Reading Time: 2 minutes
ನಂ. 2779ನೇ ಕಕ್ಕಬ್ಬೆ ವಿವಿದ್ದೋದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ೨೦೨೩-೨೦೨೮ರ ಸಾಲಿನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಕಲ್ಯಾಟ್ಟಂಡ ರಘು ತಮ್ಮಯ್ಯ ಅವರು ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಗೂ ಉಪಾಧ್ಯಕ್ಷರಾಗಿ ಪರದಂಡ ಪ್ರಮೀಳ ಪೆಮ್ಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಅಲ್ಲಾರಂಡ ಸನ್ನು ಅಯ್ಯಪ್ಪ, ಬಡಕಡ ಸುರೇಶ್ ಬೆಳ್ಳಿಯಪ್ಪ, ಕಲ್ಯಾಟ್ಟಂಡ ಯತೀಶ್ ಬೋಪಣ್ಣ, ನಿಡುಮಂಡ ಹರೀಶ್ ಪೂವಯ್ಯ, ನಂಬಡಮಂಡ ಬಿ. ಸುನಿತ , ಎ.ಎನ್. ಲಕ್ಷ್ಮಣ, ಪರದಂಡ ಯು. ಕರುಂಬಯ್ಯ ಕಸ್ತೂರಿ, ಕುಡಿಯರ ಅಚ್ಚಯ್ಯ, ಪಾಲೆ ಟಿ. ಕಾರ್ಯಪ್ಪ ಹಾಗೂ ಕೋಡಿಮಣಿಯಂಡ ವಿಜು ನಾಣಯ್ಯ ಇವರುಗಳು ಆಯ್ಕೆಯಾಗಿದ್ದಾರೆ. ಈ ಮೇಲಿನ ಎಲ್ಲರೂ ಭಾರತೀಯ ಜನತಾ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ.
ಈ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಚೋಂದಕ್ಕಿ ಎಂ.ಎಸ್ ಹಾಗೂ ರಿಟರ್ನಿಂಗ್ ಅಧಿಕಾರಿಯಾಗಿ ಶ್ರೀಮತಿ ಮಂಜುಳ ಕಾರ್ಯನಿರ್ವಹಿಸಿರುತ್ತಾರೆ.