Reading Time: 2 minutes
ಜುಮಾ ಮಸೀದಿಯಿಂದ ಅಂಡತ್ ಮಾನಿ ದರ್ಗಾಕ್ಕೆ ಪ್ರವಾದಿ ಸಂದೇಶ ಜಾಥಾ
ಚೆಯ್ಯ0ಡಾಣೆ, ಸೆ 28. ಎಡಪಾಲದ ಜುಮಾ ಮಸೀದಿ ಹಾಗೂ ನಜ್ಮುಲ್ ಹುದಾ ಮದರಸ ವತಿಯಿಂದ ವಿಜೃಂಭಣೆಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಪೋಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು.ಶಾಫಿ ದ್ವಜಾರೋಹಣ ನೆರವೆರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜುಮಾ ಮಸೀದಿಯಿಂದ ಆರಂಭ ಗೊಂಡ ಜಾಥಾ ಅಂಡತ್ ಮಾನಿ ದರ್ಗಾಕ್ಕೆ ತೆರಳಿ ಅಲ್ಲಿ ಮುದರಿಸ್ ನಿಝರ್ ಪೈಝಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ವಿದ್ಯಾರ್ಥಿಗಳಿಂದ ಧಫ್,ಸ್ಕೌಟ್, ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾರ್ಥನೆಯನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಅಬ್ದುಲ್ಲ ಫೈಝಿ ನೆರವಿರಿಸಿದರು.
ಈ ಸಂದರ್ಭದಲ್ಲಿ ಹಮೀದ್ ಫೈಝಿ, ಮಜೀದ್ ಮುಸ್ಲಿಯಾರ್, ಜಮಾಅತ್ ಆಡಳಿತ ಮಂಡಳಿತಯ ಪದಾಧಿಕಾರಿಗಳು ಮತಿತ್ತರರು ಉಪಸ್ಥಿತರಿದ್ದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ