ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿರಕ್ತದಾನ ಶಿಬಿರ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮ
ಚಾರಿಟಿಯ ಸಮಾಜಮುಖಿ ಕಾರ್ಯಕ್ಕೆ ಗಣ್ಯರ ಶ್ಲಾಘನೆ.
ನಾಪೋಕ್ಲು : ಹಲವಾರು ಕಾರುಣ್ಯ ಸಮಾಜ ಸೇವೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕೊಡಗುಜಿಲ್ಲೆ ಹಾಗೂ ಕರ್ನಾಟಕದ ನಾನಾ ಭಾಗದಲ್ಲಿ ವಿವಿಧ ಸಾಮೂಹಿಕ ಕಾರುಣ್ಯ ಸೇವೆಯನ್ನು ಒದಗಿಸಿ ಜರ ಮನಗೆದ್ದ ಸೇವ್ ದಿ ಡ್ರಿಮ್ಸ್ ಎಂಬ ಚಾರಿಟಿಯ ನೂತನ ಕಛೇರಿಯನ್ನು ನಾಪೋಕ್ಲುವಿನ ಹೃದಯ ಭಾಗದಲ್ಲಿ ಸಯ್ಯದ್ ಹಸನ್ ಅಬ್ದುಲ್ಲಾ ಆದೂರ್ ತಂಙಳ್ ಉದ್ಘಾಟಿಸಿದರು.
ಬಳಿಕ ಚೆರಿಯಪರಂಬು ಶಾದಿ ಮಹಲ್ ಸಭಾಂಗಣದಲ್ಲಿ ನಡೆದ ಸೌಹಾರ್ದ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವ್ ದಿ ಡ್ರಿಮ್ಸ್ ಚಾರಿಟಿಯ ಅಧ್ಯಕ್ಷರಾದ ಬಷೀರ್ ಈಶ್ವರಮಂಗಳ ವಹಿಸಿದರು.
ಪ್ರಾರ್ಥನೆಯನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಅಬ್ದುಲ್ಲ ಫೈಝಿ ಎಡಪಾಲ ನೆರವೇರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಜಂಮ್ಮಿಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ ಮಾತನಾಡಿ ಕರುಣೆ ತೋರುವವನಿಗೆ ಸದಾ ದೇವರ ಆಶೀರ್ವಾದ ಇದ್ದೆ ಇರುತ್ತದೆ.ಚಾರಿಟಿಯ ಮೂಲಕ ಹಲವಾರು ಜನರ ಕಣ್ಣೀರು ಒರೆಸುವ ಕಾರ್ಯ ಸ್ಲಾಘನೀಯ ಎಂದರು.
ಸೇವ್ ದಿ ಡ್ರೀಮ್ಸ್ ಚಾರಿಟಿಯ ಮುಖ್ಯಸ್ಥ ಜಾಬಿರ್ ನಿಜಾಮಿ ಮಾತನಾಡಿ ಇದುವರೆಗು ನಡೆಸಿದ ಕಾರುಣ್ಯ ಸಹಾಯದ ಬಗ್ಗೆ ನೆರೆದ್ದವರಿಗೆ ಮನವರಿಕೆ ಮಾಡುವ ರೀತಿಯಲ್ಲಿ ಮಾತನಾಡಿ ಸೇವ್ ದಿ ಡ್ರೀಮ್ಸ್ ಕರ್ನಾಟಕದ ನಾನಾ ಭಾಗಗಳಲ್ಲಿ ಹಲವಾರು ರೀತಿಯಲ್ಲಿ ಜನರ ಕಣ್ಣಿರನ್ನು ಹೊರೆಸಲು ಸಾಧ್ಯವಾಗಿದೆ.ಕೊಡಗಿನಲ್ಲಿ ಕೂಡ ಇದರ ಭಾಗವಾಗಿ ಕಾರ್ಯಾಚರಿಸುತ್ತಿದ್ದು ಈಗಾಗಲೇ ನಾಪೋಕ್ಲುವಿನಲ್ಲಿ ಕಛೇರಿ ಆರಂಭಿಸಿದ್ದು ಕೊಡಗಿಗೆ ಸೇವ್ ದಿ ಡ್ರಿಮ್ಸ್ ಒಂದು ಉತ್ತಮ ಸೇವೆ ನೀಡಲಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು.
ನಾಪೋಕ್ಲು ಸೆಂಟ್ ಮೇರಿ ಚರ್ಚಿನ ಧರ್ಮ ಗುರುಗಳಾದ ಜ್ಞಾನಪ್ರಕಾಶ್ ಮಾತನಾಡಿ ಸೇವ್ ದಿ ಡ್ರೀಮ್ಸ್ ಚಾರಿಟಿಯ ಕಾರುಣ್ಯ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದರು.
ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಆಗಮಿಸಬೇಕಾಗಿದ್ದ ಕೇರಳ, ಕರ್ನಾಟಕ ರಾಜ್ಯಗಳಲ್ಲಿ ಹಲವಾರು ಜನಸಮೂಹಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮುಖಾಂತರ ಗಂಟೆಗಳಲ್ಲಿ ಕೋಟಿ ಹಣ ಸಂಗ್ರಹಿಸುವ ಫಿರೋಜ್ ಕುನ್ನುಂಪರಂಬಿಲ್ ಕಾರಣಾಂತರದಿಂದ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ ಎಂದು ಖುದ್ದು ಕರೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಬಡ ಅನಾಥ ಹೆಣ್ಣು ಮಗಳ ಮದುವೆಗೆ ನಾಪೋಕ್ಲು ಹಾಗೂ ಚೆರಿಯಪರಬು ಜಮಾಅತ್ ಪದಾಧಿಕಾರಿಗಳಿಗೆ 5 ಪವನ್ ಚಿನ್ನದ ಮಾಂಗಲ್ಯವನ್ನು ಸೇವ್ ದಿ ಡ್ರೀಮ್ಸ್ ಚಾರಿಟಿಯ ಪದಾಧಿಕಾರಿಗಳು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ, ನಾಪೋಕ್ಲು ಜಮಾಅತ್ ಅಧ್ಯಕ್ಷ ಸಲೀಂ ಹಾರಿಸ್, ಮೈಸಿ ಕತ್ತಣಿರ, ಶುಭ ಹಾರೈಸಿ ಮಾತನಾಡಿದರು.
ಈ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಖಲೀಲ್ ಕ್ರಿಯೆಟಿವ್, ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ರೆಹ್ಮಾನ್ ,ಜುಬೈರ್ ಪರವಂಡ, ಹಾಫಿಲ್ ರಾಫಿ ಮತಿತ್ತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸೇವ್ ದ ಡ್ರಿಮ್ಸ್ ಕಛೇರಿ ಉದ್ಘಾಟನೆ ಹಾಗೂ ಸೌಹಾರ್ದ ಸಂಗಮದ ಅಂಗವಾಗಿ ಮಂಗಳೂರು ಬ್ಲಡ್ ಡೊನೆಟರ್ಸ್ ಸಹಬಾಗಿತ್ವದಲ್ಲಿ ರಕ್ತದಾನ ಶಿಬಿರದಲ್ಲಿ ಸುಮಾರು 50 ಕ್ಕೂ ಹೆಚ್ಚು ಶಿಬಿರಾರ್ಥಿಗಳು ರಕ್ತದಾನ ಮಾಡಿ ಮಾನವೀಯತೆಗೆ ಸಾಕ್ಷಿಯಾದರು.
ಈ ಸಂದರ್ಭ ಸೇವ್ ದಿ ಡ್ರೀಮ್ಸ್ ನಿರ್ದೇಶಕರಾದ ಆರಫಾತ್ ನಾಪೋಕ್ಲು , ಅಹ್ಮದ್ ಸಿ.ಎಚ್ ನಾಪೋಕ್ಲು,ಗ್ರಾಮ ಪಂಚಾಯಿತಿ ಸದಸ್ಯರಾದ ಅರುಣ್ ಬೇಬ, ಮೊಹಮ್ಮದ್ ಟಿ.ಎ.,ಮೊಯ್ದು ಕೊಟ್ಟಮುಡಿ,ಕುಶಾಲಪ್ಪ ಎಂ.ಪಿ, ಸಾಬಾ ತಿಮ್ಮಯ್ಯ,ವಿ ಎಸ್ ಎಸ್ ಎನ್ ಬ್ಯಾಂಕ್ ನ ಅಧ್ಯಕ್ಷ ಹರೀಶ್ ಪೂವಯ್ಯ, ಅಂಬಿ ಕಾರ್ಯಪ್ಪ, ರತ್ನಾಪೆಮ್ಮಯ್ಯ,ಅಜೀಜ್ ಪಿ.ಎಂ, ಮನ್ಸೂರ್ ಆಲಿ,ರಶೀದ್ ಪಿ.ಎಂ.ಸಿದ್ದಿಕ್ ಮಂಜೇಶ್ವರ, ಜಲೀಲ್, ಸಲೀಂ, ಇಕ್ಬಾಲ್, ಕರೀಂ ಎಡಪ್ಪಲ್, ಪಯಾಜ್,ಅಝದ್ ನಗರ್ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್,ಚೆರಿಯಪರಂಬು ಮಸೀದಿ ಅಧ್ಯಕ್ಷ ಬಷೀರ್, ಕಾರ್ಯದರ್ಶಿ ಸಿರಾಜ್ ಪರವಂಡ, ಅಬ್ದುಲ್ ರಶೀದ್ ಅಯ್ಯಗೇರಿ,ಆರ್ ಟಿ ಐ ಕಾರ್ಯಕರ್ತ ಹಾರಿಸ್ ನಾಪೋಕ್ಲು,ಸೇವ್ ದಿ ಡ್ರೀಮ್ಸ್ ಪದಾಧಿಕಾರಿಗಳು, ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣ ಘಟಕದ ಪದಾಧಿಕಾರಿಗಳು ವಿವಿಧ ಗ್ರಾಮದ ಗ್ರಾಮಸ್ಥರು,ಮತಿತ್ತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೇವ್ ದಿ ಡ್ರೀಮ್ಸ್ ನಿರ್ದೇಶಕರಾದ ಅಹಮದ್ ಸಿ. ಎಚ್. ಸ್ವಾಗತಿಸಿ, ವಂದಿಸಿದರು.
ವರದಿ: ಝಕರಿಯ ನಾಪೋಕ್ಲು