Reading Time: 2 minutes
ಚೆಯ್ಯ0ಡಾಣೆ: ಸ್ಥಳೀಯ ನರಿಯಂದಡ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ವತಿಯಿಂದ ರೈತ ಮತ್ತು ರೈತ ಮಹಿಳೆಯರ ಕೃಷಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ನರಿಯಂದಡ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಒಂದು ದಿನದ ಅಣಬೆ ಬೇಸಾಯದ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.
ಒಕ್ಕೂಟದ ಕೃಷಿ ಸಖಿ ಹಾಗೂ ಕೂಡಿಗೆ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಸ್ವರ್ಣ ಶ್ರೀ ತರಬೇತಿಯ ನೇತೃತ್ವ ವಹಿಸಿ ಅಣಬೆ ಕೃಷಿಯನ್ನು ಯಾವ ರೀತಿ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿ ಅಣಬೆ ಬೀಜವನ್ನು ತಂದು ಪೂರ್ಣ ಮಾಹಿತಿ ಸದಸ್ಯರಿಗೆ ಒದಗಿಸಿರುತ್ತಾರೆ.
ಕಾರ್ಯಕ್ರಮದಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರತ್ತು ಟಿ.ಎನ್ ,ಕೃಷಿ ಸಖಿ ಅಂಬಿಕಾ, ಪಶುಸಖಿ ಮೀನಾಕ್ಷಿ,ಎಂಬಿಕೆ ವಸಂತಿ,ಎಲ್ ಸಿ ಆರ್ ಪಿ ನಳಿನಿ, ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ