ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿReading Time: < 1 minute
ನಾಪೋಕ್ಲು : ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಮಡಿಕೇರಿ ಇದರ ವತಿಯಿಂದ ನಾಪೋಕ್ಲುವಿನ ಪಶು ಆಸ್ಪತ್ರೆಯಲ್ಲಿ ಮಿಷನ್ ರೇಬಿಸ್ ಲಸಿಕಾ ಅಭಿಯಾನ ಕಾರ್ಯಕ್ರಮ ನಡೆಯಿತು.
ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನಾಪೋಕ್ಲು ಸುತ್ತಮುತ್ತಲಿನ ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಸಾಕುವ ನಾಯಿಗಳಿಗೆ ರೇಬಿಸ್ ಲಸಿಕೆ ನೀಡುವ ಮೂಲಕ ಅದರ ಆರೋಗ್ಯ ಕಾಪಾಡಿಕೊಳುವಂತೆ ಸಲಹೆ ನೀಡಿದರು. ಶಿಬಿರದಲ್ಲಿ ನಾಪೋಕ್ಲು ವಿಭಾಗದ ಗ್ರಾಮಸ್ಥರು 100ಕ್ಕೂ ಅಧಿಕ ತಮ್ಮ ಸಾಕು ನಾಯಿಗಳನ್ನು ತಂದು ರೇಬಿಸ್ ಚುಚ್ಚುಮದ್ದನ್ನು ಹಾಕಿಸಿಕೊಂಡರು.
ಈ ಸಂದರ್ಭ ನಾಪೋಕ್ಲು ಪಶುಆಸ್ಪತ್ರೆಯ ವೈದ್ಯರಾದ ಶಿಲ್ಪಶ್ರೀ,ಜಾನುವಾರು ಅಧಿಕಾರಿ ನವೀನ್, ಹಿರಿಯ ಪಶು ವೈದ್ಯಪರೀಕ್ಷಕ ಸುನಿಲ್ ಮತ್ತಿತರರು ಹಾಜರಿದ್ದರು.
ವರದಿ: ಝಕರಿಯ ನಾಪೋಕ್ಲು