ಕೊಡಗು ಗೌಡ ಯುವ ವೇದಿಕೆಯಿಂದ ಲೆದರ್ ಬಾಲ್ ಟಿ-10 ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ

Reading Time: 3 minutes

ಮಡಿಕೇರಿ: ಯುವ ಪೀಳಿಗೆಯನ್ನು ಮುಖ್ಯ ವಾಹಿನಿಗೆ ತರಲು ಕೊಡಗು ಗೌಡ ಯುವ ವೇದಿಕೆಯಿಂದ 10 ಕುಟುಂಬ 18 ಗೋತ್ರದ ಗೌಡ ಕುಟುಂಬಗಳಿಗೆ ಮೇ 16 ರಿಂದ ಲೆದರ್ ಬಾಲ್ ಟಿ-10 ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ವೇದಿಕೆಯ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 16 ರಿಂದ ಪಂದ್ಯಾವಳಿ ನಡೆಯಲಿದ್ದು, 10 ಫ್ರಾಂಚೈಸಿಗಳಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಹಲವು ಮಾಲೀಕರು ಒಲವು ತೋರಿದ್ದು, ಆಸಕ್ತ ಮಾಲೀಕರು ಫ್ರಾಂಚೈಸಿಗಳನ್ನು ಖರೀದಿ ಮಾಡಬಹುದಾಗಿದೆ ಎಂದರು.

ಫ್ರಾಂಚೈಸಿ ಖರೀದಿಯ ಮೊತ್ತವನ್ನು ರೂ.30,000 ನಿಗಧಿ ಮಾಡಲಾಗಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸುವ 10 ಕುಟುಂಬದ 18 ಗೋತ್ರದ ಗೌಡ ಜನಾಂಗದ 12 ವರ್ಷ ಮೇಲ್ಪಟ್ಟ ಆಸಕ್ತ ಆಟಗಾರರು ರೂ.300 ಪಾವತಿಸಿ ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ಆಟಗಾರರ ಅರ್ಜಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಕ್ರೀಡಾ ಕೂಟದಲ್ಲಿ ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದಾಗಿದೆ. ಮೇ 8 ರಂದು ಪಾಯಿಂಟ್ಸ್ ಮೂಲಕ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಪ್ರತಿ ಫ್ರಾಂಚೈಸಿಗೆ 15 ಆಟಗಾರರು ಕಡ್ಡಾಯವಾಗಿ ಇರಬೇಕು ಎಂದರು.

ಪ್ರಿಮಿಯರ್ ಲೀಗ್‍ನ ಪ್ರಥಮ ಬಹುಮಾನ 1 ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 50 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ಅಲ್ಲದೆ ಮ್ಯಾನ್ ಆಫ್ ದ ಸೀರಿಸ್, ಬೆಸ್ಟ್ ಬ್ಯಾಟ್ಸ್‍ಮೆನ್, ಬೆಸ್ಟ್ ಬೌಲರ್, ಬೆಸ್ಟ್ ಕೀಪರ್ ಮತ್ತು ಫೇರ್ ಪ್ಲೇ ಇನ್ನು ಹಲವಾರು ವೈಯಕ್ತಿಕ ಬಹುಮಾನ ನೀಡಲಾಗುವುದೆಂದು ರಿಷಿತ್ ಹೇಳಿದರು.

ಪ್ಲೇಯರ್ ಅರ್ಜಿ ಸಲ್ಲಿಸುವವರು ಪುದಿನೆರವನ ರಿಷಿತ್ ಮಾದಯ್ಯ – 9972376151, ಮೂಲೆಮಜುಲು ಮನೋಜ್ – 9483111134, ಕಟ್ಟೆಮನೆ ರೋಶನ್-9980937335 ಸಂಪರ್ಕಿಸಬಹುದಾಗಿದೆ. ಫ್ರಾಂಚೈಸಿ ಖರೀದಿಸಲು ಮತ್ತು ಮಾಹಿತಿಗಾಗಿ ಪಾಣತ್ತಲೆ ಜಗದೀಶ್ ಮಂದಪ್ಪ – 9980004374, ಕೋಚನ ಅನುಪ್-9448275775, ಬಾಳಾಡಿ ಮನೋಜ್ – 9483780634 ಸಂಪರ್ಕಿಸಬಹುದಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಹೋಬಳಿ, ಗ್ರಾಮ ಮತ್ತು ಕುಟುಂಬವಾರು ಕ್ರೀಡಾಕೂಟ ನಡೆಸುವ ಚಿಂತನೆ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಯುವ ವೇದಿಕೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಉಪಾಧ್ಯಕ್ಷ ಕೋಚನ ಅನೂಪ್, ಕ್ರೀಡಾಧ್ಯಕ್ಷ ಬಾಳಾಡಿ ಮನೋಜ್, ಸಂಸ್ಕೃತಿಕ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಉಪಸ್ಥಿತರಿದ್ದರು.

ಹಂಚಿಕೊಳ್ಳಿ
4 1 vote
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x