Reading Time: < 1 minute
ನಾಪೋಕ್ಲು : ದೇಶದ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ದಿನದಂದು ನಾಪೋಕ್ಲು ಪಟ್ಟಣದಲ್ಲಿ ತನ್ನ ಜೀವನ ಸಾಗಿಸಲು ಪಟ್ಟಣ,ಹಳ್ಳಿಗಳಿಗೆ ತೆರಳಿ ಬಾಂಬೆ ಮಿಠಾಯಿ ಮಾರುವ ಯುವಕನ ದೇಶಪ್ರೇಮ ಎಲ್ಲರ ಗಮನ ಸೆಳೆಯಿತು.
ದೂರದ ಉತ್ತರ ಪ್ರದೇಶದಿಂದ ಬಾಂಬೆ ಮಿಠಾಯಿ ವ್ಯಾಪಾರ ಮಾಡಲು ನಾಪೋಕ್ಲು ವಿಗೆ ಬಂದ ಯುವಕ ಪಂಕಜ್ ದೇಶದ ತ್ರಿವರ್ಣ ದ್ವಜದ ಕೇಸರಿ,ಬಿಳಿ, ಹಸಿರು ಬಣ್ಣದಿಂದ ತಯಾರಿಸಿದ ಬಾಂಬೆ ಮಿಠಾಯಿ ಪಟ್ಟಣದಲ್ಲಿ ಮಾರಾಟ ಮಾಡುವ ಮೂಲಕ ತನ್ನ ದೇಶಪ್ರೇಮ ಮೆರೆದಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
✍️….ವರದಿ: ಝಕರಿಯ ನಾಪೋಕ್ಲು