Reading Time: < 1 minute
ಕಡಂಗ: ಸರ್ಕಾರಿ ಶಾಲೆ ಕಡಂಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕೇಮ್‌ವೆಲ್ ಬಯೋಫಾರ್ಮಾ ಸಂಸ್ಥೆ ವತಿಯಿಂದ ಉಚಿತ ಬ್ಯಾಗ್ , ನೋಟ್ ಪುಸ್ತಕ, ರೇಖಾಗಣಿತ ಪೆಟ್ಟಿಗೆ ಇನ್ನಿತರ ವಸ್ತುಗಳನ್ನು ಸಂಸ್ಥೆಯು ಉಪಾಧ್ಯಕ್ಷರಾದ ಶ್ರೀಯುತ ಮಾಳೆಯಂಡ ಪ್ರಕಾಶ್ ನಾಣಯ್ಯರವರು ವಿತರಿಸಿದರು.
ನಂತರ ಮಾತನಾಡಿ ವಿದ್ಯಾರ್ಥಿಗಳು ಸೌಲಭ್ಯದ ಸದುಪಯೋಗವನ್ನು ಪಡೆದುಕೊಂಡು ಉನ್ನತ ಹುದ್ದೆಗೇರುವಂತೆ ಪ್ರಯತ್ನಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಶಾಲಾ ಸ್ಥಳದಾನಿಗಳು, ಶಿಕ್ಷಕರು ಹಾಗು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ನೌಫಲ್ ಕಡಂಗ