Reading Time: < 1 minute
ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್, ಕೊಡಗು ಜಿಲ್ಲಾ ಸಮಿತಿ ವತಿಯಿಂದ ಮಡಿಕೇರಿಯ ಮುಖ್ಯ ಬೀದಿಯಲ್ಲಿ ಮೀಲಾದ್ ಸಂದೇಶ ಜಾಥಾ ನಡೆಯಲಿದೆ.
ವರ್ಷಪ್ರತಿ ನಡೆಸಿಕೊಂಡು ಬರುವ ಮಿಲಾದ್ ಸಂದೇಶ ಜಾಥಾ ಸೆಪ್ಟಂಬರ್ 30 ಶನಿವಾರ 3 ಗಂಟೆಗೆ ಮಡಿಕೇರಿ ಗದ್ದಿಗೆಯಿಂದ ಆರಂಭಗೊಂಡ ಜಾಥವು ನಗರದ ಹಳೆಯ ಬಸ್ಸು ನಿಲ್ದಾಣದ ಮೂಲಕ ಸಾಗಿ ಗಾಂಧಿ ಮೈದಾನದಲ್ಲಿ ಸಮಾಪ್ತಿ ಗೊಳ್ಳಲಿದೆ.
ಜಾಥಾದಲ್ಲಿ ಹಲವಾರು ಸಾದಾತುಗಳು,ಉಲಮಾಗಳು, ಉಮರಾಗಳು ಭಾಗವಹಿಸಲಿದ್ದು ಆಕರ್ಷಕ ದಫ್ ಹಾಗೂ ಸ್ಕೌಟ್ ಪ್ರದರ್ಶನ ಕೂಡ ನಡೆಯಲಿದೆ. ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿಕೊಡಬೇಕಾಗಿ ಎಸ್.ವೈ.ಎಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಹಮದ್ ಮದನಿ ಗುಂಡಿಕೆರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ