Reading Time: < 1 minute
ಕಡಂಗ: ಅರಪಟ್ಟು ಶ್ರೀ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ಮಂಗಳವಾರದಂದು ಕಾರ್ತಿಕ ದೀಪೋತ್ಸವ ನಡೆಸಲಾಯಿತು. ಗ್ರಾಮದ ದೇವಸ್ಥಾನದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಊರಿನ ಭಕ್ತರು ದೇವಾಲಯದ ಸುತ್ತಲೂ ಹಣತೆಯನ್ನಿರಿಸಿ ದೀಪ ಹಚ್ಚುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಪೂಜೆಯ ಅಂಗವಾಗಿ ಮೊದಲಿಗೆ ಸಾಮೂಹಿಕ ರುದ್ರಾಭಿಷೇಕ ನಡೆದು ನಂತರ ಮಹಾಪೂಜೆ ನಡೆಯಿತು ಪೂಜಾ ಕೈಂಕಾರ್ಯವನ್ನು ಅರ್ಚಕರಾದ ಕೀರ್ತಿಶ್ ಹಾಗೂ ಅಖಿಲೇಶ್ ಸಹೋದರರು ನಡೆಸಿಕೊಟ್ಟರು.
ಪೂಜೆಯಲ್ಲಿ ಊರಿನ ಅನೇಕ ಭಕ್ತರು, ದೇವಸ್ಥಾನ ಸಮಿತಿ ಅಧ್ಯಕ್ಷರಾದ ಶ್ರೀ ನೆರಪಂಡ ಚಿತ್ರ ಬೆಳ್ಳಿಯಪ್ಪ ಹಾಗೂ ಪದಾಧಿಕಾರಿಗಳು ಹಾಜರಿದ್ದರು ನೆರೆದಿದ್ದ ಭಕ್ತಾದಿಗಳಿಗೆ ಕೋಡಿರ ಶ್ರೀ ಪಿ ಅಪ್ಪಣ್ಣ ಹಾಗೂ ಸಂಸಾರ ಇವರ ಸೇವಾರ್ಥವಾಗಿ ಅನ್ನ ಸಂತರ್ಪಣೆಯನ್ನು ನೀಡಲಾಯಿತು ಊರಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ: ನೌಫಲ್ ಕಡ0ಗ