ಬೆಂಗಳೂರಿನಲ್ಲಿ ಹೊಸ ರಾಷ್ಟ್ರೀಯ ಸಹಕಾರ ನೀತಿ ಕುರಿತ ದಕ್ಷಿಣ ವಲಯ ಪ್ರಾದೇಶಿಕ ಕಾರ್ಯಾಗಾರ

Reading Time: 3 minutes

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ “ಸಹಕಾರ್ ಸೇ ಸಮೃದ್ಧಿ”ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಮಿತಿಯು ರಾಷ್ಟ್ರೀಯ ಸಹಕಾರ ನೀತಿಯನ್ನು ರೂಪಿಸಿದೆ. ಈ ನೀತಿಯು ಭಾರತ ಸರ್ಕಾರದ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ದೂರದೃಷ್ಟಿಯಂತೆ ಸಹಕಾರ ಚಳುವಳಿಯನ್ನು ಬಲಪಡಿಸುವ ಮತ್ತು ಆಳಗೊಳಿಸುವ ಗುರಿಯನ್ನು ಹೊಂದಿದೆ.

ದಕ್ಷಿಣ ವಲಯದ ಅಂದರೆ; ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಪುದುಚೇರಿ, ಅಂಡಮಾನ್ ನಿಕೋಬಾರ್ ದ್ವೀಪಗಳು, ಲಕ್ಷದ್ವೀಪಗಳನ್ನು ಒಳಗೊಂಡ ಪ್ರಾದೇಶಿಕ ಕಾರ್ಯಾಗಾರವು ನವೆಂಬರ್ 23, 2023 ರಂದು ಬೆಂಗಳೂರಿನ ಬನಶಂಕರಿ ಎರಡನೇ ಹಂತದ ಪದ್ಮನಾಭನಗರದಲ್ಲಿರುವ ಅಪೆಕ್ಸ್ ಬ್ಯಾಂಕ್ ತರಬೇತಿ ಕೇಂದ್ರದಲ್ಲಿ ನಡೆಯಲಿದೆ.

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಕಾರ್ಯಾಗಾರವನ್ನು ರಾಷ್ಟ್ರೀಯ ಸಹಕಾರ ನೀತಿ ಸಚಿವಾಲಯವು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುತ್ತದೆ. ಮಾಜಿ ಕೇಂದ್ರ ಸಚಿವ ಹಾಗೂ ರಾಷ್ಟ್ರೀಯ ಸಹಕಾರ ನೀತಿ ಸಮಿತಿ ಅಧ್ಯಕ್ಷರಾದ ಶ್ರೀ ಸುರೇಶ್ ಪ್ರಭು ಅವರು ಭಾರತ ಸರ್ಕಾರದ ಹೊಸ ಸಹಕಾರ ನೀತಿ 2023, ಕರಡು ನೀತಿಯಲ್ಲಿ ಅನುಸರಿಸಲಾದ ನಿಬಂಧನೆಗಳು, ವಿಧಾನ ಮತ್ತು ಪ್ರಕ್ರಿಯೆಯ ಕುರಿತು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಹೊಸ ಸಹಕಾರ ನೀತಿ 2023 ರ ಮುಖ್ಯಾಂಶಗಳು ಮತ್ತು ಪ್ರಮುಖ ಶಿಫಾರಸುಗಳ ಬಗ್ಗೆ ಭಾಗೀದಾರರರಿಗೆ ತಿಳಿಸುವುದು ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ಪುಣೆಯ VAMNICOM, ನಿರ್ದೇಶಕಿ ಡಾ.ಹೇಮಾ ಯಾದವ್ ಅವರಿಂದ ನೀತಿಯನ್ನು ಕುರಿತ ಪ್ರಸ್ತುತಿ ಇರುತ್ತದೆ. ಸಮಿತಿಯ ಸದಸ್ಯರು ಚರ್ಚೆಯಲ್ಲಿ ಭಾಗವಹಿಸುತ್ತಾರೆ.

ಕಾರ್ಯಾಗಾರದಲ್ಲಿ ಸಹಕಾರಿ ಸಂಘದ ಗಣ್ಯರು ಭಾಗವಹಿಸಲಿದ್ದಾರೆ. ಆರ್‌ ಬಿ ಐ ಕೇಂದ್ರ ಮಂಡಳಿಯ ನಿರ್ದೇಶಕರಾದ ಶ್ರೀ ಸತೀಶ್ ಮರಾಠೆ ಅವರು ಸಹಕಾರಿ ಸಂಸ್ಥೆಗಳು ಮತ್ತು ಕಲೆಕ್ಟಿವ್‌ಗಳ ಸಾಲ ರಚನೆ ಮತ್ತು ಹಣಕಾಸು ಕುರಿತು ಮಾತನಾಡಲಿದ್ದಾರೆ, ಗಾಂಧಿಗ್ರಾಮ ರೂರಲ್ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಪ್ರೊಫೆಸರ್ ಡಾ. ಸಿ.ಪಿಚ್ಚೈ ಅವರು ಸಹಕಾರಿಗಳಲ್ಲಿ ಶಿಕ್ಷಣ, ತರಬೇತಿ ಮತ್ತು ಸಂಶೋಧನೆ ಕುರಿತು ಮಾತನಾಡಲಿದ್ದಾರೆ. ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ವೈ.ಡೋಂಗ್ರೆ ಸಹಕಾರಿ ಸಂಸ್ಥೆಗಳ ನಡುವೆ ಸಹಕಾರ ಕುರಿತು ಕಾರ್ಯಾಗಾರದಲ್ಲಿ ಮಾತನಾಡುತ್ತಾರೆ.

ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಪುದುಚೇರಿ, ಅಂಡಮಾನ್ ನಿಕೋಬಾರ್ ದ್ವೀಪಗಳು, ಲಕ್ಷದ್ವೀಪದ ರಿಜಿಸ್ಟ್ರಾರ್ ಸಹಕಾರ ಸಂಘಗಳು ಅಧ್ಯಕ್ಷರು, ಮಂಡಳಿಯ ಸದಸ್ಯರು ಮತ್ತು ರಾಜ್ಯ ಸಹಕಾರ ಒಕ್ಕೂಟಗಳ ಬ್ಯಾಂಕ್‌ ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಯುಸಿಬಿಗಳು, ಡಿಸಿಸಿಬಿಗಳು, ಡೈರಿ ಯೂನಿಯನ್‌ ಗಳು, ನಾಫೆಡ್, ಇಫ್ಕೊ, NCUI, NAFCUB, ICA-AP ದಕ್ಷಿಣ ವಲಯದ ರಾಜ್ಯಗಳ ಪ್ರಮುಖ ಸಹಕಾರಿ ಸಂಸ್ಥೆಗಳು ಕಾರ್ಯಾಗಾರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಸುಮಾರು 100ಕ್ಕೂ ಹೆಚ್ಚು ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಮತ್ತು ಇತರ ಸದಸ್ಯರು ಆನ್‌ ಲೈನ್ ಮಾದರಿಯಲ್ಲಿ ಸೇರಿಕೊಳ್ಳುತ್ತಾರೆ. ಪಶ್ಚಿಮ, ದಕ್ಷಿಣ, ಉತ್ತರ ಮತ್ತು ಮಧ್ಯ ಮತ್ತು ಪೂರ್ವ ವಲಯಗಳ ಕಾರ್ಯಾಗಾರವನ್ನು ಪೂರ್ಣಗೊಳಿಸಿದ ನಂತರ, ಅಂತಿಮ ನೀತಿ ದಾಖಲೆಯನ್ನು ರಾಷ್ಟ್ರೀಯ ಸಹಕಾರ ನೀತಿ ಸಚಿವಾಲಯ, VAMNICOM ಸಹಕಾರ ಸಚಿವಾಲಯಕ್ಕೆ ಸಲ್ಲಿಸುತ್ತದೆ.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x