Reading Time: < 1 minute
ಚೆಯ್ಯ0ಡಾಣೆ: ಕರಡ ಹಾಗೂ ಅರಪಟ್ಟು ಗ್ರಾಮಸ್ಥರು ಆಯೋಜಿಸಿದ 44 ನೇ ವರ್ಷದ ಕೈಲ್ ಮೂರ್ತ ಕ್ರೀಡಾಕೂಟ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ನಡಿಕೇರಿಯಂಡ.ಎಂ.ಸೋಮಯ್ಯ ವಹಿಸಿದರು. ಕ್ರೀಡಾಕೂಟವನ್ನು ದೈಹಿಕ ಶಿಕ್ಷಕಿ ಮೋನಿಕಾ ಕಾವೇರಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಟ್ರಪಂಡ.ಜಿ.ಕುಟ್ಟಪ್ಪ,ಪಾಂಡಂಡ.ಬಿ.ಪ್ರಕಾಶ್,ಅಂಬಾಡಿರ.ಎ. ಅಪ್ಪಯ್ಯ,ಮಾತಂಡ ತನುಜ ಬಿದ್ದಪ್ಪ,ಮಾಚಿಮಾಡ ಪುಷ್ಪ ಪೂವಯ್ಯ ಪಾಲ್ಗೊಂಡಿದರು. ಮಹಿಳೆಯರಿಗೆ,ಪುರುಷರಿಗೆ, ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ವರ್ದೆ ನಡೆಯಿತು. ಕರಡ ಹಾಗೂ ಅರಪಟ್ಟು ಗ್ರಾಮಸ್ಥರಿಗೆ ನಡೆದ ಹಾಕಿ ಪಂದ್ಯಾಟದಲ್ಲಿ ಕರಡ ಗ್ರಾಮದ ತಂಡ ಅರಪಟ್ಟು ಗ್ರಾಮದ ತಂಡವನ್ನು ಸೊಲಿಸಿ ಟ್ರೋಫಿಯನ್ನು ತನ್ನದ್ದಾಗಿಸಿ ಕೊಂಡಿತು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ