“Coffee is not just a drink, it’s a sensation”: ‘Benki’ Suhas gives a new touch to the world of coffee “ಕಾಫಿ ಎನ್ನುವುದು ಕೇವಲ ಪಾನೀಯವಲ್ಲ, ಅದು ಒಂದು ಸಂವೇದನೆ”: ಕಾಫಿ ಲೋಕಕ್ಕೆ ಹೊಸ ಸ್ಪರ್ಶ ನೀಡಿದ ‘ಬೆಂಕಿ’ ಸುಹಾಸ್
"Coffee is not just a drink, it's a sensation": 'Benki' Suhas gives a new touch to the world of coffee
☕ "Search Coffee" Digital Magazine: Special Interview ☕
An insightful conversation with the founder of Benki Coffee.
☕. How did your coffee journey begin? What was the inspiration behind choosing 'coffee' as your career?
I have been in the industry for about 15 years. My entry was inspired by the late Siddhartha sir. He opened the second Cafe Coffee Day outlet near my house in Jayanagar 7th block, Bangalore. I used to cycle past it every day, saving my pocket money for two weeks just to buy a 50-rupee cappuccino. It was a celebration for me. Seeing wealthy kids hanging out there with their cars and bikes made me want to dress up and be a part of that culture. Since my school days, I planned to open a cafe. After my Masters, I worked in the Middle East and saw the global coffee culture. I realized there is an in-depth science to coffee beyond what I knew and started studying intensely. I finished my diploma and began judging international and Indian coffee competitions. I returned to India in 2017 and founded Benki Coffee and Benki Brewing Tools. Eventually, I set up the school and developed my own plantation. 🚲
☕. What is the significance behind the name 'Benki' (Fire)? Why choose this name for your brands?
In my hometown Tarikere, 'Benki' is used as a synonym for awesome, amazing, or superb. I grew up hearing "Maga, Benki agide!" to describe something great. So 'Benki Coffee' literally means 'Awesome Coffee'. Historically, in the 16th century, coffee shops were centers of political revolution, not just places for couples to hang out. Intellectuals and freedom fighters met there for deep discussions, leading to their ban in Europe for decades. I wanted my cafe to be an intellectual hub. 'Benki' also signifies the internal 'fire' required to fight injustice, corruption, and bribery. I wanted our cafe to be a place of revolution. 🔥
☕. What innovations have you introduced to coffee cultivation through 'BENKI ESTATE'?
At Benki Estate, we use a 100% sprinkler system that works entirely on gravity. We are also 100% off-grid using solar energy for our pumps and operations, minimizing the use of government power. We maintain wide spacing between plants so small tractors can be used for applying medicines and fertilizers. We also plan to grow pepper on stone pillars using modern drip irrigation in the future. ☀️
Lush views from Benki Estate
☕. What advice would you give to Indian coffee growers to shift toward 'Specialty Coffee'?
The market is volatile, and my dream is for every Indian farm to shift to specialty coffee. Specialty coffee lets us escape the commodity price trap of the NY/London exchanges and create our own brand value, much like a BMW or Mercedes car. Specialty markets offer a premium of at least 150 to 200 rupees over market rates. I suggest treating a farm like a factory—if my cost of production is 100 rupees, I can sell for 150 because that margin allows for infrastructure development and replanting. I suggest farmers convert at least 10-20% of their crop to specialty each year. 💎
☕. What is the core objective behind the 'Specialty Coffee Academy of India'?
In 2017, when I started selling specialty equipment, everyone laughed at me because knowledge levels were very low in India despite high global demand. There were no quality-focused roasters or cafes. I decided to start a school to educate cafe owners, roasters, and farmers. When the supply chain is educated, everyone rises together. Today, many leading coffee brand owners, CEOs, and GMs in India are our former students. 🎓
Quality analysis during a Tasting Session
☕. What are the challenges as a distributor? How can equipment transform coffee?
The right equipment significantly transforms the taste of coffee. However, the biggest challenge is logistics. Safety and timely delivery in India aren't as developed; we often see packages being mishandled or even stepped on by couriers. We have to invest heavily in reinforced packaging. Furthermore, India is like multiple countries in one; every state has different laws, languages, and business cultures. Managing HR and the complex paperwork required for simple transactions in such a market is a major challenge. 📦
☕. How successful has the 'Indian AeroPress Championship' been in uniting the community?
We started this in 2018 to build a community and share knowledge where previously there was rivalry. The AeroPress competition is accessible—anyone from software engineers to housewives or doctors can participate. It is now the world's biggest AeroPress championship with 630 contestants across 13 cities. Last year, India achieved 3rd place in the world finals for the first time. We hope to expand this to 2000-3000 people across all states. 🏆
☕. How is 'Benki Coffee' making an impact? What makes your roasting unique?
We don't promote a 'sit-down' culture or offer free Wi-Fi/AC/Music focus; our cafe is directed entirely toward the coffee itself. We use a state-of-the-art 'Stronghold' roaster from Korea. It uses three types of heat transfer: drum heat, hot air, and halogen (IR) heaters. This allows us to create unique flavor profiles and bring out flavors that others simply cannot. ☕
Suhaas operating the precision Stronghold roaster
☕. What is your opinion on Search Coorg Media’s 'Search Coffee' campaign?
Any media channel promoting coffee progress is close to my heart. Many people think Coorg only has commercial Robusta, but Search Coorg Media is showing that we have amazing Specialty Robusta and Arabica too. We need to encourage our farmers to grow more to prevent future coffee shortages and avoid unnecessary imports. 🌿
☕. What message do you have for young Indian entrepreneurs?
There is no better time than now to enter the Indian coffee industry. Foreign companies are investing every six months. We have the potential and the talent. Every part of the supply chain—farming, trading, roasting, training—has huge potential. Even a basic barista can earn 20-25k today, which is often more than what engineers or graduates start with. Don't delay; take benefit of this growth trajectory. 🚀
Brand Directory
Premium roasted coffee beans focused on unique flavor profiles and sustainable sourcing.
"ಕಾಫಿ ಎನ್ನುವುದು ಕೇವಲ ಪಾನೀಯವಲ್ಲ, ಅದು ಒಂದು ಸಂವೇದನೆ": ಕಾಫಿ ಲೋಕಕ್ಕೆ ಹೊಸ ಸ್ಪರ್ಶ ನೀಡಿದ 'ಬೆಂಕಿ' ಸುಹಾಸ್
☕ "Search Coffee" ಡಿಜಿಟಲ್ ಮ್ಯಾಗಜೀನ್: ವಿಶೇಷ ಸಂದರ್ಶನ ☕
ಭಾರತೀಯ ಕಾಫಿ ಲೋಕದ ಕ್ರಾಂತಿಕಾರಿ ಉದ್ಯಮಿಯೊಂದಿಗೆ ಒಂದು ಆಪ್ತ ಮಾತುಕತೆ.
☕. ನಿಮ್ಮ ಕಾಫಿ ಪಯಣ ಆರಂಭವಾಗಿದ್ದು ಹೇಗೆ? ಒಬ್ಬ ಉದ್ಯಮಿಯಾಗಿ ಕಾಫಿಯನ್ನೇ ನಿಮ್ಮ ವೃತ್ತಿಜೀವನವನ್ನಾಗಿ ಆರಿಸಿಕೊಳ್ಳಲು ಪ್ರೇರಣೆ ಏನು?
ನಾನು ಸುಮಾರು 15 ವರ್ಷದಿಂದ ಇಂಡಸ್ಟ್ರಿನಲ್ಲಿದ್ದೀನಿ. ನಾನು ಈ ಕ್ಷೇತ್ರಕ್ಕೆ ಬರಲು ಕಾರಣ ನಮ್ಮ ಸಿದ್ಧಾರ್ಥ ಸರ್ ಅವರು. ಬೆಂಗಳೂರಿನ ಜಯನಗರ ಏಳನೇ ಬ್ಲಾಕ್ನಲ್ಲಿ ನಮ್ಮ ಮನೆ ಹತ್ತಿರ ಕೆಫೆ ಕಾಫಿ ಡೇಯ ಎರಡನೇ ಶಾಖೆ ಓಪನ್ ಆಗಿತ್ತು. ನಾನು ದಿನಾಲು ಅದರ ಮುಂದೆ ಸೈಕಲ್ನಲ್ಲಿ ಹೋಗ್ತಿದ್ದೆ. ಪ್ರತಿ ಎರಡು ವಾರಕ್ಕೊಮ್ಮೆ 50 ರೂಪಾಯಿ ಪಾಕೆಟ್ ಮನಿ ಕೂಡಿಟ್ಟುಕೊಂಡು ಅಲ್ಲಿ ಕ್ಯಾಪುಚಿನೋ ಕುಡಿಯುತ್ತಿದ್ದೆ. ಅದು ನನಗೊಂದು ಸಂಭ್ರಮದ ವಿಷಯ. ಯಾಕೆ ಅಂದ್ರೆ ನಮ್ಮ ಏರಿಯಾದಲ್ಲಿರೋ ಶ್ರೀಮಂತರ ಮಕ್ಕಳೆಲ್ಲಾ ಕಾರು, ಬೈಕುಗಳಲ್ಲಿ ಅಲ್ಲಿಗೆ ಬಂದು ಹ್ಯಾಂಗ್ ಔಟ್ ಮಾಡ್ತಿದ್ರು. ಅದನ್ನ ನೋಡಿ ನನಗೂ ಮನೆಗೆ ಹೋಗಿ ರೆಡಿಯಾಗಿ ಒಳ್ಳೆ ಬಟ್ಟೆ ಹಾಕಿ ಅಲ್ಲಿ ಹೋಗಿ ಕಾಫಿ ಕುಡಿಯೋ ಆಸೆ ಇತ್ತು. ಸ್ಕೂಲ್ ದಿನಗಳಲ್ಲೇ ದೊಡ್ಡವನಾದ ಮೇಲೆ ಒಂದು ಕೆಫೆ ಓಪನ್ ಮಾಡಬೇಕು ಅನ್ನೋ ಪ್ಲಾನ್ ಇತ್ತು. ಮಾಸ್ಟರ್ಸ್ ಮುಗಿದ ಮೇಲೆ ಮಿಡಲ್ ಈಸ್ಟ್ನಲ್ಲಿ ಕೆಲಸ ಸಿಕ್ತು, ಅಲ್ಲಿ ಹೋದಾಗ ಗ್ಲೋಬಲ್ ಕಾಫಿ ಕಲ್ಚರ್ ಮತ್ತು ಒಳ್ಳೆ ಕಾಫಿ ಶಾಪ್ಗಳನ್ನು ನೋಡಿದೆ. ಆಗ ನನಗೆ ಅರ್ಥವಾಯಿತು ಕಾಫಿಯಲ್ಲಿ ಕೇವಲ ನಾನು ತಿಳ್ಕೊಂಡಿದ್ದಕ್ಕಿಂತ ಇನ್ನೂ ತುಂಬಾ ಆಳವಾದ ವಿಜ್ಞಾನ ಇದೆ ಅಂತ. ಅದರ ಬಗ್ಗೆ ತುಂಬಾ ಓದಿ ಡಿಪ್ಲೊಮ ಮುಗಿಸಿದೆ, ಆಮೇಲೆ ಅಂತರಾಷ್ಟ್ರಿಯ ಮತ್ತು ಭಾರತೀಯ ಕಾಫಿ ಸ್ಪರ್ಧೆಗಳಿಗೆ ಜಡ್ಜ್ ಆಗಿ ಕೆಲಸ ಮಾಡಿದೆ. ಹೀಗೆ ಇಂಡಸ್ಟ್ರಿಗೆ ಎಂಟರ್ ಆಗಿ 2017ರಲ್ಲಿ ವಾಪಸ್ ಭಾರತಕ್ಕೆ ಬಂದು 'ಬೆಂಕಿ ಕಾಫಿ' ಮತ್ತು 'ಬೆಂಕಿ ಬ್ರೂಯಿಂಗ್ ಟೂಲ್ಸ್' ಸಂಸ್ಥೆಯನ್ನು ಕಟ್ಟಿದೆ. ಆಮೇಲೆ ಸ್ಕೂಲ್ ಸೆಟಪ್ ಮಾಡಿದೆ, ಸ್ವಂತ ತೋಟ ತಗೊಂಡೆ, ಹೀಗೆ ಒಂದೊಂದೇ ಹಂತಗಳಲ್ಲಿ ಬೆಳೆದೆವು. 🚲
☕. 'ಬೆಂಕಿ' (Fire) ಹೆಸರಿನ ಹಿಂದಿರುವ ಗುಟ್ಟೇನು? ಈ ಹೆಸರನ್ನೇ ಯಾಕೆ ಆರಿಸಿಕೊಂಡಿರಿ?
ಬೆಂಕಿ ಅಂದ್ರೆ ನಾವು ಅದನ್ನ ಅದ್ಭುತ, ಅಮೇಜಿಂಗ್ ಇಲ್ಲ ಸೂಪರ್ ಅನ್ನೋದಕ್ಕೆ ಬಳಸುವ ಪದ. ನಮ್ಮೂರು ತರೀಕೆರೆ ಕಡೆ ಹಳ್ಳಿಗಳಲ್ಲಿ ಏನಾದ್ರೂ ಚೆನ್ನಾಗಿದ್ರೆ 'ಮಗ ಬೆಂಕಿ ಆಗಿದೆ' ಅಂತ ಹೇಳ್ತಾರೆ. ನಾನು ಅದನ್ನ ಚಿಕ್ಕಂದಿನಿಂದ ಕೇಳಿದ್ದೆ. ಹಾಗಾಗಿ ಬೆಂಕಿ ಕಾಫಿ ಅಂದ್ರೆ 'ಆಸಮ್ ಕಾಫಿ' ಅಂತ ಅರ್ಥ. ಇನ್ನೊಂದು ಅಂದ್ರೆ, 16ನೇ ಶತಮಾನದಲ್ಲಿ ಕಾಫಿ ಶಾಪ್ಗಳು ಕೇವಲ ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ ಹ್ಯಾಂಗ್ ಔಟ್ ಮಾಡೋ ಜಾಗವಾಗಿರಲಿಲ್ಲ, ಅವು ರಾಜಕೀಯ ಕ್ರಾಂತಿ ಮತ್ತು ಬೌದ್ಧಿಕ ಚರ್ಚೆಗಳ ಕೇಂದ್ರಗಳಾಗಿದ್ದವು. ಯುರೋಪ್ನಲ್ಲಿ ಇವುಗಳನ್ನ ಡಿಕ್ಕೇಡ್ಗಳ ಕಾಲ ಇಲ್ಲಿಗಲ್ ಕೂಡ ಮಾಡಲಾಗಿತ್ತು. ನಂದು ಕೆಫೆ ಸೆಟಪ್ ಮಾಡಿದಾಗ ಅದು ಕೇವಲ ಹರಟೆ ಹೊಡೆಯುವ ಜಾಗವಾಗದೆ ಇಂಟಲೆಕ್ಚುಯಲ್ ಕೆಫೆ ಆಗಬೇಕು ಅನ್ನೋದು ನನ್ನ ಆಸೆ ಇತ್ತು. ಸಮಾಜದಲ್ಲಿನ ತಪ್ಪುಗಳು, ಭ್ರಷ್ಟಾಚಾರದ ವಿರುದ್ಧ ಹೋರಾಡುವ 'ಬೆಂಕಿ' ಅಥವಾ ಆ ಕಿಚ್ಚು ನಿಮ್ಮಲ್ಲಿರಲಿ ಅಂತ ಈ ಹೆಸರಿಟ್ಟೆ. ನಮ್ಮ ಕೆಫೆ ಕೂಡ ಕ್ರಾಂತಿಯ ಜಾಗವಾಗಲಿ ಅನ್ನೋದು ನನ್ನ ಉದ್ದೇಶವಾಗಿತ್ತು. 🔥
ಬೆಂಕಿ ಕಾಫಿಯ ಸಂಸ್ಥಾಪಕರು
☕. 'BENKI ESTATE' ನಲ್ಲಿ ನೀವು ತಂದಿರುವ ಹೊಸ ಬದಲಾವಣೆಗಳು ಯಾವುವು?
ನಮ್ಮ ತೋಟದಲ್ಲಿ ನಾವು 100% ಸ್ಪ್ರಿಂಕ್ಲರ್ ಸಿಸ್ಟಮ್ ಬಳಸುತ್ತಿದ್ದೇವೆ ಮತ್ತು ಇದು ಸಂಪೂರ್ಣವಾಗಿ ಗ್ರಾವಿಟಿ (ಗುರುತ್ವಾಕರ್ಷಣೆ) ಮೇಲೆ ಕೆಲಸ ಮಾಡುತ್ತೆ. ಈಗ ನಾವು 100% ಸೋಲಾರ್ ಗೆ ಶಿಫ್ಟ್ ಆಗಿದ್ದೇವೆ, ಅಂದ್ರೆ ನಾವು ಗವರ್ನಮೆಂಟ್ ಪವರ್ ಮೇಲೆ ಅಷ್ಟಾಗಿ ಅವಲಂಬಿತವಾಗಿಲ್ಲ. ಸೌರಶಕ್ತಿಯಿಂದಲೇ ಪಂಪ್ಗಳು ಮತ್ತು ಇತರ ಕೆಲಸಗಳು ನಡೆಯುತ್ತವೆ. ಪ್ಲಾಂಟೇಶನ್ ಲೆವೆಲ್ನಲ್ಲಿ ನಾವು ಗಿಡಗಳ ನಡುವೆ ಸಾಕಷ್ಟು ಜಾಗ (Wide spacing) ಬಿಟ್ಟಿದ್ದೇವೆ. ಇದರಿಂದ ಸಣ್ಣ ಟ್ರ್ಯಾಕ್ಟರ್ ಬಳಸಿ ಔಷಧಿ ಹೊಡೆಯುವುದು ಅಥವಾ ಗೊಬ್ಬರ ಹಾಕುವ ಕೆಲಸ ಮಾಡಬಹುದು. ಮುಂದೆ ಕಲ್ಲು ಕಂಬಗಳ ಮೇಲೆ ಆಧುನಿಕ ರೀತಿಯಲ್ಲಿ ಮತ್ತು ಹನಿ ನೀರಾವರಿ ಬಳಸಿ ಮೆಣಸು ಬೆಳೆಯುವ ಪ್ಲಾನ್ ಕೂಡ ಇದೆ. ☀️
ಬೆಂಕಿ ಎಸ್ಟೇಟ್ನ ಹಸಿರು ನೋಟ
☕. ಬೆಳೆಗಾರರು 'ಸ್ಪೆಷಾಲಿಟಿ ಕಾಫಿ' ಕಡೆಗೆ ಗಮನ ಕೊಡಲು ನೀವು ಕೊಡುವ ಸಲಹೆ ಏನು?
ಮಾರುಕಟ್ಟೆಯಲ್ಲಿ ಬೆಲೆ ಏರಿಳಿತಗಳು ಜಾಸ್ತಿ ಇರುತ್ತವೆ. ನಮ್ಮ ಭಾರತದ ಪ್ರತಿಯೊಂದು ತೋಟವು ಸ್ಪೆಷಾಲಿಟಿ ಕಾಫಿ ಕಡೆಗೆ ವಾಲಬೇಕು ಅನ್ನೋದು ನನ್ನ ಡ್ರೀಮ್. ನಾವು ಸ್ಪೆಷಾಲಿಟಿ ಕಾಫಿ ಬೆಳೆದರೆ ಕಮಾಡಿಟಿ ಮಾರ್ಕೆಟ್ನ ಬೆಲೆಗೆ ಕಾಯುವ ಅಗತ್ಯವಿಲ್ಲ, ನ್ಯೂಯಾರ್ಕ್ ಅಥವಾ ಲಂಡನ್ ಎಕ್ಸ್ ಚೇಂಜ್ ಬೆಲೆಗೆ ಸೀಮಿತವಾಗದೆ ನಮ್ಮದೇ ಆದ ಬ್ರ್ಯಾಂಡ್ ವ್ಯಾಲ್ಯೂ ಸೃಷ್ಟಿಸಬಹುದು. ಹೇಗೆ ಜನರು ಬಿಎಂಡಬ್ಲ್ಯೂ ಅಥವಾ ಮರ್ಸಿಡಿಸ್ ಕಾರಿಗೆ ಅದರ ಬ್ರ್ಯಾಂಡ್ ವ್ಯಾಲ್ಯೂಗೋಸ್ಕರ ಹಣ ಕೊಡುತ್ತಾರೋ, ಕಾಫಿಗೂ ಅದು ಅನ್ವಯಿಸುತ್ತದೆ. ಸ್ಪೆಷಾಲಿಟಿ ಕಾಫಿ ಬೆಳೆದರೆ ಮಾರ್ಕೆಟ್ ಬೆಲೆಗಿಂತ ಕನಿಷ್ಠ 150 ರಿಂದ 200 ರೂಪಾಯಿ ಪ್ರೀಮಿಯಂ ಸಿಗುತ್ತದೆ. ತೋಟವನ್ನು ಒಂದು ಫ್ಯಾಕ್ಟರಿಯ ರೀತಿ ನಡೆಸಬಹುದು. ಅಂದ್ರೆ ಕಾಸ್ಟ್ ಆಫ್ ಪ್ರೊಡಕ್ಷನ್ 100 ರೂಪಾಯಿ ಇದ್ರೆ ನಾನು 150 ಕ್ಕ್ಕೆ ಮಾರಬಹುದು, ಯಾಕಂದ್ರೆ ಆ ಮಾರ್ಜಿನ್ ನಮಗೆ ಇನ್ ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಅಥವಾ ರಿಪ್ಲಾಂಟಿಂಗ್ಗೆ ಸಹಾಯ ಮಾಡುತ್ತೆ. ಬೆಳೆಗಾರರು ಪ್ರತಿ ವರ್ಷ ತಮ್ಮ ಬೆಳೆಯ ಕನಿಷ್ಠ 10-20% ರಷ್ಟನ್ನು ಸ್ಪೆಷಾಲಿಟಿ ಕಾಫಿಯಾಗಿ ಬೆಳೆಯಲು ಪ್ರಯತ್ನಿಸಬೇಕು. 💎
☕. 'Specialty Coffee Academy of India' ಶುರು ಮಾಡುವ ಹಿಂದಿನ ಉದ್ದೇಶವೇನು?
2017ರಲ್ಲಿ ನಾನು ಬಿಸಿನೆಸ್ ಶುರು ಮಾಡಿದಾಗ ಸ್ಪೆಷಾಲಿಟಿ ಕಾಫಿ ಎಕ್ವಿಪ್ಮೆಂಟ್ ಮಾರಲು ಕಷ್ಟವಾಗುತ್ತಿತ್ತು, ಯಾಕೆಂದರೆ ಜನ ನಗುತ್ತಿದ್ದರು. ಗ್ಲೋಬಲ್ ಮಾರ್ಕೆಟ್ನಲ್ಲಿ ಇದಕ್ಕೆ ಡಿಮ್ಯಾಂಡ್ ಇದ್ದರೂ ಇಂಡಿಯಾದಲ್ಲಿ ನಾಲೆಡ್ಜ್ ಲೆವೆಲ್ ತುಂಬಾ ಕಮ್ಮಿ ಇತ್ತು. ಕೆಫೆ ಅಥವಾ ರೋಸ್ಟರಿಗಳಲ್ಲಿ ಕ್ವಾಲಿಟಿ ಮಾಡುವವರು ಇರಲಿಲ್ಲ. ಹಾಗಾಗಿ ನಾವೇ ಒಂದು ಸ್ಕೂಲ್ ಮಾಡಿ ಕೆಫೆ ಮಾಲೀಕರಿಗೆ ಮತ್ತು ರೋಸ್ಟರಿ ಕಂಪನಿಗಳಿಗೆ ಎಜುಕೇಟ್ ಮಾಡೋಣ ಅಂತ ನಿರ್ಧರಿಸಿದೆವು. ಅವರಿಗೆ ಕ್ವಾಲಿಟಿ ಬಗ್ಗೆ ಮತ್ತು ಅದಕ್ಕೆ ಬೇಕಾದ ಉಪಕರಣಗಳ ಮಹತ್ವ ತಿಳಿಯಲಿ ಅನ್ನೋದು ನಮ್ಮ ಉದ್ದೇಶವಾಗಿತ್ತು. ಇವತ್ತು ಇಂಡಿಯಾದ ಲೀಡಿಂಗ್ ಬ್ರಾಂಡ್ಸ್ಗಳ ಓನರ್ಗಳು, ಸಿಇಒಗಳು ನಮ್ಮ ಸ್ಟೂಡೆಂಟ್ಸ್ ಆಗಿದ್ದಾರೆ ಅನ್ನೋದೇ ಹೆಮ್ಮೆಯ ವಿಷಯ. 🎓
ಕಾಫಿ ಕ್ವಾಲಿಟಿ ಪರೀಕ್ಷೆ (Tasting Session)
☕. ಡಿಸ್ಟ್ರಿಬ್ಯೂಟರ್ ಆಗಿ ನೀವು ಎದುರಿಸುತ್ತಿರುವ ಸವಾಲುಗಳೇನು ಮತ್ತು ಉಪಕರಣಗಳ ಪ್ರಾಮುಖ್ಯತೆ ಏನು?
ಸರಿಯಾದ ಉಪಕರಣಗಳು ಕಾಫಿಯ ರುಚಿಯನ್ನು ಸಂಪೂರ್ಣವಾಗಿ ಬದಲಿಸಬಲ್ಲವು. ಆದರೆ ವಿತರಕನಾಗಿ ನಮಗೆ ದೊಡ್ಡ ಸವಾಲು ಅಂದರೆ ಲಾಜಿಸ್ಟಿಕ್ಸ್ (ಸರಕು ಸಾಗಣೆ). ಭಾರತದಲ್ಲಿ ಲಾಜಿಸ್ಟಿಕ್ಸ್ ಸುರಕ್ಷತೆ ಮತ್ತು ಸಮಯದ ಮಿತಿ ಬೇರೆ ದೇಶಗಳಷ್ಟು ಡೆವಲಪ್ ಆಗಿಲ್ಲ. ಪ್ಯಾಕೇಜ್ಗಳನ್ನು ಬಿಸಾಡುವುದು ಅಥವಾ ಅದರ ಮೇಲೆ ನಿಂತು ಕೆಲಸ ಮಾಡುವುದು ನಡೆಯುತ್ತೆ, ಇದರಿಂದ ಪ್ಯಾಕೇಜಿಂಗ್ಗೆ ತುಂಬಾ ಖರ್ಚು ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಭಾರತವು ಮಲ್ಟಿಪಲ್ ಕಂಟ್ರೀಸ್ ತರ ಇದೆ. ಪ್ರತಿ ರಾಜ್ಯದಲ್ಲಿ ಕಾನೂನು ಬೇರೆ ಇರುತ್ತೆ, ಬಿಸಿನೆಸ್ ಶೈಲಿ ಮತ್ತು ಭಾಷೆ ಬೇರೆ ಇರುತ್ತೆ. ಈ ಎಲ್ಲ ತರದ ಜನರ ಜೊತೆ ಡೀಲ್ ಮಾಡುವ ಟ್ಯಾಲೆಂಟೆಡ್ ಮ್ಯಾನೇಜರ್ಗಳು ಮತ್ತು ಟೀಮ್ ಬೇಕು. ಇದು ನಮ್ಮ ಮುಂದಿರುವ ಪ್ರಮುಖ ಚಾಲೆಂಜ್. 📦
☕. 'Indian AeroPress Championship' ಎಷ್ಟು ಯಶಸ್ವಿಯಾಗಿದೆ?
2018ರಲ್ಲಿ ನಾವು ಒಂದು ಕಾಫಿ ಸಮುದಾಯವನ್ನು ಕಟ್ಟಲು ಈ ಸ್ಪರ್ಧೆಯನ್ನು ಶುರು ಮಾಡಿದೆವು. ಮುಂಚೆ ಜನ ಮಾಹಿತಿ ಹಂಚಿಕೊಳ್ಳಲು ಹಿಂಜರಿಯುತ್ತಿದ್ದರು. ಆದರೆ ಈ ಸ್ಪರ್ಧೆಯಲ್ಲಿ ಸಾಫ್ಟ್ವೇರ್ ಇಂಜಿನಿಯರ್, ಹೌಸ್ ವೈಫ್ ಅಥವಾ ಡಾಕ್ಟರ್ ಯಾರೇ ಬೇಕಾದರೂ ಭಾಗವಹಿಸಬಹುದು. ಇವತ್ತು ಇದು ವಿಶ್ವದಲ್ಲೇ ಅತಿದೊಡ್ಡ ಏರೋಪ್ರೆಸ್ ಸ್ಪರ್ಧೆಯಾಗಿ ಬೆಳೆದಿದೆ. ಕಳೆದ ವರ್ಷ 13 ಸಿಟಿಗಳಲ್ಲಿ 630 ಜನ ಭಾಗವಹಿಸಿದ್ರು. ಅಂತರಾಷ್ಟ್ರೀಯ ಫೈನಲ್ಸ್ನಲ್ಲಿ ಭಾರತಕ್ಕೆ ಮೊದಲ ಬಾರಿ ಮೂರನೇ ಸ್ಥಾನ ಸಿಕ್ಕಿದೆ. ಮುಂದೆ ಇದನ್ನು ಇನ್ನೂ ದೊಡ್ಡದಾಗಿ ಮಾಡಿ 2000-3000 ಜನ ಭಾಗವಹಿಸುವಂತೆ ಮಾಡಬೇಕು ಮತ್ತು ಎಲ್ಲಾ ರಾಜ್ಯಗಳಲ್ಲಿ ಆರ್ಗನೈಸ್ ಮಾಡಬೇಕೆಂಬ ಆಸೆ ಇದೆ. 🏆
☕. 'Benki Coffee' ರೋಸ್ಟಿಂಗ್ ಶೈಲಿ ಹೇಗೆ ಡಿಫರೆಂಟ್ ಆಗಿದೆ?
ನಮ್ಮ ಕೆಫೆಯಲ್ಲಿ ನಾವು ಸುಮ್ಮನೆ ಕುಳಿತು ಹರಟೆ ಹೊಡೆಯುವ ಅಥವಾ ಎಸಿ, ಮ್ಯೂಸಿಕ್ ಮತ್ತು ವೈಫೈ ಕೊಡುವ ಕಲ್ಚರ್ ಅನ್ನು ಪ್ರೋತ್ಸಾಹಿಸುವುದಿಲ್ಲ. ನಮ್ಮ ಸಂಪೂರ್ಣ ಗಮನ ಕಾಫಿಯ ಮೇಲೆ ಮಾತ್ರ. ನಮ್ಮಲ್ಲಿ ಕೊರಿಯಾ ದೇಶದ 'ಸ್ಟ್ರಾಂಗ್ ಹೋಲ್ಡ್' ರೋಸ್ಟರ್ ಇದೆ. ಬೇರೆ ಮಿಷನ್ಗಳಲ್ಲಿ ಒಂದು ತರ ಹೀಟ್ ಟ್ರಾನ್ಸ್ಫರ್ ಇದ್ದರೆ, ಇದರಲ್ಲಿ ನಮ್ಮಲ್ಲಿ ಮೂರು ತರ ಹೀಟ್ ಟ್ರಾನ್ಸ್ಫರ್ (ಡ್ರಮ್ ಹೀಟ್, ಹಾಟ್ ಏರ್, ಮತ್ತು ಹ್ಯಾಲೋಜನ್ ಹೀಟರ್) ಇರೋದ್ರಿಂದ ತುಂಬಾ ಯೂನಿಕ್ ಆಗಿ ರೋಸ್ಟ್ ಮಾಡಬಹುದು. ಇದರಿಂದ ಕಾಫಿಯಲ್ಲಿ ಬೇರೆಲ್ಲಿಯೂ ಸಿಗದಂತಹ ಯೂನಿಕ್ ಫ್ಲೇವರ್ಗಳನ್ನು ನಾವು ಆಚೆ ತರಲು ಸಾಧ್ಯವಾಗುತ್ತಿದೆ. ☕
ಸುಹಾಸ್ ಅವರು ರೋಸ್ಟಿಂಗ್ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ
☕. ಸರ್ಚ್ ಕೂರ್ಗ್ ಮೀಡಿಯಾ ಅವರ 'ಸರ್ಚ್ ಕಾಫಿ' ಅಭಿಯಾನದ ಬಗ್ಗೆ ಏನು ಹೇಳ್ತೀರಿ?
ಕಾಫಿ ಕ್ಷೇತ್ರದ ಏಳಿಗೆಗಾಗಿ ಕೆಲಸ ಮಾಡುತ್ತಿರುವ ಮೀಡಿಯಾ ಚಾನೆಲ್ಗಳೆಂದರೆ ನನಗೆ ಬಹಳ ಖುಷಿ. ಕೂರ್ಗ್ ಎಂದ ಕೂಡಲೇ ಜನ ಬರೀ ಸಾಮಾನ್ಯ ರೊಬಸ್ಟಾ ಸಿಗುತ್ತದೆ ಅಂತ ಅಂದುಕೊಳ್ತಾರೆ. ಆದರೆ ಅಲ್ಲಿ ಅದ್ಭುತವಾದ ಅರೇಬಿಕಾ ಮತ್ತು ಸ್ಪೆಷಾಲಿಟಿ ರೊಬಸ್ಟಾ ಕೂಡ ಬೆಳೆಯುತ್ತಾರೆ ಅನ್ನೋದನ್ನ ಸರ್ಚ್ ಕೂರ್ಗ್ ಮೀಡಿಯಾ ಜನರಿಗೆ ತೋರಿಸಿಕೊಡ್ತಾ ಇದೆ. ಈ ಇನಿಶಿಯೇಟಿವ್ ಅನ್ನ ನಾನು ಅಪ್ರಿಶಿಯೇಟ್ ಮಾಡ್ತೀನಿ. ಮುಂದೆ ಕಾಫಿ ಶಾರ್ಟೇಜ್ ಆಗಿ ಇಂಪೋರ್ಟ್ ಮಾಡುವ ಪರಿಸ್ಥಿತಿ ಬರದಂತೆ ನಮ್ಮ ದೇಶದ ರೈತರೇ ಸಮೃದ್ಧವಾಗಿ ಬೆಳೆಯುವಂತೆ ಪ್ರೋತ್ಸಾಹಿಸಬೇಕು ಅನ್ನೋದು ನನ್ನ ಆಸೆ. 🌿
☕. ಹೊಸದಾಗಿ ಉದ್ಯಮ ಶುರು ಮಾಡುವ ಯುವಕರಿಗೆ ನಿಮ್ಮ ಕಿವಿಮಾತು?
ಭಾರತದಲ್ಲಿ ಕಾಫಿ ಉದ್ಯಮಕ್ಕೆ ಸೇರಲು ಇದು ಬೆಸ್ಟ್ ಟೈಮ್. ವಿದೇಶಿ ಕಂಪನಿಗಳು ಇಲ್ಲಿಗೆ ಬಂದು ಇನ್ವೆಸ್ಟ್ ಮಾಡುತ್ತಿವೆ. ನಮ್ಮಲ್ಲೂ ಸಾಕಷ್ಟು ಇಂಟಲೆಕ್ಚುಯಲ್ ಮತ್ತು ಫೈನಾನ್ಷಿಯಲ್ ಟ್ಯಾಲೆಂಟ್ ಇದೆ. ಕಾಫಿ ಸಪ್ಲೈ ಚೈನ್ನ ಕೃಷಿ, ರಫ್ತು, ಕೆಫೆ ಮತ್ತು ತರಬೇತಿಯಂತಹ ಎಲ್ಲಾ ಏಳು ವಿಭಾಗಗಳಲ್ಲಿ ಭಾರಿ ಬೇಡಿಕೆಯಿದೆ. ಒಬ್ಬ ಬರಿಸ್ಟಾ ಆಗಿ ವೃತ್ತಿ ಆರಂಭಿಸಿದರೂ 20-25 ಸಾವಿರ ದುಡಿಯಬಹುದು, ಇವತ್ತು ಇಂಜಿನಿಯರ್ಸ್ಗೂ ಕೂಡ ಅಷ್ಟು ಸಿಗೋದು ಕಷ್ಟ ಆಗ್ತಾ ಇದೆ. ಹಾಗಾಗಿ ಜಾಸ್ತಿ ಯೋಚನೆ ಮಾಡದೆ ಈ ಫೀಲ್ಡ್ಗೆ ಬನ್ನಿ ಮತ್ತು ಈ ಬೆಳವಣಿಗೆಯ ಲಾಭ ಪಡೆದುಕೊಳ್ಳಿ. 🚀
ಬ್ರ್ಯಾಂಡ್ ಮಾಹಿತಿ
ಅದ್ಭುತ ರುಚಿಯ ಮತ್ತು ಪ್ರೀಮಿಯಂ ಗುಣಮಟ್ಟದ ಕಾಫಿ ಬೀಜಗಳ ಅಧಿಕೃತ ತಾಣ.