ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿಪೊನ್ನಂಪೇಟೆ: ಜಿಲ್ಲೆಯ ಪ್ರತಿಷ್ಠಿತ ಸಹಕಾರ ಸಂಘಗಳಲ್ಲಿ ಒಂದಾದ ಪೊನ್ನಂಪೇಟೆಯ ವ್ಯವಸಾಯ ಉತ್ಪನ್ನ ಮಾರುಕಟ್ಟೆ ಹಾಗೂ ಪರಿವರ್ತನ ಸಹಕಾರ ಸಂಘದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರಾಗಿದ್ದ ಮುದ್ದಿಯಡ ಮಂಜು ತಂಡ ಹೆಚ್ಚಿನ ಮತಗಳ ಅಂತರದಿಂದ ತಮ್ಮ ಪ್ರತಿಸ್ಪರ್ಧಿಗಳನ್ನು ಮಣಿಸಿ ಆಡಳಿತ ಚುಕ್ಕಾಣೆಯನ್ನು ಹಿಡಿದುಕೊಂಡಿದೆ.
ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ ಮುದ್ದಿಯಡ ಡಿ.ಗಣಪತಿ(ಮಂಜು 1672), ಚೋಡುಮಡ ಶಾಂ ಪೂಣಚ್ಚ (1330), ಪಧಾರ್ಥಿ ಎಸ್. ಮಂಜುನಾಥ್ 1248), ಬೋಡಂಗಡ ಜಗದೀಶ್(1203) ಮಾಚಂಗಡ.ಬಿ. ಮೊಣ್ಣಪ್ಪ(1115), ಮೂಕಳೆರ ಬಿ. ರಮೇಶ್(1188), ಮಹಿಳಾ ಮೀಸಲು ಕ್ಷೇತ್ರದಿಂದ ಬೊಟoಗಡ. ಎಸ್. ದಶಮಿ ದೇಶಮ್ಮ(1459), ಮೂಕಳೆರ. ಪಿ.ಶಾರದ(1321) ಹಿಂದುಳಿದ ವರ್ಗ ಮೀಸಲು ಕ್ಷೇತ್ರದಿಂದ ಬಿಲ್ಲವ.ಎಸ್.ಚಂದ್ರಶೇಖರ್(1266), ಹಿಂದುಳಿದ ವರ್ಗ ಬಿʼಮೀಸಲು ಕ್ಷೇತ್ರದ ಮುದ್ದಿಯಡ. ಎ. ಸೋಮಯ್ಯ(1311), ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಹೆಚ್. ಹೆಚ್ ತಮ್ಮಯ್ಯ(1369), ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಹಾಲುಮತದ ಎಂ.ಡಿಕ್ಕಿ(1348) ಇವರುಗಳು ಹೆಚ್ಚಿನ ಮತಗಳಿಂದ ಆಯ್ಕೆಗೊಂಡಿದ್ದಾರೆ.
ಸದಸ್ಯ ಸಹಕಾರ ಸಂಘದ ಸ್ಥಾನದಿಂದ ಸಂಪೂರ್ಣ 6 ಮತಗಳನ್ನು ಪಡೆದು ಐನಂಡ. ಕೆ.ಬೋಪಣ್ಣ ಆಯ್ಕೆಗೊಂಡಿದ್ದಾರೆ.ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಈ ಚುನಾವಣೆಯಲ್ಲಿ ಹಾಲಿ ಆಡಳಿತ ಮಂಡಳಿಯ ಅಧ್ಯಕ್ಷರ ತಂಡದ ಪರವಾಗಿ ಮತದಾರರು ಹೆಚ್ಚು ಒಲವನ್ನು ವ್ಯಕ್ತಪಡಿಸಿದ್ದರು.