ಜಾಗತಿಕ ಮಟ್ಟದಲ್ಲಿ ಔಷಧಿಗಳ ಪೂರೈಕೆ ರಾಷ್ಟ್ರವಾಗಿ ಭಾರತದ ಪ್ರಗತಿ

Reading Time: 3 minutes

ಭಾರತ ರಾಷ್ಟ್ರ ವಿಶ್ವದ ಔಷಧಾಲಯದಂತೆ ಇತ್ತೀಚಿನ ವರ್ಷಗಳಲ್ಲಿ ಪ್ರಗತಿ ಸಾಧಿಸುತ್ತಿದ್ದು, ಜೀವ ವಿಜ್ಞಾನದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ ದಾರಿದೀಪವಾಗಿ ನಿಂತಿದೆ, ಜಾಗತಿಕ ಮಟ್ಟದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟುಮಾಡುತ್ತಿದೆ.

ಕೋವಿಡ್ -19 ಸಾಂಕ್ರಾಮಿಕ ವಿರುದ್ಧ ಹೋರಾಡಲು ಲಸಿಕೆ ಅಭಿವೃದ್ಧಿ ಮತ್ತು ವಿತರಣೆಯಲ್ಲಿ ಭಾರತದ ನಾಯಕತ್ವವು ಜಗತ್ತಿಗೆ ಅನುಕರಣೀಯವಾಗಿ ಕಂಡಿದ್ದು, ಜಾಗತಿಕ ಆರೋಗ್ಯಕ್ಕಾಗಿ ನಮ್ಮ ಅಚಲವಾದ ಸಮರ್ಪಣೆಗೆ ಇದು ಸಾಕ್ಷಿಯಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ನಾವೀನ್ಯ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರಾದ ಶ್ರೀ ಭಗವಂತ ಖೂಬಾ ಹೇಳಿದ್ದಾರೆ.

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಅವರು ನೆದರ್ ಲ್ಯಾಂಡ್ ನಲ್ಲಿ ಭಾರತವನ್ನು ಪ್ರತಿನಿಧಿಸುವ 2 ನೇ ವಿಶ್ವ ಸ್ಥಳೀಯ ಉತ್ಪಾದನಾ ವೇದಕೆಯ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದರು. ಸುಸ್ಥಿರ ಸ್ಥಳೀಯ ಉತ್ಪಾದನೆ ಮತ್ತು ಸಮಾನ ಲಭ್ಯತೆಗೆ ಪ್ರಾದೇಶಿಕ ಪಾಲುದಾರಿಕೆಗಳ ಉತ್ತೇಜನ ಕುರಿತು ಚರ್ಚೆಗಳಲ್ಲಿ ಭಾರತದ ನಿಯೋಗದ ನೇತೃತ್ವವನ್ನು ವಹಿಸಿ ಮಾತನಾಡಿದರು.

ಶ್ರೀ ಭಗವಂತ ಖೂಬಾ ನೇತೃತ್ವದ ಭಾರತೀಯ ನಿಯೋಗ ನೆದರ್ಲ್ಯಾಂಡ್ ನಲ್ಲಿ ನಡೆದ 2 ನೇ ವಿಶ್ವ ಸ್ಥಳೀಯ ಉತ್ಪಾದನಾ ವೇದಿಕೆಯ ಶೃಂಗಸಭೆಯಲ್ಲಿ ಭಾಗವಹಿಸಿತು. ವಿವಿಧ ವಲಯಗಳಿಂದ 800 ಕ್ಕೂ ಹೆಚ್ಚು ಉನ್ನತ ಮಟ್ಟದ ಪ್ರತಿನಿಧಿಗಳು ಜಾಗತಿಕ ಶೃಂಗಸಭೆಯಲ್ಲಿ ಪಾಲ್ಗೊಂಡರು.

ಕೋವಿಡ್-19 ಲಸಿಕೆ ಅಭಿವೃದ್ಧಿ ಮತ್ತು ವಿತರಣೆಯಲ್ಲಿ ಭಾರತದ ಅನುಕರಣೀಯ ನಾಯಕತ್ವವು ಜಾಗತಿಕ ಆರೋಗ್ಯಕ್ಕೆ ನಮ್ಮ ಅಚಲವಾದ ಸಮರ್ಪಣೆಗೆ ಸಾಕ್ಷಿಯಾಗಿದೆ. ಸುರಕ್ಷಿತ, ಪರಿಣಾಮಕಾರಿ, ಗುಣಮಟ್ಟದ ಮತ್ತು ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಸಾರ್ವತ್ರಿಕವಾಗಿ ದೊರಕುವಂತೆ ಮಾಡಲು ಬೇರೆ ರಾಷ್ಟ್ರಗಳೊಂದಿಗಿನ ಸಹಯೋಗದಲ್ಲಿ ಭಾರತವು ದೃಢವಾದ ನಂಬಿಕೆಯನ್ನು ಹೊಂದಿದೆ ಎಂದು ಸಚಿವರು ಹೇಳಿದರು.

ಶೃಂಗಸಭೆಯ ಸಂದರ್ಭದಲ್ಲಿ ಸಚಿವರಾದ ಶ್ರೀ ಭಗವಂತ ಖೂಬಾ ಅವರು ಉತ್ತರ ದಕ್ಷಿಣ ಅಮೆರಿಕಾ ದೇಶ ಸುರಿನಾಮಿಸ್ ನ ಸಾರ್ವಜನಿಕ ಆರೋಗ್ಯ ಸಚಿವರಾದ ಡಾ. ಅಮರ್ ಎನ್. ರಾಮದಿನ್ ಅವರನ್ನು ಭೇಟಿ ಮಾಡುವ ಅವಕಾಶ ಪಡೆದರು. ಉಭಯ ನಾಯಕರು ಗುಣಮಟ್ಟದ ಆರೋಗ್ಯ ಸೇವೆಯನ್ನು ನಾಗರಿಕರು ಪಡೆಯುವುದು, ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನದ ಲಭ್ಯತೆ ಹೆಚ್ಚಿಸುವುದು ಮತ್ತು ಭಾರತ ಮತ್ತು ಸುರಿನಾಮಿ ದೇಶಗಳ ನಡುವೆ ಔಷಧ ಉದ್ಯಮದಲ್ಲಿ ಸಹಯೋಗದ ಪ್ರಯತ್ನಗಳನ್ನು ಉತ್ತೇಜಿಸುವ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆ. ಚರ್ಚೆಯ ಸಮಯದಲ್ಲಿ ಭಾರತವು ಹೇಗೆ ಔಷಧಿಗಳ ಜಾಗತಿಕ ಪೂರೈಕೆದಾರನಾಗಿ ಹೊರಹೊಮ್ಮಿತು ಎಂಬುದನ್ನು ವಿಶೇಷವಾಗಿ ಸಚಿವ ಭಗವಂತ ಖೂಬಾ ಉಲ್ಲೇಖಿಸಿದರು, ಅಂತಾರಾಷ್ಟ್ರೀಯ ಆರೋಗ್ಯ ರಕ್ಷಣೆಯ ಮೇಲೆ ಈ ಕೊಡುಗೆಗಳ ಸಕಾರಾತ್ಮಕ ಪರಿಣಾಮವನ್ನು ಎತ್ತಿ ತೋರಿಸುತ್ತದೆ ಎಂದರು.

ಶ್ರೀಗಂಧ ಹಾಲೆಂಡ್ ಕನ್ನಡ ಸಂಘದ ವತಿಯಿಂದ ನೆದರ್‌ಲ್ಯಾಂಡ್ಸ್‌ನ ಮುಝೀಕ್‌ಗೆಬೌ ಐಂಡ್‌ಹೋವನ್‌ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುವ ಸುಯೋಗ ಸಚಿವ ಶ್ರೀ ಭಗವಂತ ಖೂಬಾ ಅವರಿಗೆ ಸಿಕ್ಕಿತು. ನಂತರ ನೆದರ್ಲ್ಯಾಂಡ್ ನ ಭಾರತದ ರಾಯಭಾರಿ ಶ್ರೀಮತಿ. ರೀನಾತ್ ಸಂಧು ಅವರು ಭಾರತೀಯ ನಿಯೋಗಕ್ಕೆ ಔತಣಕೂಟವನ್ನು ಏರ್ಪಡಿಸಿದರು.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x