾಲರ್ ಅಕಾಡೆಮಿ Little Scholar Academy

ಏಪ್ರಿಲ್ 2023ರಲ್ಲಿ ವಿರಾಜಪೇಟೆ ಸಮೀಪದ ಮಗ್ಗುಲ ಗ್ರಾಮದಲ್ಲಿ 'ಲಿಟಲ್ ಸ್ಕಾಲರ್ ಅಕಾಡೆಮಿ' ಪ್ರಾರಂಭಿಸಿದರು. ಪ್ರಸ್ತುತ 150ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.

In April 2023, she started 'Little Scholar Academy' in Maggula village. Currently, over 150 children study here.

ಚಟುವಟಿಕೆ 1 ಚಟುವಟಿಕೆ 2
  • ಸಮಗ್ರ ಬೆಳವಣಿಗೆ: ಚಲನಚಿತ್ರ ನಟಿ ಶ್ವೇತಾ ಶ್ರೀವಾತ್ಸವ್ ಸೇರಿದಂತೆ ಹಲವು ಗಣ್ಯರು ಇಲ್ಲಿನ ಶೈಕ್ಷಣಿಕ ಪದ್ಧತಿಯನ್ನು ಮೆಚ್ಚಿಕೊಂಡಿದ್ದಾರೆ.
  • Holistic Growth: Many dignitaries, including actress Shwetha Srivatsav, have appreciated the system.
  • ವ್ಯಕ್ತಿತ್ವ ವಿಕಸನ: ಮಧ್ಯಾಹ್ನದ ನಂತರ ಹೊಲಿಗೆ, ಹೆಣಿಗೆ, ತೋಟಗಾರಿಕೆ ಮತ್ತು ಕರಕುಶಲ ತರಬೇತಿ ನೀಡಲಾಗುತ್ತದೆ.
  • Personality: Afternoon training in tailoring, knitting, gardening, and crafts.
  • ನೂತನ ಕ್ಯಾಂಪಸ್: ಬಿಟ್ಟಂಗಾಲದ ನಾಂಗಲದಲ್ಲಿ ಸುಸಜ್ಜಿತ ಕಟ್ಟಡ 2026ರ ಜೂನ್‌ ತಿಂಗಳಿನಲ್ಲಿ ಲೋಕಾರ್ಪಣೆಗೊಳ್ಳಲಿದೆ.
  • New Campus: A well-equipped building in Nangala will be inaugurated in June 2026.
📞 ಅಕಾಡೆಮಿಯ ಸಂಪರ್ಕಕ್ಕಾಗಿ: 📞 For Academy Contact: 7019804689

ಕುಟುಂಬದ ಹಿನ್ನೆಲೆ Family Background

ತಂದೆ: Father: ರವೀಂದ್ರ
ತಾಯಿ: Mother: ಪರಮೇಶ್ವರಿ
ಪತಿ: Husband: ಸಜೇಶ್
ಮಗ: Son: ವಿಹಾನ್

"ತಳಮಟ್ಟದಿಂದ ಬೆಳೆದರೆ ಮಾತ್ರ ಜೀವನದ ಮೌಲ್ಯ ತಿಳಿಯುತ್ತದೆ" ಎಂದು ನಂಬಿರುವ ಪೂಜಾ ಸಜೇಶ್ ಅವರು ಕೊಡಗಿನ ಭರವಸೆಯ ಬೆಳಕಾಗಿದ್ದಾರೆ. "Value of life is understood only when one grows from the grassroots." Mrs. Pooja Sajesh is a ray of hope for Kodagu.

5 1 vote
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x