ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಪ್ರಾಯೋಜಿತ ರೈತರ ತರಬೇತಿ ಕಾರ್ಯಕ್ರಮ 🚀
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಪ್ರಾಯೋಜಿತ ರೈತರ ತರಬೇತಿ ಕಾರ್ಯಕ್ರಮ 🚀
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (PM-RKVY) ಪ್ರಾಯೋಜಿತ “ಕಾಳುಮೆಣಸು ಮತ್ತು ಏಲಕ್ಕಿಯ ಗುಣಮಟ್ಟದ ಗಿಡಗಳ ಉತ್ಪಾದನೆ ಹಾಗೂ ಸುಸ್ಥಿರ ಕೃಷಿ” ಎಂಬ ವಿಷಯದ ಬಗ್ಗೆ ಒಂದು ದಿನದ ರೈತರ ತರಬೇತಿ ಕಾರ್ಯಕ್ರಮವನ್ನು ದಿನಾಂಕ 13 ಆಗಸ್ಟ್ 2026 ರಂದು ಐ. ಸಿ. ಎ. ಆರ್ – ಭಾರತೀಯ ಸಾಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಪ್ರಾದೇಶಿಕ ಕೇಂದ್ರ, ಅಪ್ಪಂಗಳ, ಮಡಿಕೇರಿಯು ಆಯೋಜಿಸಿತ್ತು.
ತರಬೇತಿ ಕಾರ್ಯಕ್ರಮವನ್ನು ವಂದೇ ಮಾತರಂ ಮತ್ತು ಐ.ಸಿ.ಎ.ಆರ್. ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಡಾ. ಅಕ್ಷಿತ, ಹೆಚ್. ಜೆ., ಹಿರಿಯ ವಿಜ್ಞಾನಿಗಳು, ಐ. ಸಿ. ಎ. ಆರ್.-ಐ. ಐ. ایس. ಆರ್., ಪ್ರಾದೇಶಿಕ ಕೇಂದ್ರ, ಅಪ್ಪಂಗಳ ಇವರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಶ್ರೀ. ವೆಂಕಟ ರೆಡ್ಡಿ, ವೈ. ಬಿ., ಉಪ ನಿರ್ದೇಶಕ (ವಿಸ್ತರಣೆ), ಕಾಫಿ ಮಂಡಳಿ, ಮಡಿಕೇರಿ ಇವರು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ, ಹೆಚ್ಚಿನ ಆದಾಯವನ್ನು ಪಡೆಯಲು ವೈಜ್ಞಾನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು. ಇಂತಹ ತರಬೇತಿ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆದುಕೊಂಡು, ತರಬೇತಿಯಲ್ಲಿ ತಿಳಿಸಿಕೊಡಲಾದ ತಂತ್ರಜ್ಞಾನಗಳನ್ನು ತಮ್ಮ ಹೊಲಗಳಲ್ಲಿ ಅಳವಡಿಸಿಕೊಳ್ಳುವಂತೆ ರೈತರನ್ನು ಪ್ರೋತ್ಸಾಹಿಸಿದರು.
ಡಾ. ಜಿ. ಎ. ರಾಜಣ್ಣ, ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಐ. ಸಿ. ಎ. ಆರ್.-ಐ. ಐ. ಎಸ್. ಆರ್., ಪ್ರಾದೇಶಿಕ ಕೇಂದ್ರ, ಅಪ್ಪಂಗಳ, ಮಡಿಕೇರಿ ಇವರು ಮಾತಾನಾಡಿ ಭಾರತದಿಂದ ಸಂಬಾರ ಬೆಳೆಗಳ ರಫ್ತಿನ ಬಗ್ಗೆ ಕಿರುಪರಿಚಯವನ್ನು ನೀಡಿದರು. ಸುಧಾರಿತ ತಳಿಗಳ ಅಳವಡಿಕೆ, ಮಣ್ಣು ಪರೀಕ್ಷೆ, ಪೋಷಕಾಂಶಗಳ ನಿರ್ವಹಣೆ, ಕೀಟ ಮತ್ತು ರೋಗಗಳ ನಿರ್ವಹಣೆ ಹಾಗೂ ಸಾಂಬಾರ ಪದಾರ್ಥಗಳ ಸಂಸ್ಕರಣೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಹಾಗೂ, ಪೋಷಕಾಂಶಗಳ ಕೊರತೆಯ ಲಕ್ಷಣಗಳು ಮತ್ತು ರೋಗದ ಲಕ್ಷಣಗಳನ್ನು ಸರಿಯಾಗಿ ಗುರುತಿಸುವ ಅಗತ್ಯತೆಯನ್ನೂ ಅವರು ವಿವರಿಸಿದರು.
ಸರ್ಚ್ ಕೂರ್ಗ್ ಸುದ್ದಿ ಅಪ್ಡೇಟ್ಸ್
ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ
ತಾಂತ್ರಿಕ ಅಧಿವೇಶನದಲ್ಲಿ ಐಸಿಎಆರ್–ಐಐಎಸ್ಆರ್ ವಿಜ್ಞಾನಿಗಳು ವಿವಿಧ ವಿಷಯಗಳ ಕುರಿತು ಉಪನ್ಯಾಸಗಳನ್ನು ನೀಡಿದರು. ಹಿರಿಯ ವಿಜ್ಞಾನಿ ಡಾ. ಶಿವಕುಮಾರ್ ಎಂ. ಎಸ್. ಅವರು ಕಾಳುಮೆಣಸು ಮತ್ತು ಏಲಕ್ಕಿಯ ಸುಧಾರಿತ ತಳಿಗಳ ಕುರಿತು ಮಾತನಾಡಿದರು. ಹಿರಿಯ ವಿಜ್ಞಾನಿ ಡಾ. ಹೊನ್ನಪ್ಪ ಆಸಂಗಿ ಅವರು ಕಾಳುಮೆಣಸು ಮತ್ತು ಏಲಕ್ಕಿಯಲ್ಲಿ ನರ್ಸರಿ ನಿರ್ವಹಣೆ ಹಾಗೂ ಗುಣಮಟ್ಟದ ಸಸ್ಯಾಭಿವೃದ್ದಿ ವಿಧಾನಗಳ ಕುರಿತು ವಿವರಿಸಿದರು. ಡಾ. ಎಸ್. ಜೆ. ಅಂಕೇಗೌಡ, ಪ್ರಧಾನ ವಿಜ್ಞಾನಿ ಅವರು ಕಾಳುಮೆಣಸು ಮತ್ತು ಏಲಕ್ಕಿಯ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಉಪನ್ಯಾಸ ನೀಡಿದರು. ಕಾಳುಮೆಣಸು ಮತ್ತು ಏಲಕ್ಕಿಯಲ್ಲಿ ಸಮಗ್ರ ಕೀಟ ಹಾಗೂ ರೋಗ ನಿರ್ವಹಣೆಯ ಕುರಿತು ಡಾ. ಬಿಜು ಸಿ. ಎನ್., ಪ್ರಧಾನ ವಿಜ್ಞಾನಿ, ಐಸಿಎಆರ್–ಐಐಎಸ್ಆರ್, ಕೋಜೀಕೋಡ್ ಅವರು ಉಪನ್ಯಾಸವನ್ನು ನೀಡಿದರು. ರೈತರ ವಿವಿಧ ಪ್ರಶ್ನೆಗಳು ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಲು ಸಂಶೋಧನೆ–ವಿಸ್ತರಣಾ–ರೈತರ ಸಮನ್ವಯ ಸಭೆ ನಡೆಸಲಾಯಿತು.
ಡಾ. ಗಾಯತ್ರಿ, ಜಿ. ಎನ್., ವಿಜ್ಞಾನಿಗಳು, ಐ. ಸಿ. ಎ. ಆರ್.-ಐ. ಐ. ಎಸ್. ಆರ್., ಪ್ರಾದೇಶಿಕ ಕೇಂದ್ರ, ಇವರು ವಂದಿಸಿದರು. ಈ ತರಬೇತಿ ಕಾರ್ಯಕ್ರಮದಲ್ಲಿ ಕರ್ನಾಟಕದ ಕೊಡಗು, ದಕ್ಷಿಣ ಕನ್ನಡ, ಮೈಸೂರು, ತುಮಕೂರು, ಚಿಕ್ಕಮಗಳೂರು, ಬೆಂಗಳೂರು, ಹಾಸನ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ ಒಟ್ಟು 105 ರೈತರು ಭಾಗವಹಿಸಿದ್ದರು. ಭಾಗವಹಿಸಿದ ರೈತರ ಪ್ರಯೋಜನಕ್ಕಾಗಿ ಸಂಸ್ಥೆಯು ಅಭಿವೃದ್ಧಿಪಡಿಸಿದ ವಿವಿಧ ತಳಿಗಳು ಹಾಗೂ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು.
