ಮಕ್ಕಳ ಭವಿಷ್ಯ ಕಿತ್ತುಕೊಳ್ಳುತ್ತಿರುವ ಸೆಲ್ ಫೋನ್ ಗಳು…. ಪೋಷಕರೇ ಎಚ್ಚರ…

 ನಮ್ಮ ಸುತ್ತಮುತ್ತಲಿನ ಎಲ್ಲಿ ನೋಡಿದರೂ ಮೊಬೈಲ್ ಮೊಬೈಲ್.ಶಾಲೆಗೆ ತೆರಳುವ ಮಕ್ಕಳಲ್ಲಿ ಕಚೇರಿಗೆ ಕೆಲಸಕ್ಕೆ ತೆರಳುವ ಜನರಲ್ಲಿ ಎಲ್ಲರೂ ಮೊಬೈಲ್ ನಲ್ಲಿ ಬಿಜಿ.
ಏಕೆಂದರೆ ಎಲ್ಲರ ಹತ್ತಿರವೂ ಮೊಬೈಲ್ ಮೊಬೈಲ್ ಗಳಲ್ಲಿ ಫೇಸ್ ಬುಕ್, ವ್ಯಾಟ್ಸ್ ಅಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ತಮ್ಮನ್ನು ತೊಡಗಿಸಿಕೊಂಡಂತೆ ಕಾಣತ್ತದೆ.
ಸೆಲ್ಫಿ ತೆಗೆಯುವುದರಲ್ಲಿ ಬಿಜಿ.ಮಾರುಕಟ್ಟೆ ,ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಯಾರ ಕೈಯಲ್ಲೂ ಮೊಬೈಲ್ …ಮೊಬೈಲ್….
ಹಾಗಾದರೆ ಶಿಕ್ಷಣ ಪೂರೈಸಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಯವ ವಿದ್ಯಾರ್ಥಿಗಳ ಕಥೆ ದೇವರೇ ಗತಿ…….. ಏಕೆಂದರೆ ಅವರೂ ಮೊಬೈಲ್ ( ಸ್ಮಾರ್ಟ್ ಫೋನ್) ತೆಗೆದುಕೊಂಡು ಚಾಟ್ ಮಾಡುವುದರಲ್ಲಿ ಬಿಜಿ…. ಹೊಸ ಹೊಸ ಸಿನೆಮಾ ಡೌನ್ ಲೋಡ್ ಮಾಡುವುದರಲ್ಲಿ ಬಿಜಿ.
ಮನೆಗೆ ತೆರಳಿ ಹೋಮ್ ವರ್ಕ್ ಮಾಡುವಾಗಲೂ ಚಾಟಿಂಗ್ ,ಫೇಸ್ ಬುಕ್ ವ್ಯಾಟ್ಸ್ ಅಪ್ ನಲ್ಲಿ ಗಂಟೆಗಟ್ಟಲೇ ಕಳೆಯುವ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಎಷ್ಟು ಗಮನಹರಿಸುತ್ತಾರೋ ಗೊತ್ತಿಲ್ಲ.
ಮೊಬೈಲ್ ಬಂದಾಗಿನಿಂದ ಮಕ್ಕಳು ಆಟೋಟಗಳಲ್ಲಿ ಪಾಲ್ಗೊಳ್ಳದೇ ಸಾಮಾಜಿಕ ತಾಣಗಳಲ್ಲಿ ಸಮಯ ಕಳೆಯುವುದೇ ಹೆಚ್ಚಾಗಿ ಹೋಗಿದೆ.

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಆರೋಗ್ಯ ಅಪಾಯ
ಇಂದಿನ ಮಕ್ಕಳು ರೇಡಿಯೋ ಫ್ರೀಕ್ವೆನ್ಸಿ ಪರಿಸರದಲ್ಲಿ ಬೆಳೆಯುತ್ತಿದ್ದಾರೆ.ಇದೆ ಹಿಂದೆಂದೂ ಮಾನವ ಇತಿಹಾಸದಲ್ಲಿ ಅಸ್ತಿತ್ವದಲ್ಲಿಲ್ಲ.ಸ್ಮಾರ್ಟ್ ಫೋನ್ಗಳಿಂದ ಹೊರಸೂಸಲ್ಪಟ್ಟ ವಿಕಿರಣವು ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ವಯಸ್ಕರಿಗಿಂತ ಮಕ್ಕಳು ಮಿದುಳಿನೊಳಗೆ ೬೦ ಪ್ರತಿಶತದಷ್ಟು ವಿಕಿರಣವನ್ನು ಹೀರಿಕೊಳ್ಳುತ್ತಾರೆ.ಅವರ ಮೆದುಳಿನ ತೆಳ್ಳಗಿನ ಚರ್ಮ, ಅಂಗಾಂಶಗಳು ಮತ್ತು ಮೂಳೆಗಳು ವಯಸ್ಕರಿಗಿಂತ ಎರಡು ಬಾರಿ ವಿಕಿರಣವನ್ನು ಹೀರಿಕೊಳ್ಳಲು ಅವಕಾಶ ನೀಡುತ್ತದೆ.ತಮ್ಮ ಸೆಲ್ ಫೋನ್ ಬಳಕೆಗೆ ಸೀಮಿತವಾದ ಮಕ್ಕಳು ಹೆಚ್ಚು ನಿದ್ರಾಹೀನತೆ , ನಿರುತ್ಸಾಹ ಮತ್ತು ಆಯಾಮವನ್ನು ಅನುಭವಿಸಬಹುದು.

ಮನೆಯ ಸಾಂಪ್ರದಾಯಿಕ್ಕೆ ಕುತ್ತು
ಮೊಬೈಲ್‌ ಬರದ ಆ ದಿನಗಳಲ್ಲಿ ಹಬ್ಬ ಹರಿದಿನಗಳನ್ನು ಅತಿ ಉತ್ಸಾಹದಿಂದ, ಪೋಷಕರೊಂದಿಗೆ ಆಚರಿಸುತ್ತಿದ್ದ ವಿದ್ಯಾರ್ಥಿಗಳು ಇಂದು ಚಾಟಿಂಗ್ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪೋಷಕರೊಂದಿಗೆ ಸರಿಯಾಗಿ ಬೆರೆಯುತ್ತಿಲ್ಲ.
ಮೊದಲು ಮನೆ ಮಂದಿಯೆಲ್ಲ ನಡೆಸಿಕೊಂಡು ಬಂದ ಸಂಪ್ರದಾಯ ಈಗ ಅಪರೂಪವಾಗಿದೆ.ಒಟ್ಟಿನಲ್ಲಿ ಮೊಬೈಲ್‌ ನಮ್ಮ ಹಬ್ಬ-ಹರಿದಿನಗಳ ಆಚರಣೆ ಕಿತ್ತುಕೊಂಡಿದೆ ಎಂದರೆ ಅತಿಶಯೋಕ್ತಿಯಾಗಲಾರದು.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಶೈಕ್ಷಣಿಕ ಮತ್ತು ಹವ್ಯಾಸಗಳ ಮೇಲೆ ಪರಿಣಾಮ

ಶಾಲೆಗಳಲ್ಲಿ ನೀಡಿದ ಹೋಮ್ ವರ್ಕ್ ಸರಿಯಾಗಿ ಮಾಡದೇ ಇರಬಹುದು, ಯಾವಾಗಲೂ ಚಾಟಿಂಗ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಮೂಲ್ಯವಾದ ಸಮಯವನ್ನು ವ್ಯರ್ಥಗೊಳಿಸಿ ತಮ್ಮ ಶೈಕ್ಷಣಿಕ ಜೀವನವನ್ನು ಹಾಳು ಮಾಡಿಕೊಳ್ಳಬಹುದು.

 

ಇಂಟರ್ ನೆಟ್ ಅಸಮರ್ಪಕ ಬಳಕೆ
ಮೊಬೈಲ್‌ ಕಂಪನಿಗಳು ನೀಡುವ ಅನ್ ಲಿಮಿಟೆಡ್ ಡಾಟಾ ಉಚಿತವಾಗಿರುವುದರಿಂದಲೂ ಮಕ್ಕಳಲ್ಲಿ ವಿಪರೀತ ಇಂಟರ್ ನೆಟ್ ಗೀಳು ಬೆಳೆಯಲು ಕಾರಣ.ಸೆಲ್ ಫೋನ್ ಗಳಿಂದ ಮಕ್ಕಳು ಅನುಚಿತ ವರ್ತನೆಗಳಲ್ಲಿ ತೊಡಗಿಸಿಕೊಳ್ಳಬಹುದು‌. ಹಾನಿಕಾರ ಹಾಗೂ ಆಘಾತಕಾರಿ ವಿಷಯಗಳನ್ನು ತೋರಿಸುವ ಸೈಟ್ ಗಳನ್ನು ಅವರು ಸುಲಭವಾಗಿ ಪರಿಶೀಲಿಸಬಹುದು. ಚಿಕ್ಕವಯಸ್ಸಿನಲ್ಲೇ ಅಶ್ಲೀಲ ವಿಡಿಯೋಗಳನ್ನು ನೋಡುತ್ತಾರೆ.ಆಗ ಅವರು ತಮ್ಮ ಮನಸ್ಸು ಕೆಡಸಿಕೊಂಡು ತಮ್ಮ ವಿದ್ಯಾಭ್ಯಾಸದಲ್ಲಿ ಹಿಂದುಳಿಯಬಹುದು.ಬ್ಲೂವೆಲ್ ಗಳಂತಹ ಮಾರಣಾಂತಿಕ ಆನ್ ಲೈನ್ ಆಟಕ್ಕೆ ಅಂಟಿಕೊಂಡು ತಮ್ಮ ಜೀವನವನ್ನು ಕಳೆದುಕೊಳ್ಳಲೂ ಬಹುದು.ಹದಿಹರೆಯದ ವಯಸ್ಸಿನಲ್ಲಿ ತಮ್ಮ ವಯುಕ್ತಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಪ್ ಲೋಡ್ ಮಾಡಿ ಬ್ಲ್ಯಾಕ್ ಮೇಲ್ ಗೆ ಒಳಗಾಗಬಹುದು. ಇದರಿಂದ ತಮ್ಮ ಜೀವನವನ್ನೇ ಹಾಳುಮಾಡಿ ಕೊಳ್ಳಬಹುದು.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಈಯರ್ ಫೋನಿನಿಂದ ಜೀವಕ್ಕೆ ಅಪಾಯ

ಎಷ್ಟೋ ಹದಿಹರೆಯದವರು ರಸ್ತೆ ದಾಟುವಾಗ, ರೇಲ್ವೆ ಹಳಿ ದಾಟುವಾಗ ,ಬೈಕ್ ಚಲಾಯಿಸುವಾಗ, ಕಾರ್ ಚಲಾಯಿಸುವಾಗ ಈಯರ್ ಫೋನ್ ಕಿವಿಯಲ್ಲಿ ಸಿಕ್ಕಿಸಿಕೊಂಡೇ ಇರುತ್ತಾರೆ.ಇದರಿಂದ ಅವರ ಜೀವಕ್ಕೆ ಅಪಾಯವಾದ ಘಟನೆಗಳು ಸಾಕಷ್ಟು ನಡೆದಿದೆ.

ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಏಕಿಲ್ಲ

ಇದೇ ಕಾರಣಕ್ಕಾಗಿಯೇ ಕಾಲೇಜುಗಳಲ್ಲಿ ಮೊಬೈಲ್ ತರುವುದ‌ನ್ನು ನಿಷೇಧಿಸಲೇ ಬೇಕಿದೆ.ಏಕೆಂದರೆ ಸಾಮಾಜಿಕ ತಾಣಗಳ ಬಳಕೆ ಒಂದು ತರಹದ ಡ್ರಗ್ಸ್ ಚಟದಂತೆ ಅಂಟಿಕೊಂಡಿರುವುದಂತೂ ಸುಳ್ಳಲ್ಲ. ಅದರಲ್ಲೂ ಲಾಸ್ಟ್ ಬೆಂಚ್ ವಿದ್ಯಾರ್ಥಿಗಳು ಶಿಕ್ಷಕರಿಂದ ದೂರವಿರುವುದರಿಂದ ಅವರು ಪಾಠ ಕೇಳದೇ ಮೊಬೈಲ್ ನಲ್ಲೇ ತಲ್ಲೀನರಾಗಿರಬಹುದು.ಇದಕ್ಕೆ ತದ್ವಿರುದ್ದ ಎನ್ನುವಂತೆ ಕಾಲೇಜುಗಳು, ಟ್ಯೂಷನ್ ಸೆಂಟರ್ ಗಳು ಉಚಿತ ವೈಫೈ ನೀಡಿ ವಿದ್ಯಾರ್ಥಿಗಳು ಹಾಳಾಗಲು ಮತ್ತಷ್ಟು ಕುಮ್ಮಕ್ಕು ನೀಡುತ್ತಿದ್ದಾರೆ.ಅದೊಂದು ಅವರಿಗೆ ‌ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುವ ಗಿಮಿಕ್ ಆಗಿ ಬಿಟ್ಟಿದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

 

ಪ್ರೇಕ್ಷಣೀಯ ಸ್ಥಳಗಳಲ್ಲಿ ಸೆಲ್ಫಿ ಹುಚ್ಚು

ಅಪಾಯಕಾರಿ ಸ್ಥಳಗಳಲ್ಲಿ ನಿಂತುಕೊಂಡು ಸೆಲ್ಫಿ ತೆಗೆಯಲು ಹೋಗಿ ಎಷ್ಟೋ ಹದಿ ಹರೆಯದವರು ಪ್ರಾಣಕಳೆದುಕೊಂಡಿದ್ದಾರೆ, ಕಳೆದುಕೊಳ್ಳುತ್ತಿದ್ದಾರೆ.ಅಲ್ಲಿ ಎಚ್ಚರಿಕೆ ಎನ್ನುವ ಸೂಚನಾ ಫಲಕವಿದ್ದರೂ ಲೆಕ್ಕಿಸದೆ ಸೆಲ್ಫಿ ತೆಗೆಯಲು ಹೋಗಿ ಜೀವಕ್ಕೆ ಅಪಾಯ ತಂದೊಡ್ಡುಕೊಳ್ಳುತ್ತಿದ್ದಾರೆ.
ಅಧ್ಯಾಯನವೊಂದು ಹೇಳುವ ಪ್ರಕಾರ ಜಗತ್ತಿನ ಇತರ ದೇಶಗಳಿಂಗಿಂತ ಭಾರತದಲ್ಲಿ ಅತಿ ಹೆಚ್ಚು ಯುವಕರು ಬಲಿಯಾಗಿದ್ದಾರೆ.ಅದರಲ್ಲೂ ೨೪ ವರ್ಷಕ್ಕಿಂತ ಕಡಿಮೆ ಇರುವ ಯುವಕರು ಎನ್ನುವುದು ಕಳವಳಕಾರಿ ಸಂಗತಿ

ಗಿಫ್ಟ್ ಎಂಬ ಗೀಳು
ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದಂದು ತಮ್ಮ ಸ್ನೇಹಿತರಿಂದ ಆಧುನಿಕ ಮೊಬೈಲ್ ಗಳನ್ನು ಗಿಫ್ಟ್ ರೂಪದಲ್ಲಿ ಪಡೆಯುತ್ತಾರೆ.ಈಗಂತೂ ಆನ್ ಲೈನ್ ಮಾರಾಟ ಕಂಪನಿಗಳು ತಾಮುಂದು ನಾಮುಂದು ಎಂದು ನೀಡುವ ಆಫರ್ ಗಳಿಂದ ಮೊಬೈಲ್ ,ಬಟ್ಟೆ ಮುಂತಾದ ವಸ್ತುಗಳನ್ನು ಖರೀದಿಸುವವರ ಸಂಖ್ಯೆಯೇ ಹೆಚ್ಚಾಗಿದೆ.ಒಟ್ಟಾರೆ ಮೊಬೈಲ್ ನಿಂದ ಆಗುವ ಒಳ್ಳೆಯ ಪರಿಣಾಮಗಳಿಗಿಂತ ಮಕ್ಕಳೇಜನನ ಮೇಲೆ ಆಗುವ ದುಷ್ಪರಿಣಾಮಗಳೇ ಹೆಚ್ಚು ಎಂದು ಈಗೀನ ಸಮಾಜವನ್ನು ನೋಡಿದಾಗ ಕಂಡಬರುವ ಸತ್ಯವಾಗಿದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

About Author

Ismail Kandakkare

Follow On

ಇಸ್ಮಾಯಿಲ್‌ ಕಂಡಕೆರೆ
ಇಸ್ಮಾಯಿಲ್‌ ಕಂಡಕೆರೆ
Articles: 13
0 0 votes
Article Rating
Subscribe
Notify of
guest
0 Comments
Newest
Oldest Most Voted
0
Would love your thoughts, please comment.x
()
x