Reading Time: 2 minutes
ಚೆಯ್ಯಂಡಾಣೆ, ಆ 17: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಕೇರಿ ಗ್ರಾಮದಲ್ಲಿ ಮನೆಯ ಅಂಗಳದಲ್ಲಿ ನಿಲ್ಲಿಸಿದ ಸಿಪ್ಟ್ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದ್ದು ಕಾರು ಜಖಂಗೊಂಡಿದೆ.
ನಿನ್ನೆ ಬೆಳಿಗ್ಗೆ ನೆಲ್ಲಮಕ್ಕಡ ವಿವೇಕ್ ರವರ ಮನೆಯ ಅಂಗಳದಲ್ಲಿ ನಿಲ್ಲಿಸಿದ ಕಾರಿಗೆ ಈ ವ್ಯಾಪ್ತಿಯಲ್ಲಿ ತಿರುಗಾಡುತಿದ್ದ ಒಂಟಿ ಸಲಗ ದಾಳಿ ನಡೆಸಿದೆ ಕಳೆದ ಕೆಲ ದಿನಗಳ ಹಿಂದೆ ವಿವೇಕ್ ರವರ ಮತ್ತೊಂದು ವಾಹನಕ್ಕೆ ಕಾಡಾನೆ ಹಿಂಡು ದಾಳಿ ನಡೆಸಿತ್ತು.
ದಾಳಿಕ್ಕೊಳಗಾದ ವಾಹನದ ಮಾಲೀಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ ನಿರಂತರ ತೋಟದಲ್ಲಿ ಕಾಡಾನೆ ದಾಳಿ ನಡೆಸುತ್ತಿದ್ದು, ಕಾಫಿ, ಅಡಿಕೆ, ಬಾಳೆ, ಒಳ್ಳೆಮೆಣಸು ಗಿಡಗಳನ್ನು ತುಳಿದು ನಾಶ ಪಡಿಸುತ್ತಿದೆ.
ಅಲ್ಲದೆ 2 ಬಾರಿ ನನ್ನ ವಾಹನಕ್ಕೆ ಹಾನಿ ಪಡಿಸಿದ್ದು ಮನೆಯಿಂದ ಹೊರಬರಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಕೂಡಲೇ ಅರಣ್ಯ ಇಲಾಖೆ ಕಾಡಾನೆ ಯನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ