ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ : ರೂ. 61.77 ಲಕ್ಷ ಲಾಭ
Reading Time: 3 minutes

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ. 61.77 ಲಕ್ಷ ಲಾಭ

 

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಪೆರಾಜೆ: ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ. 61.77 ಲಕ್ಷ ಲಾಭ, ಶೇ.9 ಡಿವಿಡೆಂಡ್ ಘೋಷಣೆ – ರಬ್ಬರ್ ವ್ಯಾಪಾರ ಮಾಡಿದ ಸದಸ್ಯರಿಗೆ ಕೆಜಿಗೆ. ರೂ1.50 ಪ್ರೋತ್ಸಾಹ ಧನ ನೀಡಲು ತೀರ್ಮಾನ.

 

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 8ನೇ ವರ್ಷದ 2024-25ರ ಸಾಲಿನ ವಾರ್ಷಿಕ ಮಹಾಸಭೆಯು ಆ. 17ರಂದು ಸಂಘದ ಸಭಾಂಗಣದಲ್ಲಿ ಜರುಗಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿಯವರು ಅವರು ಮಾತನಾಡಿ ಸಂಘವು ಈ ಸಲ ರೂ. 61.77 ಲಕ್ಷ ಲಾಭ ಗಳಿಸಿದ್ದು, ಶೇ.9 ಡಿವಿಡೆಂಡ್, ರಬ್ಬರ್ ವ್ಯಾಪಾರ ಮಾಡಿದ ಸದಸ್ಯರಿಗೆ ಕೆಜಿಗೆ. ರೂ1.50 ಪ್ರೋತ್ಸಾಹ ಧನ ನೀಡುವುದೆಂದು ಘೋಷಿಸಿದರು. ಪ್ರಧಾನ ಮಂತ್ರಿಯವರ ಕನಸಾದ ವಿಕಸಿತ ಭಾರತ ಸಂಕಲ್ಪಕ್ಕೆ ಸಹಕಾರ ಕ್ಷೇತ್ರವು ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಯುವಕರು, ಮಹಿಳೆಯರು ಸಹಕಾರ ಸಂಸ್ಥೆಗಳ ಮುಖಾಂತರ ವ್ಯವಹರಿಸಿ ಸ್ವಾವಲಂಬಿಗಳಾಗಬೇಕು” ಎಂದು ಅಭಿಪ್ರಾಯ ಪಟ್ಟರು.

 

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಅಶೋಕ ಪಿ ಎಂ, ನಿರ್ದೇಶಕರುಗಳಾದ ಜಯರಾಮ ನಿಡ್ಯಮಲೆ ಬಿ,, ಸೀತಾರಾಮ ಕದಿಕಡ್ಕ, ಧನಂಜಯ ಕೋಡಿ, ಪ್ರಮೀಳ ಬಂಗಾರಕೋಡಿ, ಪುಷ್ಪಾವತಿ ವ್ಯಾಪಾರೆ, ಪ್ರದೀಪ ಕೆ ಎಂ, ದೀನರಾಜ ದೊಡ್ಡಡ್ಕ, ಶೇಷಪ್ಪ ನಾಯ್ಕ ನಿಡ್ಯಮಲೆ, ಜಯರಾಮ ಪಿ ಟಿ, ಕಿರಣ್ ಬಂಗಾರಕೋಡಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ವಿನೀತ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಉಪಸ್ಥಿತರಿದ್ದರು. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಸ್ಥೆಯ ಪ್ರಗತಿಯ ಬಗ್ಗೆ ಸ್ಲಾಗಿಸಿ, ಸಂಘದ ಲೆಕ್ಕಪತ್ರಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಚಾರ ವಿಮರ್ಶೆಯಲ್ಲಿ ಭಾಗವಹಿಸಿದ್ದರು.

 

ಗೌತಮ್ ಬಂಗಾರಕೋಡಿ ಅವರು ಪ್ರಾರ್ಥನೆಗೈದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಲೋಕೇಶ್ ಹೆಚ್‌ ಕೆ ರವರು ಸ್ವಾಗತಿಸಿದರು. ನಿರ್ದೇಶಕರಾದ ಪ್ರಮೀಳಾ ವಂದಿಸಿದರು. ರಾಷ್ಟ್ರ ಗೀತೆಯೊಂದಿಗೆ ಮಹಾಸಭೆ ಕೊನೆಗೊಂಡಿತು.

ಹಂಚಿಕೊಳ್ಳಿ
5 1 vote
Article Rating
Subscribe
Notify of
guest
1 Comment
Oldest
Newest Most Voted
Inline Feedbacks
View all comments
Mahesh. R
Mahesh. R
27 days ago

ಯುವ ತೇಜಸ್ಸುಗಳಿಗೆ ಉತ್ತಮ ಸಂದೇಶವನ್ನು ನೀಡುವ ಮೂಲಕ ದೇಶದ ಬಗ್ಗೆ ಅಭಿಮಾನ, ಹಿರಿಯರಿಗೆ ಗೌರವ, ಸಾದಕರಿಗೆ ಸನ್ಮಾನ ಮುಂತಾದ ಒಳ್ಳೆಯ ಕೆಲಸ ಮಾಡುವವರನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸುತ್ತಿರುವ ಸರ್ಚ್ ಕೂರ್ಗ್, ಕೊಡಗಿನ ನಾಡಿ ಮಿಡಿತ ಪತ್ರಿಕಾ ಮಾಧ್ಯಮ ತಂಡಕ್ಕೆ ಅಭಿನಂದನೆಗಳು 🙏 ಮುಂದೆಯೂ ಕೂಡ ತಮ್ಮ ತಮ್ಮ ಮಾಧ್ಯಮವು ಇನ್ನೂ ಬಹಳ ಎತ್ತರಕ್ಕೆ ಬೆಳೆಯಲಿ ಎಂಬುದು ನಮ್ಮೆಲ್ಲರ ಆಗ್ರಹ.
All the very best 👍

error: Content is protected !!
1
0
Would love your thoughts, please comment.x
()
x