Reading Time: < 1 minute
ವಿರಾಜಪೇಟೆಯಲ್ಲಿ ಕಾರ್ಯಾಚರಿಸುವ ಪ್ರತಿಷ್ಠಿತ ವಿದ್ಯಾಸಂಸ್ಥೆ ಅನ್ವಾರುಲ್ ಹುದಾ ಇದರ ವತಿಯಿಂದ ಎಸ್ ವೈ ಎಸ್,ಎಸ್ ಎಸ್ ಎಫ್,ಎಸ್ ಜೆ ಎಂ,ಕೆಎಂಜೆ ಹಾಗೂ ಸುನ್ನಿ ಸಂಘ ಕುಟುಂಬಗಳ ಸಹ ಯೋಗದೊಂದಿಗೆ ವಿರಾಜಪೇಟೆ ಮುಖ್ಯ ಬೀದಿಯಲ್ಲಿ ಮೀಲಾದ್ ಸಂದೇಶ ಜಾಥಾ ನಡೆಯಲಿದೆ.
ವರ್ಷಪ್ರತಿ ನಡೆಸಿಕೊಂಡು ಬರುವ ಮಿಲಾದ್ ಸಂದೇಶ ಜಾಥಾ ಅಕ್ಟೋಬರ್ 2 ರ ಸೋಮವಾರ 3 ಗಂಟೆಗೆ ವಿರಾಜಪೇಟೆಯ ಪಂಜರ ಪೇಟೆಯಿಂದ ಆರಂಭಗೊಂಡು ಜಾಥವು ಪಟ್ಟಣದ ಚೌಕಿ, ಗಡಿಯಾರಕಂಭ ಮೂಲಕ ಹಾದು ಹೋಗಿ ಅನ್ವಾರ್ ಕ್ಯಾಂಪಸ್ ನಲ್ಲಿ ಸಮಾಪ್ತಿ ಗೊಳ್ಳಲಿದೆ.
ಜಾಥಾದಲ್ಲಿ ಹಲವಾರು ಸಾದಾತುಗಳು,ಉಲಮಾಗಳು, ಉಮಾರಾಗಳು ಭಾಗವಹಿಸಲಿದ್ದು ಆಕರ್ಷಕ ದಫ್ ಹಾಗೂ ಸ್ಕೌಟ್ ಪ್ರದರ್ಶನ ಕೂಡ ನಡೆಯಲಿದೆ. ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿಕೊಡಬೇಕಾಗಿ ಸ್ವಾಗತ ಸಮಿತಿಯ ಕನ್ವಿನರ್ ಅಬಿದ್ ಕಂಡಕರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ