Search Coffee

“ಸರ್ಚ್ ಕೂರ್ಗ್ ಮೀಡಿಯಾ” ಬಗ್ಗೆ:

ಕಳೆದ ಹದಿನೈದು ವರ್ಷಗಳಿಂದ ಕೊಡಗಿನ ಸಮಗ್ರ ಸುದ್ದಿ-ಮಾಹಿತಿಯನ್ನು ಕೊಡಗಿನ ಜನತೆಯನ್ನೊಳಗೊಂಡು ರಾಜ್ಯ, ರಾಷ್ಟ್ರ ಹಾಗೂ ಜಗತ್ತಿನಾದ್ಯಾಂತ ಪ್ರಸಾರಪಡಿಸುತ್ತಿರುವ “Search Coorg media” ಕೊಡಗಿನ ಅತಿ ದೊಡ್ಡ ಆನ್‌ಲೈನ್ ಡಿಜಿಟಲ್ ಮಾಧ್ಯಮವಾಗಿ ರೂಪುಗೊಂಡಿದೆ. “ಸರ್ಚ್ ಕೂರ್ಗ್ ಮೀಡಿಯಾ” ವು ವಿಶ್ಲೇಷಣಾತ್ಮಕ ಹಾಗೂ ಗ್ರಾಮೀಣ ಪತ್ರಿಕೋದ್ಯಮದಲ್ಲಿ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಮಾಧ್ಯಮವಾಗಿ ಸಾವಿರಾರು ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿ ಪರಿಣಮಿಸಿದೆ. 

Search Coffee

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಕೊಡಗಿನ ಜನಮನದ ಮಾಧ್ಯಮವಾಗಿರುವ “ಸರ್ಚ್ ಕೂರ್ಗ್ ಮೀಡಿಯಾ”ವು ಭಾರತೀಯ ಕಾಫಿ ಕ್ಷೇತ್ರದ ಸಮಗ್ರ ಕಥೆಗಳು ಹಾಗೂ ಮಾಹಿತಿಯನ್ನು ಪ್ರಚರಪಡಿಸಲು “Search Coffee” ಎಂಬ ಆನ್‌ಲೈನ್ ಡಿಜಿಟಲ್ ಆವೃತಿ (Digital Edition) ಯನ್ನು ಪ್ರಾರಂಭಿಸಿದೆ. “Search Coffee” ಯು ಭಾರತೀಯ ಕಾಫಿ ಪ್ರಪಂಚದ ಬಗ್ಗೆ ಆಸಕ್ತಿದಾಯಕ ಮತ್ತು ಶೈಕ್ಷಣಿಕ ಮಾಹಿತಿಗಾಗಿ ಅತ್ಯುತ್ತಮ ಆನ್‌ಲೈನ್ ಮಾಧ್ಯಮವಾಗಲು ಬದ್ಧವಾಗಿದೆ. ನಾವು ಭಾರತದ ಕಾಫಿ ಬೆಳೆಗಾರರು/ಉತ್ಪಾದಕರು, ರೋಸ್ಟರ್‌ಗಳು, ರೆಸ್ಟೋರೆಂಟ್‌ಗಳು, ಬಾಣಸಿಗರು, ಬ್ಯಾರಿಸ್ಟಾಗಳು, ಬಾರ್ಟೆಂಡರ್‌ಗಳು, ವಾಣಿಜ್ಯೋದ್ಯಮಿಗಳು, ಸಣ್ಣ ವ್ಯಾಪಾರ ಮಾಲೀಕರು, ಸೆರಾಮಿಸ್ಟ್‌ಗಳು, ಕೆಫೆ ರಚನೆಕಾರರು ಮತ್ತು ಗ್ರಾಹಕರನ್ನು ಸಂಪರ್ಕಿಸುತ್ತೇವೆ. ನೀವು ಕಾಫಿ ಕುಡಿಯುವವರಾಗಿದ್ದರೆ, ಈ ಆನ್‌ಲೈನ್ ಡಿಜಿಟಲ್ ಆವೃತ್ತಿಯ “Search Coffee” ಯು ನಿಮಗಾಗಿಯೇ ಆಗಿದೆ. ಸುಸ್ಥಿರ ಪದ್ದತಿಗಳ ಆಧಾರದ ಮೇಲೆ ಕಾಫಿ ಕೃಷಿ ಕುಟುಂಬಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಮಾಡುವ ಮೂಲಕ ಅವರ ಜೀವನೋಪಾಯವನ್ನು ಸುಧಾರಿಸುವುದು ನಮ್ಮ ದೃಷ್ಟಿಯಾಗಿದೆ.  ನಾವು ಕಾಫಿ ಉದ್ಯಮದ ಭಾಗವಾಗಲು ಸಂತೋಷಪಡುತ್ತೇವೆ ಮತ್ತು ಕಾಫಿ ಸಮುದಾಯವನ್ನು ಬೆಳೆಸಲು ಮತ್ತು ಬೆಳಗಲು ಸಹಾಯ ಮಾಡಲು ಬಯಸುತ್ತೇವೆ. ಒಟ್ಟಿನಲ್ಲಿಸರ್ಚ್‌ ಕಾಫಿ” ಎಂಬುದು ಕಾಫಿ ಸಮುದಾಯದ ಕಥೆಗಳು ಮತ್ತು ಒಳನೋಟಗಳನ್ನು ಪ್ರದರ್ಶಿಸುವ ಮಾಧ್ಯಮ ವೇದಿಕೆಯಾಗಿದೆ.

ಕಾಫಿಯ ಪರಿಮಳ ಪಸರಿಸಲು “ಸರ್ಚ್‌ ಕಾಫಿ” 

ಆತ್ಮೀಯ ಕಾಫಿ ಪ್ರಿಯರೇ,

ಮೊದಲ ಸಂಪಾದಕೀಯದೊಂದಿಗೆ  ಸರ್ಚ್‌ ಕಾಫಿ  ಬಳಗದ ನಮಸ್ಕಾರಗಳು.

ಕಾಫಿಯ ಪರಿಮಳ ಮೈ ಮನಸುಗಳನ್ನು ಜಾಗೃತಗೊಳಿಸುತ್ತದೆ. ಪರಿಮಳವ ಆಗ್ರಾಣಿಸದೆ ಕಾಫಿ ಲೋಟಕ್ಕೆ ತುಟಿ ಬಿಚ್ಚುವುದುಂಟೆ? ಮುಂಜಾನೆ ದಿನಪತ್ರಿಕೆಯಲ್ಲಿ ತಲೆಹಾಕಿ ಕೂತಾಗ, ಮನೆಗೆ ನೆಂಟರಿಷ್ಷರು ಬಂದಾಗ ಅತ್ತ ಅಡುಗೆಮನೆಯಿಂದ ಬರುವ ಕಾಫಿಯ ಪರಿಮಳ ಮೂಗು ಮನಸ್ಸೆಲ್ಲವನ್ನು ಸೆಳೆಯುತ್ತದೆ. ತಕ್ಷಣಾರ್ಧದಲ್ಲಿ ಎಲ್ಲವೂ ಕಾಫಿಮಯವಾಗಿ ಅದರ ಪರಿಮಳದಲ್ಲಿ ತೇಲಿ ಬಿಡುವುದುಂಟು.  

ಕಾಫಿ ಕೃಷಿಗೆ ಪೂರಕ ಹಲವು ಅನ್ವೇಷಣೆಗಳು ಸಾಧ್ಯವಾಗಿರುವ ಈಗಿನ ಕಾಲಘಟ್ಟದಲ್ಲಿ ಕಾಫಿ ಕೃಷಿಯನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು ದೂರದೃಷ್ಟಿ ಮತ್ತು ಸೂಕ್ತ ಯೋಜನೆಯ ಅಗತ್ಯ ಇದೆ. ಮತ್ತು ಕರ್ನಾಟಕದಲ್ಲಿ ಅದಕ್ಕೆ ಪೂರಕವಾದ ಅವಕಾಶಗಳೂ ಇವೆ. ರೈತರಲ್ಲಿ ಮತ್ತೆ ಕಾಫಿ ಕೃಷಿ ಬಗ್ಗೆ ವಿಶ್ವಾಸ ಮೂಡಿಸುವಂತೆ, ಕಾಫಿ ಕೃಷಿಕರ ಆದಾಯ ಹೆಚ್ಚಿಸುವಂತೆ ಮಾಡಬೇಕಿದೆ. ಪ್ರಭುತ್ವ ಮತ್ತು ಜನರು ಕೈಜೋಡಿಸಿದರೆ ಕಾಫಿ ಕೃಷಿ ಸಂಸ್ಕೃತಿಯನ್ನು ಮೆರೆಸಬಹುದು. ಕಾಫಿಯೊಂದಿಗೆ ಕಾಳುಮೆಣಸು, ಏಲಕ್ಕಿ, ಕಿತ್ತಳೆ ,ಅಡಿಕೆ, ಬಾಳೆ, ಜೇನು ಸಾಕಾಣೆ  ಇತ್ಯಾದಿ ಅಂತರ ಬೆಳೆಗಳು ಕಾಫಿ ಕೃಷಿಕರ ಬದುಕನ್ನು ಆಧರಿಸಿದೆ. 

ಕರ್ನಾಟಕದ ಕಾಫಿಗೆ ಅದರದೆ ಆದ ವಿಶೇಷತೆಯುಂಟು. ಇಲ್ಲಿನದು ಹೆಚ್ಚಾಗಿ ರೊಬಸ್ಟಾ ಮತ್ತು ಅರೆಬಿಕಾ ತಳಿಗಳು. ಆದರೆ ಇಲ್ಲಿನ ಕಾಫೀ ತೋಟಗಳು ನೆರಳಿನಲ್ಲಿ ಅಪ್ಪಟ ಜೈವಿಕ ಸಮೃದ್ಧತೆಯಿಂದ ಇರುವಂತಹ ತೋಟಗಳು. ಸಾಕಷ್ಟು ನಿತ್ಯಹರಿದ್ವರ್ಣದ, ಸಾರಜನಕವನ್ನು ಸ್ಥಿರೀಕರಿಸಬಲ್ಲ, ಜೊತೆಗೆ ವಿವಿಧ ಎತ್ತರಗಳ ಎಲೆ ತಾರಸಿಗಳನ್ನು ಹೊಂದಿರುವ ಸಾಕಷ್ಟು ಸಸ್ಯಗಳನ್ನು ತೋಟದಲ್ಲಿ ಕಾಣಬಹುದು. ಈ ದೃಶ್ಯವನ್ನು ಭಾರತ ಬಿಟ್ಟು ಇತರೇ ದೇಶಗಳಲ್ಲಿ ಕಾಣಲಾಗದು. ಗಿಡಮರ ನಾಶಪಡಿಸಿ, ಕಾಫಿ ಬೆಳೆಯುವ ಹೊಸ ಪ್ರಯತ್ನಗಳು ಕಾಫಿ ಕೃಷಿ ಮತ್ತು ಕಾಫಿ ಸಂಸ್ಕೃತಿಯನ್ನೇ ನಾಶಪಡಿಸುತ್ತವೆ. ಇಂತಹ ಪ್ರಯೋಗಗಳಿಂದ ಗುಣಮಟ್ಟದ ಕಾಫಿ ಉತ್ಪಾದನೆ ಸಾಧ್ಯವಿಲ್ಲ. ಇದು ಯಶಸ್ವಿಯಾಗುವುದೂ ಇಲ್ಲ. ಭಾರತದ ಮುಕ್ಕಾಲು ಪಾಲು ಕಾಫಿಯನ್ನು ಕರ್ನಾಟಕ ರಾಜ್ಯದಲ್ಲೇ ಉತ್ಪಾದಿಸಲಾಗುತ್ತಿದೆ. ಕಾಫಿ ಉತ್ಪಾದನೆಯಲ್ಲಿ ನಮ್ಮ ದೇಶವು ಜಗತ್ತಿನಲ್ಲಿ 5ನೆಯ ರಾಷ್ಟ್ರವಾಗಿದೆ. ಅದರ ಮುಕ್ಕಾಲು ಪಾಲಿನ ಕೊಡುಗೆಯು ಕರ್ನಾಟಕ ರಾಜ್ಯದ್ದೇ.

ನೆರಳಿನ ಆಶ್ರಯ ಮತ್ತು ಪರಿಸರ ಸ್ನೇಹಿ ಕಾಫಿಗೆ ನಮ್ಮ ಕರ್ನಾಟಕ ರಾಜ್ಯ ಪ್ರಸಿದ್ಧಿ. ನಮ್ಮದು ಪರಿಸರ ಸ್ನೇಹಿ ಕಾಫಿ ಕೃಷಿ. ವಿಶ್ವಮಟ್ಟದಲ್ಲೂ ಹಾಗೆಯೇ ಗುರುತಿಸಿಕೊಂಡಿದ್ದೇವೆ. ಅರೆಬಿಕಾ ಕಾಫಿಯನ್ನು ಹದವಾದ ನೆರಳಿನಲ್ಲಿ ಬೆಳೆಯಬೇಕು. ನಮ್ಮ ಕಾಫಿ ಉದ್ಯಮವು ಪರಿಸರವನ್ನು ಉಳಿಸಿ, ಬೆಳೆಸುವಂತಿರಬೇಕು. ಜೀವವೈವಿಧ್ಯಗಳನ್ನು ಪೋಷಿಸಿ, ಜಲಮೂಲ ರಕ್ಷಿಸುವಂತಾಗಬೇಕಿದೆ. ಇಂದಿನ ದಿನಗಳಲ್ಲಿ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಕಾಫಿ ಬೆಳೆಯಲ್ಲಿ ಸಿಗುತ್ತಿರುವ ಆದಾಯ ತೋಟದ ನಿರ್ವಹಣೆಗೂ ಸಾಕಾಗುತ್ತಿಲ್ಲ. ಹಾಕಿದ ಬಂಡವಾಳವೂ ಸಿಗುತ್ತಿಲ್ಲ. ಪೂರಕ ಬೆಳೆಯಾಗಿ ಕಾಳುಮೆಣಸು, ಏಲಕ್ಕಿ, ಕಿತ್ತಳೆ ,ಅಡಿಕೆ, ಬಾಳೆ, ಜೇನು ಸಾಕಾಣೆ  ಇತ್ಯಾದಿ ಅಂತರ ಬೆಳೆಗಳನ್ನು ಬೆಳೆಯುವವರು ಮಾತ್ರ ಚೇತರಿಕೆಯಲ್ಲಿದ್ದಾರೆ.

ಕಾಫಿ ವಲಯ ನಿರಂತರ ಸಂಕಷ್ಟಕ್ಕೊಳಗಾಗಿದ್ದು,. ಪ್ರಾಕೃತಿಕ ಬದಲಾವಣೆಗಳಿಂದ ಮಳೆಗಾಲದಲ್ಲಿಯೂ ಉಷ್ಣಾಂಶದ ಏರಿಕೆ ಕಂಡು ಬರತೊಡಗಿತು. ಇದು ಅರೆಬಿಕಾ ಕಾಫಿಯ ಬಹುಮುಖ್ಯ ಶತ್ರುವಾದ ಕಾಂಡ ಕೊರಕ ಕೀಟಗಳಿಗೆ ಅತ್ಯುತ್ತಮ ಸ್ಥಿತಿ. ಇದರಿಂದಾಗಿ ಅರೆಬಿಕಾ ತೋಟಗಳು ನಾಶವಾಗತೊಡಗಿದವು. ಜೊತೆಗೆ ಶುಂಠಿ ಮತ್ತಿತರ ಕೃಷಿಗಳಿಗೆ ಬಳಸಿದ ಅತಿಯಾದ ವಿಷಗಳ ಪರಿಣಾಮವೋ ಕೆಲವು ಜಾತಿಯ ಕೀಟಾಹಾರಿ ಇರುವೆಗಳು ನಾಶವಾಗಿ ಅದುವರೆಗೆ ಯಾವುದೇ ರೋಗವಿಲ್ಲದ ಸುರಕ್ಷಿತ ಬೆಳೆಯಾಗಿದ್ದ ರೊಬಸ್ಟ ಕಾಫಿಗೂ ಕಾಯಿ ಕೊರಕವೆಂಬ ಮಾರಿಯೊಂದು ಪ್ರಾರಂಭವಾಗಿ ಮೊದಲೇ ಬೆಳೆ ಇಳಿಕೆಯಿಂದಾದ ಸಂಕಷ್ಟಕ್ಕೆ ಮತ್ತೊಂದು ಸಮಸ್ಯೆ ಸೇರಿತ್ತು.

ವನ್ಯಮೃಗಗಳ ಹಾವಳಿ ಈ ಹಿಂದಿನಿಂದಲೂ ಕಾಫಿ ಬೆಳೆಗಾರರಿಗೆ ಇರುವ ಶಾಪ ಎಂದರೂ ತಪ್ಪಾಗಲಾರದು. ಅರಣ್ಯದಂಚಿನ ಭಾಗದ ಕಾಫಿ ತೋಟಗಳಲ್ಲಿ ಹುಲಿ, ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಹಿಂದೆ ಹಲಸಿನ ಹಣ್ಣು ತಿನ್ನಲು ಬರುತ್ತಿದ್ದ ಕಾಡಾನೆಗಳು ಈಗ ಕಾಫಿ ಹಣ್ಣುಗಳನ್ನೇ ತಿನ್ನಲಾರಂಭಿಸಿದೆ. ಕೊಯ್ಲು ಮಾಡಿ ಮನೆಯಂಗಳದಲ್ಲಿಟ್ಟ ಕಾಫಿ ಹಣ್ಣುಗಳನ್ನೂ ರಾತ್ರಿ ವೇಳೆಯಲ್ಲಿ ಬರುತ್ತಿರುವ ಕಾಡಾನೆಗಳು ತಿನ್ನುತ್ತಿವೆ. ಆನೆ ನಡೆದದ್ದೆ ದಾರಿ ಎಂಬಂತೆ ಎಲ್ಲೆಂದರಲ್ಲಿ ಸಂಚರಿಸುತ್ತಿರುವ ಕಾಡಾನೆಗಳಿಂದ ಕಾಫಿ ಗಿಡಗಳು ಮುರಿದು ನಷ್ಟವುಂಟಾಗುತ್ತಿದೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಕಾಫಿ ಬೆಳೆ ಕಾಡಾನೆ ಪಾಲಾಗುತ್ತಿರುವುದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

ಮಳೆ ಮತ್ತು ಕಾಫಿ ಮಲೆನಾಡಿಗರ ಜೀವಾಳ. ಧೊ…. ಧೊ…. ಅಂತ ಮಳೆ ಸುರಿತಾ ಇರಬೇಕು, ಸೊರ್…. ಸೊರ್…. ಅಂತ ಕಾಫಿ ಹೀರ್ತಾನೆ ಇರಬೇಕು. ಅದೇ ಮಲೆನಾಡ ಲಕ್ಷಣ. ಗ್ರಾಮೀಣ ಬದುಕು ಮತ್ತು ಕೃಷಿಯಲ್ಲಿ ನಿಜವಾದ ನೆಮ್ಮದಿ ನೆಲೆಸಿದೆ. ಯುವ ಸಮೂಹ ಕಾಫಿ ಕೃಷಿಯಿಂದ ವಿಮುಖವಾಗುತ್ತಿರುವ ಈ ದಿನಗಳಲ್ಲಿ ಮತ್ತೆ ಅವರನ್ನು ಕಾಫಿ ಕೃಷಿಯತ್ತ ಕರೆತರುವ ಹೊಣೆ ನಮ್ಮೆಲ್ಲರ ಮೇಲಿದೆ. ಕಾಫಿ ಕೃಷಿ ಕೂಡ ಲಾಭದಾಯಕ ಕ್ಷೇತ್ರ ಎಂಬುದನ್ನು ಮನವರಿಕೆ ಮಾಡಬೇಕು. ಅದಕ್ಕಾಗಿ ಕಡಿಮೆ ವೆಚ್ಚ ಮತ್ತು ಶ್ರಮದಿಂದ ಹೆಚ್ಚು ಲಾಭಗಳಿಸುವ ವಿಧಾನಗಳನ್ನು ಪರಿಚಯಿಸುವ ಕೆಲಸ ಆಗಬೇಕು. 

ಕಾಫಿ ಕೃಷಿ ಕ್ಷೇತ್ರವು ಹಲವು ಗಂಭೀರ ಸಮಸ್ಯೆಗಳನ್ನು ಹೊಂದಿರುವುದು ಹೌದಾದರೂ, ಹೊಸ ಬೆಳವಣಿಗೆ ಮತ್ತು ತಂತ್ರಜ್ಞಾನದ ಆವಿಷ್ಕಾರಗಳಿಗೆ ತೆರೆದುಕೊಳ್ಳುತ್ತಿದೆ. ಮುಖ್ಯವಾಗಿ, ಯುವಸಮುದಾಯ ಕೃಷಿಯ ಪ್ರಾಮುಖ್ಯವನ್ನು, ಕಾಫಿ ಕೃಷಿ ಸಂಸ್ಕೃತಿ ರಕ್ಷಿಸುವ ಅನಿವಾರ್ಯತೆಯನ್ನು ಮನಗಾಣುತ್ತಿದ್ದು, ಈ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬಿದೆ. ಅನೇಕ ಸಮಸ್ಯೆಗಳ ನಡುವೆಯೂ ಸಕಾರಾತ್ಮಕ ಪರಿವರ್ತನೆಯೆಡೆ ಮುಖ ಮಾಡಿರುವುದರಿಂದ ನಾಳೆಗಳ ಕುರಿತಂತೆ ಹೊಸ ಆಶಾವಾದ ಮೂಡಿದೆ. 

ದಾರಿಗಳೇನೋ ಇವೆ. ಅದನ್ನು ತೋರಿಸುವವರಾರು? ಯಾವುದನ್ನು ಮಾಡಬೇಕು ಎಂದು ಹೇಳುವವರಾರು?  ಕಾಫಿ ಕೃಷಿಯ ಸಮಸ್ಯೆಯನ್ನು ಹೇಳುತ್ತ ಕೂರುವುದರ ಬದಲು ಅದರ ಪರಿಹಾರಕ್ಕೆ ಮುಂದಾಗಬೇಕಿದೆ. ಗ್ರಾಹಕರು ಉತ್ತಮ ಗುಣಮಟ್ಟದ ಕಾಫಿಗಳನ್ನು ಗುರುತಿಸಲು ಮತ್ತು ಖರೀದಿಸಲು ಸಹಾಯ ಮಾಡುವುದು,  ಈ ಪ್ರಕ್ರಿಯೆಯಲ್ಲಿ, ಉತ್ತಮ ಗುಣಮಟ್ಟದ ಕಾಫಿ ಬೀಜಗಳನ್ನು ಉತ್ಪಾದಿಸಲು ಸಮಯ, ಉತ್ಸಾಹ, ಬಂಡವಾಳವನ್ನು ಹೂಡಿಕೆ ಮಾಡುವ ರೈತರು, ರೋಸ್ಟರ್‌ಗಳಿಗೆ ಪ್ರತಿಫಲ ನೀಡಲು, ಕಾಫಿ ಬೇಡಿಕೆಯನ್ನು ಹೆಚ್ಚಿಸಲು ಮತ್ತು ಬೆಲೆಗಳನ್ನು ಹೆಚ್ಚಿಸಲು ಸಹಾಯ ಮಾಡುವುದು ನಮ್ಮ “ಸರ್ಚ್‌ ಕಾಫಿ” ಯ ಉದ್ದೇಶವಾಗಿದೆ.

ಕಾಫಿ ಕುಡಿಯಲು ಮಾತ್ರವಲ್ಲ. ಇದು ಇತರರೊಂದಿಗೆ ಹಂಚಿಕೊಳ್ಳಬೇಕಾದ ಸಾಮಾಜಿಕ ಚಟುವಟಿಕೆಯಾಗಿದೆ. ಕಾಫಿಯೊಂದಿಗೆ ಇಂದೇ “ಸರ್ಚ್‌ ಕಾಫಿ” ಸಮುದಾಯಕ್ಕೆ ನಾವೆಲ್ಲರೂ ಒಟ್ಟಾಗಿ ಸೇರಿಕೊಳ್ಳೋಣ. “ಕಾಫಿ ಪ್ರಿಯರಿಂದ, ಕಾಫಿ ಪ್ರಿಯರಿಗಾಗಿ, ಕಾಫಿ ಪ್ರಿಯರ”  ಈ  “ಸರ್ಚ್‌ ಕಾಫಿ” ಗೆ ನಿಮ್ಮೆಲ್ಲರ  ಆಶೀರ್ವಾದ ಸದಾ ಹೀಗೆ ಇರಲಿ.  ನಿಮ್ಮೆಲ್ಲರ ಬೆಂಬಲದೊಂದಿಗೆ “ಸರ್ಚ್‌ ಕಾಫಿ”ಯನ್ನು ಪೋಷಿಸಿ.

ಈ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ ಮತ್ತು ಸಹಕಾರ ಇರುತ್ತವೆ ಅನ್ನುವ ಆಶಯ ಹೊಂದಿದ್ದೇವೆ. ಹೊಸತನದ ಹರಿಕಾರನಾಗಿ, ಸದಭಿರುಚಿಯ ದ್ಯೋತಕವಾಗಿ, ತಾಜಾತನದ ಕುರುಹಾಗಿ, ಕಾಫಿ ಸಂಸ್ಕೃತಿಯ ಪರಂಪರೆಯನ್ನು, ವಿಶೇಷತೆಗಳನ್ನು ತಿಳಿಸಲು ಈ ನಿಮ್ಮ  “ಸರ್ಚ್‌ ಕಾಫಿ” ಯು ಕಾಫಿ ಸಮುದಾಯದ ಒಂದು ವೇದಿಕೆಯಾಗಲಿ ಅನ್ನುವ ಆಶಯದೊಂದಿಗೆ, ವಂದನೆಗಳು.

ಸಂಪಾದಕರು – ಪ್ರಕಾಶಕರು

ಹಾಗೂ “ಸರ್ಚ್‌ ಕಾಫಿ” ಬಳಗ

ಸಂಪಾದಕೀಯ: ಕಾಫಿ ಪ್ರಿಯರಿಂದ, ಕಾಫಿ ಪ್ರಿಯರಿಗಾಗಿ “ಸರ್ಚ್‌ ಕಾಫಿ” 

ಕಾಫಿ ಪ್ರಿಯರಿಂದ, ಕಾಫಿ ಪ್ರಿಯರಿಗಾಗಿ "ಸರ್ಚ್‌ ಕಾಫಿ"  ಆತ್ಮೀಯ ಕಾಫಿ ಪ್ರಿಯರೇ, ಮೊದಲ ಸಂಪಾದಕೀಯದೊಂದಿಗೆ  ಸರ್ಚ್‌ ಕಾಫಿ  ಬಳಗದ ನಮಸ್ಕಾರಗಳು. ಕಾಫಿಯ ಪರಿಮಳ ಮೈ ಮನಸುಗಳನ್ನು ಜಾಗೃತಗೊಳಿಸುತ್ತದೆ. ಪರಿಮಳವ ಆಗ್ರಾಣಿಸದೆ ಕಾಫಿ ಲೋಟಕ್ಕೆ ತುಟಿ ಬಿಚ್ಚುವುದುಂಟೆ? ಮುಂಜಾನೆ ದಿನಪತ್ರಿಕೆಯಲ್ಲಿ ತಲೆಹಾಕಿ ಕೂತಾಗ, ಮನೆಗೆ ನೆಂಟರಿಷ್ಷರು ಬಂದಾಗ ಅತ್ತ ಅಡುಗೆಮನೆಯಿಂದ ಬರುವ ಕಾಫಿಯ ಪರಿಮಳ ಮೂಗು ಮನಸ್ಸೆಲ್ಲವನ್ನು ಸೆಳೆಯುತ್ತದೆ. ತಕ್ಷಣಾರ್ಧದಲ್ಲಿ ಎಲ್ಲವೂ ಕಾಫಿಮಯವಾಗಿ ಅದರ ಪರಿಮಳದಲ್ಲಿ ತೇಲಿ ಬಿಡುವುದುಂಟು.   ಕಾಫಿ ಕೃಷಿಗೆ ಪೂರಕ ಹಲವು ಅನ್ವೇಷಣೆಗಳು ಸಾಧ್ಯವಾಗಿರುವ ಈಗಿನ [...]

ಭಾರತದ ಕಾಫಿ ರಾಜಧಾನಿ ಕೊಡಗು: ಮಂಜಿನ ಬೆಟ್ಟಗಳಿಂದ ಸುವಾಸಿತ ಕಪ್‌ವರೆಗೆ

ಭಾರತದ ಕಾಫಿ ರಾಜಧಾನಿ ಕೊಡಗು: ಮಂಜಿನ ಬೆಟ್ಟಗಳಿಂದ ಸುವಾಸಿತ ಕಪ್‌ವರೆಗೆ ಭಾರತದಲ್ಲಿ ಕಾಫಿ ಎಂಬುದು ಕೇವಲ ಒಂದು ಪಾನೀಯವಲ್ಲ; ಅದೊಂದು ಸಂಪ್ರದಾಯ ಮತ್ತು ಕೋಟ್ಯಂತರ ಜನರ ಬೆಳಗಿನ ಲವಲವಿಕೆಯ ಮೂಲ. ಕೊಡಗಿನ ಪ್ರತಿಯೊಂದು ಮಜಲುಗಳಲ್ಲಿಯೂ ಕಾಫಿಯ ಕಂಪು ಹಾಸುಹೊಕ್ಕಾಗಿದೆ. ಇಲ್ಲಿನ ಬೆಟ್ಟಗಳ ಮಂಜು ಮತ್ತು ತೋಟಗಳ ಹಸಿರು ಕಾಫಿ ಬೆಳೆಯಲು ಶಕ್ತಿಯನ್ನು ನೀಡುತ್ತವೆ. "ಕೊಡಗಿನ ಪ್ರತಿಯೊಂದು ಕಾಫಿ ಬೀಜವೂ ಅಲ್ಲಿನ ಸಂಸ್ಕೃತಿ, ಆತಿಥ್ಯ ಮತ್ತು ಈ ಫಲವತ್ತಾದ ಮಣ್ಣಿನ ಕಥೆಯನ್ನು ಹೇಳುತ್ತದೆ." ☕ ಕೊಡಗಿನ ಸಂಸ್ಕೃತಿ ಮತ್ತು [...]

ಸಮೃದ್ಧಿಯ ಕನಸುಗಾರ, ಶೈಕ್ಷಣಿಕ ಶಿಲ್ಪಿ: ಪ್ರೊ. ಅಶೋಕ ಸಂಗಪ್ಪ ಆಲೂರ – ಒಂದು ಸಮಗ್ರ ಜೀವನಗಾಥೆ

ಪ್ರೊ. ಅಶೋಕ ಸಂಗಪ್ಪ ಆಲೂರ - ಸಮಗ್ರ ಜೀವನಗಾಥೆ ಸಮೃದ್ಧಿಯ ಕನಸುಗಾರ, ಶೈಕ್ಷಣಿಕ ಶಿಲ್ಪಿ: ಪ್ರೊ. ಅಶೋಕ ಸಂಗಪ್ಪ ಆಲೂರ - ಒಂದು ಸಮಗ್ರ ಜೀವನಗಾಥೆ "ವಿದ್ಯೆ ವಿನಯವನ್ನು ಕಲಿಸಬೇಕು, ಕೃಷಿ ಬದುಕನ್ನು ಕಲಿಸಬೇಕು" ಮೇಲಿನ ಉದಾತ್ತ ಧ್ಯೇಯವಾಕ್ಯವು ಕೇವಲ ಮಾತಗದೆ, ಅದನ್ನು ತಮ್ಮ ಬದುಕಿನುದ್ದಕ್ಕೂ ಅಕ್ಷರಶಃ ಪಾಲಿಸುತ್ತಿರುವ ಅಪರೂಪದ ವ್ಯಕ್ತಿತ್ವ ಪ್ರೊ. ಅಶೋಕ ಸಂಗಪ್ಪ ಆಲೂರ ಅವರದ್ದು. ಬಾಗಲಕೋಟೆಯ ಬಿಸಿಲ ನಾಡಿನ ಪುಟ್ಟ ಹಳ್ಳಿಯೊಂದರಿಂದ ಆರಂಭವಾದ ಇವರ ಬದುಕಿನ ಪಯಣ, ಇಂದು ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಯಾಗಿ, [...]

ಶತಮಾನದ ಸಂಭ್ರಮದಲ್ಲಿ ಬಾಳೆಹೊನ್ನೂರು ಕಾಫಿ ಸಂಶೋಧನಾ ಕೇಂದ್ರ (CCRI)

  ಶತಮಾನದ ಸಂಭ್ರಮದಲ್ಲಿ ಬಾಳೆಹೊನ್ನೂರು ಕಾಫಿ ಸಂಶೋಧನಾ ಕೇಂದ್ರ (CCRI) ಭಾರತೀಯ ಕಾಫಿ ವಿಜ್ಞಾನದ ಇತಿಹಾಸ ಮತ್ತು ಶತಮಾನೋತ್ಸವದ ಸಮಗ್ರ ವರದಿ   ಚಿಕ್ಕಮಗಳೂರು ಜಿಲ್ಲೆಯ ಸುಂದರ ಮಲೆನಾಡಿನ ಮಡಿಲಲ್ಲಿರುವ ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ (CCRI) ಇದೀಗ ಶತಮಾನದ ಮೈಲಿಗಲ್ಲನ್ನು ತಲುಪಿದೆ. 1925 ರಿಂದ 2025 ರವರೆಗಿನ ಇದರ ಪಯಣ ಭಾರತೀಯ ಕಾಫಿ ಉದ್ಯಮದ ಯಶೋಗಾಥೆಯಾಗಿದೆ. 1. ಉಗಮ ಮತ್ತು ಇತಿಹಾಸ 19ನೇ ಶತಮಾನದಲ್ಲಿ ಕಾಫಿ ಬೆಳೆಯು ಕೀಟಬಾಧೆ ಮತ್ತು ರೋಗಗಳಿಂದ ತತ್ತರಿಸುತ್ತಿದ್ದಾಗ, ಮೈಸೂರಿನ [...]

ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು: ಕೊಡಗು ಜಿಲ್ಲೆಯ ರೈತರ ಆಶಾಕಿರಣ

ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು: ಕೊಡಗು ಜಿಲ್ಲೆಯ ರೈತರ ಆಶಾಕಿರಣ 49ನೇ ವರ್ಷದ ಸಾರ್ಥಕ ಸೇವೆಯಲ್ಲಿ: ಕರ್ನಾಟಕ ರಾಜ್ಯದ ಪ್ರಪ್ರಥಮ ಕೃಷಿ ವಿಜ್ಞಾನ ಕೇಂದ್ರ ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ (KVK), ಗೋಣಿಕೊಪ್ಪಲು ಕೊಡಗು ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ (ICAR) ಮತ್ತು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (IIHR) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರವು, ರೈತ [...]

‘ಜಸ್ಟ್ ಮೀನ್’ – ಆಕ್ವಾ ವೆಂಚರ್ಸ್: ಕೊಡಗಿನ ಕಾಫಿ ತೋಟದಲ್ಲಿ ಸುಸ್ಥಿರ ಕೃಷಿ ಕ್ರಾಂತಿ

  'ಜಸ್ಟ್ ಮೀನ್' - ಆಕ್ವಾ ವೆಂಚರ್ಸ್ ಕೊಡಗಿನ ಕಾಫಿ ತೋಟದಲ್ಲಿ ಸುಸ್ಥಿರ ಕೃಷಿ ಕ್ರಾಂತಿ ಈ ಕೃಷಿ ಉದ್ಯಮ ಕೇಂದ್ರವು ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಗುಯ್ಯ ಗ್ರಾಮದಲ್ಲಿ, ಸಮುದ್ರ ಮಟ್ಟದಿಂದ ಸುಮಾರು 900 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಪಟ್ಟಡ ನಮಿತಾ ಮತ್ತು ಶ್ಯಾಮ್ ಅಯ್ಯಪ್ಪ ಅವರ ಒಡೆತನದಲ್ಲಿರುವ ರಿವರ್ ಬೆಂಡ್ ಎಸ್ಟೇಟ್, ಕೊಡಗಿನ ಸಾಂಪ್ರದಾಯಿಕ ಕಾಫಿ ಕೃಷಿಯ ಪರಂಪರೆಯನ್ನು ಇಂಟಿಗ್ರೇಟೆಡ್ ಅಕ್ವಾಕಲ್ಚರ್ (ಸಮಗ್ರ ಜಲಚರ ಸಾಕಣೆ), ಅಕ್ವಾಪೋನಿಕ್ಸ್ ಮತ್ತು ಹೈಡ್ರೋಪೋನಿಕ್ಸ್ (ಮಣ್ಣುರಹಿತ ಕೃಷಿ) ನಂತಹ [...]

ಕೃಷಿಯಿಂದ ಜಾಗತಿಕ ಖ್ಯಾತಿಯವರೆಗೆ ಭಾರತದ ಕಾಫಿ ಪಯಣದ ಕಥೆ

  ಕೃಷಿಯಿಂದ ಜಾಗತಿಕ ಖ್ಯಾತಿಯವರೆಗೆ ಭಾರತದ ಕಾಫಿ ಪಯಣದ ಕಥೆ ಪೋಸ್ಟ್ ಮಾಡಿದ ದಿನಾಂಕ: 29 ನವೆಂಬರ್ 2025 | ಮೂಲ: PIB ಪರಿಚಯ ಭಾರತದಲ್ಲಿ ಕಾಫಿ ಕೃಷಿಯ ಆರಂಭವು ಒಂದು ದಂತಕಥೆಯಾಗಿದೆ. ಕ್ರಿ.ಶ. 1600 ರ ಸುಮಾರಿಗೆ ಸೂಫಿ ಸಂತ ಬಾಬಾ ಬುಡನ್ ಅವರು ಯೆಮೆನ್‌ನ ಮೋಚಾ ಬಂದೂರಿನಿಂದ ತಂದ ಏಳು ಕಾಫಿ ಬೀಜಗಳನ್ನು ಕರ್ನಾಟಕದ ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ಬೆಟ್ಟಗಳಲ್ಲಿ ನೆಟ್ಟಾಗ ಈ ಪಯಣ ಪ್ರಾರಂಭವಾಯಿತು. ಆರಂಭದಲ್ಲಿ ಉದ್ಯಾನ ಬೆಳೆಯಾಗಿ ಬೆಳೆದ ಕಾಫಿ [...]

ಮಳೆ ಮತ್ತು ಹವಾಮಾನ ವೈಪರೀತ್ಯ: ಕರ್ನಾಟಕ ಕಾಫಿ ಉತ್ಪಾದನೆಗೆ ಭಾರಿ ಹಿನ್ನಡೆ

  ಮಳೆ ಮತ್ತು ಹವಾಮಾನ ವೈಪರೀತ್ಯ: ಕರ್ನಾಟಕ ಕಾಫಿ ಉತ್ಪಾದನೆಗೆ ಭಾರಿ ಹಿನ್ನಡೆ ಪ್ರಕಟಣೆ: 2025 ನವೆಂಬರ್ 20 ರ ವರದಿ ಆಧಾರಿತ ಚಿತ್ರ ಕೃಪೆ: ಕಾಫಿ ತೋಟದ ದೃಶ್ಯ ಕರ್ನಾಟಕದ ಕಾಫಿ ನಾಡಿನಲ್ಲಿ ಈ ವರ್ಷ ನಿರಂತರ ಮಳೆ ಹಾಗೂ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಭಾರೀ ಆತಂಕ ಮನೆ ಮಾಡಿದೆ. ದೇಶದ ಕಾಫಿ ಉತ್ಪಾದನೆಯಲ್ಲಿ ಸುಮಾರು 30,000 ಟನ್ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ (KPA) ತಿಳಿಸಿದೆ. ಅರಬಿಕಾ ಮತ್ತು ರೋಬಸ್ಟಾ ಬೆಳೆಗಳ [...]

ಉದ್ಯಮದಿಂದ ಕಾಫಿ ಕೃಷಿಯತ್ತ ನನ್ನ ಪ್ರಯಾಣ: ಕಾಫಿ ಬೆಳೆಗಾರರಾದ ನಂದಿನೆರವಂಡ ಅಪ್ಪಯ್ಯನವರೊಂದಿಗಿನ ಸಂದರ್ಶನ

  ಉದ್ಯಮದಿಂದ ಕಾಫಿ ಕೃಷಿಯತ್ತ ನನ್ನ ಪ್ರಯಾಣ ಸಂದರ್ಶನ: ನಂದಿನೆರವಂಡ ಅಪ್ಪಯ್ಯನವರೊಂದಿಗೆ | ಪ್ರಕಟಣೆ ದಿನಾಂಕ: ಅಕ್ಟೋಬರ್ 20, 2025 ಸಂದರ್ಶನ ನೀಡಿದ ನಂದಿನೆರವಂಡ ಅಪ್ಪಯ್ಯನವರು. ಕಾಫಿ ಬೆಳೆಗಾರರಾದ ನಂದಿನೆರವಂಡ ಅಪ್ಪಯ್ಯನವರೊಂದಿಗಿನ ಸಂದರ್ಶನ: ಉದ್ಯಮದಿಂದ ಕಾಫಿ ಕೃಷಿಯತ್ತ ಅವರ ಪ್ರಯಾಣದ ಸ್ಫೂರ್ತಿದಾಯಕ ಕಥೆ ಇಲ್ಲಿದೆ. ಪ್ರಾರಂಭಿಕ ಜೀವನ ಮತ್ತು ವೃತ್ತಿಜೀವನ ನಮಸ್ತೇ ಅಪ್ಪಯ್ಯನವರೇ ನಿಮ್ಮ ಬಗ್ಗೆ ತಿಳಿಸಿ. ನಮಸ್ತೇ, ನಾನು ನಂದಿನೆರವಂಡ ಅಪ್ಪಚ್ಚ ಮತ್ತು ಗಂಗಮ್ಮ ಅವರ ಎರಡನೇ ಮಗ. ನಾನು 1945ರ ಮಾರ್ಚ್ 30ರಂದು ಮಡಿಕೇರಿ [...]

ಕೂರ್ಗ್ ಪ್ಲಾಂಟರ್ಸ್ ಮಹಾಸಭೆ: ಕಾಫಿ ಬ್ರ್ಯಾಂಡ್ ಸಂರಕ್ಷಣೆ ಹಾಗೂ ಕೃಷಿ ಸವಾಲುಗಳ ಕುರಿತು ಗಣ್ಯರ ಅಭಿಪ್ರಾಯ

ಕೂರ್ಗ್ ಪ್ಲಾಂಟರ್ಸ್ ಮಹಾಸಭೆ: ಕಾಫಿ ಬ್ರ್ಯಾಂಡ್ ಸಂರಕ್ಷಣೆ ಹಾಗೂ ಕೃಷಿ ಸವಾಲುಗಳ ಕುರಿತು ಗಣ್ಯರ ಅಭಿಪ್ರಾಯ ಮಡಿಕೇರಿ, ಅಕ್ಟೋಬರ್ 31, 2023 ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿರುವ ಕೊಡಗು, ಸ್ವಾದಿಷ್ಟ ಕಾಫಿಯ ನೆಲವೀಡಾಗಿಯೂ ವಿಶ್ವಾದ್ಯಂತ ಖ್ಯಾತಿ ಗಳಿಸಿದೆ. ಈ ವಿಶಿಷ್ಟ ಕೊಡಗು ಕಾಫಿ ಬ್ರ್ಯಾಂಡ್ ಅನ್ನು ಸಂರಕ್ಷಿಸಿಕೊಳ್ಳುವ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಬೆಳೆಗಾರ ಸಮುದಾಯಕ್ಕೆ ಕರೆ ನೀಡಿದರು. ಸಿದ್ದಾಪುರ ಸಮೀಪದ ಇವೊಲ್ಯು ಬ್ಯಾಕ್ ರೆಸಾರ್ಟ್‌ನಲ್ಲಿ ಕೂರ್ಗ್ [...]

ಟಾಟಾ ಸ್ಟಾರ್‌ಬಕ್ಸ್‌ನಿಂದ ಭಾರತದ ಕಾಫಿ ಪರಂಪರೆಗೆ ವಿಶೇಷ ಗೌರವ: ಕೊಡಗಿನ ಎಸ್ಟೇಟ್-ಎಕ್ಸ್‌ಕ್ಲೂಸಿವ್ ಏಕ-ಮೂಲ ಕಾಫಿಗಳು ಅನಾವರಣ

  ಭಾರತೀಯ ಕಾಫಿ ವಿಶೇಷತೆ ಟಾಟಾ ಸ್ಟಾರ್‌ಬಕ್ಸ್‌ನಿಂದ ಭಾರತದ ಕಾಫಿ ಪರಂಪರೆಗೆ ವಿಶೇಷ ಗೌರವ: ಕೊಡಗಿನ ಎಸ್ಟೇಟ್-ಎಕ್ಸ್‌ಕ್ಲೂಸಿವ್ ಏಕ-ಮೂಲ ಕಾಫಿಗಳು ಅನಾವರಣ ಪ್ರತಿ ಕಪ್‌ನಲ್ಲಿ ಕೊಡಗಿನ ಶ್ರೀಮಂತ ಕಥೆಗಳು, ಮಣ್ಣು ಮತ್ತು ಚೈತನ್ಯದ ಅನುಭವ ಭಾರತದ ಆಳವಾಗಿ ಬೇರೂರಿರುವ ಮತ್ತು ಶ್ರೀಮಂತ ಕಾಫಿ ಪರಂಪರೆಯನ್ನು ಮತ್ತಷ್ಟು ಉತ್ತುಂಗಕ್ಕೇರಿಸುವ ಉದ್ದೇಶದಿಂದ, ಟಾಟಾ ಸ್ಟಾರ್‌ಬಕ್ಸ್ ತನ್ನ ಮೊಟ್ಟಮೊದಲ ಎಸ್ಟೇಟ್-ಎಕ್ಸ್‌ಕ್ಲೂಸಿವ್ ಸಿಂಗಲ್-ಆರಿಜಿನ್ ಕಾಫಿಗಳನ್ನು ಬಿಡುಗಡೆ ಮಾಡಿದೆ. ಕರ್ನಾಟಕದ ಕೊಡಗಿನ ಐತಿಹಾಸಿಕ ನುಲ್ಲೂರ್, ಮಾರ್ಗೊಲಿ ಮತ್ತು ಕರಡಿಬೆಟ್ಟ ಎಸ್ಟೇಟ್‌ಗಳಿಂದ ಈ ವಿಶಿಷ್ಟ ಕಾಫಿಗಳನ್ನು [...]

ಕೊಡಗಿನಲ್ಲಿ ಅಂತರರಾಷ್ಟ್ರೀಯ ಕಾಫಿ ದಿನ ಆಚರಣೆ: 2047ಕ್ಕೆ 7 ಲಕ್ಷ ಟನ್ ಉತ್ಪಾದನೆಗೆ ಸಂಕಲ್ಪ

  ಅಂತರರಾಷ್ಟ್ರೀಯ ಕಾಫಿ ದಿನ ವಿಶೇಷ ವರದಿ ಕೊಡಗಿನಲ್ಲಿ ಅಂತರರಾಷ್ಟ್ರೀಯ ಕಾಫಿ ದಿನ ಆಚರಣೆ: 2047ಕ್ಕೆ 7 ಲಕ್ಷ ಟನ್ ಉತ್ಪಾದನೆಗೆ ಸಂಕಲ್ಪ ವರದಿ: ಮಡಿಕೇರಿ | ಅಕ್ಟೋಬರ್ 1 ಅರ್ಥಪೂರ್ಣ ಆಚರಣೆ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ (CWCAB) ವತಿಯಿಂದ ಮಡಿಕೇರಿಯಲ್ಲಿರುವ KOIMS ಆಸ್ಪತ್ರೆಯ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಲಾಯಿತು. ಕಾಫಿ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುವ ಮಹತ್ವಕಾಂಕ್ಷೆಯ ಗುರಿ ಮತ್ತು ಆರೋಗ್ಯದ ದೃಷ್ಟಿಯಿಂದ ಕಾಫಿ ಸೇವನೆಯ ಪ್ರಾಮುಖ್ಯತೆಯ ಬಗ್ಗೆ ಈ ಸಂದರ್ಭದಲ್ಲಿ ಗಣ್ಯರು [...]

‘ಶುದ್ಧ ಕಾಫಿ ಸೇವನೆಯ ಉತ್ತೇಜನ’ – CWCABನಿಂದ ಅಕ್ಟೋಬರ್‌ 1ರಂದು ಅಂತರರಾಷ್ಟ್ರೀಯ ಕಾಫಿ ದಿನಾಚರಣೆ

  'ಶುದ್ಧ ಕಾಫಿ ಸೇವನೆಯ ಉತ್ತೇಜನ' - CWCABನಿಂದ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ (CWCAB) ಅಕ್ಟೋಬರ್ 1 ರಂದು ಕಾಫಿ ದಿನವನ್ನು ಆಚರಿಸುತ್ತಿದೆ. ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ (CWCAB)ಯು ಅಂತರರಾಷ್ಟ್ರೀಯ ಕಾಫಿ ಸಂಸ್ಥೆ (ICO) ನೇತೃತ್ವದ ಜಾಗತಿಕ ಉಪಕ್ರಮಕ್ಕೆ ಕೈಜೋಡಿಸಿದ್ದು, ಅಕ್ಟೋಬರ್ 1 ರಂದು ಅಂತರರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಲು ಸಜ್ಜಾಗಿದೆ. ಈ ಆಚರಣೆಯನ್ನು ಭಾರತೀಯ ಕಾಫಿ ಮಂಡಳಿ, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ (CPA), ಕರ್ನಾಟಕ ಪ್ಲಾಂಟರ್ಸ್ [...]

ಕೊಡಗಿನಲ್ಲಿ ಕಾಫಿ ಕೃಷಿಯ ವಿಕಾಸ: ಕಾಫಿ ತಜ್ಞ ವಿಶ್ವನಾಥ್ ಕೆ.ಕೆ. ಅವರ ಸಮಗ್ರ ವಿಶ್ಲೇಷಣೆ

ಕೊಡಗಿನಲ್ಲಿ ಕಾಫಿ ಕೃಷಿಯ ವಿಕಾಸ: ಕಾಫಿ ತಜ್ಞ ವಿಶ್ವನಾಥ್ ಕೆ.ಕೆ. ಅವರ ಸಮಗ್ರ ವಿಶ್ಲೇಷಣೆ ಕೊಡಗಿನ ಪ್ರಮುಖ ಕಾಫಿ ಬೆಳೆಗಾರರಾದ ವಿಶ್ವನಾಥ್ ಕೆ.ಕೆ. ಅವರು ಕೊಡಗು ಜಿಲ್ಲೆಯ ಕೃಷಿ ಪದ್ಧತಿಗಳು ಮತ್ತು ಕಾಫಿ ಕೃಷಿಯಲ್ಲಿ ಕಾಲಕಾಲಕ್ಕೆ ಆಗಿರುವ ಬದಲಾವಣೆಗಳ ಕುರಿತು ಇಲ್ಲಿ ಸಮಗ್ರ ವಿಶ್ಲೇಷಣೆ ಮಾಡಿದ್ದಾರೆ. ಅವರ ವೈಯಕ್ತಿಕ ಅನುಭವದ ನೆಲೆಯಲ್ಲಿ ಕೃಷಿ ಕ್ಷೇತ್ರದ ಪರಿವರ್ತನೆಗಳು, ಆರ್ಥಿಕ ಸವಾಲುಗಳು ಮತ್ತು ಹವಾಮಾನ ವೈಪರೀತ್ಯಗಳ ಕುರಿತು ಈ ವರದಿಯಲ್ಲಿ ವಿವರವಾಗಿ ವಿವರಿಸಲಾಗಿದೆ. ವಿಶ್ವನಾಥ್ ಕೆ.ಕೆ. ಅವರ ಕಾಫಿ ಕೃಷಿ [...]

ಕಾಫಿಯ ಸವಿಯೋಣ ಬನ್ನಿ….. ಮಡಿಕೇರಿ “ಕಾಫಿ ದಸರಾ” ಸಂಭ್ರಮಕ್ಕೆ

  ಕಾಫಿಯ ಸವಿಯೋಣ ಬನ್ನಿ..... ಮಡಿಕೇರಿ "ಕಾಫಿ ದಸರಾ" ಸಂಭ್ರಮಕ್ಕೆ ಕೊಡಗು, ಕರ್ನಾಟಕದ ಸುಂದರ ಕಾಫಿ ನಾಡು, ಇದೀಗ ಕಾಫಿ ದಸರಾ ಸಂಭ್ರಮಕ್ಕೆ ಸಿದ್ಧವಾಗಿದೆ. ಕಾಫಿ ನಾಡಿನ ದಸರಾ ಮಹೋತ್ಸವದ ಭಾಗವಾಗಿ ಸೆಪ್ಟೆಂಬರ್ 24ರಂದು ನಡೆಯುವ ಈ ವಿಶೇಷ ಕಾರ್ಯಕ್ರಮವು ಕಾಫಿ ಪ್ರಿಯರು ಮತ್ತು ಬೆಳೆಗಾರರಿಗಾಗಿ ಒಂದು ಅನನ್ಯ ವೇದಿಕೆಯನ್ನು ಒದಗಿಸಲಿದೆ. ಈ ವರ್ಷದ ಕಾಫಿ ದಸರಾವನ್ನು ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಮಡಿಕೇರಿಯ ಗಾಂಧಿ ಮೈದಾನದಲ್ಲಿರುವ ಕೊಡಗಿನ ದಿವಂಗತ ಸಾಕಮ್ಮ ಅವರ ಸ್ಮರಣಾರ್ಥ ಸಭಾಂಗಣದಲ್ಲಿ [...]

ಜೆ.ಎನ್.ಜೆ. ಕಾಫಿ ವರ್ಕ್ಸ್‌ನ ವ್ಯವಸ್ಥಾಪಕ ಪಾಲುದಾರರಾದ ಕೊಳುವಂಡ ಕಾರ್ಯಪ್ಪನವರೊಂದಿಗಿನ ಸಂದರ್ಶನ

ಜೆ.ಎನ್.ಜೆ. ಕಾಫಿ ವರ್ಕ್ಸ್‌ನ ವ್ಯವಸ್ಥಾಪಕ ಪಾಲುದಾರರಾದ ಕೊಳುವಂಡ ಕಾರ್ಯಪ್ಪನವರೊಂದಿಗಿನ ಸಂದರ್ಶನ ಕಾರ್ಯಪ್ಪನವರೆ, ನಿಮ್ಮ ಜೆ.ಎನ್.ಜೆ. ಕಾಫಿ ವರ್ಕ್ಸ್‌ನ್ನು ನೀವು ಹೇಗೆ ಪ್ರಾರಂಭಿಸಿದ್ದೀರಿ? ಕಾಫಿ ಉದ್ಯಮದಲ್ಲಿ ನಾನು ಕಳೆದ 40 ವರ್ಷಗಳಿಂದ ಅನುಭವ ಹೊಂದಿದ್ದೇನೆ. ವೈನಾಡಿನಲ್ಲಿರುವ ವಾರಿಯತ್ ಕಾಫಿ ಎಸ್ಟೇಟ್ ನಲ್ಲಿ ಹತ್ತು ವರ್ಷ ಅಂದರೆ 1985 ರಿಂದ 1995 ರವರೆಗೆ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದೆ. ಈ ಕಾಫಿ ತೋಟವು ಏಷ್ಯಾದ ಅತ್ಯಂತ ಇಳುವರಿ ನೀಡುವ ತೋಟವಾಗಿ ಹೆಸರು ಮಾಡಿದೆ. 370 ಎಕರೆ ವಿಸ್ತೀರ್ಣದ ಕಾಫಿ ತೋಟದಲ್ಲಿ [...]

ಐದನೇ ತಲೆಮಾರಿನ ಕಾಫಿ ಬೆಳೆಗಾರರಾದ ಶ್ರೀಮತಿ ಸೈಯದಾ ಸುಮೈರಾ ಬಾನು ಅವರೊಂದಿಗಿನ ಸಂದರ್ಶನ

ಐದನೇ ತಲೆಮಾರಿನ ಕಾಫಿ ಬೆಳೆಗಾರರಾದ ಶ್ರೀಮತಿ ಸೈಯದಾ ಸುಮೈರಾ ಬಾನು ಅವರೊಂದಿಗಿನ ಸಂದರ್ಶನ ರಸುಲ್‌ಪುರ್ ಕಾಫಿ ಎಸ್ಟೇಟ್‌ಗಳು ಮತ್ತು ರೋಸ್ಟರ್ಸ್ ಭಾರತದ ಪಶ್ಚಿಮ ಘಟ್ಟಗಳ ಹಾಟ್ ಸ್ಪಾಟ್‌ಗಳಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಸುಲ್‌ಪುರ್ ಗ್ರಾಮದಲ್ಲಿದೆ. ರಸುಲ್ಪುರ್  ಕಾಫಿ ಫಾರ್ಮ್‌ಗಳು, ಕಾಫಿ ಪಾನೀಯದ ಬಗ್ಗೆ ಮೊದಲ ಜ್ಞಾನವನ್ನು ಪಡೆಯಲು ಉತ್ತಮ ಸ್ಥಳವಾಗಿದೆ. ಕಾಫಿಯನ್ನು ಹೇಗೆ ಬೆಳೆಸಲಾಗುತ್ತದೆ, ಕೊಯ್ಲು, ಸಂಸ್ಕರಣೆ, 18ನೇ ಶತಮಾನದ ಉತ್ತರಾರ್ಧದಲ್ಲಿ ಅವರ ಕುಟುಂಬದ ಕಾಫಿ ಎಸ್ಟೇಟ್ ಅನ್ನು ಹೇಗೆ [...]

ಕಾಫಿ ಬೆಳೆಗಾರರಾದ ಕುಪ್ಪಂಡ ಅಚ್ಚಯ್ಯ ಅವರೊಂದಿಗಿನ ಸಂದರ್ಶನ

“ಅಂಥೋರಿಯಂ ಒಂದು ಒಳ್ಳೆಯ ಆದಾಯದ ಮೂಲವಾಗಿದ್ದು, ಕಾಫೀ ಹಾಗೂ ಕರಿಮೆಣಸಿಗೆ ಹೋಲಿಸಿದರೆ, ಕಡಿಮೆ ಸ್ಥಳದಲ್ಲಿ ಹಾಗೂ ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಪಡೆಯಬಹುದಾದ ಕೃಷಿಯಾಗಿದೆ” ನಮಸ್ತೆ ಅಚ್ಚಯ್ಯ ಅವರೇ, ಕಾಫಿಯಲ್ಲಿ ನಿಮ್ಮ ಕುಟುಂಬದ ಇತಿಹಾಸದ ಬಗ್ಗೆ ನಮಗೆ ತಿಳಿಸಿ ಮತ್ತು ಕಾಫಿ ಕೃಷಿಯಲ್ಲಿ ನಿಮ್ಮ ವೃತ್ತಿಯನ್ನು ಮೀಸಲಿಡಬೇಕೆಂದು ನೀವು ಯಾವಾಗ ನಿರ್ಧರಿಸಿದ್ದೀರಿ? ನಮ್ಮದು ಒಂದು ಕೃಷಿ ಕುಟುಂಬವಾಗಿದ್ದು. ನನ್ನ ಅಜ್ಜ ಕುಪ್ಪಂಡ ಅಚ್ಚಯ್ಯ ಹಾಗೂ ನನ್ನ ತಂದೆಯವರಾದ ಕುಪ್ಪಂಡ ಚಿನ್ನಪ್ಪ ತಮ್ಮ ಜೀವನವನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಇವರನ್ನು [...]

ಗುಣಮಟ್ಟಕ್ಕೆ ಆದ್ಯತೆ ನೀಡಿದಾಗ ಭಾರತೀಯ ಕಾಫಿ ಬೆಳೆಗೆ ಎಂದಿಗೂ ಹಿನ್ನಡೆಯಾಗಲಾರದು; ಡಾ. ಕೆ.ಜಿ. ಜಗದೀಶ್

ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ 145ನೇ ವಾರ್ಷಿಕ ಮಹಾಸಭೆ: ಹೊಸ ಯೋಜನೆಗಳನ್ನು ಪರಿಚಯಿಸಿದ ಡಾ. ಕೆ.ಜಿ. ಜಗದೀಶ್ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ 145ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ ಭಾರತೀಯ ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕೆ.ಜಿ. ಜಗದೀಶ್ ಅವರು, ಕಾಫಿ ಬೆಳೆಗಾರರಿಗೆ ಗುಣಮಟ್ಟ ಹೆಚ್ಚಿಸಲು ಮತ್ತು ತೋಟ ನಿರ್ವಹಣೆಗೆ ಹೊಸ ಯೋಜನೆಗಳನ್ನು ಪರಿಚಯಿಸಿದರು. ಕಾಫಿ ಗುಣಮಟ್ಟ ಹೆಚ್ಚಿಸಲು ಸಮುದಾಯ ಗುಂಪುಗಳ ಪ್ರಾರಂಭ: ಪ್ರತಿ ಹೋಬಳಿಯ 100 ಕಾಫಿ ಕೃಷಿಕರನ್ನು ಒಳಗೊಂಡ ಸಮುದಾಯ ಗುಂಪುಗಳನ್ನು ಪ್ರಾರಂಭಿಸಿ, ಅವರ ಬೆಳೆದ [...]

ಕಾಫಿ ಕೃಷಿಯಲ್ಲಿ ದೈನಂದಿನ ಜೀವನ: ಕಾಫಿ ಬೆಳೆಗಾರರಾದ ನಡಿಕೇರಿಯಂಡ ಬೋಸ್ ಮಂದಣ್ಣ ಅವರೊಂದಿಗಿನ ಸಂದರ್ಶನ

ಕಾಫಿ ಕೃಷಿಯಲ್ಲಿ ದೈನಂದಿನ ಜೀವನ: ಕಾಫಿ ಬೆಳೆಗಾರರಾದ ನಡಿಕೇರಿಯಂಡ ಬೋಸ್ ಮಂದಣ್ಣ ಅವರೊಂದಿಗಿನ ಸಂದರ್ಶನ Search Coorg Media Presents “Search Coffee” Digital Edition ಕಾಫಿ ಸಮುದಾಯದ ಕಥೆಗಳನ್ನು ನೀವು ಆಲಿಸಿ, ಕಾಫಿ ರೈತರಿಗೆ ಒದಗುವ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಒಂದು ಅವಲೋಕನವನ್ನು ಪಡೆಯಿರಿ. ಅವರ ಪ್ರತಿದಿನದ ಚಟುವಟಿಕೆಗಳು ಹಾಗೂ ತೋಟಗಳು ಹೇಗಿರುತ್ತವೆ. ಕಾಫಿ ಕೃಷಿಕರ ಭರವಸೆ ಮತ್ತು ನಿರೀಕ್ಷೆಗಳೇನು. ಕೆಳಗಿನ ಸಂದರ್ಶನದಲ್ಲಿ, ಕೊಡಗಿನ ಪ್ರಗತಿಪರ ಕಾಫಿ ಬೆಳೆಗಾರರಾದ ಬೋಸ್‌ ಮಂದಣ್ಣ ಅವರ ಕಾಫಿ [...]

ಕೊಟ್ಟಗೇರಿಯಲ್ಲಿ ಮಣ್ಣು ಪರೀಕ್ಷಾ ಅಭಿಯಾನ

ಗೋಣಿಕೊಪ್ಪಲು ಕಾಫಿ ಮಂಡಳಿ ವಿಸ್ತರಣಾ ವಿಭಾಗ ಹಾಗೂ ಕೊಟ್ಟಗೇರಿ ಲಕ್ಷ್ಮಣತೀರ್ಥ ಸಂಘದ ವತಿಯಿಂದ ಬಾಳೆಲೆ ಹೋಬಳಿ ವ್ಯಾಪ್ತಿಯ ಕಾಫಿ ಬೆಳೆಗಾರರಿಗೆ ಫೆ.29 ರಂದು ಮಣ್ಣು ಪರೀಕ್ಷೆ ಅಭಿಯಾನ ಮತ್ತು ಕಾಫಿ ಬೆಳೆಯ ಬಗ್ಗೆ ತಾಂತ್ರಿಕ ಮಾಹಿತಿ ನೀಡುವ ಕಾರ್ಯಾಗಾರ ನಡೆಯಲಿದೆ. ಅಂದು ಬೆಳಗ್ಗೆ 9.45ಗಂಟೆಗೆ ಕೊಟ್ಟಗೇರಿ ಸಮುದಾಯ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಬಾಳೆಲೆ ಹೋಬಳಿ ವ್ಯಾಪ್ತಿಯ ಕಾಫಿ ಬೆಳೆಗಾರರು ತಮ್ಮ ತೋಟದ ಮಣ್ಣಿನ ಮಾದರಿಯನ್ನು ಕಾಫಿ ಮಂಡಳಿ ಶಿಫಾರಸು ಮಾಡಿದ ರೀತಿಯಲ್ಲಿ ಮಣ್ಣಿನ ಮಾದರಿಯ ಸಂಗ್ರಹಣೆಯನ್ನು ತಂದು [...]

ಕಾಫಿಮಂಡಳಿ: ಬಿತ್ತನೆ ಕಾಫಿ ಬೀಜಕ್ಕೆ ಅರ್ಜಿ ಆಹ್ವಾನ

ಚೆಟ್ಟಳ್ಳಿ: ಪ್ರಸಕ್ತ ವರ್ಷ (2023-24) ನೇ ಸಾಲಿನ “ಬಿತ್ತನೆ ಕಾಫಿ ಬೀಜ”ಕ್ಕೆ (Seed Coffee) ಆಸಕ್ತ ಕಾಫಿ ಬೆಳೆಗಾರ ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರೆಬಿಕಾ ಹಾಗು ರೋಬಷ್ಟಾ ಬಿತ್ತನೆ ಬೀಜಕ್ಕೆ ಅರ್ಜಿ ಸಲ್ಲಿಸಲಿಚ್ಛಿಸುವ ಆಸಕ್ತ ಕಾಫಿ ಬೆಳೆಗಾರರು ಮಂಡಳಿಯ ಕಛೇರಿಯ ಸಮಯದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಅರೆಬಿಕಾ ಹಾಗು ರೊಬಷ್ಟಾದ ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ ರೂ.400ನ್ನು ಮುಂಗಡವಾಗಿ ಪಾವತಿಸಿ ತಮ್ಮ ಹೆಸರನ್ನು ನೊಂದಾಯಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ನವೆಂಬರ್ 2023 ಆಗಿದೆ. ಹೆಚ್ಚಿನ [...]

ಕಾಫಿಯ ಪರಿಮಳ ಪಸರಿಸಲು ಪರ್ವಕಾಲ

 (ಅಕ್ಟೋಬರ್ 1, ಅಂತರರಾಷ್ಟ್ರೀಯ ಕಾಫಿ ದಿನ ವಿಶೇಷ ಲೇಖನ) ಬೆಳಗಿನ ಹೊತ್ತು ಕೈಯಲ್ಲಿ ಒಂದು ಕಪ್ಪು ಕಾಫಿ ಹಿಡಿದು ಹೀರುತ್ತಿರುವಾಗ, ಅದರ ಪರಿಮಳದ ಆನಂದ ಅದೆಷ್ಟು ಆವರಿಸಿರುತ್ತೆಂದರೆ, ಆ ಪರಿಮಳ ಬಂದುದಾದರೂ ಹೇಗೆ? ಕಾಫಿಯಾದರೂ ಎಲ್ಲಿಂದ ಬಂತು? ಅದರ ತಯಾರಿಯನ್ನು ಕಂಡುಹಿಡಿದವರ್ಯಾರು? ಇತ್ಯಾದಿ ಯಾವ ಪ್ರಶ್ನೆಗಳೂ ನೆನಪಾಗುವುದಿಲ್ಲ. ಅಷ್ಟು ಪರಿಮಳವು ಆವರಿಸಿದ್ದರೆ ಆಶ್ಚರ್ಯವಿಲ್ಲ! ನಮ್ಮ ದೇಶದಲ್ಲಿ ಬೆಳೆಯುವ ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕಾಫಿ, ವಿದೇಶಗಳಿಗೆ ರಫ್ತಾಗುತ್ತದೆ. ಕಾಫಿ ಒಟ್ಟು ಉತ್ಪಾದನೆ ಮತ್ತು ದೇಶದ ಜನಸಂಖ್ಯೆ ಎರಡನ್ನು ಹೋಲಿಸಿ [...]

MTF ಯೋಜನೆಯನ್ನು ಮುಂದುವರೆಸಲು ಅನುಮೋದನೆ

MTF ಯೋಜನೆಯನ್ನು ಮುಂದುವರೆಸಲು ಅನುಮೋದನೆ ದೊರೆತಿದ್ದು, 25 ಎಕರೆ ಒಳಗಿನ ಎಲ್ಲಾ ಸಣ್ಣ ಕಾಫಿ ಬೆಳೆಗಾರರು ಕೆಳಕಂಡ ಕೆಲಸಗಳಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು 2023 ರ ಅಕ್ಟೋಬರ್ , 31 ಕೊನೆಯ ದಿನವಾಗಿದೆ. ಆದ್ದರಿಂದ ಅರ್ಹ ಬೆಳೆಗಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕೋರಿದೆ. 1. ರಿಪ್ಲಾಂಟೇಶನ್ – 25 ವರ್ಷಕ್ಕೂ ಮೀರಿದ ಎತ್ತರದ ಅರೇಬಿಕಾ ಹಾಗೂ 15 ವರ್ಷ ಮೀರಿದ ಕುಬ್ಜ ಅರೇಬಿಕಾ ತಳಿಗಳು ಹಾಗೂ 40 ವರ್ಷ ಮೀರಿದ ರೊಬಸ್ಟಾ ಅನುತ್ಪಾದಕ [...]

ಸಕಾಲಕ್ಕೆ ಬಾರದ ಮಳೆ, ಒಣಗಿದ ಕಾಫಿ ಬೆಳೆ: ಆತಂಕದಲ್ಲಿ ಬೆಳೆಗಾರರು

ಕಾಫಿ ಹೂ ಬಿಡುವ ಸಮಯದಲ್ಲಿ ಉತ್ತಮ ಮಳೆಯಾಗದೆ ಇದ್ದರೆ ಮುಂದಿನ ಬಾರಿಯ ಫಸಲಿಗೆ ಭಾರಿ ಹೊಡೆತ ಬೀಳುತ್ತದೆ. ಮಳೆ ಅಭಾವ ಮೆಣಸಿನ ಬೆಳೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಮಳೆ ಸರಿಯಾಗಿ ಆಗದಿದ್ದರೆ ಬೆಳೆಗಾರರು ಸಹಜವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ತೋಟಗಳು ಬೋರಾರ್‌ ರೋಗಕ್ಕೆ ತುತ್ತಾಗುವುದನ್ನು ತಳ್ಳಿ ಹಾಕುವಂತಿಲ್ಲ. ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳು ಮೆಣಸು ಬೆಳೆಗಳು ಬಿಸಲ ಝಳಕ್ಕೆ ಒಣಗಿ ಹೋಗಿವೆ. ಹಚ್ಚಹಸಿರಿನಿಂದ ನಳನಳಿಸಬೇಕಿದ್ದ ತೋಟಗಳು ಒಣಗಿ ನಿಂತಿವೆ. ಇಲ್ಲಿಯವರೆಗೆ ಸರಿಯಾದ ಮಳೆ ಭೂಮಿಗೆ [...]

ಹಂಚಿಕೊಳ್ಳಿ
error: Content is protected !!