ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿಕಡಂಗ: ಎಸ್ ವೈ ಎಸ್ ಮತ್ತು ಎಸ್ ಕೆ ಎಸ್ ಎಸ್ ಎಫ್ ಶಾಖಾವತಿಯಿಂದ ಹತ್ತನೇ ವಾರ್ಷಿಕ ಮಜಿಲಿಸುನೂರ್ ಹಾಗೂ ಇಸ್ಲಾಮಿಕ್ ಕಥಾಪ್ರಸಂಗವು ಕಡಂಗ ಶಾದಿ ಮಹಲ್ ಸಭಾಂಗಣದಲ್ಲಿ ನಡೆಸಲಾಯಿತು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾತ್ ಅಧ್ಯಕ್ಷ ಅಬ್ದುಲ್ಲ ರವರು ನಿರ್ವಹಿಸಿದರು. ಪ್ರಾರ್ಥನೆ ಖತೀಬ್ ಉಸ್ತಾದರಾದ ಲತೀಫ್ ಲತೀಫಿ ನಿರ್ವಹಿಸಿ ಕೊಟ್ಟರು. ಮಜಿಲಿಸುನ್ನೋರ್ ಕಾರ್ಯಕ್ರಮ ಕ್ಕೆ ಕೊಡಗು ಜಿಲ್ಲಾ ನಾಯಿಬ್ ಕಾಜಿ ಅಬ್ದುಲ್ಲಾ ಮುಸ್ಲಿಯರ್ ಎಡಪಲ್ಲರವರು ನೇತೃತ್ವ ವಹಿಸಿದರು. ಸ್ವಾಗತವನ್ನು ಮದರಸ ಮುಖ್ಯೋಪಾಧ್ಯಾಯರಾದ ಶುಹೈಬ್ ಫೈಜಿ ರವರು ನೆರವೇರಿಸಿದರು. ಕಥಾಪ್ರಸಂಗವನ್ನು ಕೇರಳದ ಪ್ರಖ್ಯಾತ ಝುಬಿರ್ ಮಾಸ್ಟರ್ ರವರು ಮತ್ತು ಸಂಗಡಿಗರು ಅರ್ಥವತ್ತಾದ ಶೈಲಿಯಲ್ಲಿ ಸಂಬೋಧಿಸಿದರು. ಕಾರ್ಯಕ್ರಮ ದಲ್ಲಿ ಕೊಡಗು ಜಿಲ್ಲಾ ಅಮಿಲಾ ಅಧ್ಯಕ್ಷ ಹ್ಯಾರಿಸ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ ಕೆ ಎಸ್ ಎಸ್ ಎಫ್ ಸಮಿತಿ ಸದಸ್ಯರಾದ ಇಸಾಕ್, ಇಕ್ಬಾಲ್, ಸಮದ್, ಅಬೂಬಕರ್, ಹನೀಫ್ ಫೈಜಿ, ಯುಸಫ್ ಮುಸ್ಲಿಯಾರ್,ಹನೀಫ್ ಉಸ್ತಾದ್,ಮಾಹಿನ್ ದಾರಿಮಿ,ಅಬ್ದುಲ್ ರೆಹಮಾನ್, ಇಬ್ರಾಹಿಂ, ಜುನೈದ್, ಮಮ್ಮು ,ಉಸ್ಮಾನ್ ಉಪಸ್ಥಿತರಿದ್ದರು
ವರದಿ: ನೌಫಲ್ ಕಡಂಗ