Reading Time: < 1 minute
ಸಿದ್ದಾಪುರ: ಇಲ್ಲಿನ ಭಾರತೀಯ ನೃತ್ಯ ಕಲಾ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ನೃತ್ಯ ಸಂಭ್ರಮ ಕಾರ್ಯಕ್ರಮ 14ರಂದು ನಡೆಯಲಿದೆ.
ಸಿದ್ದಾಪುರದ ಚರ್ಚ್ ಹಾಲ್‌ನಲ್ಲಿ ಸಂಜೆ 5.00 ಗಂಟೆಗೆ ಆಯೋಜಿಸಲಾಗಿರುವ ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಗುಹ್ಯದ ನಿವೃತ್ತ ಶಿಕ್ಷಕಿ ಕೃಷ್ಣವೇಣಿ. ಯು ಅವರು ಉದ್ಘಾಟಿಸಿಲಿದ್ದಾರೆ.
ಸಮಾರಂಭದ ಮುಖ್ಯ ಅತಿಥಿಗಳಾಗಿ ಸಿದ್ದಾಪುರದ ಎಸ್‌ಎನ್‌ಡಿಪಿ ಯೂನಿಯನ್‌ನ ಅಧ್ಯಕ್ಷ ವಿ.ಕೆ. ಲೋಕೇಶ್ ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್-5 ರ ವಿಜೇತ ರಾಹುಲ್ ರಾವ್ ಆಗಮಿಸಲಿದ್ದಾರೆ.
ಭಾರತೀಯ ನೃತ್ಯ ಕಲಾ ಶಾಲೆಯ ಶಿಕ್ಷಕಿ ವಿದುಷಿ ಜಲಜ ನಾಗರಾಜ್ ಅವರ ನೇತೃತ್ವದಲ್ಲಿ ನಡೆಯುವ ಈ ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ನೃತ್ಯ ಶಾಲೆಯ 46 ಕಲಾವಿದರು ಭರತನಾಟ್ಯ, ಜಾನಪದ, ರಾಮಾಯಾಣ ಮತ್ತು ಮಹಾಭಾರತ ರೂಪಕಗಳಂತಹ ವೈವಿಧ್ಯಮಯ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ.