ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿಗ್ರಾಮದ ನಿವೇಶನ ರಹಿತರಿಗೆ ನಿವೇಶನ ಕೊಡಿಸುವಲ್ಲಿ ಸಫಲನಾಗಿದ್ದೇನೆ;
ನಡುಗಲ್ಲು ಪೂವಯ್ಯ ರಾಮಯ್ಯ, ಅಧ್ಯಕ್ಷರು: ಮದೆ ಗ್ರಾಮ ಪಂಚಾಯಿತಿ
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಮದೆ ಗ್ರಾಮ ಪಂಚಾಯಿತಿಯು ಜಿಲ್ಲಾ ಕೇಂದ್ರದಿಂದ 9 ಕಿ.ಮೀ. ದೂರದಲ್ಲಿದೆ. ತಾಲ್ಲೂಕು ಕೇಂದ್ರ ಮಡಿಕೇರಿಯಿಂದ 9 ಕಿ.ಮೀ ದೂರದಲ್ಲಿದೆ. ಸದರಿ ಗ್ರಾಮ ಪಂಚಾಯತಿಯು ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದೆ. ಪ್ರಸ್ತುತ ಮದೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ನಡುಗಲ್ಲು ಪೂವಯ್ಯ ರಾಮಯ್ಯ ನವರು ಕಾರ್ಯನಿರ್ವಹಿಸುತ್ತಿದ್ದಾರೆ.
ಮದೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ ನಡುಗಲ್ಲು ಪೂವಯ್ಯ ರಾಮಯ್ಯನವರನ್ನು “ಸರ್ಚ್ ಕೂರ್ಗ್ ಮೀಡಿಯಾ”ದ “ನಮ್ಮ ಕೊಡಗು-ನಮ್ಮ ಗ್ರಾಮ” ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಕಲೆ ಹಾಕಿದಾಗ, “ಸರ್ಚ್‌ಕೂರ್ಗ್ ಮೀಡಿಯಾ”ದೊಂದಿಗೆ ಮಾತನಾಡಿದ ಅಧ್ಯಕ್ಷರಾದ ನಡುಗಲ್ಲು ಪೂವಯ್ಯ ರಾಮಯ್ಯನವರು,
ನಾನು 2020ರಲ್ಲಿ ಮೊದಲ ಬಾರಿಗೆ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಅಧ್ಯಕನಾಗಿ ಆಯ್ಕೆಯಾಗಿದ್ದೇನೆ.
ನನಗೆ ರಾಜಕೀಯ ಕ್ಷೇತ್ರ ಹಾಗೂ ಜನಪ್ರತಿನಿಧಿಯಾಗಿ ಚುನಾವಣೆಗೆ ಬರಲು ತೀರಾ ಆಸಕ್ತಿ ಇರಲಿಲ್ಲ. ಆದರೆ ಈ ಹಿಂದೆ ಇದ್ದ ಸದಸ್ಯರು ಗ್ರಾಮದ ಅಭಿವೃದ್ದಿ ಹಾಗೂ ಗ್ರಾಮಸ್ಥರ ಸೇವೆಗೆ ತೋರುತ್ತಿದ್ದ ನಿರ್ಲಕ್ಷ್ಯದಿಂದ ಬೇಸೆತ್ತ ಗ್ರಾಮಸ್ಥರು ನಾನು ಈ ಹಿಂದೆ ಮಾಡಿದ ಸಾಮಾಜಿಕ ಕಾರ್ಯವನ್ನು ಗಮನಿಸಿ ಚುನಾವಣೆಗೆ ಸ್ಪರ್ಧಿಸಲು ತಿಳಿಸಿದರು. ಹಾಗಾಗಿ ಗ್ರಾಮಸ್ಥರ ಒತ್ತಾಸೆಯ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದಿದ್ದೇನೆ.
ನಮ್ಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ದಿಯ ಬಗ್ಗೆ ಹೇಳುವುದಾದರೆ ಬೀದಿ ದೀಪದ ವ್ಯವಸ್ಥೆ 100% ಆಗಿದೆ. ಕುಡಿಯುವ ನೀರಿನ ಬಗ್ಗೆ ಹೇಳುವುದಾದರೆ ನಮ್ಮ ಪಂಚಾಯಿತಿಯಲ್ಲಿ ಶೇಕಡ 50 ರಷ್ಟು ಮನೆಗಳು ಗುರುತ್ವಾಕರ್ಷಣ ನೀರಿನ ವ್ಯವಸ್ಥೆ (Gravity Water) ಅನ್ನು ಬಳಕೆ ಮಾಡುತ್ತಾರೆ. ಅಲ್ಲದೆ 40% ಮನೆಗಳಿಗೆ ನೀರಿನ ವ್ಯವಸ್ಥೆ ಆಗಿದ್ದು, ಉಳಿದ ಮನೆಗೆಳಿಗೆ ನೀರಿಗಾಗಿ ಕೇಂದ್ರ ಸರ್ಕಾರದ ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಕಾಮಗಾರಿಯು ಪ್ರಗತಿಯಲ್ಲಿದೆ. ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ 90% ಶೌಚಾಲಯ ನಿರ್ಮಿಸಲಾಗಿದೆ. ಉಳಿದ 10% ಕ್ಕೆ ಮನವಿ ಸಲ್ಲಿಸಲಾಗಿದೆ. ಕಸ ವಿಲೇವಾರಿ ಘಟಕವನ್ನು ಕೂಡಾ ಶೀಘ್ರದಲ್ಲಿ ಮಾಡಲಾಗುವುದು. 15ನೇ ಹಣಕಾಸು ಯೋಜನೆಯ ನಿಧಿ ಪರಿಣಾಮಕಾರಿಯಾಗಿ 100% ಬಳಕೆಯಾಗಿದೆ.
ನಮ್ಮ ಪಂಚಾಯಿತಿ ವ್ಯಾಪ್ತಿಯ ಮುಖ್ಯವಾದ ಸಮಸ್ಯೆಯೆಂದರೆ ಅದು ರಸ್ತೇ, ಈ ರಸ್ತೆಗಳ ಅಭಿವೃದ್ಧಿಗಾಗಿ ಮಾನ್ಯ ಶಾಸಕರಾದ ಕೆ.ಜಿ.ಬೋಪಯ್ಯ ಅವರ ಮುತುವರ್ಜಿಯಿಂದ ಎನ್.ಡಿ.ಆರ್.ಎಫ್ ಮೂಲಕ 1 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು, ಅದರಲ್ಲಿ ಕಾಂಕ್ರೀಟ್ ರಸ್ತೆಗಳ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕೆ ಮಾನ್ಯ ಶಾಸಕರ ಸಹಕಾರ ತುಂಬಾ ಇದ್ದು ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.
ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರು ಇದ್ದು, ತಮ್ಮ ತಮ್ಮ ಸ್ವಂತ ನಿವೇಶನದಲ್ಲಿ ಮನೆಯನ್ನು ಕಟ್ಟಿ ವಾಸಿಸುವ ಕನಸನ್ನು ನನ್ನ ಬಳಿ ಹೇಳಿಕೊಳ್ಳುತಿದ್ದರು. ಆದರೆ ಅವರಿಗೆ ಸ್ವಂತ ನಿವೇಶನ ಇಲ್ಲದಿದ್ದರಿಂದ, ನಾನು ತುಂಬಾ ಕಾಳಜಿ ವಹಿಸಿ , ಮಾನ್ಯ ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಮುತುವರ್ಜಿಯಿಂದ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 3 ಏಕರೆ ಅಷ್ಟು ಜಾಗವನ್ನು ಕಾಯ್ದಿರಿಸಲಾಗಿದೆ. ಇದು ನನ್ನ ಕನಸಿನ ಯೋಜನೆಯೂ ಕೂಡಾ ಆಗಿದೆ. ಇದಕ್ಕಾಗಿ ಮದೆ ಗ್ರಾಮದಲ್ಲಿ 1.50 ಏಕರೆ ಜಾಗವನ್ನು ಸರ್ವೇ ನಂಬರ್ 98/1 ರಲ್ಲಿ ಹಾಗೂ ಕಾಟಕೇರಿ ಗ್ರಾಮದಲ್ಲಿ 1.50 ಏಕರೆ ಜಾಗವನ್ನು ಸರ್ವೇ ನಂಬರ್ 115/1 ರಲ್ಲಿ ಕಾಯ್ದಿರಿಸಲಾಗಿದ್ದು, ಶೀಘ್ರದಲ್ಲೇ ಫಲಾನುಭವಿಗಳಿಗೆ ವಿತರಿಸಲಾಗುವುದು. ಇದರಲ್ಲಿ ಸುಮಾರು 75 ಕುಟುಂಬಗಳಿಗೆ ಸ್ವಂತ ನಿವೇಶನ ದೊರಕುವುದು. ಹಾಗಾಗಿ ನಮ್ಮ ಗ್ರಾಮದಲ್ಲಿ ನಿವೇಶನ ರಹಿತವಾದ ಒಂದು ಕುಟುಂಬ ಕೂಡ ಇರುವುದಿಲ್ಲ. ನಮ್ಮ ಪಂಚಾಯಿತಿ ವ್ಯಾಪ್ತಿಯ ಶೇಕಡ 100% ಕುಟುಂಬಗಳಿಗೆ ಸ್ವಂತ ನಿವೇಶನ ದೊರಕಿದಂತಾಗುವುದು.
ಅಲ್ಲದೆ ಬಸವ ವಸತಿ ಯೋಜನೆಯಡಿಯಲ್ಲಿ ಸುಮಾರು 30 ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದು, ಹೆಚ್ಚುವರಿಯಾಗಿ 27 ಮನೆಗಳನ್ನು ಕೂಡಾ ಹಿರಿಯ ಅಧಿಕಾರಿ ಹಾಗೂ ಶಾಸಕರ ಮುತುವರ್ಜಿಯಿಂದ ಮಂಜೂರಾಗಿದೆ.
ನಮ್ಮ ಪಂಚಾಯಿತಿಯಲ್ಲಿ ಆದಾಯ ಮೂಲ ಕಡಿಮೆ ಇದ್ದು, ಮುಖ್ಯವಾಗಿ ರೆಸಾರ್ಟ್, ಹೋಂಸ್ಟೇ, ಮನೆ ಕಂದಾಯವನ್ನೇ ಅವಲಂಬಿಸಿದೆ.
ಇದೀಗ ರಸ್ತೆಗಳ ಕಾಮಗಾರಿ ಪ್ರಗತಿಯಲಿದ್ದು, ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಯುವಕರು ಉದ್ಯೋಗಕ್ಕಾಗಿ ಹೊರಗಿನ ಪಟ್ಟಣಗಳನ್ನು ಅವಲಂಭಿಸಿದ್ದು, ಮುಂದಿನ ದಿನಗಳಲ್ಲಿ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲೇ ಉದ್ಯೋಗ ಸೃಷ್ಟಿ ಮಾಡುವ ಯೋಜನೆಯ ಜೊತೆಗೆ ನಮ್ಮ ಪಂಚಾಯಿತಿಯನ್ನು ಮಾದರಿ ಗ್ರಾ.ಪಂ.ಯನ್ನಾಗಿ ಮಾಡಲು ಪ್ರಯತ್ನ ಪಡುತ್ತಿದ್ದೇನೆ.
ನಮ್ಮ ಪಂಚಾಯಿತಿಯೂ ಮದೆ,ಬೆಟ್ಟತ್ತೂರು,ಕಾಟಕೇರಿ ಎಂಬ ಮೂರು ಮುಖ್ಯ ಗ್ರಾಮಗಳನ್ನು ಹೊಂದಿದ್ದು, ದೇವರಕೊಲ್ಲಿ ,ಜೋಡುಪಾಲ, ಅವಂದೂರು, ತಾ ಳತ್ತಮನೆ ಎಂಬ ಉಪ ಗ್ರಾಮಗಳನ್ನು ಹೊಂದಿದೆ. ಆದರಿಂದ ಪಂಚಾಯಿತಿ ವ್ಯಾಪ್ತಿಯು ಹೆಚ್ಚಾಗಿದ್ದು ಗ್ರಾಮಸ್ಥರು ತಮ್ಮ ಕೆಲಸಗಳಿಗೆ ಪಂಚಾಯಿತಿಗೆ ಬರಲು ಸ್ವಲ್ಪ ಶ್ರಮವಹಿಸಬೇಕು, ಈ ಕಾರಣದಿಂದ ನಾನು ಪ್ರತೀ ದಿನ ಮಧ್ಯಾಹ್ನದವರೆಗೆ ಪಂಚಾಯಿತಿಯಲ್ಲೇ ಇದ್ದು ಅವರು ಒಂದೇ ಸಮಸ್ಯೆಗೆ ಪದೇ ಪದೇ ಪಂಚಾಯಿತಿ ಕಛೇರಿಗೆ ಬಂದು ಕಷ್ಟ ಪಡದ ಹಾಗೆ ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಯತ್ನ ಪಡುತ್ತಿದ್ದೇನೆ.
ನಮ್ಮ ಗ್ರಾಮದ ಅಭಿವೃದ್ದಿಗಾಗಿ ಗ್ರಾಮಸ್ಥರ, ಪಂಚಾಯಿತಿ ಸದಸ್ಯರ, ಹಾಗೂ ಪಿ.ಡಿಓ, ಸಿಬ್ಬಂದಿಗಳ ಸಹಕಾರದಿಂದ ಪಂಚಾಯಿತಿ ಅಭಿವೃದ್ದಿಯತ್ತ ಸಾಗುತ್ತಿದೆ. ಇದೇ ರೀತಿ ಮುಂದೇ ಕೂಡಾ ಸಹಕಾರ ನೀಡುತ್ತಾರೆಂಬ ಭರವಸೆ ನನಗೆ ಇದೆ.
ರಾಜಕೀಯವಾಗಿ ನಾನು ಜನ್ಮತ: ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿದ್ದೇನೆ. ನಾನು ಪಂಚಾಯಿತಿ ಚುನಾವಣೆಗೆ ಸ್ವರ್ಧಿಸುವ ಮೊದಲು ನಮ್ಮ ಗ್ರಾಮದ ಸುಮಾರು 250 ಜನರಿಗೆ ಪಡಿತರ ಚೀಟಿ, ಹಿರಿಯ ನಾಗರಿಕರಿಗೆ ಪಿಂಚಣೀ ಯೋಜನೆಯನ್ನು ಮಾಡಲು ಶ್ರಮಿಸಿದ್ದೇನೆ.
2017 ರಲ್ಲಿ ಮದೆ ಗ್ರಾಮದ ಗೋಳಿಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ವಿದ್ಯಾರ್ಥಿಗಳಿಲ್ಲದೆ ಮುಚ್ಚಲಾಗಿತ್ತು, ಇದನ್ನು ಮನಗಂಡು ನಾನು ಗ್ರಾಮಸ್ಥರೆಲ್ಲರನ್ನೂ ಒಂದು ಗೂಡಿಸಿ, ಸ್ವಯಂಸೇವಕರಾಗಿ ಪಾಲ್ಗೊಂಡು 2019ರಲ್ಲಿ ಶಾಲೆಯನ್ನು ಪುನರಾರಂಭಿಸಲಾಯಿತು.
ಮೂಲತಃ ಕೃಷಿಕರಾಗಿರುವ ನಡುಗಲ್ಲು ಪೂವಯ್ಯ ರಾಮಯ್ಯನವರ ತಂದೆ: ದಿ. ಪೂವಯ್ಯ, ತಾಯಿ : ದಿ. ಗಂಗಮ್ಮ, ಪತ್ನಿ: ಕಮಲಾಕ್ಷಿ (ಗೃಹಿಣಿ), ಪುತ್ರಿ: ಜನನಿ .ಎನ್.ಆರ್ (ಎಂ.ಬಿ.ಎ. ಪದವಿ ) ಉದ್ಯೋಗಿ, ಪುತ್ರ: ಲಿಖಿತ್ (ಹೋಟೇಲ್ ಮ್ಯಾನೇಜ್‌ಮೆಂಟ್) ಉದ್ಯೋಗಿ. ಪ್ರಸ್ತುತ ಮದೆ ಗ್ರಾಮದಲ್ಲಿ ವಾಸವಾಗಿದ್ದಾರೆ.
https://www.searchcoorg.com/made/
ಶ್ರೀಯುತರ ಕೌಟುಂಬಿಕ ಜೀವನವು, ರಾಜಕೀಯ, ಸಹಕಾರ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.