Search Coorg Media:
ಹಾರ್ಟ್ ಸಂಸ್ಥೆ ಮತ್ತು ಡಾ. ಮಹಾಬಲೇಶ್ವರ ಮಾಮದಾಪುರದ ಸಹಯೋಗದಲ್ಲಿ ಜು. 27ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ರಕ್ತ ಪರೀಕ್ಷೆಯನ್ನು ಅಗ್ರಹಾರದೆ ಸಂತೋಷ್ ಹೊಟೇಲ್ ಮೇಲಿನ ಚಿಕಿತ್ಸಾ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಆದ್ದರಿಂದ ರೋಗ ಲಕ್ಷಣಗಳಾದ ಸಂಧಿವಾತ, ಅಸ್ಥಿಸಂಧಿವಾತ, ಮಕ್ಕಳಲ್ಲಿ ಸಂಧಿವಾತ,ಲೂಪಸ್, ಸ್‌ಕ್ಲರೋಡರ್ಮ, ಸ್ಟೋಗ್ರೆನ್ಸಿಂಡೋಮ್, ಮೊಣಕಾಲು, ಮೊಣಕೈ, ಮಣಿಕಟ್ಟುಗಳಲ್ಲಿ ನೋವು, ಉರಿಕಂಡುಬರುವುದು, ಮಣಿಕಟ್ಟುಗಳು ಕೆಂಪಾಗುವುದು ಅಥವಾ ಊದಿಕೊಳ್ಳುವುದು, ಮಂಡಿ, ಬುಜದ ಕೀಲುಗಳಲ್ಲಿ ನೋವು, ಊತ ಕಂಡುಬರುವುದು, ಏಳಲು ಮತ್ತು ಕುಳಿತುಕೊಳ್ಳಲು ಕಷ್ಟವಾಗುವುದು, ನಿಲ್ಲುವಾಗ ಮತ್ತು ನಡೆಯುವಾಗ ನೋವು ಕಂಡುಬರುವುದು, ದೀರ್ಘಕಾಲದಿಂದ ಬೆರಳುಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು, ದೀರ್ಘಕಾಲದ ಮಂಡಿ, ಮೊಣಕಾಲು ನೋವು, ಸ್ನಾಯು ನೋವು, ಬೆಳಗಿನ ಜಾವ ಎದ್ದ ನಂತರ ಸ್ವಲ್ಪ ಹೊತ್ತು ವಿಶ್ರಾಂತಿಸಿದ ಬಳಿಕ ನಡೆಯಲು ಪ್ರಾರಂಭಿಸಿದಾಗ ನೋವು ಮುಂತಾದವುಕ್ಕೆ ಚಿಕಿತ್ಸೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ: ಸಂಧಿವಾತ ಮತ್ತು ಕೀಲು ರೋಗ ತಜ್ಞರು, ಅಗ್ರಹಾರ, ಸಂತೋಷ್ ಹೋಟೆಲ್ ಹತ್ತಿರ, ಮೈಸೂರು – 570009, ಮೊ: 73384 63486, 88675 25114