ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅವರಿಗೆ ‘ಸರ್ದಾರ್ ಜೋಗಾಸಿಂಗ್ ಕಲ್ಯಾಣ ಕರ್ನಾಟಕ’ ಪ್ರಶಸ್ತಿ-2026
ಕುಶಾಲನಗರ:
ಶ್ರೀ ನಾನಕ ಝಿರಾ ಸಾಹೇಬ್ ಫೌಂಡೇಷನ್ ವತಿಯಿಂದ ಗುರುನಾನಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ. ಸರ್ದಾರ್ ಜೋಗಾಸಿಂಗ್ ಅವರ 93ನೇ ಜನ್ಮ ದಿನದ ಅಂಗವಾಗಿ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರ ಅವರಿಗೆ ಬೀದರ್‌ನ ಗುರುನಾನಕ ದೇವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶೈಕ್ಷಣಿಕ ಮತ್ತು ಕೃಷಿ ಕ್ಷೇತ್ರದ ಸೇವೆಗಾಗಿ ಪ್ರತಿಷ್ಠಿತ ಸರ್ದಾರ್ ಜೋಗಾಸಿಂಗ್ ಕಲ್ಯಾಣ ಕರ್ನಾಟಕ ಪ್ರಶಸ್ತಿ-2026 ನೀಡಿ ಗೌರವಿಸಲಾಗಿದೆ.
"ಸಮಾಜದಲ್ಲಿ ದೀನ-ದುರ್ಬಲರಿಗೆ ಸಹಾಯ ಮಾಡುವ ಸೇವಾಗುಣ, ಪ್ರಾಮಾಣಿಕತೆಯಿಂದ ದಾರಿ ತೋರಿಸುವ ನಾಯಕತ್ವ ಹೊಂದಿದ ಸಾಧಕರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಪ್ರಶಸ್ತಿ ನೀಡಲಾಗುತ್ತದೆ."
ಸಾಧನೆಯ ಹಾದಿ
ಪ್ರೊ. ಆಲೂರ ಅವರು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಗ್ರಾಮೀಣಾಭಿವೃದ್ಧಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಸುಮಾರು ಎರಡೂವರೆ ದಶಕಗಳ ಸುದೀರ್ಘ ಅನುಭವ ಹೊಂದಿದ್ದಾರೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಮತ್ತು ಎಂ.ಎಸ್ಸಿ ಪದವಿ ಪಡೆದ ಇವರು, ಮಣ್ಣು ವಿಜ್ಞಾನದಲ್ಲಿ ಪಿಹೆಚ್‌ಡಿ ಗಳಿಸಿದ್ದಾರೆ.
- ಅಮೆರಿಕ, ಜರ್ಮನಿ, ಕೀನ್ಯಾ ಸೇರಿದಂತೆ ಜಾಗತಿಕ ಮಟ್ಟದ ಕೃಷಿ ಅಧ್ಯಯನ ನಡೆಸಿದ್ದಾರೆ.
- 10ಕ್ಕೂ ಹೆಚ್ಚು ಉನ್ನತ ಉದ್ಯಮಶೀಲತಾ ಮತ್ತು ನಿರ್ವಹಣಾ ತರಬೇತಿಗಳನ್ನು ಪೂರೈಸಿದ್ದಾರೆ.
- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಪ್ರತಿಷ್ಠಿತ 'ಫೆಲೋಶಿಪ್' ಲಭಿಸಿದೆ.
ಶೈಕ್ಷಣಿಕ ಮತ್ತು ಕೃಷಿ ದಾರ್ಶನಿಕರಾದ ಪ್ರೊ. ಅಶೋಕ ಸಂಗಪ್ಪ ಆಲೂರ ಅವರಿಗೆ ಅಭಿನಂದನೆಗಳು.

