Shree Kote Mahaganapathi Dasara Samithi Temple Dasara ಶ್ರೀ ಕೋಟೆ ಗಣಪತಿ ದಸರಾ ಸಮಿತಿ

ಶ್ರೀ ಕೋಟೆ ಮಹಾಗಣಪತಿ ದಸರಾ ಸಮಿತಿ - ಶೀರ್ಷಿಕೆ
🚩 ಐತಿಹಾಸಿಕ ಮಡಿಕೇರಿ ದಸರಾ 🚩

🕉️ ಶ್ರೀ ಕೋಟೆ ಮಹಾ ಗಣಪತಿ ದೇವಾಲಯ 🕉️

ಶ್ರೀ ಕೋಟೆ ಮಹಾಗಣಪತಿ ದಸರಾ 50ನೇ ವರ್ಷದ ಲಾಂಛನ (2026)
🎉 50 ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆ (2026) 🎉
🪔 🌺 🐘 🌺 🪔
ದಸರಾ ಮಹೋತ್ಸವ ಸಮಿತಿ 📍 ಮಡಿಕೇರಿ, ಕೊಡಗು
🐘

ಶ್ರೀ ಕೋಟೆ ಮಹಾಗಣಪತಿ 2026

ದೈವಿಕ ಸೇವೆ & ಭಕ್ತಿ ಸಂಕಲ್ಪ

ಒಡೆದ ಕಾಯಿಗಳು
0
👆 ಮಂಟಪದ ಮೇಲೆ ಟ್ಯಾಪ್ ಮಾಡಿ ಅಥವಾ ಸ್ವೈಪ್ ಮಾಡಿ ತೆಂಗಿನಕಾಯಿ ಒಡೆಯಿರಿ! 🥥⚡
Shree Kote Mahaganapathi Dasara Samithi Temple Dasara ಶ್ರೀ ಕೋಟೆ ಗಣಪತಿ ದಸರಾ ಸಮಿತಿ
🚩 ಶ್ರೀ ಕೋಟೆ ಮಹಾಗಣಪತಿ ದಿವ್ಯ ದರ್ಶನ 🙏
ಶ್ರೀ ಕೋಟೆ ಮಹಾಗಣಪತಿ ದಸರಾ - ಸಂಪೂರ್ಣ ವಿವರಗಳು
🏛️ 9 ನೇ ಪ್ರಮುಖ ದಶಮಂಟಪ
📖 ಪ್ರಾಸ್ತಾವಿಕ 🌺
ಶ್ರೀ ಕೋಟೆ ಮಹಾಗಣಪತಿ ದೇವಸ್ಥಾನ
Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

🚩 ಐತಿಹಾಸಿಕ ಮಡಿಕೇರಿ ಜನೋತ್ಸವದ ಹೆಮ್ಮೆಯ 9ನೇಯ ಪ್ರಮುಖ ದಶಮಂಟಪ! 🐘✨

🎊 ಮಡಿಕೇರಿ ದಸರಾ ಉತ್ಸವದ 9ನೇಯ ಮಂಟಪವಾಗಿದೆ. 🏰 ರಾಜರ ಆಳ್ವಿಕೆಯ ಕಾಲದಲ್ಲಿ ಮಡಿಕೇರಿ ಕೋಟೆಯೊಳಗೆ ಸ್ಥಾಪಿಸಲ್ಪಟಿರುವ ಶ್ರೀ ಕೋಟೆ ಮಹಾಗಣಪತಿ 🕉️ ತನ್ನ ಭಕ್ತರಿಗೆ ನೆಚ್ಚಿನ ದೈವವಾಗಿ ಭಕ್ತರ ಕಷ್ಠ- ಕಾರ್ಪಣ್ಯಗಳನ್ನು ಬಗೆಹರಿಸುತ್ತಿದ್ದಾರೆಂದು ಬಲವಾಗಿ ನಂಬಿದ್ದಾರೆ 🙏. ಕಳೆದ 45 ವರ್ಷಗಳಿಂದ ತನ್ನದೆ ಆದ ವಿಶಿಷ್ಠ ರೀತಿಯಲ್ಲಿ ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿರುವ ಶ್ರೀ ಕೊಟೆಮಹಾಗಣಪತಿ ದಸರಾ ಸಮಿತಿಯು ಇದೀಗ 46ನೇ ವರ್ಷದ ಸಂಭ್ರಮದಲ್ಲಿದ್ದೆ 🪔✨.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

✨ ಪ್ರಸ್ತುತ ಶ್ರೀ ಕೋಟೆ ಮಹಾಗಣಪತಿ ದಸರಾ ಸಮಿತಿಯು ತನ್ನ ಹೆಮ್ಮೆಯ 50 ನೇ ವರ್ಷದ ಸುವರ್ಣ ಮಹೋತ್ಸವದ (2026) ಶುಭ ಸಂಭ್ರಮಕ್ಕೆ ಅದ್ಧೂರಿಯಾಗಿ ಅಡಿಯಿಡುತ್ತಿದೆ 🎉🚩.

📜 ಹಿನ್ನಲೆ - ಇತಿಹಾಸ 🏰

👑 ಕೊಡಗನ್ನಾಳುತ್ತಿದ್ದ ವೀರರಾಜೇಂದ್ರ ರಾಜನು ಮಡಿಕೇರಿಯ ಕೋಟೆಯ ಒಳಗೆ ಗಣಪತಿ ದೇವಾಲಯವನ್ನು ನಿರ್ಮಿಸಿದರು 🏰. ತನ್ನ ಮನೆಯ ದೇವರೆಂದೇ ಪೂಜಿಸುವ ಶ್ರೀ ಗಣಪತಿ ದೇವರಿಗೆ ನಮಿಸಿಯೇ ಕೆಲಸವನ್ನು ಪ್ರಾರಂಭಿಸುತ್ತಿದ್ದರು 🙏. ಇದರ ಗೋಪುರ ಚಿಕ್ಕದಾದರೂ, ಗಣಪತಿಯ ಶಕ್ತಿ ಅಪಾರ ⚡🕉️.

🏛️ ಪ್ರಸ್ತುತವಾಗಿ ಜಿಲ್ಲಾಧಿಕಾರಿಗಳ ಕಛೇರಿ, ನ್ಯಾಯಾಲಯ ⚖️, ಜಿಲ್ಲಾಪಂಚಾಯತ್, ಲೋಕೋಪಯೋಗಿ ಇಲಾಖೆ, ಪ್ರಾಚ್ಯವಸ್ತು ಸಂಗ್ರಹಾಲಯ 🏺, ಗ್ರಂಥಾಲಯ 📚, ಇನ್ನು ಹಲವಾರು ಕಛೇರಿಗಳನ್ನು ಹೊಂದಿರುವ ಕೋಟೆಯ ಒಳಗೆ ತೆರಳುವ ಸಾರ್ವಜನಿಕರು ಯಾರೇ ಇರಲಿ, ಈ ಗಣಪತಿಗೆ ಕೈ ಮುಗಿದು ತನ್ನ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿಯೇ ಮುಂದುವರಿಯುತ್ತಾರೆ 🪔.

🐘 ಚಿನ್ನದ ಆನೆಯ ಪವಾಡ 🌟:

🌍 ಹಿಂದೊಮ್ಮೆ ಪರದೇಶದಲ್ಲಿದ್ದವನಿಗೆ 30 ಆನೆಗಳಿದ್ದವಂತೆ 🐘🐘🐘. ಅದರಲ್ಲಿ ಒಂದು ಆನೆ ತಪ್ಪಿಸಿಕೊಂಡು ಹೋದಾಗ ತಾವು ನಂಬಿದ್ದ ಕೋಟೆ ಶ್ರೀ ಮಹಾಗಣಪತಿಯನ್ನು ಅಲ್ಲಿಂದಲೇ ಮನಸ್ಸಿನಲ್ಲಿ ಪ್ರಾರ್ಥಿಸಿದ್ದರಂತೆ 🙏. ಒಂದು ವಾರದ ಬಳಿಕ ತಪ್ಪಿಸಿಕೊಂಡ ಆನೆ ಸ್ವಸ್ಥಾನಕ್ಕೆ ಬಂದಿತು ✨. ಇದಕ್ಕೆ ಕಾಣಿಕೆಯಾಗಿ ಆನೆಯ ಮಾಲಿಕ ಕೊಡಗಿಗೆ ಬಂದಾಗ ಈ ದೇವಾಲಯಕ್ಕೆ ತೆರಳಿ ಚಿನ್ನದ ಆನೆಯ ಪ್ರತಿರೂಪವನ್ನು ದೇವರಿಗೆ ಅರ್ಪಿಸಿದರು 💛🐘. ಇಂತಹ ನಿದರ್ಶನಗಳು ಹಲವು ಇವೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

🌺 ಈ ದೇವಾಲಯದಲ್ಲಿ ಗಣೇಶ ಚತುರ್ಥಿ, ನವರಾತ್ರಿ ಉತ್ಸವ, ಅತಿ ವಿಜ್ರಂಭಣೆಯಿಂದ ನಡೆಯುತ್ತದೆ 🎉. ದಸರಾ ಮಹೋತ್ಸವದ ದಶಮಂಟಪಗಳಲ್ಲಿ 9ನೇ ಮಂಟಪವಾಗಿ ಶ್ರೀ ಕೋಟೆಮಹಾಗಣಪತಿ ದೇವಾಲಯದ್ದಾಗಿದೆ 🚩. ಇಲ್ಲಿ ನಿತ್ಯ ಪೂಜೆ ಜರುಗುತ್ತದೆ 🪔. ಪ್ರತಿ ವರ್ಷ ಹುತ್ತರಿ ಹಬ್ಬದಂದು ಓಂಕಾರೇಶ್ವರ ದೇವಾಲಯದ ಗದ್ದೆಯಲ್ಲಿ ಕದಿರನ್ನು ಕೊಯ್ದು 🌾 ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಲ್ಲಿ ತೆರಳಿ 🥁🎺 ಕೋಟೆ ಮಹಾಗಣಪತಿಗೆ ಮೊದಲ ಭತ್ತದ ತೆನೆಯನ್ನು (ಕದಿರು) ಕಟ್ಟುವುದು ಸಂಪ್ರದಾಯ 🌾✨.

✦ ಮಂಟಪದ ವಿವರಗಳು - 2026 (50ನೇ ಸುವರ್ಣ ಮಹೋತ್ಸವ ವರ್ಷ) ✦
🚩 50 ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮ (2026) 🚩

ಕಥಾಸಾರ : "ಶೀಘ್ರದಲ್ಲೇ ಪ್ರಕಟಿಸಲಾಗುವುದು..." 🪔✨

⏱️ ತೀರ್ಪಿನ ಸಮಯ : ಅಧಿಕೃತ ಪ್ರಕಟಣೆ ನಿರೀಕ್ಷಿಸಲಾಗಿದೆ
📍 ಪ್ರದರ್ಶನ ಸ್ಥಳ : ಐತಿಹಾಸಿಕ ಮಡಿಕೇರಿ ಜನೋತ್ಸವದ ಪ್ರಮುಖ ರಾಜಬೀದಿಗಳಲ್ಲಿ
👤 ಅಧ್ಯಕ್ಷರು & ಪದಾಧಿಕಾರಿಗಳು : ಶ್ರೀ ಕೋಟೆ ಮಹಾಗಣಪತಿ ದಸರಾ ಸಮಿತಿ - 2026
🎨 ಕಲಾ ನಿರ್ದೇಶನ : ಸಿದ್ಧತೆಗಳು ಭರದಿಂದ ಸಾಗುತ್ತಿವೆ
💡 ಲೈಟಿಂಗ್ ಬೋರ್ಡ್ : ವಿಶೇಷ ವಿದ್ಯುತ್ ದೀಪಾಲಂಕಾರ
🎭 ಒಟ್ಟು ಕಲಾಕೃತಿಗಳು : ಭವ್ಯ ಸುವರ್ಣ ಮಹೋತ್ಸವ ಮಂಟಪ ಸೆಟ್
🏗️ ವೇದಿಕೆ & ಚಲನವಲನ : ಅತ್ಯಾಧುನಿಕ ಮೆಕ್ಯಾನಿಕಲ್ ತಂತ್ರಜ್ಞಾನ
🔊 ಧ್ವನಿ ಮತ್ತು ಬೆಳಕು : ಹೈ-ಡೆಫಿನಿಷನ್ ಡಿಜಿಟಲ್ ಸೌಂಡ್ಸ್
🎆 ಸ್ಪೆಷಲ್ ಎಫೆಕ್ಟ್ಸ್ & ಫೈರ್‌ವರ್ಕ್ಸ್ : ವಿಶೇಷ ಆಕರ್ಷಣೆಗಳು
👥 ಒಟ್ಟು ಸದಸ್ಯರು : 450+ ಉತ್ಸಾಹಿ ಸದಸ್ಯರು

🌺 2026 ರ ದಸರಾ ಮಹೋತ್ಸವಕ್ಕೆ ಸ್ವಾಗತ 🌺

ಶ್ರೀ ಕೋಟೆ ಮಹಾಗಣಪತಿ ದೇವಸ್ಥಾನವು ಈ ವರ್ಷ 50 ನೇ ವರ್ಷದ ಸುವರ್ಣ ಮಹೋತ್ಸವ ಐತಿಹಾಸಿಕ ಮಡಿಕೇರಿ ದಸರಾ ಆಚರಣೆಗೆ ಅದ್ಧೂರಿಯಾಗಿ ಸಜ್ಜಾಗುತ್ತಿದ್ದು, ಸಮಿತಿಯ ಅಧಿಕೃತ ವಿವರಗಳು ಹಾಗೂ ಕಥಾ ಸಾರಾಂಶಗಳನ್ನು ಶೀಘ್ರದಲ್ಲಿಯೇ ಈ ಜಾಲತಾಣದಲ್ಲಿ ಅಪ್‌ಡೇಟ್ ಮಾಡಲಾಗುವುದು.

🎉 ಸುವರ್ಣ ಮಹೋತ್ಸವ ವರ್ಷ - ಸಮಸ್ತ ಭಕ್ತಾದಿಗಳಿಗೆ ಸ್ವಾಗತ ಸುಸ್ವಾಗತ! 🎉

⭐ ಸಂಕಲ್ಪ & ಗುರಿ:

ಸುವರ್ಣ ವರ್ಷದ ಮಂಟಪವನ್ನು ಅತಿ ವಿಶಿಷ್ಟವಾಗಿ, ಭಕ್ತಿಭಾವದೊಂದಿಗೆ ಅತ್ಯುನ್ನತ ಕಲಾತ್ಮಕತೆಯಿಂದ ನಿರ್ಮಿಸಿ ಪ್ರಥಮ ಬಹುಮಾನವನ್ನು ಮುಡಿಗೇರಿಸಿಕೊಳ್ಳುವ ದೃಢ ಸಂಕಲ್ಪದೊಂದಿಗೆ ಸಮಿತಿಯ ಪ್ರತಿಯೊಬ್ಬ ಸದಸ್ಯರೂ ಹಗಲಿರುಳು ಶ್ರಮಿಸುತ್ತಿದ್ದಾರೆ.

© 2026 ಶ್ರೀ ಕೋಟೆ ಮಹಾಗಣಪತಿ ದಸರಾ ಸಮಿತಿ, ಮಡಿಕೇರಿ. ಸರ್ವ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
Shree Kote Mahaganapathi Dasara Samithi Temple Dasara ಶ್ರೀ ಕೋಟೆ ಗಣಪತಿ ದಸರಾ ಸಮಿತಿ
🔔 ⚜️ 🔔 ⚜️ 🔔 🦁
🔔 ⚜️ 🔔 ⚜️ 🔔 🦁
👑 50 YEARS ✨ ಸುವರ್ಣ ಮಹೋತ್ಸವ 🐘 1976 - 2026

🌺 ಶ್ರೀ ಕೋಟೆ ಮಹಾಗಣಪತಿ 🐘

ದಸರಾ ಮಂಟಪ ಸಮಿತಿ, ಮಡಿಕೇರಿ 2026 🚩

✨ 50ನೇ ವರ್ಷದ ದಸರಾ ಸುವರ್ಣ ಮಹೋತ್ಸವ ✨

🙏 ಮಾನ್ಯ ಭಕ್ತ ಮಹಾಜನರಲ್ಲಿ ವಿನಂತಿ 🙏

ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಸುವರ್ಣ ದಸರಾ ಉತ್ಸವದ ಅಂಗವಾಗಿ, ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 🪔✨

🔥 ದಿನಾಂಕ 11-10-2026, ರವಿವಾರ ಬೆಳಗ್ಗೆ 8.00 ಗಂಟೆಗೆ, ಮೇಲ್ಕಂಡ ದೇವಾಲಯದಲ್ಲಿ ಗಣಪತಿ ಹೋಮ ಜರುಗಲಿದ್ದು, ಎಲ್ಲಾ ಭಕ್ತಾದಿಗಳೂ ಈ ಪವಿತ್ರ ಪೂಜಾ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಶ್ರೀ ಮಹಾಗಣಪತಿಯ ದಿವ್ಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಈ ಮೂಲಕ ಸವಿನಯವಾಗಿ ವಿನಂತಿಸಿಕೊಳ್ಳುತ್ತೇವೆ. 🥥🌿🙏

👑 ನವರಾತ್ರಿಯ ಕೊನೆಯ ದಿನವಾದ ದಿನಾಂಕ 21-10-2026, ಬುಧವಾರ, ವಿಜಯದಶಮಿಯ ಪಾವನ ಅಂಗವಾಗಿ ವಿಶೇಷ ಆಕರ್ಷಣೀಯ, ⚡ ಭವ್ಯ ವಿದ್ಯುತ್ ಅಲಂಕೃತ ಮಂಟಪ ಹಾಗೂ 🥁 ವಾದ್ಯಗೋಷ್ಠಿಯೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಅದ್ಧೂರಿಯ ಮೆರವಣಿಗೆ ನಡೆಯಲಿದೆ. 🌟

🎉 50ನೇ ವರ್ಷದ ಸುವರ್ಣ ದಸರಾ ನಮ್ಮೆಲ್ಲರ ಹೆಮ್ಮೆಯ ಸಂಭ್ರಮ. ವರ್ಷಗಳ ಪರಂಪರೆ, ಭಕ್ತಿಯ ಭಾವನೆ ಮತ್ತು ಮಡಿಕೇರಿಯ ದಸರಾ ವೈಭವವನ್ನು ಇನ್ನಷ್ಟು ವಿಜೃಂಭಣೆಯಿಂದ ಸಾರುವ ಈ ಸುವರ್ಣ ಸಂಭ್ರಮದಲ್ಲಿ ತಾವೆಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಬೇಕಾಗಿ ಆತ್ಮೀಯವಾಗಿ ಕೋರುತ್ತೇವೆ. 🎊👨‍👩‍👧‍👦✨

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

🤝 ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ಭಕ್ತಾದಿಗಳು ದಸರಾ ಮಂಟಪಕ್ಕೆ ತುಂಬು ಹೃದಯದಿಂದ ತನು, ಮನ, ಧನ ಸಹಾಯ ಮಾಡಿ, ಈ ಬಾರಿಯೂ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ನಮ್ಮೊಂದಿಗೆ ಸಹಕರಿಸಬೇಕಾಗಿ ಈ ಮೂಲಕ ಸಮಿತಿಯ ವತಿಯಿಂದ ಕೇಳಿಕೊಳ್ಳುತ್ತೇವೆ. 🙌

🕉️ ಶ್ರೀ ಮಹಾಗಣಪತಿಯ ಆಶೀರ್ವಾದವು ಸದಾ ತಮ್ಮೆಲ್ಲರ ಮೇಲಿರಲಿ. ಈ ಸುವರ್ಣ ದಸರಾ ಉತ್ಸವವು ಭಕ್ತಿ, ಸೌಹಾರ್ದತೆ ಮತ್ತು ಸಂಭ್ರಮದಿಂದ ಯಶಸ್ವಿಯಾಗಿ ನೆರವೇರಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತೇವೆ. 💐🙏

❖
❖
❖
❖
“ಶಾಶ್ವತ ಬ್ರ್ಯಾಂಡ್ ಗುರುತು”
ಶ್ರೀ ಕೋಟೆ ಮಹಾಗಣಪತಿ ದಸರಾ 2026 ಅಧಿಕೃತ ಲೋಗೋ
★ ★ ★ ★ ★ ★ ★ ★ ★ ★ ★ ★ ★ ★
ಶ್ರೀ ಕೋಟೆ ಮಹಾಗಣಪತಿ ಲೋಗೋದ ೭ ದಿವ್ಯ ಸಂಕೇತಗಳ ಪರಿಚಯ ಹಾಗೂ ಮಹತ್ವ
🐘
೧. ಗಣೇಶ (ಮುಖ್ಯ ಚಿಹ್ನೆ) ಆರಾಧ್ಯ ದೇವರು

ಲೋಗೋದಲ್ಲಿ ಮಧ್ಯದಲ್ಲಿ ಶ್ರೀ ಗಣೇಶನ ಚಿತ್ರ ನಮ್ಮ ಆರಾಧ್ಯ ದೇವ. ಗಣೇಶನು ಶುಭಾರಂಭ, ಜ್ಞಾನ ಮತ್ತು ವಿಘ್ನ ನಿವಾರಕ ಎಂದು ಪರಿಗಣಿಸಲಾಗುತ್ತದೆ. ಸಕಲ ಕಾರ್ಯಗಳ ಆರಂಭಕ್ಕೂ ಪ್ರಥಮ ಪೂಜಿತನಾದ ವಿಘ್ನವಿನಾಶಕನ ದಿವ್ಯ ಅನುಗ್ರಹವು ಸಮಿತಿಯ ಅಡಿಪಾಯವಾಗಿದೆ.

🦁
೨. ಸಿಂಹ – ದೇವಿಯ ವಾಹನ ಶೌರ್ಯ & ರಕ್ಷಣೆ

ಲೋಗೋದಲ್ಲಿರುವ ಸಿಂಹವು ಶ್ರೀ ಚಾಮುಂಡೇಶ್ವರಿ ದೇವಿಯ ವಾಹನವನ್ನು ಸೂಚಿಸುತ್ತದೆ. ಇದು ಶಕ್ತಿ, ಧೈರ್ಯ ಮತ್ತು ರಕ್ಷಣೆಯ ಸಂಕೇತ. ಅದಮ್ಯ ಶಕ್ತಿ ಮತ್ತು ನಿಷ್ಠೆಯೊಂದಿಗೆ ಮಡಿಕೇರಿ ದಸರಾ ಸಂಸ್ಕೃತಿಯನ್ನು ಮುನ್ನಡೆಸುವ ಸಾಹಸದ ಪ್ರತೀಕವಾಗಿದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
🔱
೩. ತ್ರಿಶೂಲ – ಶಿವನ ಸಂಕೇತ ದೈವಿಕ ಆಯುಧ

ತ್ರಿಶೂಲವು ಪರಮಶಿವನ ಪರಮ ಪವಿತ್ರ ಆಯುಧವಾಗಿದೆ. ಇದು ಶಕ್ತಿ, ಧರ್ಮ ಮತ್ತು ದೈವಿಕ ಶಕ್ತಿಯನ್ನು ಸೂಚಿಸುತ್ತದೆ. ತ್ರಿಗುಣಗಳ (ಸತ್ವ, ರಜಸ್, ತಮಸ್) ಸಮತೋಲನ ಹಾಗೂ ಅಧರ್ಮದ ಸಂಹಾರದ ಶಕ್ತಿಯನ್ನು ಇದು ಸಾರುತ್ತದೆ.

⭐ ೧೪
೪. ೧೪ ನಕ್ಷತ್ರಗಳು ೧೪ ಪ್ರಥಮ ಬಹುಮಾನಗಳು

ಲೋಗೋದಲ್ಲಿರುವ ೧೪ ನಕ್ಷತ್ರಗಳು ಮಡಿಕೇರಿ ದಸರಾ ಮಂಟಪ ಉತ್ಸವದಲ್ಲಿ ಎಸ್.ಕೆ.ಎಂ.ಜಿ (SKMG) ಸಮಿತಿಯು ಗಳಿಸಿದ ೧೪ ಪ್ರಥಮ ಬಹುಮಾನಗಳನ್ನು ಹೆಮ್ಮೆಯಿಂದ ಸೂಚಿಸುತ್ತವೆ. ಸಮಿತಿಯ ದಶಕಗಳ ಕಲಾ ವೈಭವ ಮತ್ತು ಸತತ ಶ್ರೇಷ್ಠತೆಯ ಶಾಶ್ವತ ಕಿರೀಟವಿದು.

🚩
೫. ಧ್ವಜ ವಿಜಯ & ಗೌರವ

ಲೋಗೋದಲ್ಲಿ ಹಾರಾಡುವ ಧ್ವಜವು ವಿಜಯ ಮತ್ತು ಹಬ್ಬದ ಗೌರವವನ್ನು ಸೂಚಿಸುತ್ತದೆ. ವಿಜಯದಶಮಿಯ ಪಾವನ ಸಂಭ್ರಮದಲ್ಲಿ ಸತ್ಯ, ಧರ್ಮ ಮತ್ತು ಭಕ್ತಿಯ ವಿಜಯ ಪತಾಕೆಯನ್ನು ಸದಾ ಮುಗಿಲೆತ್ತರಕ್ಕೆ ಹಾರಿಸುವ ಸಂಕಲ್ಪವಿದು.

೬. ಸುವರ್ಣ ಬಣ್ಣ (ಗೋಲ್ಡ್) ೫೦ನೇ ವರ್ಷದ ಸಂಭ್ರಮ

ಸುವರ್ಣ ಬಣ್ಣವು ೫೦ನೇ ಸುವರ್ಣ ಮಹೋತ್ಸವವನ್ನು (1976 - 2026) ಸೂಚಿಸುತ್ತದೆ. ಇದು ಸಮೃದ್ಧಿ, ಗೌರವ, ಔನ್ನತ್ಯ ಮತ್ತು ನಿರಂತರ ಯಶಸ್ಸಿನ ಸಂಕೇತವಾಗಿದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
೭. ಕೆಂಪು ಬಣ್ಣ ಕುಂಕುಮ & ಶಕ್ತಿ

ಕೆಂಪು ಬಣ್ಣವು ಶಕ್ತಿ, ಭಕ್ತಿ ಮತ್ತು ಹಬ್ಬದ ಮಹದೋತ್ಸಾಹವನ್ನು ಸೂಚಿಸುತ್ತದೆ. ಇದು ಮುತ್ತೈದೆಯರ ಕುಂಕುಮದ ಪಾವಿತ್ರ್ಯತೆಯನ್ನು ಹಾಗೂ ಮಂಗಳಕರ ದೈವಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

❖
❖
❖
❖

🌺 ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ 🐘 ಈ ವರ್ಷ ತನ್ನ ✨ 50ನೇ ವರ್ಷದ ದಸರಾ ಉತ್ಸವವನ್ನು ✨ ಅತ್ಯಂತ ವಿಜೃಂಭಣೆಯಿಂದ ಹಾಗೂ ಭಕ್ತಿಭಾವದಿಂದ ಆಚರಿಸುತ್ತಿದೆ. 🪔 ಐವತ್ತು ವರ್ಷಗಳ ಈ ಪಯಣವು ಸಮಿತಿಯ ಸದಸ್ಯರ ಪರಿಶ್ರಮ, ಹಿರಿಯರ ಮಾರ್ಗದರ್ಶನ, ಯುವಕರ ಉತ್ಸಾಹ ಮತ್ತು ಶ್ರೀ ಮಹಾಗಣಪತಿಯ ಕೃಪೆಯ ಪ್ರತೀಕವಾಗಿದೆ. 🙏

🏛️ ಈ ಮಂಟಪವು 1976ನೇ ಇಸವಿಯಲ್ಲಿ ಮಡಿಕೇರಿ ದಸರಾ ಉತ್ಸವದಲ್ಲಿ ಸೇರಿಕೊಂಡಿತು. ಆ ಸಮಯದಲ್ಲಿ ಮಡಿಕೇರಿಯಲ್ಲಿ ಒಟ್ಟು 8 ಮಂಟಪ ಸಮಿತಿಗಳು ಇದ್ದವು. ಮೊದಲಿಗೆ ಸರ್ಕಾರದ ನೌಕರರು ಮತ್ತು ಅಧಿಕಾರಿಗಳ ಸಹಕಾರದಿಂದ ಈ ಮಂಟಪ ಆರಂಭವಾಯಿತು. 📜 ನಂತರ ಎಸ್.ಎಂ. ಅರುಣ್ ಕುಮಾರ್, ಬಿ.ಎಸ್. ವೆಂಕಟಾಚಲ, ಬಿ.ಎಸ್. ಮೋಹನ್, ಎಂ.ಎಸ್. ಸುಧಾಕರ್, ಪ್ರತಾಪ್ ಶೇಟ್, ಸತೀಶ್ ಭಟ್, ರಘುನಾಥ್ ರಾವ್, ಬಿ.ಪಿ ಕೃಷ್ಣ, ಬಾಬು ಗಂಗಾಧರ ಹಾಗೂ ಇತರರು ಸೇರಿಕೊಂಡು ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯನ್ನು ಸಜ್ಜುಗೊಳಿಸಿದರು. 👥 2000ನೇ ಇಸವಿಯಲ್ಲಿ, ಎಕ್ಸಿಕ್ಯುಟಿವ್ ಇಂಜಿನಿಯರ್ ಸತ್ಯನಾರಾಯಣ ರಾವ್ ಮತ್ತು ಸರ್ಕಾರಿ ನೌಕರರು ಸೇರಿ ದಸರಾ ಶೋಭಾಯಾತ್ರೆಯನ್ನು ಸಜ್ಜುಗೊಳಿಸುತ್ತಾ ಯಶಸ್ವಿಯಾಗಿ ಮುಂದುವರೆದಿದ್ದಾರೆ. 🚩 ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಇಂದು ಯುವಪೀಳಿಗೆಯವರು ಅದೇ ಉತ್ಸಾಹ, ಶಿಸ್ತು ಮತ್ತು ಭಕ್ತಿಯಿಂದ ಸಮಿತಿಯ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪ್ರತಿಯೊಂದು ದಸರಾವೂ ಭಕ್ತಿ, ಸಾಂಸ್ಕೃತಿಕ ವೈಭವ ಹಾಗೂ ಕಲಾತ್ಮಕತೆಯ ಸುಂದರ ಸಂಗಮವಾಗಿ ರೂಪಗೊಳ್ಳುತ್ತಿದೆ. 🎨✨

🏆 ಸ್ಪರ್ಧಾ ಇತಿಹಾಸದಲ್ಲಿ ಈ ಸಮಿತಿಯು ಇದುವರೆಗೆ 🥇 14 ಪ್ರಥಮ 🥈 11 ದ್ವಿತೀಯ 🥉 10 ತೃತೀಯ ಬಹುಮಾನಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದೆ. ⭐ 47 ಸ್ಪರ್ಧಾತ್ಮಕ ವರ್ಷಗಳಲ್ಲಿ ಒಟ್ಟು 35 ಬಹುಮಾನಗಳನ್ನು ಗೆದ್ದು, 📊 74.46% ಗೆಲುವಿನ ಶೇಕಡಾವಾರು ದಾಖಲಿಸಿರುವುದು ಮಡಿಕೇರಿ ದಸರಾ ಇತಿಹಾಸದಲ್ಲೇ ಅತ್ಯುತ್ತಮ ಸಾಧನೆಯಾಗಿದೆ. 🌟 ಈ ಸಾಧನೆ ಸಮಿತಿಯ ನಿರಂತರ ಶ್ರಮ, ಶಿಸ್ತು ಮತ್ತು ಕಲಾತ್ಮಕ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ. ಬಹುಮಾನಗಳ ಇತಿಹಾಸದ ಹಿಂದೆ ಕೇವಲ ಸ್ಪರ್ಧೆಯ ಯಶಸ್ಸಷ್ಟೇ ಅಲ್ಲ, ಭಕ್ತಿ, ದೈವಾನುಗ್ರಹ ಮತ್ತು ಅನೇಕ ದಿವ್ಯ ಅನುಭವಗಳ ಕಥೆಗಳೂ ಅಡಗಿವೆ. ಪ್ರತಿ ವರ್ಷದ ಮಂಟಪವು ಒಂದು ವಿಶೇಷ ಸಂದೇಶ, ಪೌರಾಣಿಕ ಕಥೆ ಅಥವಾ ಧಾರ್ಮಿಕ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ನಿರ್ಮಾಣವಾಗಿದ್ದು, ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ಮೂಡಿಸುತ್ತಿದೆ. 🕉️

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

🎯 ಪ್ರತಿ ವರ್ಷ ಈ ಮಂಟಪವು ಯಾವುದಾದರೂ ಬಹುಮಾನಕ್ಕಾಗಿ ಪ್ರಬಲ ಸ್ಪರ್ಧೆಯನ್ನು ನೀಡುತ್ತದೆ. ಇಂದಿಗೂ ಹಿರಿಯರ ಮಾರ್ಗದರ್ಶನದೊಂದಿಗೆ ಹಲವಾರು ಯುವಕರು ಉತ್ಸಾಹದಿಂದ ಮಂಟಪವನ್ನು ಯಶಸ್ವಿಯಾಗಿ ಸಜ್ಜುಗೊಳಿಸುತ್ತಿದ್ದಾರೆ. 🌟 50 ವರ್ಷಗಳ ಈ ಸುವರ್ಣ ಪಯಣವು ಶ್ರೀ ಕೋಟೆ ಮಹಾಗಣಪತಿಯ ಆಶೀರ್ವಾದ, ಸದಸ್ಯರ ಸಮರ್ಪಣೆ ಹಾಗೂ ಸಾರ್ವಜನಿಕರ ನಿರಂತರ ಸಹಕಾರದಿಂದ ಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿಯೂ ಇದೇ ಪರಂಪರೆ ಇನ್ನಷ್ಟು ವೈಭವದಿಂದ ಮುಂದುವರಿಯಲಿ ಎಂಬುದು ಸಮಿತಿಯ ಆಶಯವಾಗಿದೆ. 🎊🙏✨

ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ (ರಿ.) ಮಡಿಕೇರಿ
❖
❖
❖
❖
॥ ಶ್ರೀ ಗಣೇಶಾಯ ನಮಃ ॥

ಶ್ರೀ ಕೋಟೆ ಮಹಾಗಣಪತಿ

ದಸರಾ ಮಂಟಪ ಸಮಿತಿ (ರಿ.) ಮಡಿಕೇರಿ 2026

✨ 50ನೇ ವರ್ಷದ ದಸರಾ ಸುವರ್ಣ ಮಹೋತ್ಸವ ✨

ಕಳೆದ 11 ವರ್ಷಗಳಲ್ಲಿ ಅತ್ಯಂತ ಯಶಸ್ವಿ ಪಡೆದಿರುವ ಮಂಟಪ
2015- ವಿನಾಯಕನಿಂದ ನರಾಂತಕ ದೇವಾಂತಕರ ವಧೆ
🥇 -ಪ್ರಥಮ
2016- ಮಯೂರೇಶನಿಂದ ಸಿಂಧೂದೈತ್ಯರಾಜನ ವಧೆ
⭐ -ಜನ ಮೆಚ್ಚುಗೆಯ ಮಂಟಪ
2017- ಗಣೇಶನಿಂದ ತಾಲಾಸುರನ ವಧೆ
🥇 -ಪ್ರಥಮ
2018- ವಿನಾಯಕನಿಂದ ಪರಶುರಾಮನ ಗರ್ವ ಭಂಗ
-ಸಾಂಪ್ರದಾಯಿಕ ದಸರಾ (ಭೂಕುಸಿತ)
2019- ಮಯೂರೇಶ್ವರನಿಂದ ಶಿಖಂಡಿ ಪಕ್ಷಿ ಮಯೂರನಾದ ಕಥೆ
🥉 -ತೃತೀಯ
2020- ಬಿಲ್ಲು-ಬಾಣ ಹಿಡಿದ ವೀರ ವಿನಾಯಕ
-ಸಾಂಪ್ರದಾಯಿಕ ದಸರಾ (ಕೋವಿಡ್-19)
2021- ವಿನಾಯಕನಿಂದ ನರಾಂತಕ ದೇವಾಂತಕರ ವಧೆ
-ಸಾಂಪ್ರದಾಯಿಕ ದಸರಾ (ಕೋವಿಡ್-19)
2022- ಮಹಾಗಣಪತಿಗೆ ಸಿಂಧೂರ ಗಣಪತಿ ಎಂಬ ನಾಮ ಪ್ರಾಪ್ತಿ
🥇 -ಪ್ರಥಮ
2023- ಗಣೇಶನಿಂದ ಶತಮಹಿಷಿ ರಾಕ್ಷಸಿಯ ಸಂಹಾರ
🥈 -ದ್ವಿತೀಯ
2024- ಗಣಪತಿಯಿಂದ ಅಜಗರ ಮತ್ತು ಶಲಭಾಸುರ ದೈತ್ಯರ ಸಂಹಾರ
🥇 -ಪ್ರಥಮ
2025- ವಿಘ್ನರಾಜನಿಂದ ಮಮತಾಸುರನ ಸಂಹಾರ
🥇 -ಪ್ರಥಮ
ಅಧಿಕೃತ ಲಿಂಕ್‌ಗಳು • Official Links

ಶ್ರೀ ಕೋಟೆ ಮಹಾಗಣಪತಿ

Sri Kote Maha Ganapathi

ಮಡಿಕೇರಿ ದಸರಾ ಮಹೋತ್ಸವ | Madikeri Dasara Mantapa Updates

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
ಶ್ರೀ ಕೋಟೆ ಮಹಾಗಣಪತಿ ದಸರಾ ಸಮಿತಿ - ಐತಿಹಾಸಿಕ ಮಂಟಪಗಳ ದಾಖಲೆ (2025 - 2017)
🚩 ಐತಿಹಾಸಿಕ ಮಡಿಕೇರಿ ದಸರಾ - ದಶಮಂಟಪ ದಾಖಲೆಗಳು 🚩

🕉 ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪಗಳು 🕉️

ವರ್ಷವಾರು ಮಂಟಪ ವಿವರಗಳು ಹಾಗೂ ಕಲಾ ಸಾರಾಂಶಗಳ ಸಂಗ್ರಹ (2025 - 2017)

📅 ವರ್ಷ ಆಯ್ಕೆಮಾಡಿ:
🏛️ 9 ನೇ ಪ್ರಮುಖ ದಶಮಂಟಪ
ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ - 2025 ಬ್ಯಾನರ್
🌺 ಮಂಟಪದ ವಿವರಗಳು - 2025 (ಸುವರ್ಣ ಅಂಚಿನಲ್ಲಿರುವ 49ನೇ ವರ್ಷ) 🌺
🎖️ 49 ನೇ ವರ್ಷದ ದಸರಾ ಮಂಟಪ (2025) - ಸುವರ್ಣ ಅಂಚಿನಲ್ಲಿರುವ ಮಂಟಪ

ಕಥೆ : "ಶ್ರೀ ವಿಘ್ನರಾಜನಿಂದ ಮಮತಾಸುರನ ಸಂಹಾರ" 🔱✨

॥ ವಿಘ್ನರಾಜಾವತಾರಶ್ಚ ಶೇಷವಾಹನ ಉಚ್ಯತೇ । ಮಮತಾಸುರಹಂತಾ ಸೌ ವಿಷ್ಣುರ್ಬ್ರಹ್ಮೇತಿ ವಾಚಕಃ ॥

👤 ಅಧ್ಯಕ್ಷರು : ವಿಷೇಶ್ ಸಿ. ಯು
🎯 ಪ್ರಯತ್ನ : ಈ ವರ್ಷ ದಸರಾ ಮಂಟಪ ಮಹೋತ್ಸವವನ್ನು ಪ್ರಥಮ ಬಹುಮಾನಕ್ಕೋಸ್ಕರವೇ ತಯಾರು ಮಾಡುತ್ತಿದ್ದೇವೆ.
📍 ಪ್ರದರ್ಶನ ಸ್ಥಳ : ಐತಿಹಾಸಿಕ ಮಡಿಕೇರಿ ಜನೋತ್ಸವದ ಪ್ರಮುಖ ಬೀದಿಗಳಲ್ಲಿ
📋 ಒಟ್ಟು ಉಸ್ತುವಾರಿ : ಶ್ರೀ ವೆಂಕಟೇಶ್ ಕುಡೇಕರ್ ಮತ್ತು ಶ್ರೀ ಧೀರಜ್ ವೆಂಕಟೇಶ್ ಕುಡೇಕರ್
📖 ಕಥೆ ಮತ್ತು ಸಾರಾಂಶ : ಶ್ರೀ ವೆಂಕಟೇಶ್ ಕುಡೇಕರ್ ಮತ್ತು ಶ್ರೀ ಧೀರಜ್ ವೆಂಕಟೇಶ್ ಕುಡೇಕರ್
🎨 ವಿಗ್ರಹಗಳ ತಯಾರಕರು : ಯತೀಶ್, ಪ್ರಕಾಶ್ - ಮಂಗಳೂರು ಮತ್ತು ಮಹಾದೇವಪ್ಪ ಮತ್ತು ಮಕ್ಕಳು - ಉದ್ಬೂರು
🎙️ ಸ್ಟುಡಿಯೋ & ಸೌಂಡ್ಸ್ : ಲೋಕೇಶ್ ಎಚ್.ಪಿ. (SANGITHA EVENTS, ಮಡಿಕೇರಿ)
💡 ಪ್ರಭಾವಳಿ : ನಜೀರ್ (ಪೂಜಾ ಲೈಟಿಂಗ್ಸ್, ಮಡಿಕೇರಿ)
🎧 ಧ್ವನಿ ಮುದ್ರಣ : ಪ್ರಜ್ವಲ್ ಭಟ್ಕಳ್
🚜 ಟ್ರಾಕ್ಟರ್ ಸೆಟ್‌ವರ್ಕ್ : ಶ್ರೀ ಎಮ್.ವಿ.ನವೀನ್ (SKMG Studio, ಮಡಿಕೇರಿ), ಸುಲ್ತಾನ್, ದೀಕ್ಷಿತ್, ಜಲೀಲ್, ನವಾಜ್, ಸವಾದ್ ನೌಫಲ್, ಅರಿಸ್
⚙️ ಪ್ಲಾಟ್‌ಫಾರ್ಮ್ ಸೆಟ್ಟಿಂಗ್ : ಪುನೀತ್ ಮತ್ತು ತಂಡದಿಂದ
🔧 ವೆಲ್ಡಿಂಗ್ & ಮೆಕ್ಯಾನಿಕಲ್ : ಅರ್ಮಾನ್ ಮತ್ತು ತೌಫಿಕ್, ಮಡಿಕೇರಿ
✨ ಮಂಟಪದ ಸ್ಪೆಷಲ್ ಎಫೆಕ್ಟ್ : ಪ್ರಯಾಗ್ ರಾಜ್ (ಉ.ಪ್ರ)
🎆 ಫೈರ್ ವರ್ಕ್ಸ್ & ಎಫೆಕ್ಟ್ಸ್ : "VICTORY CREATIONS" & ಕವನ್ - ಟರ್ಬೊ ಪೋಪರ್ಸ್
🚜 ಟ್ರಾಕ್ಟರ್ ಚಾಲಕರು : ಎಮ್.ಪಿ.ಸೋಮಯ್ಯ, ಪಿ.ಉದಯ, ಪಿ.ಹರ್ಷ, ಕೆ.ನವೀನ್
🎨 ಜಾಹಿರಾತು & ಡಿಸೈನ್ : ಜಂತೀರ್ (ಇನ್ ಸ್ಟೈಲ್ ರೇಡಿಯಮ್ ಮಡಿಕೇರಿ)
🚚 ಧ್ವನಿವರ್ಧಕ ವಾಹನ : "ಯಾಮೀನ್ ರೋಡ್ ಲೈನ್ಸ್" ಇಬ್ರಾಹಿಮ್
🎭 ಒಟ್ಟು ಕಲಾಕೃತಿಗಳು : 27
👥 ಒಟ್ಟು ಸದಸ್ಯರು : 464
💰 ಒಟ್ಟು ವೆಚ್ಚ : ರೂ. 43 ಲಕ್ಷ
🚩 🏆 🕉️

ಗುರಿ ಮತ್ತು ಸಂಕಲ್ಪ:

"ಇತಿಹಾಸ ಪ್ರಸಿದ್ಧ ಮಡಿಕೇರಿ ಜನೋತ್ಸವದ ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯು ಈ ಬಾರಿಯ ಪ್ರಥಮ ಬಹುಮಾನ ಪಡೆಯಲು ಸಜ್ಜಾಗಿದೆ. ತಂಡದ ಪ್ರತಿಯೊಬ್ಬರೂ ಶಕ್ತಿಮೀರಿ ಶ್ರಮಿಸುತ್ತಿದ್ದೇವೆ. ನಮ್ಮ ಮಹಾಗಣಪತಿ ಎಲ್ಲಾ ವಿಘ್ನಗಳನ್ನು ದೂರ ಮಾಡಿ ಬಹುಮಾನ ತಂದುಕೊಡುವನೆಂಬ ಬಲವಾದ ನಂಬಿಕೆಯಿದೆ."

ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ, ಮಡಿಕೇರಿ
✦ ಮಂಟಪದ ವಿವರಗಳು - 2024 (48ನೇ ವರ್ಷ) ✦
🚩 48 ನೇ ವರ್ಷಾಚರಣೆ

ಕಥೆ : "ಮಹಾಗಣಪತಿಗೆ ಅಜಗರ ಮತ್ತು ಶಲಭಾಸುರ ವಧೆ" 🐍⚡

⏱️ ತೀರ್ಪಿನ ಸಮಯ : 12:20 AM
📍 ಪ್ರದರ್ಶನ ಸ್ಥಳ : ನಗರ ಪೊಲೀಸ್ ಠಾಣೆ ಮುಂಭಾಗ
👤 ಅಧ್ಯಕ್ಷರು : ಬಿ.ವಿ. ಅರವಿಂದ್
📖 ಕಥಾ ನಿರ್ವಹಣೆ : ಆರ್.ಬಿ. ರವಿ
💡 ಲೈಟಿಂಗ್ ಬೋರ್ಡ್ : ಮಡಿಕೇರಿಯ ಪೂಜಾ ಲೈಟಿಂಗ್ಸ್
🎨 ಕಲಾಕೃತಿ ನಿರ್ಮಾಣ : ಮಹದೇವಪ್ಪ & ಸನ್ಸ್, ಹುದುಬೂರು
⚙ ಕಲಾಕೃತಿ ಚಲನವಲನ : ಮೋಹನ್ ಕುಟ್ಟಿ ಮತ್ತು ಪುನೀತ್ (ಬಿ.ಎನ್. ಕ್ರಿಯೇಷನ್ಸ್)
✨ ವಿಶೇಷ ಕಲಾಕೃತಿ : ಮಡಿಕೇರಿ ಪೂಜಾ ಲೈಟಿಂಗ್‌ನ ರಾಘು ಮತ್ತು ತಂಡ
🔊 ಧ್ವನಿವರ್ಧಕ & ಸ್ಟುಡಿಯೋ : ಫ್ಯೂಚರ್ ಇವೆಂಟ್ಸ್, ಮಡಿಕೇರಿ (ಲೋಕೇಶ್)
🚜 ಟ್ರಾಕ್ಟರ್ ಸೆಟ್ಟಿಂಗ್ಸ್ : ಗಣೇಶ್ ಮತ್ತು ಸೋಮಶೇಖರ್, ಎಂ.ಪಿ. ಸೋಮಯ್ಯ
🌟 ಸ್ಪೆಷಲ್ ಎಫೆಕ್ಟ್ಸ್ : ಮುಂಬೈ ತಂಡ ಮತ್ತು ರಘು & ತಂಡ (ಪೂಜಾ ಲೈಟಿಂಗ್ಸ್)
🎆 ಫೈರ್ ವರ್ಕ್ಸ್ : ಟೀಂ 99 "ರೆಟ್ರೋ ಟ್ರಯಾಂಗಲ್"
🎭 ಒಟ್ಟು ಕಲಾಕೃತಿಗಳು : 30
👥 ಒಟ್ಟು ಸದಸ್ಯರು : 372
💰 ಒಟ್ಟು ವೆಚ್ಚ : ರೂ. 31.5 ಲಕ್ಷ
🌺 ಮಂಟಪದ ವಿವರಗಳು - 2023 🌺

🎖️ 47 ನೇ ವರ್ಷಾಚರಣೆ

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
👤 ಅಧ್ಯಕ್ಷರು & ತಂಡ : ಶ್ರೀ ಕೋಟೆ ಮಹಾಗಣಪತಿ ಸಮಿತಿ
📍 ಪ್ರದರ್ಶನ ಸ್ಥಳ : ಮಡಿಕೇರಿ ರಾಜಬೀದಿ
💡 ಲೈಟಿಂಗ್ಸ್ & ಸೌಂಡ್ಸ್ : ಸ್ಥಳೀಯ ಪರಿಣಿತ ತಂತ್ರಜ್ಞರ ತಂಡ
🎨 ಕಲಾಕೃತಿಗಳು : ಭಕ್ತಿಪೂರ್ಣ ಪೌರಾಣಿಕ ಕಲಾಕೃತಿಗಳು
👥 ಒಟ್ಟು ಸದಸ್ಯರು : 350+
🌺 ಮಂಟಪದ ವಿವರಗಳು - 2022 🌺

🎖️ 46 ನೇ ವರ್ಷಾಚರಣೆ

📖 ಕಥೆ : "ಮಹಾಗಣಪತಿಗೆ ಸಿಂಧೂರ ಗಣಪತಿ ನಾಮ ಪ್ರಾಪ್ತಿ"
⏱ ತೀರ್ಪಿನ ಸಮಯ : 12:30 AM
📍 ಸ್ಥಳ : ನಗರ ಪೊಲೀಸ್ ಠಾಣೆ ಮುಂಭಾಗ
👤 ಅಧ್ಯಕ್ಷರು : ಬಿ.ಎನ್. ಕ್ರಿಯೇಷನ್ಸ್ ಪುನೀತ್, ಮೋಹನ್ (ಕುಟ್ಟಿ)
📋 ಕಥಾ ನಿರ್ವಹಣೆ : ಎ.ಆರ್. ಮಂಜುನಾಥ್, ಲಾರೆನ್ಸ್, ಮಿಥುನ್, ಸಂದೇಶ್ ಮತ್ತು ತಂಡ
💡 ಲೈಟಿಂಗ್ ಬೋರ್ಡ್ : ಪೂಜಾ ಲೈಟಿಂಗ್ಸ್, ಮಡಿಕೇರಿ
🎨 ಕಲಾಕೃತಿ ನಿರ್ಮಾಣ : ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್
🔊 ಧ್ವನಿವರ್ಧಕ : ಗೋವಾದ 8D ಸೌಂಡ್ಸ್
🎙️ ಸ್ಟುಡಿಯೋ : ಮಡಿಕೇರಿ ಫ್ಯೂಚರ್ ಇವೆಂಟ್‌ನ ಲೋಕೇಶ್
⚙️ ವೇದಿಕೆ & ಟ್ರಾಕ್ಟರ್ : ಪದ್ಮನಾಭ & ತಂಡ, ಡಿ ಕ್ರಿಯೇಷನ್ಸ್ ಗಣೇಶ್ & ನಿತೀಶ್
✨ ಸ್ಪೆಷಲ್ ಎಫೆಕ್ಟ್ಸ್ : ಗುಜರಾತ್ ತಂಡ
🏗️ ಕ್ರೇನ್ ಸೆಟ್ಟಿಂಗ್ : ಆಲಂಕಾರ್ ಫ್ಯಾಬ್ರಿಕೇಷನ್ ಯಾಸಿನ್
🎭 ಒಟ್ಟು ಕಲಾಕೃತಿಗಳು : 19
👥 ಒಟ್ಟು ಸದಸ್ಯರು : 100
💰 ಒಟ್ಟು ವೆಚ್ಚ : ರೂ. 24 ಲಕ್ಷ
🌺 ಮಂಟಪದ ವಿವರಗಳು - 2021 🌺

🎖️ 45 ನೇ ವರ್ಷಾಚರಣೆ

📖 ಕಥೆ : "ನರಾಂತಕ - ದೇವಾಂತಕ ಸಂಹಾರ ಕಥಾ ಸಾರಾಂಶ" 🔱
💡 ಲೈಟಿಂಗ್ ಬೋರ್ಡ್ : ಪೂಜಾ ಲೈಟಿಂಗ್ಸ್, ಮಡಿಕೇರಿ
🎨 ಕಲಾಕೃತಿ ನಿರ್ಮಾಣ : ಮಹದೇವಪ್ಪ ಮತ್ತು ಮಕ್ಕಳು, ಉದ್ಬೂರು
🔊 ಸೌಂಡ್ಸ್ & ಸ್ಟುಡಿಯೋ : ಫ್ಯೂಚರ್ ಇವೆಂಟ್ಸ್, ಮಡಿಕೇರಿ
👥 ಸಮಿತಿ : ಶ್ರೀ ಕೋಟೆ ಮಹಾಗಣಪತಿ ದಸರಾ ಸಮಿತಿ
🌺 ಮಂಟಪದ ವಿವರಗಳು - 2019 🌺

🎖️ 43 ನೇ ವರ್ಷಾಚರಣೆ

📖 ಕಥೆ : "ಶ್ರೀ ಮಯೂರೇಶ್ವರನಿಂದ ಶಿಖಂಡಿ ಪಕ್ಷಿಯು ಮಯೂರನಾದ ಕಥೆ" 🦚
👤 ಅಧ್ಯಕ್ಷರು : ಅನುರಾಗ್ ಕೆ.ಆರ್
📋 ಕಥಾ ನಿರ್ವಹಣೆ : ಆರ್.ಬಿ. ರವಿ
🎙️ ಸ್ಟುಡಿಯೋ & ಸೌಂಡ್ಸ್ : ಲೋಕೇಶ್ ಫ್ಯೂಚರ್ ಈವೆಂಟ್ಸ್, ಮಡಿಕೇರಿ
💡 ಆರ್ಚ್ ಲೈಟಿಂಗ್ ಬೋರ್ಡ್ : ನಜೀರ್, ಪೂಜಾ ಲೈಟಿಂಗ್ಸ್ ಮಡಿಕೇರಿ
⚙️ ವೇದಿಕೆ & ಚಲನವಲನ : ಹೊನ್ನಪ್ಪ ಮತ್ತು ಸುರೇಶ್, ಸಿದ್ದಪ್ಪಾಜಿ ಕ್ರಿಯೇಷನ್ಸ್
🎨 ಕಲಾಕೃತಿ ನಿರ್ಮಾಣ : ಮಹದೇವಪ್ಪ ಮತ್ತು ಮಕ್ಕಳು, ಉದ್ಬೂರು
🎭 ಒಟ್ಟು ಕಲಾಕೃತಿಗಳು : 23
👥 ಒಟ್ಟು ಸದಸ್ಯರು : 365
💰 ಒಟ್ಟು ವೆಚ್ಚ : ರೂ. 19.5 ಲಕ್ಷ
🌺 ಮಂಟಪದ ವಿವರಗಳು - 2018 🌺

🏆 42 ನೇ ವರ್ಷಾಚರಣೆ

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
📖 ಕಥೆ : "ಗಣಪತಿ ಪರಶುರಾಮ ಕಾಳಗ" ⚡
👤 ಅಧ್ಯಕ್ಷರು : ಅನುರಾಗ್ ಕೆ.ಆರ್
📋 ಕಥಾ ನಿರ್ವಹಣೆ : ಆರ್.ಬಿ. ರವಿ
🎙️ ಸ್ಟುಡಿಯೋ & ಸೌಂಡ್ಸ್ : ಲೋಕೇಶ್ ಫ್ಯೂಚರ್ ಈವೆಂಟ್ಸ್
💡 ಲೈಟಿಂಗ್ ಬೋರ್ಡ್ : ನಜೀರ್, ಪೂಜಾ ಲೈಟಿಂಗ್ಸ್ ಮಡಿಕೇರಿ
⚙️ ವೇದಿಕೆ & ಚಲನವಲನ : ಹೊನ್ನಪ್ಪ, ಸಿದ್ದಪ್ಪಾಜಿ ಕ್ರಿಯೇಷನ್ಸ್
🚜 ಟ್ರ್ಯಾಕ್ಟರ್ ಸೆಟ್ಟಿಂಗ್ : ಕೃಷ್ಣ (ತಂಗಣ್ಣ)
🎆 ಫೈರ್ ವರ್ಕ್ಸ್ : ಟೀಂ 99
🎨 ಕಲಾಕೃತಿ ನಿರ್ಮಾಣ : ಮಹದೇವಪ್ಪ ಮತ್ತು ಮಕ್ಕಳು, ಉದ್ಬೂರು
🎭 ಒಟ್ಟು ಕಲಾಕೃತಿಗಳು : 7
👥 ಒಟ್ಟು ಸದಸ್ಯರು : 362
💰 ಒಟ್ಟು ವೆಚ್ಚ : ರೂ. 7 ಲಕ್ಷ
🌺 ಮಂಟಪದ ವಿವರಗಳು - 2017 🌺

🌟 41 ನೇ ವರ್ಷಾಚರಣೆ

📖 ಕಥೆ : "ವಿನಾಯಕನಿಂದ ತಾಳಾಸುರನ ಗರ್ವಭಂಗ" 🔱
👤 ಅಧ್ಯಕ್ಷರು : ಬಿ.ಪಿ. ಗುರುಕಿರಣ್
📋 ಕಥಾ ನಿರ್ವಹಣೆ : ಆರ್.ಬಿ. ರವಿ
💡 ಆರ್ಚ್ ಲೈಟಿಂಗ್ಸ್ ಬೋರ್ಡ್ : ನಝೀರ್ ಪೂಜಾ ಲೈಟಿಂಗ್ಸ್, ಮಡಿಕೇರಿ
🎙️ ಸ್ಟುಡಿಯೋ & ಸೌಂಡ್ಸ್ : ಲೋಕೇಶ್ “ಫ್ಯೂಚರ್ ಈವೆಂಟ್” ಮಡಿಕೇರಿ
⚙ ಪ್ಲಾಟ್‌ಫಾರಂ ಸೆಟ್ಟಿಂಗ್ : ಹೊನ್ನಪ್ಪ “ಸಿದ್ದಾಪ್ಪಾಜಿ ಕ್ರಿಯೇಷನ್ಸ್” ಮಡಿಕೇರಿ
🚜 ಟ್ರ್ಯಾಕ್ಟರ್ ಸೆಟ್ಟಿಂಗ್ಸ್ : ಗಣೇಶ್ ಮತ್ತು ನಿತೀಶ್ “ಪಿಕ್ಸಲ್ಸ್ ಕ್ರಿಯೇಶನ್ಸ್ ಟೀಂ”
🔧 ಚಲನವಲನ : ಸುರೇಶ್ ಮತ್ತು ಹೊನ್ನಪ್ಪ “ಸಿದ್ದಾಪ್ಪಾಜಿ ಕ್ರಿಯೇಷನ್ಸ್”
🎨 ಕಲಾಕೃತಿ ನಿರ್ಮಾಣ : ಮಹದೇವಪ್ಪ
🎭 ಒಟ್ಟು ಕಲಾಕೃತಿಗಳು : 19
👥 ಒಟ್ಟು ಸದಸ್ಯರು : 350
💰 ಒಟ್ಟು ವೆಚ್ಚ : ರೂ. 19.5 ಲಕ್ಷ
5 1 vote
Article Rating
Subscribe
Notify of
guest
0 Comments
Newest
Oldest Most Voted
0
Would love your thoughts, please comment.x
()
x