Reading Time: < 1 minute
ಕಡಂಗ: ಅರಪಟ್ಟು ಗ್ರಾಮದ ಶ್ರೀ ಭಗವತಿ ದೇವಸ್ಥಾನದಲ್ಲಿ ಶ್ರೀ ಸುಬ್ರಮಣ್ಯ ಷಷ್ಠಿ ಪ್ರಯುಕ್ತ ಇಂದು ವಿಶೇಷ ಪೂಜೆ ನಡೆಯಿತು .ಈ ಸಂದರ್ಭ ಸುಬ್ರಮಣ್ಯ ದೇವರಿಗೆ ಭಕ್ತಾಧಿಗಳ ಪರವಾಗಿ ಎಳನೀರು ಹಾಗೂ ಹಾಲಿನ ಅಭಿಷೇಕ ನಡೆಸಲಾಯಿತು. ನಂತರ ದೇವರಿಗೆ ಮಹಾಮಂಗಳಾರತಿ ಜೊತೆ ಮಹಾಪೂಜೆ ನಡೆಯಿತು.ತೀರ್ಥ ಪ್ರಸಾದ ವಿತರಣೆಯ ನಂತರ ನೆರೆದಿದ್ದ ಭಕ್ತರಿಗೆ ಅನ್ನಪ್ರಸಾದವನ್ನು ಕೋಡಿರ ಸುಭಾಶ್ ಮುತ್ತಣ್ಣ ಮತ್ತು ಸಂಸಾರದವರು ಏರ್ಪಡಿಸಿದ್ದರು. ದೇವಸ್ಥಾನದ ಅರ್ಚಕರಾದ ಕೀರ್ತಿಶ್ ರವರು ಪೂಜಾ ವಿಧಿವಿಧಾನವನ್ನು ನಡೆಸಿಕೊಟ್ಟರು. ಈ ಸಂದರ್ಭ ದೇವಸ್ಥಾನದ ಅಧ್ಯಕ್ಷರಾದ ಚಿತ್ರ ಬೆಳ್ಳಿಯಪ್ಪ ಆಡಳಿತ ಮಂಡಳಿ ಸದಸ್ಯರು ಹಾಗೂ ಊರಿನ ಭಕ್ತಾಧಿಗಳುಅಧಿಕ ಸಂಖೆಯಲ್ಲಿ ಭಾಗವಹಿಸಿದ್ದರು.