ಕೂಡ್ಲೂರು ಶಾಲಾ ಮಕ್ಕಳ ಕೆಸರುಗದ್ದೆ ಸಂಭ್ರಮ!

ಕೂಡ್ಲೂರು ಶಾಲಾ ಮಕ್ಕಳ ಕೆಸರುಗದ್ದೆ ಸಂಭ್ರಮ | News Flash
🌾 ಕೃಷಿ & ಕ್ರೀಡೆ 📍 ಕುಶಾಲನಗರ
2 Min Read • ಆಗಸ್ಟ್ 23

ಕೂಡ್ಲೂರು ಶಾಲಾ ಮಕ್ಕಳ ಕೆಸರುಗದ್ದೆ ಸಂಭ್ರಮ!

ಮಣ್ಣಿನ ಮಡಿಲಲ್ಲಿ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು: ಗ್ರಾಮೀಣ ಸಂಸ್ಕೃತಿ ಮತ್ತು ಕೃಷಿ ಜ್ಞಾನ ಪಸರಿಸಿದ ಲಯನ್ಸ್ ಕ್ಲಬ್ ಅದ್ದೂರಿ ಕ್ರೀಡಾಕೂಟ.

ಕೂಡ್ಲೂರು ಶಾಲಾ ಮಕ್ಕಳ ಕೆಸರುಗದ್ದೆ ಸಂಭ್ರಮ!
📷
ಚಿತ್ರ ವಿವರ: ಕೂಡ್ಲೂರು ಗ್ರಾಮದ ರೈತ ಕೆ.ಎಸ್. ರಾಜಾಚಾರಿ ಅವರ ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳು.
Quick Highlights / ಮುಖ್ಯಾಂಶಗಳು
  • ✔ ಆಯೋಜನೆ: ಕುಶಾಲನಗರ ಲಯನ್ಸ್ ಕ್ಲಬ್, ಇಕೋ ಕ್ಲಬ್ ಹಾಗೂ ಎನ್‌ಎಸ್‌ಎಸ್ ಘಟಕ.
  • ✔ ಸ್ಥಳ: ಕೂಡ್ಲೂರು ಗ್ರಾಮದ ಪ್ರಗತಿಪರ ರೈತ ಕೆ.ಎಸ್.ರಾಜಾಚಾರಿ ಅವರ ಬತ್ತದ ಗದ್ದೆ.
  • ✔ ಆಟಗಳು: ಹಗ್ಗ-ಜಗ್ಗಾಟ, ಕೆಸರುಗದ್ದೆ ಓಟ, ಬೊಗಸೆಯಿಂದ ಲೋಟಕ್ಕೆ ನೀರು ತುಂಬುವ ಸ್ಪರ್ಧೆ.
  • ✔ ವಿಶೇಷ: ವಿಜೇತರಿಗೆ ನಗದು ಬಹುಮಾನ ಹಾಗೂ ರೈತ ರಾಜಾಚಾರಿ ಅವರಿಗೆ ಗೌರವ ಸನ್ಮಾನ.
Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಕುಶಾಲನಗರ: ತಾಲ್ಲೂಕಿನ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಶಾಲೆಯ ಇಕೋ ಕ್ಲಬ್ ಮತ್ತು ಎನ್.ಎಸ್.ಎಸ್. ಘಟಕದ ಸಹಯೋಗದೊಂದಿಗೆ ಕೂಡ್ಲೂರು ಗ್ರಾಮದ ಪ್ರಗತಿಪರ ರೈತ ಕೆ.ಎಸ್. ರಾಜಾಚಾರಿ ಅವರ ಬತ್ತದ ಗದ್ದೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆಯಿಲ್ಲದೆ ಕೆಸರು ಗದ್ದೆಗೆ ಇಳಿದು, ಒಬ್ಬರ ಮೇಲೊಬ್ಬರು ಕೆಸರು ಎರಚುತ್ತಾ, ಮಿಂದೆದ್ದು, ಖುಷಿಯಿಂದ ಕುಣಿದು ಕುಪ್ಪಳಿಸಿದರು. ಗದ್ದೆಯ ರೋಮಾಂಚನಕಾರಿ ವಾತಾವರಣವು ಮಕ್ಕಳ ಕ್ರೀಡಾ ಉತ್ಸಾಹಕ್ಕೆ ಮತ್ತಷ್ಟು ಮೆರುಗು ನೀಡಿತು.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಪ್ರಮುಖರ ನುಡಿಗಳು

ಕೆ.ಎನ್. ಪವನ್ ಕುಮಾರ್
ಅಧ್ಯಕ್ಷರು, ಲಯನ್ಸ್ ಕ್ಲಬ್

"ರೈತರ ಕೃಷಿ ಜೀವನ ಹಾಗೂ ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ಪರಿಚಯಿಸಲು ಮತ್ತು ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಬೆಳೆಸಲು ಈ ವಿಶಿಷ್ಠ ಗ್ರಾಮೀಣ ಕ್ರೀಡಾಕೂಟ ಸಹಕಾರಿ."

ಕೆ. ಗೋಪಾಲಕೃಷ್ಣ
ಪ್ರಭಾರ ಮುಖ್ಯೋಪಾಧ್ಯಾಯರು

"ಜನಪದ ಶೈಲಿಯ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟವು ವಿದ್ಯಾರ್ಥಿಗಳಲ್ಲಿ ಕೃಷಿ ಚಟುವಟಿಕೆಗಳು ಹಾಗೂ ದೇಶದ ಕೃಷಿ ಜೀವನದ ಬಗೆಗೆ ನೈಜ ಅರಿವು ಮೂಡಿಸುತ್ತದೆ."

ಸುಮನ್ ಬಾಲಚಂದ್ರ & ಟಿ.ಕೆ. ರಾಜಶೇಖರ್
ಲಯನ್ಸ್ ಕ್ಲಬ್ ಪದಾಧಿಕಾರಿಗಳು

"ಈ ಕ್ರೀಡೆಯು ಮಕ್ಕಳಲ್ಲಿ ಪರಸ್ಪರ ಭ್ರಾತೃತ್ವ ಬೆಳೆಸುವುದರೊಂದಿಗೆ ಮಣ್ಣಿನೊಂದಿಗಿನ ಸಂಪರ್ಕವನ್ನು ಗಟ್ಟಿಮಾಡುತ್ತದೆ. ಮುಂದಿನ ಪೀಳಿಗೆಗೆ ಇದು ಸ್ಫೂರ್ತಿ."

ಕೆ.ಎಸ್. ರಾಜಾಚಾರಿ
ಪ್ರಗತಿಪರ ರೈತ

"ಗ್ರಾಮದಲ್ಲಿ ಕಳೆದ 5 ವರ್ಷಗಳಿಂದ ಸತತವಾಗಿ ಕೆಸರುಗದ್ದೆ ಕ್ರೀಡಾಕೂಟ ಸಂಘಟಿಸುತ್ತಿರುವುದರಿಂದ ಮಕ್ಕಳಿಗೆ ಕಲಿಕೆಯ ಜೊತೆಗೆ ಕೃಷಿ ಜ್ಞಾನವೂ ಲಭ್ಯವಾಗುತ್ತಿದೆ."

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

🏆 ವಿಜೇತರಿಗೆ ನಗದು ಬಹುಮಾನ & ಸನ್ಮಾನ

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎನ್. ಪವನ್ ಕುಮಾರ್ ಮತ್ತು ವೀಣಾ ಪವನ್ ಕುಮಾರ್ ನಗದು ಬಹುಮಾನ ವಿತರಿಸಿ ಪ್ರೋತ್ಸಾಹಿಸಿದರು. ಇದೇ ಸಂದರ್ಭದಲ್ಲಿ 5 ವರ್ಷಗಳಿಂದ ಗದ್ದೆ ಒದಗಿಸಿ ಸಹಕರಿಸುತ್ತಿರುವ ಪ್ರಗತಿಪರ ರೈತ ಕೆ.ಎಸ್. ರಾಜಾಚಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

🏃‍♀️ ಓಟದ ಸ್ಪರ್ಧೆ 💪 ಹಗ್ಗ-ಜಗ್ಗಾಟ 🥤 ಬೊಗಸೆಯಿಂದ ಲೋಟ ಸ್ಪರ್ಧೆ

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ.ಸೌಮ್ಯ, ಶಿಕ್ಷಕ ಎಂ.ಟಿ.ದಯಾನಂದ ಪ್ರಕಾಶ್, ಲಯನ್ಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ನಾರಾಯಣ್, ಟ್ರಸ್ಟ್ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ, ಉಪಾಧ್ಯಕ್ಷ ನಿತಿನ್ ಗುಪ್ತ, ಕಾರ್ಯದರ್ಶಿ ಕಿರಣ್ ಗೌಡ, ಕೋಶಾಧಿಕಾರಿ ಡಾ. ರಾಘವೇಂದ್ರ, ಪದಾಧಿಕಾರಿಗಳಾದ ನವ್ಯ, ಗ್ರಾಮ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಸಿ. ಜವರೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಲಿಂಕ್ ನಕಲಿಸಲಾಗಿದೆ! (Link copied)
Search Coorg Media
Search Coorg Media
Articles: 938
0 0 votes
Article Rating
Subscribe
Notify of
guest
0 Comments
Newest
Oldest Most Voted
0
Would love your thoughts, please comment.x
()
x